ಹಿಜಾಬ್ ವಿವಾದ: ಗದಗ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಮತ್ತು ವಿದ್ಯಾರ್ಥಿನಿಯರ ನಡುವೆ ವಾಗ್ವಾದ

ಸರ್ಕಾರ ಮತ್ತು ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಹೈಕೋರ್ಟ್ ತೀರ್ಪು ಹೊರಬೀಳುವವರೆಗೆ ಕಾಯುವ ವ್ಯವಧಾನವಿಲ್ಲ. ಅವಸವಸರವಾಗಿ ಸರಕಾರ ಸಮವಸ್ತ್ರ ಕಡ್ಡಾಯ ಅಂತ ಆದೇಶ ಹೊರಡಿಸುತ್ತದೆ. ಈ ಆದೇಶದಲ್ಲಿ ಹೊಸದೇನಿದೆ? ಸಮವಸ್ತ್ರ ಎಲ್ಲ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವೇ.

ಹಿಜಾಬ್ ವಿವಾದ: ಗದಗ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಮತ್ತು ವಿದ್ಯಾರ್ಥಿನಿಯರ ನಡುವೆ ವಾಗ್ವಾದ
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 08, 2022 | 8:16 PM

ಹಿಜಾಬ್ ಧರಿಸಿ ಕಾಲೇಜುಗಳಿಗೆ ಬರುವ ಮಕ್ಕಳನ್ನು ಶಾಲೆಗೆ ಸೇರಿಸದೆ ಗೇಟಿನ ಹೊರಗಡೆ ನಿಲ್ಲಿಸಬೇಕು ಅಂತ ಆದೇಶ ಸರ್ಕಾರ ಹೊರಡಿಸಿದೆ ಅಂತ ಗದಗ (Gadag) ಪಟ್ಟಣದ ಸರ್ಕಾರೀ ಪ್ರಥಮ ದರ್ಜೆ ಮಹಿಳಾ ಕಾಲೇಜಿನ (Women’s First Grade College) ಪ್ರಿನ್ಸಿಪಾಲ (principal) ವಿದ್ಯಾರ್ಥಿನಿಯರಿಗೆ ಮತ್ತು ಅವರ ಪೋಷಕರಿಗೆ ಈ ವಿಡಿಯೋನಲ್ಲಿ ಹೇಳುತ್ತಿದ್ದಾರೆ. ಸರಿ, ಹಾಗಾದರೆ ಆದೇಶದ ಪ್ರತಿ ತೋರಿಸಿ ಅಂತ ವಿದ್ಯಾರ್ಥಿನಿಯರು ಕೇಳಿದರೆ ಪ್ರಿನ್ಸಿಪಾಲರ ಬಳಿ ಉತ್ತರವಿಲ್ಲ. ಕಾಲೇಜಿನ ಆವರಣದಲ್ಲಿರುವ ಸ್ಥಿತಿಯನ್ನು ಮೇಲಾಧಿಕಾರಿಗಳಿಗೆ ತಿಳಿಸಿದಾಗ ಅವರು ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರನ್ನು ತರಗತಿಗಳಲ್ಲಿ ಕೂರಲು ಬಿಡಬೇಡಿ ಅಂತ ಅವರು ಹೇಳಿದ್ದಾರೆ, ಅವರ ಆದೇಶವನ್ನು ಪಾಲಿಸುತ್ತಿದ್ದೇನೆ ಎಂದು ಪ್ರಿನ್ಸಿಪಾಲರು ಹೇಳುತ್ತಾರೆ. ಅಂದಹಾಗೆ, ಇವರ ಹೆಸರು ಪ್ರಕಾಶ್ ಹೊಸಮನಿ (Prakash Hosamani) ಅಂತ. ವಿದ್ಯಾರ್ಥಿಗಳ ಆಗ್ರಹ ಹೆಚ್ಚಿದಾಗ ಅವರು ಪೊಲೀಸರನ್ನು ಕರೆಸುತ್ತಾರೆ. ಪೊಲೀಸರು ಶಾಲಾ ಮತ್ತು ಕಾಲೇಜು ಆವರಣಗಳಿಗೆ ಹೆಚ್ಚೆಚ್ಚು ಭೇಟಿ ನೀಡುವ ಅನಿವಾರ್ಯತೆಯನ್ನು ಹಿಜಾಬ್-ಕೇಸರಿ ವಿವಾದ ಸೃಷ್ಟಿಸಿದೆ ಅಂದರೆ ಉತ್ಪ್ರೇಕ್ಷೆ ಅನಿಸದು.

ಸರ್ಕಾರ ಮತ್ತು ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಹೈಕೋರ್ಟ್ ತೀರ್ಪು ಹೊರಬೀಳುವವರೆಗೆ ಕಾಯುವ ವ್ಯವಧಾನವಿಲ್ಲ. ಅವಸವಸರವಾಗಿ ಸರಕಾರ ಸಮವಸ್ತ್ರ ಕಡ್ಡಾಯ ಅಂತ ಆದೇಶ ಹೊರಡಿಸುತ್ತದೆ. ಈ ಆದೇಶದಲ್ಲಿ ಹೊಸದೇನಿದೆ? ಸಮವಸ್ತ್ರ ಎಲ್ಲ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವೇ. ಸಮಸ್ಯೆ ಶುರುವಾಗಿದ್ದು ಹಿಜಾಬ್ ಧರಿಸುವ ಬಗ್ಗೆ. ಸರ್ಕಾರದ ಆದೇಶದಲ್ಲಿ ಹಿಜಾಬ್ ಪ್ರಸ್ತಾಪವಿಲ್ಲ. ಅದರ ಬಗ್ಗೆ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕಿತ್ತು.

ಬುಧವಾರದಂದು ಸರಕಾರ ಈ ವಿವಾದದ ಬಗ್ಗೆ ಹೈಕೋರ್ಟ್​ಗೆ ವರದಿ ಸಲ್ಲಿಸಬೇಕಾಗಿದೆ ಮತ್ತು ನ್ಯಾಯಾಲಯ ಅದನ್ನು ಪರಾಮರ್ಶಿಸಲಿದೆ. ಅದು ಹೊರಡಿಸಿದ ಆದೇಶ ಕುರಿತು ಸಹ ವಿಚಾರಣೆ ವೇಳೆ ಪ್ರಸ್ತಾಪ ಆಗೋದು ನಿಶ್ಚಿತ. ಅಗ ತನ್ನ ಆದೇಶವನ್ನು ಸರ್ಕಾರ ಹೇಗೆ ಸಮರ್ಥಿಸಿಕೊಳ್ಳುತ್ತದೆಯೋ?

ಇದನ್ನೂ ಓದಿ:    ಉಡುಪಿ ಕಾಲೇಜೊಂದರಲ್ಲಿ ಹಿಜಾಬ್ ತೊಟ್ಟ ವಿದ್ಯಾರ್ಥಿನಿಯರು ಮತ್ತು ಕೇಸರಿ ಪೇಟ ಧರಿಸಿದ ವಿದ್ಯಾರ್ಥಿಗಳಿಂದ ಅನಾವಶ್ಯಕ ಬಲ ಪ್ರದರ್ಶನ!

Follow us
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