AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳ್ಳಿತೆರೆ ಮೇಲೆ ಬರಲಿದೆ ‘ಶಕ್ತಿಮಾನ್​’ ಧಾರಾವಾಹಿ; ಹೀರೋ ಬಗ್ಗೆ ಗುಟ್ಟು ಕಾಯ್ದುಕೊಂಡ ಸೋನಿ ಪಿಕ್ಚರ್ಸ್​

ಗುರುವಾರ ಸಂಜೆ ‘ಸೋನಿ ಪಿಕ್ಚರ್ಸ್​ ಇಂಡಿಯಾ’ ಈ ಬಗ್ಗೆ ಘೋಷಣೆ ಮಾಡಿದೆ. ಟ್ವಿಟರ್​ನಲ್ಲಿ ಈ ಖುಷಿ ವಿಚಾರವನ್ನು ಸೋನಿ ನಿರ್ಮಾಣ ಸಂಸ್ಥೆ ಹಂಚಿಕೊಂಡಿದೆ. ಚಿಕ್ಕ ವಿಡಿಯೋ ತುಣುಕಿನಲ್ಲಿ ಸೂಪರ್ ಹೀರೋ ಧರಿಸಿರುವ ಲೋಗೋ ತೋರಿಸಲಾಗಿದೆ.

ಬೆಳ್ಳಿತೆರೆ ಮೇಲೆ ಬರಲಿದೆ ‘ಶಕ್ತಿಮಾನ್​’ ಧಾರಾವಾಹಿ; ಹೀರೋ ಬಗ್ಗೆ ಗುಟ್ಟು ಕಾಯ್ದುಕೊಂಡ ಸೋನಿ ಪಿಕ್ಚರ್ಸ್​
ಶಕ್ತಿಮಾನ್
TV9 Web
| Edited By: |

Updated on: Feb 10, 2022 | 9:24 PM

Share

ಅದು 90ರ ದಶಕ. ಆಗ ಮನರಂಜನೆ ಪಡೆಯಲು ಈಗಿನ ಹಾಗೆ ನೂರಾರು ಮನರಂಜನಾ ವಾಹಿನಿಗಳು ಇರಲಿಲ್ಲ. ಆಗ ಎಲ್ಲರೂ ಹೆಚ್ಚಾಗಿ ನೋಡುತ್ತಿದ್ದುದು ದೂರದರ್ಶನವನ್ನು(Doordarshan). 1997ರ ಸಮಯದಲ್ಲಿ ‘ಶಕ್ತಿಮಾನ್​’ (Shaktimaan) ಹೆಸರಿನ ಧಾರಾವಾಹಿ ಪ್ರಸಾರವಾಗೋಕೆ ಆರಂಭವಾಯಿತು. ಸಂಕಷ್ಟದಲ್ಲಿರುವ ವ್ಯಕ್ತಿಗಳನ್ನು ರಕ್ಷಿಸುವ ಕೆಲಸವನ್ನು ಮಾಡುವವನೇ ಶಕ್ತಿಮಾನ್​. ಈ ಧಾರಾವಾಹಿ ಮಕ್ಕಳಿಗೆ ಸಖತ್​ ಥ್ರಿಲ್​ ನೀಡಿತ್ತು. ಹೀಗಾಗಿ ಈ ‘ಶಕ್ತಿಮಾನ್​’ ಸಾಕಷ್ಟು ಫೇಮಸ್​ ಆಯಿತು. ಒಟ್ಟೂ, 520 ಕಂತುಗಳು ಪ್ರಸಾರವಾದವು. ವಿಶೇಷ ಎಂದರೆ, ಈಗ ಶಕ್ತಿಮಾನ ಪಾತ್ರ ಸಿನಿಮಾ ಆಗಿ ತೆರೆಗೆ ಬರೋಕೆ ರೆಡಿ ಆಗಿದೆ. ಈ ವಿಚಾರ ಕೇಳಿ ಶಕ್ತಿಮಾನ್​ ಅಭಿಮಾನಿಗಳು ಖುಷಿಯಾಗಿದ್ದಾರೆ.  

