ಸಮವಸ್ತ್ರ ಸಂಘರ್ಷ ಪ್ರಕರಣ; ಬಾಗಲಕೋಟೆ ವಿದ್ಯಾರ್ಥಿನಿ ಅಸ್ವಸ್ಥಗೊಂಡಿದ್ದ ವಿಡಿಯೋ ವೈರಲ್
ಬಾಗಲಕೋಟೆ ಜಿಲ್ಲೆಯ ಕಬಕವಿಬನಹಟ್ಟಿ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿನಿ ಅಸ್ವಸ್ಥಗೊಂಡಿದ್ದಳು. ವಿದ್ಯಾರ್ಥಿನಿ ಹಸಿವಿನಿಂದಾಗಿ ಸುಸ್ತಾಗಿ ಅಸ್ವಸ್ಥಗೊಂಡಿದ್ದಳು.
ರಾಜ್ಯದಲ್ಲಿ ಹಿಜಾಬ್ (Hijab) ವಿವಾದ ಹೆಚ್ಚಾಗುತ್ತಿದೆ. ಒಂದು ಕಡೆ ಹಿಜಾಬ್ ನಮ್ಮ ಹಕ್ಕು ಅಂತ ವಿದ್ಯಾರ್ಥಿಗಳು (Students) ಹೋರಾಟಕ್ಕೆ ಇಳಿದಿದ್ದಾರೆ. ಇನ್ನೊಂದು ಕಡೆ ಹಜಾಬ್ಗೆ ನಿರ್ಬಂಧ ಹೇರುವವರೆಗೆ ಕೇಸರಿ ಶಾಲು ಹಾಕುತ್ತೇವೆ ಅಂತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ನಿನ್ನೆ (ಫೆ.08) ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆ ಸಂಘರ್ಷ ಮಟ್ಟಕ್ಕೆ ತಲುಪಿತ್ತು. ರಾಜ್ಯದ ಹಲವೆಡೆ ಉಪನ್ಯಾಸಕರ ಮೇಲೆ ಹಲ್ಲೆ ನಡೆಸಿದ್ದರು. ಕಲ್ಲು ತೂರಾಟದಲ್ಲಿ ವಿದ್ಯಾರ್ಥಿಗಳಿಗೆ ಗಾಯವಾಗಿತ್ತು. ಪ್ರತಿಭಟನೆಯಲ್ಲಿ ಕೆಲ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರು. ಅದೇ ರೀತಿ ಬಾಗಲಕೋಟೆ ಜಿಲ್ಲೆಯ ಕಬಕವಿಬನಹಟ್ಟಿ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿನಿ ಅಸ್ವಸ್ಥಗೊಂಡಿದ್ದಳು. ವಿದ್ಯಾರ್ಥಿನಿ ಹಸಿವಿನಿಂದಾಗಿ ಸುಸ್ತಾಗಿ ಅಸ್ವಸ್ಥಗೊಂಡಿದ್ದಳು. ಆದರೆ ಕಲ್ಲು ತೂರಾಟದಲ್ಲಿ ಗಾಯಗೊಂಡಿದ್ದಾಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ
Zodiac Signs: ನಿಮ್ಮ ವ್ಯಕ್ತಿತ್ವಕ್ಕೆ ಸರಿಯಾಗಿ ಹೊಂದುವ ಗಿಡ ಯಾವುದು? ಇಲ್ಲಿದೆ ಮಾಹಿತಿ