ಚಡ್ಡಿ ಹಾಕಿಕೊಂಡೇ ತಾಳಿಕಟ್ಟಿದ ವರ; ತನ್ನ ಪತಿಯೇಕೆ ಬಟ್ಟೆ ಧರಿಸಿಲ್ಲ ಎಂಬುದಕ್ಕೆ ಕಾರಣ ಹೇಳಿದ ವಧು

Lakshmi Hegde

Lakshmi Hegde |

Updated on: Apr 08, 2021 | 12:29 PM

ಇಂಡೋನೇಷ್ಯಾದಲ್ಲಿ ನಡೆದ ಮದುವೆ ಇದು. ವಧು ಕಪ್ಪನೆಯ ಉಡುಪು ಧರಿಸಿ, ತುಂಬ ಚೆನ್ನಾಗಿ ಶೃಂಗಾರ ಮಾಡಿಕೊಂಡು ಕುಳಿತಿದ್ದರೆ, ಅವರ ಪಕ್ಕ ವರ ಕೆಂಪು ಚಡ್ಡಿ ಹಾಕಿಕೊಂಡು, ಶರ್ಟ್ ಇಲ್ಲದೆ, ಯಾವುದೇ ಅಲಂಕಾರವೂ ಇಲ್ಲದೆ ಕುಳಿತಿದ್ದಾರೆ.

ಚಡ್ಡಿ ಹಾಕಿಕೊಂಡೇ ತಾಳಿಕಟ್ಟಿದ ವರ; ತನ್ನ ಪತಿಯೇಕೆ ಬಟ್ಟೆ ಧರಿಸಿಲ್ಲ ಎಂಬುದಕ್ಕೆ ಕಾರಣ ಹೇಳಿದ ವಧು
ಜಕಾರ್ತಾದಲ್ಲಿ ನಡೆದ ವಿವಾಹ

ಗಂಡಾಗಲಿ, ಹೆಣ್ಣಾಗಲಿ ತಮ್ಮ ಮದುವೆ ಬಗ್ಗೆ ತುಂಬ ಕನಸು ಹೊಂದಿರುತ್ತಾರೆ. ಈ ದಿನವನ್ನು ವಿಶೇಷ ದಿನವೆಂದೇ ಪರಿಗಣಿಸುತ್ತಾರೆ. ಹಾಗೇ ಅಂದು ವಧು ಮತ್ತು ವರ ಇಬ್ಬರೂ ಅದ್ದೂರಿಯಾದ, ಚೆಂದನೆಯ ಉಡುಪುಗಳನ್ನು ಧರಿಸುತ್ತಾರೆ. ವಿಶೇಷವಾಗಿ ಅಲಂಕಾರ ಮಾಡಿಕೊಳ್ಳುತ್ತಾರೆ. ಸ್ನೇಹಿತರು, ಕುಟುಂಬದವರ ಸಮ್ಮುಖದಲ್ಲಿ ವಿವಾಹವಾಗುತ್ತಾರೆ. ಆದರೆ ಈ ಮದುವೆ ತುಸು ವಿಭಿನ್ನವಾಗಿ ನಡೆದಿದೆ. ವಧು ತುಂಬ ಚೆನ್ನಾಗಿ ಶೃಂಗಾರ ಮಾಡಿಕೊಂಡಿದ್ದರೂ ವರನ ಮೈಮೇಲೆ ಕೆಂಪು ಬರ್ಮುಡಾ ಹೊರತು ಪಡಿಸಿ ಬೇರೇನೂ ಇಲ್ಲ. ಈ ಫೋಟೋ ಈಗ ತುಂಬ ವೈರಲ್ ಆಗುತ್ತಿದೆ.

ಇಂಡೋನೇಷ್ಯಾದಲ್ಲಿ ನಡೆದ ಮದುವೆ ಇದು. ವಧು ಕಪ್ಪನೆಯ ಉಡುಪು ಧರಿಸಿ, ತುಂಬ ಚೆನ್ನಾಗಿ ಶೃಂಗಾರ ಮಾಡಿಕೊಂಡು ಕುಳಿತಿದ್ದರೆ, ಅವರ ಪಕ್ಕ ವರ ಕೆಂಪು ಚಡ್ಡಿ ಹಾಕಿಕೊಂಡು, ಶರ್ಟ್ ಇಲ್ಲದೆ, ಯಾವುದೇ ಅಲಂಕಾರವೂ ಇಲ್ಲದೆ ಕುಳಿತಿದ್ದಾರೆ. ಅವರ ಕೈಯಿಗೆ ಏನೋ ಗಾಯವಾದಂತೆ ಕಾಣುತ್ತಿದೆ. ಕುಟುಂಬದವರು, ಆಪ್ತರು ಈ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ.

ಆದರೆ ಯಾಕೆ ಹೀಗೆ ಎಂಬ ಪ್ರಶ್ನೆಗೆ ವಧು ಎಲಿಂದಾ ಡ್ವಿ ಕ್ರಿಸ್ಟಿಯಾನಿ ಸ್ಪಷ್ಟನೆ ನೀಡಿದ್ದಾರೆ. ಇಂಡೋನೇಷ್ಯಾದ ಮಾಧ್ಯಮಗಳಿಗೆ ಉತ್ತರಿಸಿದ ಅವರು, ಮದುವೆಗೆ ಮೂರು ದಿನ ಮೊದಲು ನನ್ನ ಪತಿ ಸುಪ್ರಾಪ್ತೋ ಪೆಟ್ರೋಲ್​ ತರಲು ಹೋಗಿದ್ದಾಗ ಅಪಘಾತ ಆಗಿತ್ತು. ಬೈಕ್​​ನಿಂದ ಬಿದ್ದ ಪರಿಣಾಮ ಪ್ರಜ್ಞೆಯೇ ಹೊರಟುಹೋಗಿತ್ತು. ಭುಜಕ್ಕೆ ಗಾಯವಾದ ಪರಿಣಾಮ ಸರ್ಜರಿ ಮಾಡಲಾಗಿದೆ. ಹಾಗಾಗಿ ಉಡುಪು ಧರಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಮದುವೆ ದಿನ ಬರ್ಮುಡಾ ಮಾತ್ರ ಧರಿಸಿದ್ದರು ಎಂದು ಹೇಳಿದ್ದಾರೆ. ಈ ಫೋಟೋಗಳು ಮಾತ್ರ ಸಿಕ್ಕಾಪಟೆ ವೈರಲ್​ ಆಗುತ್ತಿವೆ. ನೆಟ್ಟಿಗರು ಕೆಲವರು ಜೋಕ್ ಮಾಡಿದ್ದರೆ, ಇನ್ನೂ ಹಲವರು ಜೋಡಿಯನ್ನು ಹೊಗಳಿದ್ದಾರೆ.

Jakartha

ಇದನ್ನೂ ಓದಿ: ಹಾವೇರಿ: ಬೆಳಗಾಗುತ್ತಲೆ ಪಾನ್ ಶಾಪ್​ಗೆ ಹಾಜರಾಗುವ ಕೆಂಪು ಮಂಗಗಳು: ಯಾಕೆ ಗೊತ್ತಾ?

ಕುಮಾರಸ್ವಾಮಿ ಬೆಳ್ಳಗಿದ್ದಾರಾ..! ಇರೋದೇ ಕಪ್ಪು ಅಂದ್ರೆ ತಪ್ಪೇನು? ಶಾಸಕ ಜಮೀರ್ ಅಹ್ಮದ್ ಟಾಂಗ್

(Groom Wears Pair of Shorts on His Wedding Day in Jakarta)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada