ಉಡುಪಿ ಕಾಲೇಜೊಂದರಲ್ಲಿ ಹಿಜಾಬ್ ತೊಟ್ಟ ವಿದ್ಯಾರ್ಥಿನಿಯರು ಮತ್ತು ಕೇಸರಿ ಪೇಟ ಧರಿಸಿದ ವಿದ್ಯಾರ್ಥಿಗಳಿಂದ ಅನಾವಶ್ಯಕ ಬಲ ಪ್ರದರ್ಶನ!

ಉಡುಪಿ ಕಾಲೇಜೊಂದರಲ್ಲಿ ಹಿಜಾಬ್ ತೊಟ್ಟ ವಿದ್ಯಾರ್ಥಿನಿಯರು ಮತ್ತು ಕೇಸರಿ ಪೇಟ ಧರಿಸಿದ ವಿದ್ಯಾರ್ಥಿಗಳಿಂದ ಅನಾವಶ್ಯಕ ಬಲ ಪ್ರದರ್ಶನ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 08, 2022 | 7:16 PM

ಕೇವಲ ಉಡುಪಿಯ ಸರ್ಕಾರೀ ಜ್ಯೂನಿಯರ್ ಕಾಲೇಜೊಂದಕ್ಕೆ ಸೀಮಿತವಾಗಿದ್ದ ಹಿಜಾಬ್ ವಿವಾದ ಕ್ರಮೇಣ ಕರಾವಳಿ ಪ್ರಾಂತ್ಯದ ಎಲ್ಲ ಕಾಲೇಜುಗಳಿಗೆ ವಿಸ್ತರಿಸಿದೆ ಮತ್ತು ರಾಜ್ಯದ ಇತರ ಜಿಲ್ಲೆಗಳಿಗೂ ಹಬ್ಬಿದೆ. ಹಿಜಾಬ್ ಪ್ರಕರಣದ ವಿಚಾರಣೆಯನ್ನು ಇಂದು (ಮಂಗಳವಾರ) ಕೈಗೆತ್ತಿಕೊಂಡ ಹೈಕೋರ್ಟ್ ಅದನ್ನು ನಾಳೆಗೆ ಮುಂದೂಡಿದೆ.

