AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

James Teaser: ‘ಜೇಮ್ಸ್’ನಲ್ಲಿ ಪುನೀತ್ ಪವರ್! ಖಡಕ್ ಟೀಸರ್ ಇಲ್ಲಿದೆ

Puneeth Rajkumar | Appu: ಪುನೀತ್ ರಾಜ್​ಕುಮಾರ್ ನಾಯಕನಾಗಿ ಕಾಣಿಸಿಕೊಂಡಿರುವ ಕೊನೆಯ ಚಿತ್ರ ‘ಜೇಮ್ಸ್’ ಟೀಸರ್ ರಿಲೀಸ್ ಆಗಿದೆ. ಇಂದು ಅಂದರೆ ಫೆಬ್ರವರಿ 11ರಂದು ಟೀಸರ್ ರಿಲೀಸ್ ಆಗಿದ್ದು, ಚಿತ್ರ ಮಾರ್ಚ್ 17ರಂದು ತೆರೆಗೆ ಬರಲಿದೆ.

James Teaser: ‘ಜೇಮ್ಸ್’ನಲ್ಲಿ ಪುನೀತ್ ಪವರ್! ಖಡಕ್ ಟೀಸರ್ ಇಲ್ಲಿದೆ
‘ಜೇಮ್ಸ್’ ಪೋಸ್ಟರ್
TV9 Web
| Edited By: |

Updated on:Feb 11, 2022 | 11:34 AM

Share

ಪುನೀತ್ ರಾಜ್​ಕುಮಾರ್ (Puneeth Rajkumar) ಅಭಿನಯದ ‘ಜೇಮ್ಸ್’ (James) ಚಿತ್ರವನ್ನು ವೀಕ್ಷಿಸಲು ಸಿನಿ ಪ್ರೇಮಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್​ಗಳು ಸಖತ್ ನಿರೀಕ್ಷೆ ಹುಟ್ಟಿಸಿವೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ ಪುನೀತ್ ಸೈನಿಕನ ಗೆಟಪ್​ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಇದೀಗ ಚಿತ್ರತಂಡ ಮೊದಲೇ ತಿಳಿಸಿದಂತೆ ಟೀಸರ್ ರಿಲೀಸ್ ಮಾಡಿದೆ. ಟೀಸರ್​ (James Teaser) ಅಭಿಮಾನಿಗಳ ಮನಗೆಲ್ಲುತ್ತಿದ್ದು, ಮೋಡಿ ಮಾಡುತ್ತಿದೆ. 1 ನಿಮಿಷ 27 ಸೆಕೆಂಡ್​ಗಳ ಟೀಸರ್​ನಲ್ಲಿ ‘ಜೇಮ್ಸ್​​’ನ ಒಂದು ಸಣ್ಣ ಪರಿಚಯವಿದೆ. ಪಕ್ಕಾ ಆಕ್ಷನ್ ಪ್ಯಾಕ್ ಸಿನಿಮಾ ಇದಾಗಿರಲಿದೆ ಎನ್ನುವದಕ್ಕೆ ಟೀಸರ್ ಸಾಕ್ಷಿ ಒದಗಿಸಿದೆ. ಅಪ್ಪುಗೆ ಶಿವಣ್ಣ ಕಂಠದಾನ ಮಾಡಿದ್ದು, ಒಂದು ಪವರ್​ಫುಲ್ ಡೈಲಾಗ್ ಕೂಡ ಟೀಸರ್​ನಲ್ಲಿದೆ. ‘ಭಾವನೆಗಳು ಬ್ಯುಸಿನೆಸ್​ಗಿಂತ ದೊಡ್ಡದು- ಜೇಮ್ಸ್’ ಎಂಬ ಬರಹವನ್ನು ಟೀಸರ್​ನಲ್ಲಿ ತೋರಿಸಲಾಗಿದೆ. ಈ ಮೂಲಕ ಜೇಮ್ಸ್ ಪಾತ್ರವೂ ಹೀಗೆಯೇ ಇರಲಿದೆ ಎಂಬುದನ್ನು ಚಿತ್ರತಂಡ ಪರೋಕ್ಷವಾಗಿ ತಿಳಿಸಿದೆ. ಡಾರ್ಕ್ ಮಾರ್ಕೆಟ್ ಕುರಿತ ಕತೆಯನ್ನು ಚಿತ್ರ ಒಳಗೊಂಡಿರಲಿದೆ ಎಂಬ ಸುಳಿವೂ ಇದೆ.

ಜೇಮ್ಸ್ ಟೀಸರ್ ಇಲ್ಲಿದೆ:

ಜೇಮ್ಸ್ ಟೀಸರ್ ಕುರಿತು ಅಶ್ವಿನಿ ಪುನೀತ್ ರಾಜ್​ಕುಮಾರ್ ಟ್ವೀಟ್:

ಡಾ.ರಾಜ್​ಕುಮಾರ್ ಪುತ್ರರಾದ ಪುನೀತ್​ ರಾಜ್​ಕುಮಾರ್​, ಶಿವರಾಜ್​ಕುಮಾರ್​ ಹಾಗೂ ರಾಘವೇಂದ್ರ ರಾಜ್​ಕುಮಾರ್ ಮೂವರನ್ನೂ​ ಒಟ್ಟಿಗೆ ತೆರೆಯ ಮೇಲೆ ಕಣ್ತುಂಬಿಕೊಳ್ಳಬೇಕು ಎಂಬುದು ಅಭಿಮಾನಿಗಳ ಆಸೆ ಆಗಿತ್ತು. ಆದರೆ ಆ ಆಸೆ ಈಡೇರುವುದಕ್ಕೂ ಮುನ್ನವೇ ಪುನೀತ್​ ರಾಜ್​ಕುಮಾರ್ ಅವರು ಹೃದಯಾಘಾತದಿಂದ ಕಳೆದ ವರ್ಷ ಅ.29ರಂದು​ ನಿಧನರಾಗಿದ್ದು ಎಲ್ಲರಿಗೂ ತೀವ್ರ ನೋವುಂಟುಮಾಡಿತ್ತು. ಅಣ್ಣಾವ್ರ​ ಕುಟುಂಬದ ಕುಡಿಗಳನ್ನು ