AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾಂಡಲ್​​ವುಡ್ ಲೋಕದಲ್ಲಿ ಹೊಸ ಛಾಪು ಮೂಡಿಸುತ್ತಿರುವ ಅಶೋಕ್

ಕನ್ನಡ ಚಿತ್ರರಂಗವೇ ಮೆಚ್ಚಿಕೊಂಡಿರುವ ನೈಜ ಘಟನೆಯಾಧಾರಿತ 6-5=2 ಮತ್ತು ಅತ್ಯುತ್ತಮವಾದ, ಅರ್ಥಪೂರ್ಣವಾದ ದಿಯಾ ಚಿತ್ರದ ನಿರ್ದೇಶಕರಾದ ಅಶೋಕ್, ತಮ್ಮ ಸಿನಿಮಾದ ಮೂಲಕ ಕರ್ನಾಟಕದ ಜನರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರ. ಇನ್ನಷ್ಟು ಅದ್ಭುತ ಸಿನಿಮಾಗಳನ್ನು ಕರುನಾಡಿನ ಜನತೆಗೆ ನೀಡಬೇಕು ಎಂಬ ಹಂಬಲ ಇವರಲ್ಲಿದೆ.

ಸ್ಯಾಂಡಲ್​​ವುಡ್ ಲೋಕದಲ್ಲಿ ಹೊಸ ಛಾಪು ಮೂಡಿಸುತ್ತಿರುವ ಅಶೋಕ್
ಅಶೋಕ್ ನಿರ್ದೇಶನದ ಚಿತ್ರ
TV9 Web
| Edited By: |

Updated on:Feb 11, 2022 | 3:21 PM

Share

ನಮ್ಮ ಜ್ಞಾನವನ್ನು ಮತ್ತು ಮನಸ್ಸಿನಲ್ಲಿರುವ ಆತ್ಮವಿಶ್ವಾಸವನ್ನು ನಂಬಿದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುಂದಕ್ಕೆ ಸಾಕ್ಷಿಯಾದವರು ಅಶೋಕ್ ಅವರು. ಹೌದು  ಕನ್ನಡ ಚಿತ್ರರಂಗವೇ ಮೆಚ್ಚಿಕೊಂಡಿರುವ ನೈಜ ಘಟನೆಯಾಧಾರಿತ 6-5=2 ಮತ್ತು ಅತ್ಯುತ್ತಮವಾದ, ಅರ್ಥಪೂರ್ಣವಾದ ದಿಯಾ ಚಿತ್ರದ ನಿರ್ದೇಶಕರಾದ ಅಶೋಕ್ ಇವರು ಮಂಡ್ಯದ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಸ್ವಾಮಿ ಮತ್ತು ಲಕ್ಷ್ಮಿ ದಂಪತಿಗಳ ಸುಪುತ್ರ. ಇವರು ಪ್ರಾಥಮಿಕ ಶಿಕ್ಷಣವನ್ನು ಕ್ಯಾತನಹಳ್ಳಿ ಗೌತಮ ಕಾನ್ವೆಂಟ್ ನಲ್ಲಿ ಕಲಿತು ನಂತರ ಪ್ರೌಢ ಶಿಕ್ಷಣ ಮತ್ತು ಪದವಿಪೂರ್ವ ಶಿಕ್ಷಣವನ್ನು ಮಂಡ್ಯದಲ್ಲಿ ನವೋದಯ ಶಾಲೆಯಲ್ಲಿ ಪಡೆದು , ಇಂಜಿನಿಯರಿಂಗ್ ಅನ್ನು ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಪೂರೈಸಿದ್ದರು. ಇಂಜಿನಿಯರಿಂಗ್ ಮುಗಿಸಿ ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡಿ ಸಿಟಿ ಬ್ಯಾಂಕ್ ನಲ್ಲಿ ಮೂರು ವರ್ಷ ಸೇವೆ ಸಲ್ಲಿಸಿ ನಂತರದಲ್ಲಿ ಸಿನಿಮಾಕ್ಕೆ ಸಂಬಂಧಪಟ್ಟಂತ ಹೆಚ್ಚಿನ ವಿಷಯಗಳನ್ನು ಚೆನ್ನೈನಲ್ಲಿ ಕಲಿತು ನಂತರದಲ್ಲಿ ಬೆಂಗಳೂರಿಗೆ ಬಂದು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಐದು ವರ್ಷಗಳ ಕಾಲ ಕಾರ್ಯನಿರ್ವಹಿಸಿರುತ್ತಾರೆ.