ಪರೀಕ್ಷೆಗಳಿಗೆ ಎರಡು ತಿಂಗಳಿಗಿಂತ ಕಡಿಮೆ ಸಮಯ ಉಳಿದಿದೆ. ಕೊರೋನಾ ಹಾವಳಿಯಿಂದ (pandemic) ಇದುವರೆಗೆ ಮುಚ್ಚಿದ್ದ ಶಾಲಾ ಕಾಲೇಜುಗಳು ಈಗಷ್ಟೇ ತೆರೆದುಕೊಂಡಿವೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗೆ ತಯಾರಾಗಲು ಸಮಯವೇ ಉಳಿದಿಲ್ಲ. ಅದರೆ ಉಡುಪಿಯ ಎಮ್ ಜಿ ಎಮ್ ಕಾಲೇಜಿನ (MGM College, Udupi) ಮುಂದೆ ನಡೆಯುತ್ತಿರುವ ಸನ್ನಿವೇಶವನ್ನು ನೋಡಿ. ಒಂದೆಡೆ ಹಿಜಾಬ್ (hijab) ಧರಿಸಿರುವ ವಿದ್ಯಾರ್ಥಿನಿಯರು ಮತ್ತೊಂದೆಡೆ ಅವರು ಕಾಲೇಜಿನ ಅವರಣ ಪ್ರವೇಶಿದಂತೆ ತಡೆಯುತ್ತಿರುವ ಕೇಸರಿ ಶಾಲು (Kesari shawl) ಹೊದ್ದ ಕೆಲ ವಿದ್ಯಾರ್ಥಿಗಳು. ಎರಡೂ ಪಕ್ಷದವರನ್ನು ಮೂಕ ಪ್ರೇಕ್ಷಕರಂತೆ ನೋಡುತ್ತಾ ನಿಂತಿರುವ ಪೊಲೀಸರು. ಕಾಲೇಜಿನ ಒಳ ಅವರಣದಲ್ಲಿ ಕೆಲ ವಿದ್ಯಾರ್ಥಿಗಳಿದ್ದಾರೆ. ಅವರಲ್ಲಿ ಹಿಜಾಬ್ ಧರಿಸಿರುವ ಕೆಲ ವಿದ್ಯಾರ್ಥಿನಿಯರೂ ಇದ್ದಾರೆ. ಸ್ವಲ್ಪ ಸಮಯದ ನಂತರ ಕೇಸರಿ ಪೇಟ ತೊಟ್ಟು ಕೇಸರಿ ಶಾಲು ಹೊದ್ದ ವಿದ್ಯಾರ್ಥಿಗಳ ಗುಂಪು ಅಲ್ಲಿಗೆ ಆಗಮಿಸುತ್ತದೆ. ಪರಿಸ್ಥಿತಿ ಕೈಮೀರಲಿದೆ ಎನ್ನುವುದನ್ನು ಗ್ರಹಿಸುವ ಕಾಲೇಜಿನ ಅಧ್ಯಾಪಕ ವರ್ಗ ಹೊರಗಡೆ ಧಾವಿಸಿ ಎರಡು ಗುಂಪುಗಳ ನಡುವೆ ಗೋಡೆಯಾಗಿ ನಿಂತು ಬಿಡುತ್ತಾರೆ. ಅಲ್ಲಿಯವರೆಗೆ ಸುಮ್ಮನೆ ಒಂದು ಮರದ ನೆರಳಿನಲ್ಲಿ ನಿಂತಿದ್ದ ಪೊಲೀಸರು ವಿದ್ಯಾರ್ಥಿಗಳನ್ನು ಸಮಾಧಾನಪಡಿಸಲು ಮುಂದಾಗುತ್ತಾರೆ.

ಇಂಥ ದೃಶ್ಯಗಳು ದಿನೇದಿನೆ ಹೆಚ್ಚುತ್ತಿವೆ. ಕೇವಲ ಉಡುಪಿಯ ಸರ್ಕಾರೀ ಜ್ಯೂನಿಯರ್ ಕಾಲೇಜೊಂದಕ್ಕೆ ಸೀಮಿತವಾಗಿದ್ದ ಹಿಜಾಬ್ ವಿವಾದ ಕ್ರಮೇಣ ಕರಾವಳಿ ಪ್ರಾಂತ್ಯದ ಎಲ್ಲ ಕಾಲೇಜುಗಳಿಗೆ ವಿಸ್ತರಿಸಿದೆ ಮತ್ತು ರಾಜ್ಯದ ಇತರ ಜಿಲ್ಲೆಗಳಿಗೂ ಹಬ್ಬಿದೆ. ಹಿಜಾಬ್ ಪ್ರಕರಣದ ವಿಚಾರಣೆಯನ್ನು ಇಂದು (ಮಂಗಳವಾರ) ಕೈಗೆತ್ತಿಕೊಂಡ ಹೈಕೋರ್ಟ್ ಅದನ್ನು ನಾಳೆಗೆ ಮುಂದೂಡಿದೆ.

ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಎಲ್ಲ ಸರ್ಕಾರೀ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಅಂತ ಆದೇಶ ಹೊರಡಿಸಿದರೆ, ಕಾಂಗ್ರೆಸ್ ನಾಯಕರು ಹಿಜಾಬ್ ಪರ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಇದನ್ನೂ ಓದಿ:  Hijab Row: ಶಿವಮೊಗ್ಗದಲ್ಲಿ ತಾರಕಕ್ಕೇರಿದ ಕೇಸರಿ ಶಾಲು- ಹಿಜಾಬ್ ಗಲಾಟೆ; ರಾಷ್ಟ್ರಧ್ವಜ ಕೆಳಗಿಳಿಸಿ ಕೇಸರಿ ಧ್ವಜ ಹಾರಿಸಿದ ವಿದ್ಯಾರ್ಥಿ