ಬಾಲ್ಕನಿಯಲ್ಲಿ ನಿಂತು ಬೆತ್ತಲೆ ಪೋಸ್​ ಕೊಟ್ಟಿದ್ದ 18 ಮಹಿಳೆಯರು, ಫೋಟೋಗ್ರಾಫರ್​ಗೆ ಗಡೀಪಾರು ಶಿಕ್ಷೆ

ರೂಪದರ್ಶಿಯರು ಉಕ್ರೇನ್​​ ದೇಶದವರಾಗಿದ್ದು, ಫೋಟೋಗ್ರಾಫರ್​ ರಷ್ಯಾದವನಾಗಿದ್ದಾನೆ ಎಂದು ದುಬೈ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.

  • TV9 Web Team
  • Published On - 18:58 PM, 7 Apr 2021
ಬಾಲ್ಕನಿಯಲ್ಲಿ ನಿಂತು ಬೆತ್ತಲೆ ಪೋಸ್​ ಕೊಟ್ಟಿದ್ದ 18 ಮಹಿಳೆಯರು, ಫೋಟೋಗ್ರಾಫರ್​ಗೆ ಗಡೀಪಾರು ಶಿಕ್ಷೆ
ಬಾಲ್ಕನಿಯಲ್ಲಿ ಬೆತ್ತಲೆಯಾಗಿ ಫೋಸ್​​ ಕೊಟ್ಟ ಮಹಿಳೆಯರು

ಕೆಲವು ದಿನಗಳ ಹಿಂದೆ ದುಬೈನಲ್ಲಿ ನಡೆದ ಘಟನೆಯೊಂದು ಭರ್ಜರಿ ಸುದ್ದಿಯಾಗಿತ್ತು. ಒಂದಷ್ಟು ರೂಪದರ್ಶಿಯರು ಬಾಲ್ಕನಿಯಲ್ಲಿ ನಿಂತು ಬೆತ್ತಲೆ ಪೋಸ್​ ಕೊಟ್ಟಿದ್ದರು. ಅದಾದ ಮೇಲೆ ಆ ರೂಪದರ್ಶಿಯರು ಹಾಗೂ ಫೋಟೋ, ವಿಡಿಯೋ ಶೂಟ್ ಮಾಡಿದ ಫೋಟೋಗ್ರಾಫರ್​ನನ್ನು ಪೊಲೀಸರು ಬಂಧಿಸಿದ್ದರು. ದುಬೈನ ಮರಿನಾ ಪ್ರದೇಶದಲ್ಲಿ ಅಪಾರ್ಟ್​​ಮೆಂಟ್​ವೊಂದರ ಬಾಲ್ಕನಿಯಲ್ಲಿ ಸುಮಾರು 18 ಮಹಿಳೆಯರು ಸಂಪೂರ್ಣವಾಗಿ ಬೆತ್ತಲಾಗಿ ಫೋಸ್​ ಕೊಟ್ಟ ಫೋಟೋ, ವಿಡಿಯೋಗಳು ಸಂಯುಕ್ತ ಅರಬ್​ ರಾಷ್ಟ್ರಾದ್ಯಂತ ಕೋಲಾಹಲವನ್ನೇ ಉಂಟು ಮಾಡಿದ್ದವು. ಸಂಯುಕ್ತ ಅರಬ್​ ರಾಷ್ಟ್ರ ಹೇಳಿಕೇಳಿ ಸಂಪ್ರದಾಯ, ಕಠಿಣ ಕಾನೂನು ಪಾಲಿಸುವ ರಾಷ್ಟ್ರ. ಹಾಗಾಗಿ ತುಸು ಜಾಸ್ತಿ ಎನ್ನಿಸುವಷ್ಟು ವಿವಾದ ಸೃಷ್ಟಿಯಾಗಿತ್ತು.

ಯುಎಇನಲ್ಲಿ ಸಾರ್ವಜನಿಕವಾಗಿ ಚುಂಬಿಸುವದನ್ನೇ ನಿಷೇಧಿಸಲಾಗಿದ್ದು, ಅಂಥವರನ್ನೂ ಜೈಲಿಗೆ ಕಳಿಸಲಾಗುತ್ತದೆ. ಅಂಥದ್ದರಲ್ಲಿ ಹೀಗೆಲ್ಲ ಬೆತ್ತಲೆ ಪೋಸ್ ಕೊಟ್ಟರೆ ಬಿಡುತ್ತಾರೆಯೇ? ಅದರಂತೆ ವಿಡಿಯೋ ಗಮನಕ್ಕೆ ಬರುತ್ತಿದ್ದಂತೆ ಪೊಲೀಸರು ಇವರೆಲ್ಲರನ್ನೂ ಬಂಧಿಸಿದ್ದರು.

ಇನ್ನು ಈ ರೂಪದರ್ಶಿಯರೆಲ್ಲ ಯಾರೂ ಮೂಲತಃ ಯುಎಇಗೆ ಸೇರಿದವರಲ್ಲ. ರೂಪದರ್ಶಿಯರು ಉಕ್ರೇನ್​​ ದೇಶದವರಾಗಿದ್ದು, ಫೋಟೋಗ್ರಾಫರ್​ ರಷ್ಯಾದವನಾಗಿದ್ದಾನೆ ಎಂದು ದುಬೈ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ. ಹಾಗೇ ಉಕ್ರೇನಿಯನ್​ ರೂಪದರ್ಶಿಗಳೊಂದಿಗೆ ಇದ್ದ ಕೆಲವು ಮಹಿಳೆಯರನ್ನೂ ಬಂಧಿಸಲಾಗಿದೆ. ಆದರೆ ಅವರು ಎಲ್ಲಿಯವರು ಎಂದು ಗೊತ್ತಾಗಿಲ್ಲ ಎಂದು ತಿಳಿಸಿದೆ.

ಬಾಲ್ಕನಿಯಲ್ಲಿ ಬೆತ್ತಲಾಗಿದ್ದ ಉಕ್ರೇನಿಯನ್​ ಮಹಿಳೆಯರನ್ನು, ಫೋಟೋ ಶೂಟ್​ ಮಾಡಿದವರನ್ನು ಎಲ್ಲರನ್ನೂ ಅವರ ದೇಶಕ್ಕೆ ಗಡೀಪಾರು ಮಾಡುವ ಸಿದ್ಧತೆ ನಡೆಯುತ್ತಿದೆ. ವಿಚಾರಣೆ, ಕಾನೂನು ಪ್ರಕ್ರಿಯೆಗಳು ಬಹುತೇಕ ಮುಗಿದಿದೆ ಎಂದು ದುಬೈ ಅಟಾರ್ನಿ ಜನರಲ್​ ಇಸ್ಸಾಂ ಇಸ್ಸಾ ಅಲ್​ ಹುಮಾಯಿದ್ದೀನ್ ತಿಳಿಸಿದ್ದಾರೆ.

ಅಸಭ್ಯ ವರ್ತನೆ, ಸಾರ್ವಜನಿಕ ಶಿಸ್ತು ಉಲ್ಲಂಘನೆಗೆ ಯುಎಇ ಕಾನೂನಿನಲ್ಲಿ ಆರು ತಿಂಗಳ ಜೈಲು ಶಿಕ್ಷೆ, 5000 ದಿಹ್ರಾಮ್​​ಗಳಷ್ಟು ದಂಡ ಹಾಕಬಹುದಾಗಿದೆ. ಅಶ್ಲೀಲ, ಬೆತ್ತಲೆ ಫೋಟೋಗಳನ್ನು ಹಂಚಿಕೊಳ್ಳುವುದು ಈ ಅಸಭ್ಯವರ್ತನೆಯಡಿಯೇ ಬರುತ್ತದೆ ಎಂದು ಸ್ಥಳೀಯ ಮಾಧ್ಯಮಗಳು ಹೇಳಿವೆ.

ಇದನ್ನೂ ಓದಿ: Viral Video: ‘ಮಿಸಸ್​ ಶ್ರೀಲಂಕಾ’ ವಿಜೇತೆಗೆ ವೇದಿಕೆ ಮೇಲೆಯೇ ಅವಮಾನ, ತಲೆಗೆ ಗಾಯ; ಕಿರೀಟ ಕಿತ್ತುಕೊಂಡ ಮಾಜಿ ವಿನ್ನರ್​, ಅಳುತ್ತ ನಡೆದ ವಿನ್ನರ್​

ವೈರಲ್ ವಿಡಿಯೋ: ಕಿಂಗ್ ಕೊಹ್ಲಿಯನ್ನು ಲಿಫ್ಟ್ ಮಾಡಿದ ಅನುಷ್ಕಾ! ಶಕ್ತಿಮಾನ್ ಅಲ್ಟ್ರಾ ಪ್ರೊ ಮ್ಯಾಕ್ಸ್ ಎಂದ ನೆಟ್ಟಿಗರು

(A group of young women Who Posed Naked in Dubai will be deported)