ವೈರಲ್ ವಿಡಿಯೋ: ಕಿಂಗ್ ಕೊಹ್ಲಿಯನ್ನು ಲಿಫ್ಟ್ ಮಾಡಿದ ಅನುಷ್ಕಾ! ಶಕ್ತಿಮಾನ್ ಅಲ್ಟ್ರಾ ಪ್ರೊ ಮ್ಯಾಕ್ಸ್ ಎಂದ ನೆಟ್ಟಿಗರು

ಜಾಹೀರಾತು ಚಿತ್ರಿಕರಣದಲ್ಲಿ ತೆಗೆದಿರುವ ಈ ವಿಡಿಯೋದಲ್ಲಿ ವಿರಾಟ್​ನ ಹಿಂದೆ ನಿಂತಿದ್ದ ಅನುಷ್ಕಾ ತಮ್ಮ ಎರಡು ಕೈಗಳಿಂದ ವಿರಾಟ್​ನನ್ನು ಸುತ್ತುವರೆದು ಒಮ್ಮೆಲೆ ಮೇಲೆತ್ತುತ್ತಾರೆ.

  • TV9 Web Team
  • Published On - 18:52 PM, 7 Apr 2021
ವೈರಲ್ ವಿಡಿಯೋ: ಕಿಂಗ್ ಕೊಹ್ಲಿಯನ್ನು ಲಿಫ್ಟ್ ಮಾಡಿದ ಅನುಷ್ಕಾ! ಶಕ್ತಿಮಾನ್ ಅಲ್ಟ್ರಾ ಪ್ರೊ ಮ್ಯಾಕ್ಸ್ ಎಂದ ನೆಟ್ಟಿಗರು
ಕೊಹ್ಲಿಯನ್ನು ಲಿಫ್ಟ್ ಮಾಡಿದ ಅನುಷ್ಕಾ

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುವ ವಿರುಷ್ಕಾ ಜೋಡಿ ತಮ್ಮ ಅಭಿಮಾನಿ ಬಳಗಕ್ಕೆ ಒಂದಿಲ್ಲ ಒಂದು ಖುಷಿಯ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದರಿಂದ ಅಭಿಮಾನಿಗಳು ಸಹ ಈ ಕ್ಯೂಟಿ ಜೋಡಿಗಳ ತುಂಟಾಟಕ್ಕೆ ಮಾರುಹೋಗಿರುವುದಲ್ಲದೆ ಈ ಜೋಡಿಗಳ ಪರಸ್ಪರ ಹೊಂದಾಣಿಕೆಗೆ ಶಹಬ್ಬಾಸ್​ ಹೇಳುತ್ತಿರುತ್ತಾರೆ. ಕೊಹ್ಲಿಯನ್ನು ಆಗಾಗ್ಗೆ ತನ್ನ ಮಾತಿನ ಚಟಾಕಿಯಿಂದ ಕಾಲೆಳೆಯುವ ಅನುಷ್ಕಾ ಇಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಹರಿಬಿಟ್ಟಿದ್ದು, ಈ ವಿಡಿಯೋ ವೀಕ್ಷಿಸಿದ ನೆಟ್ಟಿಗರು, ಅನುಷ್ಕಾ ಅವರನ್ನು ಬಾಹುಬಲಿ ಅನುಷ್ಕಾ ಎಂದು ಕರೆಯಲಾರಂಭಿಸಿದ್ದಾರೆ.