ಗುರುವಾರ ಸಂಜೆ ‘ಸೋನಿ ಪಿಕ್ಚರ್ಸ್​ ಇಂಡಿಯಾ’ ಈ ಬಗ್ಗೆ ಘೋಷಣೆ ಮಾಡಿದೆ. ಟ್ವಿಟರ್​ನಲ್ಲಿ ಈ ಖುಷಿ ವಿಚಾರವನ್ನು ಸೋನಿ ನಿರ್ಮಾಣ ಸಂಸ್ಥೆ ಹಂಚಿಕೊಂಡಿದೆ. ಚಿಕ್ಕ ವಿಡಿಯೋ ತುಣುಕಿನಲ್ಲಿ ಸೂಪರ್ ಹೀರೋ ಧರಿಸಿರುವ ಲೋಗೋ ತೋರಿಸಲಾಗಿದೆ. ಈ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ‘ಮಾನವೀಯತೆಯ ವಿರುದ್ಧ ದುಷ್ಟತನವು ಮೇಲುಗೈ ಸಾಧಿಸಿದಾಗ; ಆಗ ಅವನು ಹಿಂದಿರುಗುವ ಸಮಯ’ ಎಂದು ಬರೆದುಕೊಳ್ಳಲಾಗಿದೆ. ಶಕ್ತಿಮಾನ್​ ಬಟ್ಟೆ ಎಲ್ಲರ ಗಮನ ಸೆಳೆದಿದೆ.

ಶಕ್ತಿಮಾನ್​ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವ ಬಗ್ಗೆ ಚಿತ್ರತಂಡ ಘೋಷಣೆ ಮಾಡಿಲ್ಲ. ಈ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳನ್ನು ಕಾಡಿದೆ. ಮೂಲಗಳ ಪ್ರಕಾರ ಭಾರತ ಸ್ಟಾರ್​ ಹೀರೋ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಚಿತ್ರ ಮೂರು ಭಾಗಗಳಲ್ಲಿ ತೆರೆಗೆ ಬರಲಿದೆ.

‘ಶಕ್ತಿಮಾನ್’ ಧಾರಾವಾಹಿ 1997ರಲ್ಲಿ ದೂರದರ್ಶನದಲ್ಲಿ ಪ್ರಸಾರ ಆರಂಭಿಸಿತು. ಕಡಿಮೆ ಅವಧಿಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತು 2005ರಲ್ಲಿ ಈ ಧಾರಾವಾಹಿ ಪ್ರಸಾರ ನಿಲ್ಲಿಸಿತು. ಮುಕೇಶ್​ ಖನ್ನಾ ಅವರು ಈ ಧಾರಾವಹಿಯಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕೆಲವರು ‘ಶಕ್ತಿಮಾನ್’ ಕಾಪಾಡುತ್ತಾರೆ ಎಂದು ಕಟ್ಟಡದಿಂದ ಜಿಗಿಯುವ ಪ್ರಯತ್ನ ಮಾಡಿದ ಉದಾಹರಣೆ ಕೂಡ ಇದೆ.

1997ರ ಸಂದರ್ಭದಲ್ಲಿ ಮ್ಯಾಗಜಿನ್​ ಜತೆ ಮಾತನಾಡಿದ್ದ ಮುಕೇಶ್ ‘ಭಾರತೀಯ ಪುರಾಣಗಳಲ್ಲಿ ಸಾಕಷ್ಟು ಬಲವಾದ ಪಾತ್ರಗಳಿವೆ. ಆದರೆ ಸೂಪರ್-ಹೀರೋಗಳಿಲ್ಲ. ಅನ್ಯಲೋಕದ ಪರಿಕಲ್ಪನೆ, ಸೂಪರ್‌ಮ್ಯಾನ್ ಅಥವಾ ಸ್ಪೈಡರ್‌ಮ್ಯಾನ್​ಅನ್ನು ನಾವು ನೋಡಿದ್ದೇವೆ. ಹೀಗಾಗಿ, ಶಕ್ತಿಮಾನ್ ಮಾಡಲು ನಿರ್ಧರಿಸಿದ್ದೇವೆ’ ಎಂದಿದ್ದರು. 2020ರ ಸಂದರ್ಶನದಲ್ಲಿ ಮಾತನಾಡಿದ್ದ ಮುಕೇಶ್​ ಅವರು ಈ ಪಾತ್ರ ಶೀಘ್ರ ವೇ ಸಿನಿಮಾ ಆಗಲಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಮಾಸ್​ ಲುಕ್​ನಲ್ಲಿ ಬಂದ ರಜನಿಕಾಂತ್; 169ನೇ ಚಿತ್ರದಲ್ಲಿ ಸೂಪರ್​ ಸ್ಟಾರ್​ ಲುಕ್​ ನೋಡಿ ಫ್ಯಾನ್ಸ್​ ಫಿದಾ

ವೈರಲ್ ವಿಡಿಯೋ: ಕಿಂಗ್ ಕೊಹ್ಲಿಯನ್ನು ಲಿಫ್ಟ್ ಮಾಡಿದ ಅನುಷ್ಕಾ! ಶಕ್ತಿಮಾನ್ ಅಲ್ಟ್ರಾ ಪ್ರೊ ಮ್ಯಾಕ್ಸ್ ಎಂದ ನೆಟ್ಟಿಗರು

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್