Hijab Row: ಎಲ್ಲರೂ ಅವರವರಿಗೆ ಬೇಕಾದ್ದು ಧರಿಸಿ ಬಂದರೆ ಸಮವಸ್ತ್ರ ಹೇಗಾದೀತು? ನಟ ಪ್ರಥಮ್ ಪ್ರಶ್ನೆ

Hijab Row: ಎಲ್ಲರೂ ಅವರವರಿಗೆ ಬೇಕಾದ್ದು ಧರಿಸಿ ಬಂದರೆ ಸಮವಸ್ತ್ರ ಹೇಗಾದೀತು? ನಟ ಪ್ರಥಮ್ ಪ್ರಶ್ನೆ

TV9 Web
| Updated By: shivaprasad.hs

Updated on: Feb 09, 2022 | 3:29 PM

Pratham | Sandalwood: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದ ಕುರಿತಂತೆ ನಟ ಪ್ರಥಮ್ ಪ್ರತಿಕ್ರಿಯೆ ನೀಡಿದ್ದಾರೆ. ಇದರಿಂದ ಸ್ನೇಹದ ವಾತಾವರಣ ಹಾಳಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಹಿಜಾಬ್- ಕೇಸರಿ ಶಾಲು ವಿವಾದ ಜೋರಾಗುತ್ತಿದೆ. ಈ ಬಗ್ಗೆ ನಟ ಪ್ರಥಮ್ ಪ್ರತಿಕ್ರಿಯೆ ನೀಡಿದ್ದಾರೆ. ‘ಸಮವಸ್ತ್ರ ಎಂದರೆ ಎಲ್ಲರಿಗೂ ಸಮವಾದ ವಸ್ತ್ರ, ಒಂದೇ ರೀತಿಯ ವಸ್ತ್ರ ಧರಿಸಬೇಕು. ಇದು ಸಮಾನತೆಯೆಡೆಗೆ ತೆರಳಲು ಶಾಲೆಯಲ್ಲಿ ಕಲಿಸುವ ಮೊದಲ ಹೆಜ್ಜೆ. ಎಲ್ಲರೂ ಅವರವರಿಗೆ ಬೇಕಾದ್ದು ಧರಿಸಿ ಬಂದರೆ ಸಮವಸ್ತ್ರ ಹೇಗಾದೀತು? ಎಂದು ಪ್ರಥಮ್ ಪ್ರಶ್ನೆ ಮಾಡಿದ್ದಾರೆ. ಈ ವಿವಾದಗಳನ್ನು ಕೆಲಸಕ್ಕೆ ಬಾರದೇ ಇರೋರು ಮಾಡೋರು, ಶಾಲೆಗಳಲ್ಲಿ ಧರ್ಮದ ಬೀಜ ಬಿತ್ತಬಾರದು. ಸಮವಸ್ತ್ರ ಮಾತ್ರ ಇರಬೇಕು ಸಮವಸ್ತ್ರದ ಬಗ್ಗೆ ಮೊದಲು ತಿಳಿದುಕೊಳ್ಳಿ ಎಂದು ಅವರು ಸಲಹೆ ನೀಡಿದ್ದಾರೆ.

ಅಲ್ಲದೇ ಇಂತಹ ಗಲಾಟೆ ಮಾಡುತ್ತಿರುವವರ ವಿರುದ್ಧ ಪ್ರಥಮ್ ಕಿಡಿಕಾರಿದ್ದಾರೆ. ಈ ಗಲಾಟೆ ಮಾಡಿದರೆ ಯಾರೂ ಉದ್ಧಾರ ಆಗುವುದಿಲ್ಲ. ಇದರ ಬದಲಾಗಿ ಎಲ್ಲರ ಸ್ನೇಹ ಹಾಳಾಗುತ್ತದೆ ಎಂದು ಪ್ರಥಮ್ ಹೇಳಿದ್ದಾರೆ.

ಇದನ್ನೂ ಓದಿ:

ವಿದ್ಯಾರ್ಥಿಗಳ ನಡುವೆ ಧಾರ್ಮಿಕ ವಿಷದ ಗೋಡೆ ನಿರ್ಮಾಣ ಆಗಿದೆ: ಹಿಜಾಬ್​ ವಿವಾದಕ್ಕೆ ಕಮಲ್​ ಹಾಸನ್​, ರಮ್ಯಾ ಪ್ರತಿಕ್ರಿಯೆ​

Hijab Row Hearing Live: ಹಿಜಾಬ್ v/s ಕೇಸರಿ ಸಂಘರ್ಷ! ವಿಸ್ತೃತ ಪೀಠಕ್ಕೆ ವಹಿಸುವ ಅಗತ್ಯವಿದೆ; ನ್ಯಾಯಮೂರ್ತಿ ಅಭಿಪ್ರಾಯ