ಅಷ್ಟಕ್ಕೂ ವಿಡಿಯೋದಲ್ಲಿ ಇರುವುದೇನು?
ಅನುಷ್ಕಾ ವಿರಾಟ್ ಕೊಹ್ಲಿಯನ್ನು ಹಿಂದಿನಿಂದ ತಬ್ಬಿಕೊಂಡು ಮೇಲೆತ್ತಲು ಪ್ರಯತ್ನಿಸುತ್ತಿರುವ ವಿಡಿಯೋ ಇದೆ. ಜಾಹೀರಾತು ಚಿತ್ರಿಕರಣದಲ್ಲಿ ತೆಗೆದಿರುವ ಈ ವಿಡಿಯೋದಲ್ಲಿ ವಿರಾಟ್​ನ ಹಿಂದೆ ನಿಂತಿದ್ದ ಅನುಷ್ಕಾ ತಮ್ಮ ಎರಡು ಕೈಗಳಿಂದ ವಿರಾಟ್​ನನ್ನು ಸುತ್ತುವರೆದು ಒಮ್ಮೆಲೆ ಮೇಲೆತ್ತುತ್ತಾರೆ. ಆಶ್ಚರ್ಯಗೊಂಡ ವಿರಾಟ್ ಬಾಯಿಯಿಂದ ‘ಓ ತೇರಿ’ ಎಂಬ ಮಾತು ಕೇಳಿ ಬರುತ್ತದೆ. ಇದಾದ ನಂತರ ವಿರಾಟ್ ಕೊಹ್ಲಿ ಮತ್ತೆ ತನ್ನನ್ನು ಎತ್ತುವಂತೆ ಹೇಳುತ್ತಾರೆ. ಬಳಿಕ ಕೊಹ್ಲಿಯನ್ನು ಮತ್ತೊಮ್ಮೆ ಮೇಲೆತ್ತಲು ಪ್ರಯತ್ನಿಸಿದ ಅನುಷ್ಕಾ, ನೀನು (ಕೊಹ್ಲಿಗೆ) ಯಾವುದೇ ಕಾರಣಕ್ಕೂ ನನಗೆ ಸಹಾಯ ಮಾಡಬಾರದು ಎಂದು ಹೇಳುತ್ತಾರೆ. ಇದಕ್ಕೆ ಸಮ್ಮತ್ತಿಸಿದ ಕೊಹ್ಲಿ ಸುಮ್ಮನೆ ನಿಂತುಬಿಡುತ್ತಾರೆ. ಇದಾದ ಮೇಲೆ ಮತ್ತೆ ಅನುಷ್ಕಾ ತನ್ನ ಪತಿಯನ್ನು ಮೇಲೆತ್ತುತ್ತಾರೆ.

 

View this post on Instagram

 

A post shared by AnushkaSharma1588 (@anushkasharma)

ಇತ್ತೀಚೆಗೆ ಪೋಷಕರಾದ ದಂಪತಿಗಳು
ಅನುಷ್ಕಾ ಶರ್ಮಾ ಜನವರಿ 11 ರಂದು ಮಗಳಿಗೆ ಜನ್ಮ ನೀಡಿದರು. ಇಬ್ಬರೂ ಸೇರಿ ಮಗುವಿಗೆ ವಮಿಕಾ ಎಂದು ಹೆಸರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಬ್ಬರೂ ಸಹ ಮಗುವಿಗೆ ಪೂರ್ಣ ಸಮಯವನ್ನು ನೀಡುತ್ತಿದ್ದಾರೆ ಮತ್ತು ವಿರಾಟ್ ಇತ್ತೀಚೆಗೆ ಇಂಗ್ಲೆಂಡ್ ಸರಣಿಯಲ್ಲಿ ಆಡುತ್ತಿದ್ದಾಗ, ಅವರು ಅನುಷ್ಕಾ ಮತ್ತು ಮಗಳು ವಮಿಕಾ ಇಬ್ಬರನ್ನೂ ತಮ್ಮೊಂದಿಗೆ ಕರೆದೊಯ್ದಿದ್ದರು. ಇದರಿಂದಾಗಿ ಅವರು ಇಬ್ಬರೊಂದಿಗೂ ಹೆಚ್ಚು ಸಮಯ ಕಳೆಯಲು ಅವಕಾಶ ದೊರೆಯಿತು.

