ಶಿವಮೊಗ್ಗ ಸರ್ಕಾರಿ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಕೇಸರಿ ಧ್ವಜ ಹಾರಿಸಿದರು ವಿದ್ಯಾರ್ಥಿಗಳು!
ಗಮನಿಸಬೇಕಾದ ಸಂಗತಿಯೇನೆಂದರೆ, ಕಾಲೇಜು ಅವರಣದಲ್ಲಿ ಪೊಲೀಸ್ ವಾಹನ ಕಾಣುತ್ತಿದೆ. ಅದರರ್ಥ ಪೊಲೀಸರು ಅಲ್ಲಿದ್ದಾರೆ ಮತ್ತು ಯುವಕ ಧ್ವಜ ಕಟ್ಟುವುದನ್ನು ನೋಡುತ್ತಾ ನಿಂತಿದ್ದಾರೆ. ಮಧ್ಯಪ್ರವೇಶ ಮಾಡಬೇಡಿ ಅವರಿಂದ ಮೇಲಿಂದ ಆದೇಶ ಇದ್ದಿರಬಹುದು.
ಹಿಜಾಬ್-ಕೇಸರಿ ವಿವಾದ (Hijab-Kesari row) ಎಲ್ಲ ಹದ್ದುಗಳನ್ನು ದಾಟುತ್ತಿದೆ ಮಾರಾಯ್ರೇ. ಹಿಜಾಬ್ ಧರಿಸಿ ಶಾಲಾ-ಕಾಲೇಜುಗಳಿಗೆ ಹೋಗುವ ಮಕ್ಕಳನ್ನು ಗೇಟಿನ ಹೊರಗಡೆ ನಿಲ್ಲಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ (NHRC) ಮತ್ತು ಮಹಿಳಾ ಅಯೋಗಕ್ಕೂ ದೂರು ಸಲ್ಲಿಸಲಾಗಿದೆ. ಆಯೋಗದ ಎದುರು ಈ ಕಾಲೇಜುಗಳ ಪ್ರಿನ್ಸಿಪಾಲರು, ಮುಖ್ಯಸ್ಥರು ವಿಚಾರಣೆಗೆ ಎದುರಾಗುವ ಸ್ಥಿತಿ ಎದುರಾಗಲಿದೆ. ಸರ್ಕಾರದ ಆದೇಶವನ್ನು ನಾವು ಪಾಲಿಸಿದ್ದೇವೆ ಅವರು ಹೇಳಿದರೆ, ಸರ್ಕಾರದ ಪ್ರತಿನಿಧಿಗಳು ಸಹ ವಿಚಾರಣೆಗೆ ಹಾಜರಾಗಬೇಕು. ಕಾನೂನು ವ್ಯವಸ್ಥೆಯನ್ನು (judicial system) ನಮ್ಮ ದೇಶದಲ್ಲಿ ಹಗುರವಾಗಿ ಪರಿಗಣಿಸಿದಷ್ಟು ಬೇರೆ ಯಾವ ದೇಶದಲ್ಲೂ ಪರಿಗಣಿಸಲಾಗದು ಅಂತ ನಿಮಗೆ ಅನಿಸುತ್ತಿದ್ದರೆ ಆಶ್ಚರ್ಯವಿಲ್ಲ ಮಾರಾಯ್ರೇ. ಈ ವಿಡಿಯೋ ನೋಡಿ. ಇದು ಶಿವಮೊಗ್ಗ ನಗರದ ಸರ್ಕಾರೀ ಪದವಿ-ಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ ದೃಶ್ಯ. ಕಾಲೇಜಿನ ಮುಂದಿರುವ ಧ್ವಜಸ್ತಂಭಕ್ಕೆ ಒಬ್ಬ ವಿದ್ಯಾರ್ಥಿ ತಿರಂಗವನ್ನು ಕೆಳಗಿಳಿಸಿ ಕೇಸರಿ ಧ್ವಜ ಕಟ್ಟುತ್ತಿದ್ದಾನೆ. ಬೇರೆ ವಿದ್ಯಾರ್ಥಿಗಳು ಚೀರುತ್ತಾ, ಅರಚುತ್ತಾ, ಶಿಳ್ಳೆ ಹಾಕುತ್ತಾ ಅವನನ್ನು ಹುರಿದುಂಬಿಸುತ್ತಿದ್ದಾರೆ. ಅವರೆಲ್ಲರ ಪಾಲಿನ ಹೀರೋ ಅವನು.
ಗಮನಿಸಬೇಕಾದ ಸಂಗತಿಯೇನೆಂದರೆ, ಕಾಲೇಜು ಅವರಣದಲ್ಲಿ ಪೊಲೀಸ್ ವಾಹನ ಕಾಣುತ್ತಿದೆ. ಅದರರ್ಥ ಪೊಲೀಸರು ಅಲ್ಲಿದ್ದಾರೆ ಮತ್ತು ಯುವಕ ಧ್ವಜ ಕಟ್ಟುವುದನ್ನು ನೋಡುತ್ತಾ ನಿಂತಿದ್ದಾರೆ. ಮಧ್ಯಪ್ರವೇಶ ಮಾಡಬೇಡಿ ಅವರಿಂದ ಮೇಲಿಂದ ಆದೇಶ ಇದ್ದಿರಬಹುದು. ಇವತ್ತು ಇದು ಶಿವಮೊಗ್ಗದಲ್ಲಿ ನಡೆದಿದೆ, ನಾಳೆ ಬೇರೆ ನಗರಗಳಲ್ಲಿ ನಡೆಯುತ್ತದೆ.
ಈ ವಿದ್ಯಾರ್ಥಿಗಳು ಅಷ್ಟಕ್ಕೆ ಸುಮ್ಮನಾಗಿಲ್ಲ. ಶಿವಮೊಗ್ಗದ ಬಿ ಎಚ್ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಹಾಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಇದೇ ಜಿಲ್ಲೆಯವರು. ರಾಷ್ಟ್ರಧ್ವಜವನ್ನು ಕೆಳಗಿಳಿಸುವಾಗ ನೀವೆಲ್ಲ ಏನು ಮಾಡ್ತಾ ಇದ್ದೀರಿ ಅಂತ ಗೃಹ ಸಚಿವರು ಕೇಳಬಹುದು ಎಂಬ ಭಯ ಪೊಲೀಸರಿಗೆ ಇದ್ದಂತಿಲ್ಲ.
ಕರ್ನಾಟಕದ ಮಾನ ಮಾರ್ಯಾದೆ ಮೂರು ಕಾಸಿಗೆ ಹರಾಜಾಗಿರುವುದು ದುರಂತ ಮಾರಾಯ್ರೇ!
ಇದನ್ನೂ ಓದಿ: ಹಿಜಾಬ್ ವಿವಾದಕ್ಕೆ ರಾಜಕಾರಣವೇ ಮುಖ್ಯ ಕಾರಣ ಎಂದ ಕಾಂಗ್ರೆಸ್ನ ಸಲೀಂ ಅಹ್ಮದ್, ಬಿಜೆಪಿ ಮಾಧುಸ್ವಾಮಿ