ರಥಸಪ್ತಮಿ-2022 ಅಂಗವಾಗಿ ಮೈಸೂರು ಅರಮನೆ ಆವರಣದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಮತ್ತು ಯೋಗ ನೃತ್ಯ ಕಾರ್ಯಕ್ರಮ
ಕೊರೋನಾ ಪಿಡುಗಿನ ಮೂರನೇ ಅಲೆ ಇನ್ನೂ ಪೂರ್ತಿಯಾಗಿ ದೂರವಾಗಿರದ ಕಾರಣ ರಥಸಪ್ತಮಿ-2022 ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. ಮಕ್ಕಳು ವೇದಿಕೆ ಮೇಲೆ ಪ್ರದರ್ಶಿಸಿದ ಸೂರ್ಯ ನಮಸ್ಕಾರ ಮತ್ತು ಯೋಗ ನೃತ್ಯ ಅಲ್ಲಿ ನೆರೆದಿದ್ದ ಜನರ ಗಮನ ಸೆಳೆಯಿತು.
ಯೋಗ ಫೆಡರೇಶನ್ ಆಫ್ ಮೈಸೂರು ಟ್ರಸ್ಟ್ (Yoga Federation of Mysuru Trust) ವತಿಯಿಂದ ಮತ್ತು ಮೈಸೂರು ಅರಮನೆ ಮಂಡಳಿ ಸಹಯೋಗದಲ್ಲಿ ಮಂಗಳವಾರ ಮೈಸೂರು ಅರಮನೆ ಆವರಣದಲ್ಲಿ (Mysuru palace ground premises) ಮಂಗಳವಾರದಂದು ರಥಸಪ್ತಮಿ-2022 ಅಚರಿಸಲಾಯಿತು. ಈ ಸಂದರ್ಭದಲ್ಲಿ ಯೋಗದ ಮಹತ್ವವನ್ನು ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ತಿಳಿಸಲಾಯಿತು ಮತ್ತು ಅವರಿಂದ ಮಾನಸಿಕ ಸಂಕಲ್ಪವನ್ನೂ ಮಾಡಿಸಲಾಯಿತು. ಹದಿಹರೆಯದ ಬಾಲಕರ ತಂಡವೊಂದು ವೇದಿಕೆ ಮೇಲೆ ಸೂರ್ಯ ನಮಸ್ಕಾರ ಅಸನವನ್ನು ಪ್ರದರ್ಶಿಸಿತು. ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ನೂರಾರು ಜನರೊಂದಿಗೆ ಯೋಗಾನರಸಿಂಹ ಸ್ವಾಮಿ ದೇಗುಲ್ ಭಾಷ್ಯಂ ಸ್ವಾಮೀಜಿ, ಜೆ ಎಸ್ ಎಸ್ ಯೋಗ ಸಂಸ್ಥೆಯ ಶ್ರೀಹರಿ ಮತ್ತು ಇನ್ನಿತರರು ಭಾಗಿಯಾಗಿದ್ದರು. ಕಳೆದ ಎರಡು ವರ್ಷಗಳಿಂದ ಕೊರೋನಾ ಪಿಡುಗಿನಿಂದಾಗಿ ಮೈಸೂರು ನಗರದಲ್ಲಿ ಯೋಗ ಚಟುವಟಿಕೆಗಳು ಕುಂಠಿತಗೊಂಡಿದ್ದವು. ಅದರೆ, ಮೈಸೂರಿಗೆ ಯೋಗ ಬ್ರ್ಯಾಂಡ್ ವಾಪಸ್ಸು ತರುವ ಸಂಕಲ್ಪವನ್ನು ಮಂಗಳವಾರ ಮಾಡಲಾಯಿತು.
ನನ್ನ ಮನೆಯವರನ್ನು ಯೋಗದಲ್ಲಿ ತೊಡಗಿಸುತ್ತೇನೆ, ನಾನು ಆರೋಗ್ಯವಾಗಿದ್ದೇನೆ ಮತ್ತು ನನ್ನ ಮನೆಯವರನ್ನೂ ಆರೋಗ್ಯವಾಗಿರುಸುತ್ತೇನೆ, ನನ್ನ ಸಹಪಾಠಿಗಳನ್ನ ಯೋಗ ಮಾಡುವಂತೆ ಪ್ರೇರೇಪಿಸುತ್ತೇನೆ. ಪ್ರತಿದಿನ 100 ಜನರನ್ನು ಭೇಟಿ ಮಾಡುತ್ತೇನೆ, ಮತ್ತು ಅವರನ್ನು ಯೋಗದಲ್ಲಿ ಭಾಗಿಯಾಗುವಂತೆ ಪ್ರೇರೇಪಿಸುತ್ತೇನೆ ಎಂಬ ಮಾನಸಿಕ ಸಂಕಲ್ಪವನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರು ಮಾಡಿದರು.
ಕೊರೋನಾ ಪಿಡುಗಿನ ಮೂರನೇ ಅಲೆ ಇನ್ನೂ ಪೂರ್ತಿಯಾಗಿ ದೂರವಾಗಿರದ ಕಾರಣ ರಥಸಪ್ತಮಿ-2022 ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. ಮಕ್ಕಳು ವೇದಿಕೆ ಮೇಲೆ ಪ್ರದರ್ಶಿಸಿದ ಸೂರ್ಯ ನಮಸ್ಕಾರ ಮತ್ತು ಯೋಗ ನೃತ್ಯ ಅಲ್ಲಿ ನೆರೆದಿದ್ದ ಜನರ ಗಮನ ಸೆಳೆಯಿತು.
ಇದನ್ನೂ ಓದಿ: ಪೊಲೀಸರಿಗೆ ವಿಡಿಯೋ ಕಾಲ್ ಮಾಡಿ ಕ್ಷಮೆ ಕೇಳಿದ ನಟ ಸಿದ್ದಾರ್ಥ್; ಈ ಬಾರಿ ಅವರು ಮಾಡಿದ ತಪ್ಪೇನು?