ಏರ್​ಪೋರ್ಟ್​ ಘಟನೆಯಿಂದ ಹೆಚ್ಚು ಸುದ್ದಿಯಲ್ಲಿದ್ದ ವಿರುಷ್ಕಾ ದಂಪತಿ​
ನಟಿ ಅನುಷ್ಕಾ ಶರ್ಮ, ವಿರಾಟ್ ಕೊಹ್ಲಿ ಅಹಮದಾಬಾದ್ ಏರ್​ಪೋರ್ಟ್​ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ವಿರುಷ್ಕಾ ದಂಪತಿ ತಮ್ಮ ಮಗುವಿನೊಂದಿಗೆ ಕಂಡುಬಂದ ಫೊಟೊ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದುಮಾಡಿತ್ತು. ಅನುಷ್ಕಾ ಶರ್ಮ ತಮ್ಮ ಮಗಳನ್ನು ಎತ್ತಿಕೊಂಡಿದ್ದರೆ, ವಿರಾಟ್ ಕೊಹ್ಲಿ ಲಗೇಜ್​ನ್ನು ಹಿಡಿದು ಕಂಡುಬಂದಿದ್ದರು. ಸೆಲೆಬ್ರಿಟಿ ಸಂಸಾರದ ಕ್ಯೂಟ್ ಫೊಟೊ ಈಗ ಅಭಿಮಾನಿಗಳ ಮನಗೆದ್ದಿತ್ತು. ಮಗುವಿನ ಮುಖವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಬಾರದು ಎಂದು ದಂಪತಿ ಈ ಹಿಂದೆ ಕೇಳಿಕೊಂಡಿದ್ದರು. ಅದರಂತೆ ವೈರಲ್ ಆಗಿರುವ ಫೊಟೊದಲ್ಲೂ ಮಗುವಿನ ಮುಖ ಕಾಣುತ್ತಿಲ್ಲ.

ಅನುಷ್ಕಾ ಹಾಗೂ ಮಗಳು ವಮಿಕಾ ಗುಜರಾತ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಕ್ರಿಕೆಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜೊತೆಯಾಗಿದ್ದರು. ಐದನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ರೋಚಕ ಗೆಲುವು ದಾಖಲಿಸಿತ್ತು. ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ಗೆಲ್ಲುವ ಮೂಲಕ ಭಾರತ 3-2 ಅಂತರದ ಗೆಲುವು ದಾಖಲಿಸಿತ್ತು.

ಈ ಮೊದಲು ಮಹಿಳಾ ದಿನಕ್ಕೆ ಸಂಬಂಧಿಸಿ ವಿರಾಟ್ ಕೊಹ್ಲಿ ಅನುಷ್ಕಾ ಹಾಗೂ ವಮಿಕಾಗೆ ಶುಭಕೋರಿ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಮಗುವಿನ ಜನನವೊಂದು ಅಭೂತಪೂರ್ವ ಘಳಿಗೆ. ಮಾನವನೊಬ್ಬ ಹೊಂದಬಹುದಾದ ಅದ್ಭುತ ಅನುಭವ ಎಂದು ತಮ್ಮ ತಂದೆತನದ ಬಗ್ಗೆ ತಿಳಿಸಿದ್ದರು. ಮಹಿಳೆಯರು ನಮಗಿಂತ ಬಹಳ ಶಕ್ತಿಶಾಲಿಗಳು ಎಂದೂ ಕೊಹ್ಲಿ ಹೇಳಿದ್ದರು. ಮಡದಿ, ಮಗಳಿಗೆ ಮಹಿಳಾ ದಿನದ ಶುಭ ಕೋರಿದ್ದ ಕೊಹ್ಲಿ ಜೊತೆಗೆ ಪ್ರಪಂಚದ ಎಲ್ಲಾ ಮಹಿಳೆಯರಿಗೂ ಶುಭಾಶಯ ಕೋರಿದ್ದರು.

ಇದನ್ನೂ ಓದಿ: Shocking! ಇದೇನು ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮ ಡಿವೋರ್ಸ್ ತಗೊಂಡ್ರಾ?