‘ಪ್ರೀತಿಗಿಂತ ದೊಡ್ಡ ಅಮಲು ಯಾವುದೂ ಇಲ್ಲ’; ಲವ್​ ಬಗ್ಗೆ ‘ಲವ್​ ಮಾಕ್ಟೇಲ್​ 2’ ವೇದಿಕೆಯಲ್ಲಿ ಕ್ರೇಜಿಸ್ಟಾರ್ ಮಾತು

‘ಲವ್​ ಮಾಕ್ಟೇಲ್​ 2’ ಚಿತ್ರ ಸಖತ್​ ನಿರೀಕ್ಷೆ ಮೂಡಿಸಿದೆ. ಫೆ.11ರಂದು ರಾಜ್ಯಾದ್ಯಂತ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಚಿತ್ರತಂಡಕ್ಕೆ ರವಿಚಂದ್ರನ್​ ಶುಭ ಹಾರೈಸಿದ್ದಾರೆ.

TV9kannada Web Team

| Edited By: Madan Kumar

Feb 09, 2022 | 10:08 AM

ಕನ್ನಡ ಚಿತ್ರರಂಗದಲ್ಲಿ ಲವ್​ ಸ್ಟೋರಿ ಸಿನಿಮಾಗಳಿಗೆ ಹೊಸ ಅರ್ಥ ಕೊಟ್ಟವರು ಕ್ರೇಜಿ ಸ್ಟಾರ್​ ರವಿಚಂದ್ರನ್​. ಚಿತ್ರರಂಗದಲ್ಲಿ ಎಷ್ಟೋ ಜನರಿಗೆ ಅವರೇ ಸ್ಫೂರ್ತಿ. ಅನೇಕ ಸಿನಿಮಾಗಳ ಕಾರ್ಯಕ್ರಮಕ್ಕೆ ಅವರು ಅತಿಥಿಯಾಗಿ ಬಂದು ಶುಭ ಹಾರೈಸುತ್ತಾರೆ. ಅದೇ ರೀತಿ ಫೆ.8ರಂದು ನಡೆದ ‘ಲವ್​ ಮಾಕ್ಟೇಲ್​ 2’  (Love Mocktail 2)ಚಿತ್ರದ ಪ್ರೀ-ರಿಲೀಸ್​ ಇವೆಂಟ್​ಗೆ ಅವರು ಮುಖ್ಯ ಅತಿಥಿ ಆಗಿದ್ದರು. ಈ ವೇದಿಕೆಯಲ್ಲಿ ಅವರು ಪ್ರೀತಿಯ ಬಗ್ಗೆ ಮಾತನಾಡಿದರು. ‘ಲವ್​ ಮಾಕ್ಟೇಲ್​ 2’ ಚಿತ್ರ ಸಖತ್​ ನಿರೀಕ್ಷೆ ಮೂಡಿಸಿದೆ. ಫೆ.11ರಂದು ರಾಜ್ಯಾದ್ಯಂತ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಚಿತ್ರತಂಡಕ್ಕೆ ರವಿಚಂದ್ರನ್ (Ravichandran)​ ಶುಭ ಹಾರೈಸಿದ್ದಾರೆ. ‘ಕೆಲವರಿಗೆ ಗುಂಡು ಹಾಕಿದರೆ ಮತ್ತು (ಅಮಲು) ಸಿಗುತ್ತೆ. ಪ್ರೀತಿಗಿಂತಲೂ ದೊಡ್ಡ ಮತ್ತು ಯಾವುದೂ ಇಲ್ಲ. ‘ಲವ್​ ಮಾಕ್ಟೇಲ್​’ ಚಿತ್ರದ ಕಥೆ ನೋವಿನಲ್ಲಿ ಕೊನೆ ಆಗಿತ್ತು. ಆ ನೋವಿಗೆ ಈಗ ‘ಲವ್​ ಮಾಕ್ಟೇಲ್​ 2’ ಚಿತ್ರದಲ್ಲಿ ಉತ್ತರ ಬೇಕು. ಮನುಷ್ಯ ಕೇವಲ ನೋವಿನಲ್ಲಿಯೇ ಬದುಕಲು ಸಾಧ್ಯವಿಲ್ಲ’ ಎಂದು ರವಿಚಂದ್ರನ್​ ಹೇಳಿದರು. ‘ಲವ್​ ಮಾಕ್ಟೇಲ್​ 2’ ಚಿತ್ರಕ್ಕೆ ಡಾರ್ಲಿಂಗ್​ ಕೃಷ್ಣ (Darling Krishna) ನಿರ್ದೇಶನ ಮಾಡಿದ್ದಾರೆ. ಮಿಲನಾ ನಾಗರಾಜ್​ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ:

‘ಲವ್​ ಮಾಕ್ಟೇಲ್​ 3’ ಮಾಡ್ತೀರಾ ಎಂಬ ಪ್ರಶ್ನೆಗೆ ಮಿಲನಾ ನಾಗರಾಜ್​ ಏನ್​ ಅಂದ್ರು?

ರವಿಚಂದ್ರನ್​ ಪುತ್ರ ಕನ್ನಡ ಸರಿಯಾಗಿ ಕಲಿತಿದ್ದು ಹೇಗೆ? ಮನುರಂಜನ್​ ನೀಡಿದ ವಿವರಣೆ ಇಲ್ಲಿದೆ..

Follow us on

Click on your DTH Provider to Add TV9 Kannada