‘ನಿಂಗೇನೋ ಬಂದಿರೋದು ದೊಡ್ ರೋಗ? ಹೋಗಲೋ’; ಡಾರ್ಲಿಂಗ್​​ ಕೃಷ್ಣಗೆ ಮಿಲನಾ ನಾಗರಾಜ್​ ಆವಾಜ್​

‘ನಿಂಗೇನೋ ಬಂದಿರೋದು ದೊಡ್ ರೋಗ? ಹೋಗಲೋ’; ಡಾರ್ಲಿಂಗ್​​ ಕೃಷ್ಣಗೆ ಮಿಲನಾ ನಾಗರಾಜ್​ ಆವಾಜ್​
ಮಿಲನಾ ನಾಗರಾಜ್​, ಡಾರ್ಲಿಂಗ್​ ಕೃಷ್ಣ

Love Mocktail 2: ನಟಿ ಮಿಲನಾ ನಾಗರಾಜ್​ ಅವರು ಪತಿ ಡಾರ್ಲಿಂಗ್​ ಕೃಷ್ಣ ಮೇಲೆ ಸಿಟ್ಟಾಗಿದ್ದಾರೆ. ಅದಕ್ಕಾಗಿ ಅವರು ಗರಂ ಆಗಿ ಮಾತನಾಡಿದ್ದಾರೆ. ಇದಕ್ಕೆಲ್ಲ ಕಾರಣ ‘ಲವ್​ ಮಾಕ್ಟೇಲ್​ 2’ ಟ್ರೇಲರ್​.

TV9kannada Web Team

| Edited By: Madan Kumar

Jan 28, 2022 | 9:29 AM

2020ರ ಆರಂಭದಲ್ಲಿ ‘ಲವ್​ ಮಾಕ್ಟೇಲ್​’ ಸಿನಿಮಾ ಸೂಪರ್​ ಹಿಟ್​ ಆಯಿತು. ಈಗ ಆ ಚಿತ್ರಕ್ಕೆ ಸೀಕ್ವೆಲ್​ ಸಿದ್ಧವಾಗುತ್ತಿದೆ. ನಟ, ನಿರ್ದೇಶಕ ಡಾರ್ಲಿಂಗ್​ ಕೃಷ್ಣ (Darling Krishna) ಅವರು ‘ಲವ್​ ಮಾಕ್ಟೇಲ್​ 2’ ಸಿನಿಮಾವನ್ನು ಕಟ್ಟಿಕೊಡುತ್ತಿದ್ದಾರೆ. ಅವರ ಪತ್ನಿ, ನಟಿ ಮಿಲನಾ ನಾಗರಾಜ್​ (Milana Nagaraj) ಬಂಡವಾಳ ಹೂಡಿದ್ದಾರೆ. ಈಗಾಗಲೇ ಈ ಚಿತ್ರದ ಪೋಸ್ಟರ್​ ಮತ್ತು ಹಾಡುಗಳು ಗಮನ ಸೆಳೆದಿವೆ. ಇನ್ನೇನಿದ್ದರೂ ಟ್ರೇಲರ್​ ನೋಡುವ ಸಮಯ. ಆದರೆ ‘ಲವ್​ ಮಾಕ್ಟೇಲ್​ 2’ (Love Mocktail 2) ಟ್ರೇಲರ್​ ಬಿಡುಗಡೆ ಮಾಡಲು ಡಾರ್ಲಿಂಗ್​ ಕೃಷ್ಣ ಅವರು ಯಾಕೋ ವಿಳಂಬ ಮಾಡುತ್ತಿದ್ದಾರೆ. ಟ್ರೇಲರ್​ ಸಿದ್ಧವಾಗಿದ್ದರೂ ಕೂಡ ಅವರು ಅದನ್ನು ರಿಲೀಸ್​ ಮಾಡಿಲ್ಲ. ಇದು ಮಿಲನಾ ನಾಗರಾಜ್​ ಕೋಪಕ್ಕೆ ಕಾರಣ ಆಗಿದೆ. ಈ ವಿಚಾರವನ್ನೇ ಇಟ್ಟುಕೊಂಡು ಅವರೊಂದು ವಿಡಿಯೋ ಕ್ರಿಯೇಟ್​ ಮಾಡಿದ್ದಾರೆ. ಅದರಲ್ಲಿ ಗಂಡ-ಹೆಂಡತಿಯ ಜಗಳ ಸಖತ್ ಹೈಲೈಟ್​ ಆಗಿದೆ.

‘ಲವ್​ ಮಾಕ್ಟೇಲ್​’ ಸಿನಿಮಾದಲ್ಲಿ ಹೆಂಡತಿಯ ಬರ್ತ್​ಡೇ ವಿಶ್​ ಮಾಡಲು ಮರೆತ ಹೀರೋಗೆ ಹೀರೋಯಿನ್​ ಬೈಯ್ಯುವ ದೃಶ್ಯ ಗಮನ ಸೆಳೆದಿತ್ತು. ಅದೇ ಮಾದರಿಯಲ್ಲಿ ಈಗ ಮಿಲನಾ ನಾಗರಾಜ್​ ಅವರು ಡಾರ್ಲಿಂಗ್​ ಕೃಷ್ಣಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ಆ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದು ಸಖತ್​ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಇಬ್ಬರ ನಡುವಿನ ಸಂಭಾಷಣೆ ಹೀಗಿದೆ..

ಕೃಷ್ಣ: ಯಾಕ್​ ಚಿನ್ನೀ..?

