ಬಾಗಲಕೋಟೆಯ ಪೊಲೀಸರು ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಹೇಗೆ ಚದುರಿಸಬಹುದೆಂದು ಬೇರೆಯವರಿಗೆ ತೋರಿಸಿದ್ದಾರೆ!

ಬಾಗಲಕೋಟೆಯ ಪೊಲೀಸರು ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಹೇಗೆ ಚದುರಿಸಬಹುದೆಂದು ಬೇರೆಯವರಿಗೆ ತೋರಿಸಿದ್ದಾರೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 08, 2022 | 10:28 PM

ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಯಾವುದೇ ಬಲ ಪ್ರಯೋಗಿಸಿದೆ ಚದುರಿಸುವುದು ಸಾಧ್ಯವಿಲ್ಲವೇ? ಕೈಯಲ್ಲಿ ಲಾಠಿ ಹಿಡಿಯುವ ಪೊಲೀಸರು ಶಾಲಾ ಕಾಲೇಜುಗಳ ಕೌಂಪೌಂಡಗಳಿಗೆ ಎರಡು ಮೂರು ಸಲ ಬಾರಿಸಿ ಜೋರಾಗಿ ಗದರಿದರೆ ಸಾಕು ವಿದ್ಯಾರ್ಥಿಗಳು ದಿಕ್ಕಾಪಾಲಾಗಿ ಓಡುತ್ತಾರೆ.

ವಿದ್ಯಾರ್ಥಿಗಳ ಗಮನ ಮತ್ತು ಫೋಕಸ್ ಅನ್ನು ಪರೀಕ್ಷೆಗೆ ತಯಾರಿ ನಡೆಸುವ ಯೋಚನೆಯಿಂದ ಹೈಜಾಕ್ ಮಾಡುವಲ್ಲಿ ಹಿಜಾಬ್ ಮತ್ತು ಕೇಸರಿ ವಿವಾದ (Hijab-Kesari Row) ಸಂಪೂರ್ಣವಾಗಿ ಯಶಸ್ವೀಯಾಗಿದೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ತಮ್ಮ ಓದು, ಭವಿಷ್ಯದ ಬಗ್ಗೆ ಚಿಂತೆ ಇದ್ದಂತಿಲ್ಲ. ತಾವು ಬೇರೆಯವರ ಕೈಗೊಂಬೆಗಳಾಗಿದ್ದೇವೆ, ಅವರು ತಮ್ಮ ಸ್ವಾರ್ಥಕ್ಕಾಗಿ ತಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ ಅಂತ ಇವರಿಗೆ ಯಾವಾಗ ಗೊತ್ತಾಗುತ್ತದೋ? ಇವರನ್ನು ಬಳಸಿಕೊಳ್ಳುತ್ತಿರುವವರಿಗೆ ಸಾಮಾಜಿಕ ಕಳಕಳಿ (social concern) ಇಲ್ಲವೇ? ಶಾಲಾ-ಕಾಲೇಜುಗಳಲ್ಲಿ ಓದುವ ಮಕ್ಕಳಿಲ್ಲವೇ? ಬಹಳ ಮೂಲಭೂತ ಪ್ರಶ್ನೆಗಳಿವು. ಹಿಜಾಬ್-ಕೇಸರಿ ವಿವಾದ ಈಗ ರಾಜ್ಯದೆಲ್ಲೆಡೆ ಹಬ್ಬಿದೆ ಮತ್ತು ರಾಷ್ಟ್ರವ್ಯಾಪಿ (across nation) ಚರ್ಚೆಯಾಗುತ್ತಿದೆ. ಮಂಗಳವಾರ ಶಿವಮೊಗ್ಗ ಸರ್ಕಾರೀ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರಧ್ವಜವನ್ನು (Tricolour) ಇಳಿಸಿ ಭಾಗ್ವವನ್ನು ಹಾರಿಸಿದ್ದು ರಾಷ್ಟ್ರದ ಬೇರೆ ರಾಜ್ಯಗಳ ಮುಂದೆ ನಮ್ಮ ರಾಜ್ಯ ತಲೆತಗ್ಗಿಸುವಂತಾಗಿದೆ.

ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಯಾವುದೇ ಬಲ ಪ್ರಯೋಗಿಸಿದೆ ಚದುರಿಸುವುದು ಸಾಧ್ಯವಿಲ್ಲವೇ? ಕೈಯಲ್ಲಿ ಲಾಠಿ ಹಿಡಿಯುವ ಪೊಲೀಸರು ಶಾಲಾ ಕಾಲೇಜುಗಳ ಕೌಂಪೌಂಡಗಳಿಗೆ ಎರಡು ಮೂರು ಸಲ ಬಾರಿಸಿ ಜೋರಾಗಿ ಗದರಿದರೆ ಸಾಕು ವಿದ್ಯಾರ್ಥಿಗಳು ದಿಕ್ಕಾಪಾಲಾಗಿ ಓಡುತ್ತಾರೆ. ಯಾರಿಗೂ ಲಾಠಿ ರುಚಿ ತೋರಿಸುವ ಅಗತ್ಯವಿಲ್ಲ. ಬಾಗಲಕೋಟೆಯ ಪೊಲೀಸರು ಅದನ್ನೇ ಮಾಡಿದ್ದಾರೆ.

ಪ್ರತಿಭಟನೆ ನಡೆಸಲು ಮುಚ್ಚಿದ್ದ ಕಾಲೇಜಿನ ಗೇಟು ಬಲಪ್ರಯೋಗಿಸಿ ತೆಗೆದು, ಕೌಂಪೌಂಡ್ ಗೋಡೆ ಹಾರಿ ಒಳನುಗ್ಗಿದ ವಿದ್ಯಾರ್ಥಿಗಳನ್ನು ಪೊಲೀಸರು ಕೇವಲ ಬೆನ್ನಟ್ಟಿ ಚದುರಿಸಿದ್ದಾರೆ. ರಸ್ತೆ ಮೇಲೆ ಗುಂಪುಗೂಡಿರುವ ವಿದ್ಯಾರ್ಥಿಗಳನ್ನು ಸಹ ಇದೇ ತಂತ್ರ ಬಳಸಿ ಓಡಿಸಲಾಗಿದೆ.

ಶಿವಮೊಗ್ಗೆಯ ಪೊಲೀಸರಿಗೆ ಬಾಗಲಕೋಟೆಯ ತಮ್ಮ ಸಹೋದ್ಯೋಗಿಗಳ ಹಾಗೆ ಮಾಡಬಹುದೆನ್ನುವ ವಿಚಾರ ಹೊಳೆಯಲಿಲ್ಲವೇ?

ಇದನ್ನೂ ಓದಿ:   ಕಾಂಗ್ರೆಸ್ ಪಕ್ಷ ಹಿಜಾಬ್ ವಿವಾದವನ್ನು ಸೃಷ್ಟಿಸಿ ಬಿಜೆಪಿ ತಲೆ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದೆ: ಕೆ ಎಸ್ ಈಶ್ವರಪ್ಪ