‘ಲವ್ ಮಾಕ್ಟೇಲ್ 3’ ಮಾಡ್ತೀರಾ ಎಂಬ ಪ್ರಶ್ನೆಗೆ ಮಿಲನಾ ನಾಗರಾಜ್ ಏನ್ ಅಂದ್ರು?
ಲವ್ ಮಾಕ್ಟೇಲ್’ ಯಶಸ್ಸಿನ ಬಳಿಕ ಡಾರ್ಲಿಂಗ್ ಕೃಷ್ಣ ಮತ್ತು ವಿಲನಾ ನಾಗರಾಜ್ ಅವರ ಚಾರ್ಮ್ ಹೆಚ್ಚಿತು. ಹಲವು ಕಾಲದಿಂದ ಪ್ರೀತಿಸುತ್ತಿದ್ದ ಅವರು ದಾಂಪತ್ಯ ಜೀವನಕ್ಕೂ ಕಾಲಿಟ್ಟರು. ಈಗ ಅವರ ಕೈಯಲ್ಲಿ ಹಲವು ಸಿನಿಮಾ ಆಫರ್ಗಳಿವೆ.
‘ಲವ್ ಮಾಕ್ಟೇಲ್’ (Love Mocktail) ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಸಿನಿಮಾದ ಸೀಕ್ವೆಲ್ ಈಗ ತೆರೆಗೆ ಬರುತ್ತಿದೆ. ಇದನ್ನು ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾದಿದ್ದಾರೆ. ಮಂಗಳವಾರ (ಡಿಸೆಂಬರ್ 1) ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಇಡೀ ಟ್ರೇಲರ್ನಲ್ಲಿ ನಿಧಿ ನೆನಪುಗಳಲ್ಲೇ ಸಾಗುತ್ತಾನೆ ಕೃಷ್ಣ. ಟ್ರೇಲರ್ ರಿಲೀಸ್ಗೆ ಚಿತ್ರತಂಡ ಸುದ್ದಿಗೋಷ್ಠೀ ಕೂಡ ಹಮ್ಮಿಕೊಂಡಿತ್ತು. ‘ಲವ್ ಮಾಕ್ಟೇಲ್ 2’ (Love Mocktail) ಕಥೆ ಹೇಗಿರಲಿದೆ? ಇದರಲ್ಲೂ ಸ್ಯಾಡ್ ಎಂಡಿಂಗ್ ಇರಲಿದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಇದರ ಜತೆಗೆ ಕೆಲವರು ‘ಲವ್ ಮಾಕ್ಟೇಲ್ 3’ ಸಿನಿಮಾ ಬರಲಿದೆಯೇ ಎನ್ನುವ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಮಿಲನಾ (Mialana Nagaraj) ಉತ್ತರಿಸಿದ್ದಾರೆ. ‘ಲವ್ ಮಾಕ್ಟೇಲ್’ ಯಶಸ್ಸಿನ ಬಳಿಕ ಡಾರ್ಲಿಂಗ್ ಕೃಷ್ಣ ಮತ್ತು ವಿಲನಾ ನಾಗರಾಜ್ ಅವರ ಚಾರ್ಮ್ ಹೆಚ್ಚಿತು. ಹಲವು ಕಾಲದಿಂದ ಪ್ರೀತಿಸುತ್ತಿದ್ದ ಅವರು ದಾಂಪತ್ಯ ಜೀವನಕ್ಕೂ ಕಾಲಿಟ್ಟರು. ಈಗ ಅವರ ಕೈಯಲ್ಲಿ ಹಲವು ಸಿನಿಮಾ ಆಫರ್ಗಳಿವೆ. ಅದರ ನಡುವೆ ಅವರು ‘ಲವ್ ಮಾಕ್ಟೇಲ್ 2’ ಚಿತ್ರದ ಕೆಲಸಗಳನ್ನು ಮುಗಿಸಿದ್ದಾರೆ. ರಚನಾ ಇಂದರ್, ರೇಚಲ್ ಡೇವಿಡ್ ಮುಂತಾದವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಲವ್ ಮಾಕ್ಟೇಲ್ 2’ ಈಗಾಗಲೇ ಸೆನ್ಸಾರ್ ಮಂಡಳಿಯಿಂದ ‘ಯು’ ಪ್ರಮಾಣ ಪತ್ರ ಪಡೆದಿದೆ. ಚಿತ್ರಕ್ಕೆ ನಕುಲ್ ಅಭ್ಯಂಕರ್ ಸಂಗೀತ ನೀಡಿದ್ದು,ರಾಘವೇಂದ್ರ ಕಾಮತ್ ಸಾಹಿತ್ಯ ರಚಿಸಿದ್ದಾರೆ.
ಇದನ್ನೂ ಓದಿ:
ನಿಧಿ ನೆನಪಲ್ಲೇ ಸಾಗಿದ ‘ಲವ್ ಮಾಕ್ಟೇಲ್ 2’ ಟ್ರೇಲರ್; ನೀವಂದುಕೊಂಡಷ್ಟು ಸುಲಭವಿಲ್ಲ ಈ ಕೇಸ್
‘ಲವ್ ಮಾಕ್ಟೇಲ್ 2’ ಸಿನಿಮಾ ಸುದ್ದಿಗೋಷ್ಠಿ ಲೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