ಮಿಲನಾ: ಏನು.. ಚಿನ್ನಿನಾ? ಯಾವಳೋ ಚಿನ್ನಿ? ಅವ್ರು ಯಾರ್ಯಾರೋ ಟ್ರೇಲರ್​ ರಿಲೀಸ್​ ಮಾಡ್ಕೊಂಡು ಓಡಾಡ್ತಾ ಇದಾರೆ. ನಿಂಗೇನೋ ಬಂದಿರೋದು ದೊಡ್​ ರೋಗ? ಟ್ರೇಲರ್​ ರೆಡಿ ಆಗಿ ಒಂದು ತಿಂಗಳಾಯ್ತು ತಾನೆ? ಇವತ್ತು ರಿಲೀಸ್​ ಆಗತ್ತೆ, ನಾಳೆ ರಿಲೀಸ್​ ಆಗತ್ತೆ ಅಂತ ನಾನು ಕಾಯ್ತಾನೇ ಇದೀನಿ. ನೀವು ಬೇರೆ ಶೂಟಿಂಗ್​ನಲ್ಲಿ ಮಜಾ ಮಾಡ್ಕೊಂಡು ಓಡಾಡ್ತಾ ಇದೀರಾ?

ಕೃಷ್ಣ: ನಾನು ಶೂಟಿಂಗ್​ಗೆ ಹೋಗೋದು ಶೂಟಿಂಗ್​ ಮಾಡೋಕೆ. ಮಜಾ ಮಾಡೋಕಲ್ಲ.

ಮಿಲನಾ: ಆಹಾಹಾ.. ನೋಡಿದೀನಿ ನಿಮ್ಮ ರೀಸೆಂಟ್​ ಫೋಟೋಶೂಟ್​ನಾ..

ಕೃಷ್ಣ: ಅಲ್ಲಾ.. ಅದು ಏನಾಯ್ತು ಅಂದ್ರೆ…

ಮಿಲನಾ: ಮನೆಗೆ ಬಂದವರಿಗೆಲ್ಲ ಟ್ರೇಲರ್​ ನೋಡಿ ಟ್ರೇಲರ್​ ನೋಡಿ ಅಂತ ಹಲ್ಲು ಕಿಸ್ಕೊಂಡು ತೋರ್ಸೋಕೆ ಆಗತ್ತೆ. ಟ್ರೇಲರ್​ ಮಾಡಿರೋದು ಜನರಿಗೆ ತೋರಿಸೋಕಾ ಅಥವಾ ಮನೆಗೆ ಬಂದವರಿಗೆ ತೋರಿಸೋಕಾ?

ಕೃಷ್ಣ: ಯಾಕೆ ತೋರಿಸ್ತೀನಿ ಅಂದ್ರೆ.. ಅವರ ಒಪೀನಿಯನ್​ ಬೇಕಾಗತ್ತಲ್ಲಾ…

ಮಿಲನಾ: ಆಹಾಹಾ.. ಒಪೀನಿಯನ್​? ನೀವು ಒಪೀನಿಯನ್​ ತಗೋಳೋದು? ಶೂಟಿಂಗ್​ನಲ್ಲಿ ನಾನು ಏನಾದರೂ ಒಪೀನಿಯನ್​ ಕೊಡೋಕೆ ಬಂದ್ರೆ ಡೈರೆಕ್ಟರ್​ ನಾನಾ ನೀನಾ ಅಂತ ಕಿಂಡಲ್​ ಮಾಡೋಕೆ ಆಗತ್ತೆ. ದುಡ್ಡು ಹಾಕಿ ಕೂತಿರುವ ಪ್ರೊಡ್ಯೂಸರ್​ಗೆ ಏನ್​ ಬೆಲೆ ಇಲ್ವಾ?

ಕೃಷ್ಣ: ಅಮ್ಮ.. ಈಗೇನು ಟ್ರೇಲರ್​ ತಾನೆ? ರಿಲೀಸ್​ ಮಾಡ್ತೀನಿ.

ಮಿಲನಾ: ಹೇ.. ಫಸ್ಟ್​ ಪಾರ್ಟ್​​ನಲ್ಲೇ ನಾನು ಸತ್ತು ಹೋಗಾಯ್ತು. ಸೆಕೆಂಡ್​ ಪಾರ್ಟ್​ನಲ್ಲಿ ನೀನು ಏನ್​ ಮಾಡಿದರೂ ನಂಗೇನು ಆಗಬೇಕಿದೆ? ಹೋಗಲೋ..

ಮಿಲನಾ ಮತ್ತು ಕೃಷ್ಣ ಅವರದ್ದು ಸಖತ್ ಕ್ರಿಯೇಟಿವ್​ ಜೋಡಿ. ಶೀಘ್ರದಲ್ಲೇ ಟ್ರೇಲರ್​ ಬರಲಿದೆ ಎಂಬುದನ್ನು ತಿಳಿಸಲು ಅವರು ಈ ರೀತಿ ಫನ್ನಿ ವಿಡಿಯೋ ಮಾಡಿದ್ದಾರೆ. ಆ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ.

ಇದನ್ನೂ ಓದಿ:

‘ಮಿಲನಾ ಫೇಸ್​​ಬುಕ್ ಲೈವ್ ಬಂದು ನಿಜ ಬಯಲು ಮಾಡ್ತೀನಿ ಅಂದ್ರು’; ಡಾರ್ಲಿಂಗ್​ ಕೃಷ್ಣ

ರಘು ದೀಕ್ಷಿತ್ ಅಸಮಾಧಾನದ​ ಮಾತುಗಳಿಗೆ ಡಾರ್ಲಿಂಗ್​ ಕೃಷ್ಣ ಸ್ಪಷ್ಟನೆ

Follow us on

Related Stories

Most Read Stories

Click on your DTH Provider to Add TV9 Kannada