‘ದೊಡ್ಮನೆ’ಯಲ್ಲಿ ಊಟ ಮಾಡದ ಕಲಾವಿದರೇ ಇಲ್ಲ, ರಾಘಣ್ಣನ ನೋಡ್ತಿದ್ರೆ ‘ಅಣ್ಣಾವ್ರನ್ನ’ ನೋಡಿದಂತಾಗುತ್ತದೆ ಅಂದರು ಪ್ರಥಮ್ 

ಚಿತ್ರರಂಗದ ಪ್ರತಿಯೊಬ್ಬ ಕಲಾವಿದನ ಪಯಣ ದೊಡ್ಮನೆಯಿಂದಲೇ ಆರಂಭವಾಗುತ್ತದೆ ಎಂದರು. ತಾನು ಯಾವತ್ತೂ ‘ಅಣ್ಣಾವ್ರು’ ಅವರನ್ನು ನೋಡಿಲ್ಲ ಎನ್ನುವ ಪ್ರಥಮ್, ಡಾ ರಾಜ್ ಹೇಗಿದ್ದರೆನ್ನುವುದು ರಾಘಣ್ಣನವರ ನಡೆ ನುಡಿಗಳಿಂದ ಗೊತ್ತಾಗುತ್ತದೆ ಎಂದರು.

TV9kannada Web Team

| Edited By: Arun Belly

Feb 08, 2022 | 6:21 PM

ಬಿಗ್ ಬಾಸ್ ಸೀಸನಲ್ಲಿ (Bigg Boss Season) ತನ್ನ ಹುಚ್ಚಾಟಗಳಿಂದ ಮನೆಮಾತಾಗಿದ್ದಲ್ಲದೆ, ಅದರಲ್ಲಿ ವಿಜಯಶಾಲಿಯೂ ಆಗಿದ್ದ ಒಳ್ಳೆ ಹುಡುಗ ಪ್ರಥಮ್ (Pratham) ಮದುವೆ ನಂತರ ತುಂಬಾನೇ ಒಳ್ಳೆಯವರಾಗಿರುವಂತೆ ಕಾಣುತ್ತಿದೆ. ಮೊದಲಿಗೆ ಅವರು ಕೆಟ್ಟವರಾರಗಿದ್ದರು ಅಂತ ಇದರ್ಥವಲ್ಲ. ಅವರು ಮಾಡುವ ಜನೋಪಕಾರಿ ಕೆಲಸಗಳು ಕನ್ನಡಿಗರಿಗೆ ಬಹಳ ಇಷ್ಟವಾಗಿವೆ ಮಾರಾಯ್ರೇ. ಈಗ ಅವರು ನಿರ್ದೇಶಕರು ಕೂಡ ಆಗಿದ್ದು ಅವರ ಕೈಯಲ್ಲಿ ‘ಕರ್ನಾಟಕ ಅಳಿಯ’ (Karnataka Aliya) ಚಿತ್ರವಿದೆ. ಈ ಸಿನಿಮಾದ ವಿಶೇಷವೆಂದರೆ ರಾಘವೇಂದ್ರ ರಾಜಕುಮಾರ (Raghavendra Rajkumar) ಅವರು ಬಹಳ ದಿನಗಳಿಂದ ಸಿನಿಮಾವೊಂದರಲ್ಲಿ ನಟಿಸುತ್ತಿರುವುದು. ಪುನೀತ್ ರಾಜಕುಮಾರ್ ಅವರ ಅಕಾಲಿಕ ಮರಣದಿಂದ ಖಿನ್ನತೆಗೊಳಗಾಗಿದ್ದ ರಾಘಣ್ಣ ಅದರಿಂದ ಹೊರಬರಲು ಚಿತ್ರದಲ್ಲಿ ನಟಿಸುವ ನಿರ್ಧಾರ ತೆಗೆದುಕೊಂಡಿರಬಹುದು. ಕರ್ನಾಟಕ ಅಳಿಯ ಪ್ರಾಜೆಕ್ಟ್ ಬಗ್ಗೆ ಪ್ರಥಮ್ ಬಹಳ ಉತ್ತೆಜಿತರಾಗಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತಾಡುವಾಗ ಅವರು ಕನ್ನಡ ಚಿತ್ರರಂಗದ ‘ದೊಡ್ಮನೆ’ ಬಗ್ಗೆ ಬಹಳ ಅಭಿಮಾನ ಮತ್ತು ಹೆಮ್ಮೆಯಿಂದ ಮಾತಾಡಿದರು.