ಚಿಕ್ಕಂದಿನಿಂದಲೂ ಸಿನಿಮಾದ ಮೇಲೆ ಹೆಚ್ಚು ಆಸಕ್ತಿ ಹೊಂದಿದ ಇವರು, ಶಟಲ್ ಬ್ಯಾಡ್ಮಿಂಟನ್ ನಲ್ಲಿ ಎತ್ತಿದ ಕೈ. ತನ್ನ ಬಿಡುವಿನ ಸಮಯದಲ್ಲಿ ಸ್ಪೂರ್ತಿದಾಯಕ ಪುಸ್ತಕಗಳನ್ನು ಓದುವ ಅಭ್ಯಾಸ ಇವರದು. ಎರಡು ಅದ್ಭುತ ಸಿನಿಮಾದ ಮೂಲಕವೇ ಕರುನಾಡ ಜನತೆಯ ಮನದಲ್ಲಿ ಚಿರಪರಿಚಿತರಾದವರು. 2013ರಲ್ಲಿ 6-5=2 ಎಂಬ ನೈಜ ಘಟನೆಯ ಸಿನಿಮಾದ ಮೂಲಕ ತಮ್ಮ ನಿರ್ದೇಶನ ಜೀವನವನ್ನು ಆರಂಭಿಸಿದರು ತನ್ನ ಮೊದಲ ಚಿತ್ರದಲ್ಲಿ ಯಶಸ್ವಿಯಾದದ್ದು ಮಾತ್ರವಲ್ಲದೆ,  ಜನರಿಂದ ಪ್ರಶಂಸೆ ಗಳಿಸಿಕೊಂಡರು. ಅಶೋಕ ಅವರ ನಿರ್ದೇಶನದಲ್ಲಿ ಮೂಡಿಬಂದ ಮತ್ತೊಂದು ಚಿತ್ರ ದಿಯಾ ಇದು ಹೊಸಬರ ಹೊಸತನದ ಚಿತ್ರವಾಗಿದೆ ಅದ್ಭುತವಾದ ಅರ್ಥಪೂರ್ಣವಾದ ರೋಮ್ಯಾಂಟಿಕ್ ಚಿತ್ರವಾಗಿದ್ದು ಇಂದು ಅಪಾರ ಜನಮನ್ನಣೆ ಗಳಿಸಿ ಯುವ ಮನಸ್ಸುಗಳನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿ ಸಿನಿಮಾ ಲೋಕದಲ್ಲಿ ಹೊಸ ಛಾಪನ್ನು ಮೂಡಿಸುತ್ತಿದೆ.

ಎಲ್ಲ ರೋಮ್ಯಾಂಟಿಕ್ ಸಿನಿಮಾದಲ್ಲಿ ಹಾಡುಗಳು ಪ್ರಮುಖ ಪಾತ್ರವಹಿಸುತ್ತದೆ. ಆದರೆ ದಿಯಾ ಯಾವುದೇ ಹಾಡುಗಳನ್ನು ಹೊಂದಿರದೆ ಹೊಸತನಕ್ಕೆ ಸಾಕ್ಷಿಯಾಗಿದೆ ಮಾತ್ರವಲ್ಲದೆ ಕನ್ನಡ ಚಿತ್ರರಂಗದಲ್ಲಿ ಹೊಸತನದ ಚಿತ್ರಕ್ಕೆ ಮುನ್ನುಡಿ ಬರೆದಂತಿದೆ. ಇವರ ನಿರ್ದೇಶನದ ಬತ್ತಳಿಕೆಯಿಂದ ಇನ್ನಷ್ಟು ಚಿತ್ರಗಳು ಮೂಡಿ ಬರುವಂತಾಗಲಿ ಇವರ ಸಿನಿಮಾ ಕೊಡುಗೆಯಿಂದ ಕನ್ನಡ ಚಿತ್ರರಂಗ ಇನ್ನಷ್ಟು ಎತ್ತರಕ್ಕೆ ಬೆಳೆಯುವಂತೆ ಆಗಲಿ ಎಂದು ಆಶಿಸೋಣ.

“ನಾವುಗಳು ಏನೇ ಸಾಧನೆ ಮಾಡುವ ಮೊದಲು ಉತ್ತಮ ಮನುಷ್ಯರಾಗಿ ಸಮಾಜಕ್ಕೆ ಒಂದು ಮಾದರಿಯಾಗಬೇಕು ನಮ್ಮ ಧನಾತ್ಮಕ ಚಿಂತನೆಗಳು ಮತ್ತು ಕಠಿಣ ಪರಿಶ್ರಮ ಮಾತ್ರ ನಮ್ಮನ್ನು ಸಾಧನೆಯ ಶಿಖರದತ್ತ ಕೊಂಡೊಯ್ಯಬಹುದು” ಎನ್ನುತ್ತಾರೆ ನಿರ್ದೇಶಕರಾದ ಅಶೋಕ್.

ಸಂದೀಪ್ ಎಸ್ ಮಂಚಿಕಟ್ಟೆ

ವಿವೇಕಾನಂದ ಕಾಲೇಜು ಪುತ್ತೂರು.

Published On - 10:30 am, Fri, 11 February 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್