‘ಲವ್​ ಮಾಕ್ಟೇಲ್​ 2’, ‘ಫೋರ್​ವಾಲ್ಸ್​’ ಸೇರಿ ಆರು ಚಿತ್ರಗಳು ರಿಲೀಸ್​; ಇಲ್ಲಿದೆ ವಿವರ

ಹೊಸ ಪ್ರತಿಭೆಗಳು ತಮ್ಮ ಸಿನಿಮಾಗಳನ್ನು ರಿಲೀಸ್​ ಮಾಡುವ ಮೂಲಕ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿವೆ. ಇಂದು (ಫೆ.11) ಆರು ಚಿತ್ರಗಳು ರಿಲೀಸ್​ ಆಗುತ್ತಿವೆ. ‘ಲವ್​ ಮಾಕ್ಟೇಲ್​ 2’, ‘ಫೋರ್​ವಾಲ್ಸ್​’ ಮೊದಲಾದ ಸಿನಿಮಾಗಳು ಇಂದು ಬಿಡುಗಡೆ ಆಗುತ್ತಿದೆ.

‘ಲವ್​ ಮಾಕ್ಟೇಲ್​ 2’, ‘ಫೋರ್​ವಾಲ್ಸ್​’ ಸೇರಿ ಆರು ಚಿತ್ರಗಳು ರಿಲೀಸ್​; ಇಲ್ಲಿದೆ ವಿವರ
ಲವ್​ ಮಾಕ್ಟೇಲ್​-ಫೋರ್​ ವಾಲ್ಸ್​-ಒಪ್ಪಂದ ಚಿತ್ರದ ಪೋಸ್ಟರ್
Follow us
TV9 Web
| Updated By: shivaprasad.hs

Updated on: Feb 11, 2022 | 10:03 AM

ಕೊವಿಡ್​ ಮೂರನೇ ಅಲೆ (Covid 3rd wave) ಕಡಿಮೆ ಆಗಿದೆ. ಚಿತ್ರಮಂದಿರಗಳಲ್ಲಿ ಹೌಸ್​ಫುಲ್​ಗೆ ಅವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಚಿತ್ರರಂಗದಲ್ಲಿ ಸಿನಿಮಾ ಕೃಷಿ ಜೋರಾಗಿದೆ. ಸಾಲುಸಾಲು ಸ್ಟಾರ್​ ಸಿನಿಮಾಗಳು ರಿಲೀಸ್​ಗೆ ರೆಡಿ ಇವೆ. ಇವುಗಳ ಮಧ್ಯೆ ಹೊಸ ಪ್ರತಿಭೆಗಳು ತಮ್ಮ ಸಿನಿಮಾಗಳನ್ನು ರಿಲೀಸ್​ ಮಾಡುವ ಮೂಲಕ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿವೆ. ಇಂದು (ಫೆ.11) ಆರು ಚಿತ್ರಗಳು ರಿಲೀಸ್​ ಆಗುತ್ತಿವೆ. ‘ಲವ್​ ಮಾಕ್ಟೇಲ್​ 2’ (Love Mocktail 2), ‘ಫೋರ್​ವಾಲ್ಸ್​’ (Four Walls) ಮೊದಲಾದ ಸಿನಿಮಾಗಳು ಇಂದು ಬಿಡುಗಡೆ ಆಗುತ್ತಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ. 

‘ಲವ್​ ಮಾಕ್ಟೇಲ್​ 2’: ‘ಲವ್​ ಮಾಕ್ಟೇಲ್​’ ಸಿನಿಮಾ ಹಿಟ್​ ಆದ ಬಳಿಕ ಇದರ ಸೀಕ್ವೆಲ್​ ‘ಲವ್​ ಮಾಕ್ಟೇಲ್​ 2’ ತೆರೆಗೆ ಬರುತ್ತಿದೆ. ಈ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ಭಾರೀ ನಿರೀಕ್ಷೆ ಇದೆ. ಡಾರ್ಲಿಂಗ್​ ಕೃಷ್ಣ ಮುಖ್ಯಭೂಮಿಕೆಯಲ್ಲಿದ್ದಾರೆ. ರಚನಾ ಇಂದರ್​, ರೇಚಲ್​ ಡೇವಿಡ್​ ಮುಂತಾದವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಮಿಲನಾ ನಾಗರಾಜ್​ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

‘ಫೋರ್​ವಾಲ್ಸ್​’: ಅನುಭವಿ ಕಲಾವಿದ ಅಚ್ಯುತ್​ ಕುಮಾರ್​ ಅವರು ‘ಫೋರ್​ ವಾಲ್ಸ್​’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಅಚ್ಯುತ್​ ಕುಮಾರ್ ಜೊತೆ ರಂಗಭೂಮಿ ಕಲಾವಿದೆ ಡಾ. ಪವಿತ್ರಾ ಅವರು ನಾಯಕಿಯಾಗಿ ನಟಿಸಿದ್ದಾರೆ. ಡಾ. ಜಾಹ್ನವಿ ಜ್ಯೋತಿ, ಭಾಸ್ಕರ್​ ನೀನಾಸಂ, ರಚನಾ ಮುಂತಾದವರು ಅಭಿನಯಿಸಿದ್ದಾರೆ.. ‘ರಾಮಾ ರಾಮಾರೇ’ ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್​ ಅವರ ‘ಸತ್ಯ ಸಿನಿ ಡಿಸ್ಟ್ರಿಬ್ಯೂಷನ್​’ ಮೂಲಕ ಈ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ.