ಡಾ ರಾಜಕುಮಾರ ಅವರ ಮನೆಯಲ್ಲಿ ಊಟ ಮಾಡದ ಕಲಾವಿದರೇ ಇಲ್ಲ ಎಂದು ಹೇಳುವ ಪ್ರಥಮ ಚಿತ್ರರಂಗದ ಪ್ರತಿಯೊಬ್ಬ ಕಲಾವಿದನ ಪಯಣ ದೊಡ್ಮನೆಯಿಂದಲೇ ಆರಂಭವಾಗುತ್ತದೆ ಎಂದರು. ತಾನು ಯಾವತ್ತೂ ‘ಅಣ್ಣಾವ್ರು’ ಅವರನ್ನು ನೋಡಿಲ್ಲ ಎನ್ನುವ ಪ್ರಥಮ್, ಡಾ ರಾಜ್ ಹೇಗಿದ್ದರೆನ್ನುವುದು ರಾಘಣ್ಣನವರ ನಡೆ ನುಡಿಗಳಿಂದ ಗೊತ್ತಾಗುತ್ತದೆ ಎಂದರು.

ಅಪ್ಪು ಸ್ಮರಣಾರ್ಥ ಮೆಡಿಕಲ್ ಕಿಟ್​ಗಳ ವಿತರಣೆಯ ಕಾರ್ಯಕ್ರಮ ರಾಘಣ್ಣನವರ ನೇತೃತ್ವದಲ್ಲಿ ನಡೆಯುತ್ತಿರುವುದು ಮತ್ತು ತಾನು ಅದರಲ್ಲಿ ಪಾಲ್ಗೊಳ್ಳುವಂತಾಗಿದ್ದು ಸೌಭಾಗ್ಯ ಎಂದು ಅವರು ಹೇಳಿದರು.

‘ಕರ್ನಾಟಕ ಅಳಿಯ’ ಸಿನಿಮಾ ಹಿಂದೆ ರಾಘಣ್ಣ ಅವರು ನಟಿಸಿದ ‘ನಂಜುಂಡಿ ಕಲ್ಯಾಣ’ ಮತ್ತು ‘ಗಜಪತಿ ಗರ್ವಭಂಗ’ ಚಿತ್ರಗಳ ರೀತಿಯಲ್ಲೇ ಇರಲಿದೆ ಅದರೆ ಈ ಚಿತ್ರಕ್ಕೆ ಮತ್ತಷ್ಟು ಕಾಮಿಡಿ ಸೇರಿಸಲಾಗಿದೆ ಮತ್ತು ಬ್ಲ್ಯಾಕ್ ಮ್ಯಾಜಿಕ್ ಅಂಶವೂ ಚಿತ್ರದಲ್ಲಿರಲಿದೆ ಎಂದು ಪ್ರಥಮ್ ಹೇಳಿದರು.

ಇದನ್ನೂ ಓದಿ:  ‘ಬೇರೆಯವರ ದುಡ್ಡಲ್ಲಿ ನಾನೇಕೆ ಬಿಲ್ಡಪ್​ ತೆಗೆದುಕೊಳ್ಳಲಿ?’; ಸ್ವಂತ ಖರ್ಚಲ್ಲಿ ‘ನಟ ಭಯಂಕರ’ ಸಿನಿಮಾ ಕಾರ್ಮಿಕರಿಗೆ ಪ್ರಥಮ್​ ಸಹಾಯ

Follow us on

Click on your DTH Provider to Add TV9 Kannada