ರೌಡಿ ಬೇಬಿ: ಬಿಗ್​ ಬಾಸ್​ ಕಾರ್ಯಕ್ರಮದಿಂದ ಜನಪ್ರಿಯತೆ ಹೆಚ್ಚಿಸಿಕೊಂಡ ನಟಿ ದಿವ್ಯಾ ಸುರೇಶ್​ ಅವರು ಅಭಿನಯಿಸಿರುವ ಹೊಸ ಸಿನಿಮಾ ‘ರೌಡಿ ಬೇಬಿ’ ಇಂದು ಬಿಡುಗಡೆಗೆ ಆಗುತ್ತಿದೆ. ಈ ಸಿನಿಮಾದಲ್ಲಿ ದಿವ್ಯಾ ಸುರೇಶ್​ ಜೊತೆ ಎಸ್​.ಎಸ್.​ ರವಿ ಗೌಡ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಹೀರ್​ ಕೌರ್​, ಅಮಿತ್​ ವಿ., ಕೆಂಪೇಗೌಡ, ಅರುಣಾ ಬಾಲರಾಜ್​, ಶ್ರೀನಾಥ್​ ವಸಿಷ್ಠ, ಅವಿನಾಶ್​ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ. ಅರಮಾನ್​ ಮೆರುಗು ಸಂಗೀತ ನೀಡಿದ್ದಾರೆ. ವಾರ್​ ಫೂಟ್​ ಸ್ಟುಡಿಯೋಸ್​ ಮತ್ತು ಸುಮುಖ ಎಂಟರ್​ಟೇನರ್ಸ್​ ಸಂಸ್ಥೆ ಮೂಲಕ ‘ರೌಡಿ ಬೇಬಿ’ ಚಿತ್ರ ತಯಾರಾಗಿದೆ.

ಪ್ರೀತಿಗಿಬ್ಬರು: ‘ಪ್ರೀತಿಗಿಬ್ಬರು’ ಸಿನಿಮಾ ಇಂದು ರಿಲೀಸ್ ಆಗುತ್ತಿದೆ. ಗೋವಿಂದ ಹೀರೋ ಆಗಿ ಕಾಣಿಸಿಕೊಂಡರೆ ನಿರೋಷ ಶೆಟ್ಟಿ ನಾಯಕಿ ಪಾತ್ರದಲ್ಲಿ ಇದ್ದಾರೆ. ಮಂಜುಳಾ ಮತ್ತು ಕಾವ್ಯಪ್ರಕಾಶ್, ಚಿರಾಗ್, ಶೈಲೇಶ್, ಸಂದೀಪ್ ನಟಿಸಿದ್ದಾರೆ. ಶಾಂಡಿಲ್ಯ ಟಿ.ಬಿ. ನಿರ್ದೇಶನ ಚಿತ್ರಕ್ಕಿದೆ.

ಒಪ್ಪಂದ: ರಾಧಿಕಾ ಕುಮಾರಸ್ವಾಮಿ ಹಾಗೂ ಅರ್ಜುನ್​ ಸರ್ಜಾ ನಟನೆಯ ‘ಒಪ್ಪಂದ’ ಸಿನಿಮಾದ ಟ್ರೇಲರ್ ಈ ಮೊದಲೇ ರಿಲೀಸ್​ ಆಗಿತ್ತು. ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಇದೇ ಅಂತರಂಗ ಶುದ್ಧಿ ಚಿತ್ರ ಕೂಡ ರಿಲೀಸ್​ ಆಗುತ್ತಿದೆ.

ಇದನ್ನೂ ಓದಿ: ಬೆಳ್ಳಿತೆರೆ ಮೇಲೆ ಬರಲಿದೆ ‘ಶಕ್ತಿಮಾನ್​’ ಧಾರಾವಾಹಿ; ಹೀರೋ ಬಗ್ಗೆ ಗುಟ್ಟು ಕಾಯ್ದುಕೊಂಡ ಸೋನಿ ಪಿಕ್ಚರ್ಸ್​

ಮಾಸ್​ ಲುಕ್​ನಲ್ಲಿ ಬಂದ ರಜನಿಕಾಂತ್; 169ನೇ ಚಿತ್ರದಲ್ಲಿ ಸೂಪರ್​ ಸ್ಟಾರ್​ ಲುಕ್​ ನೋಡಿ ಫ್ಯಾನ್ಸ್​ ಫಿದಾ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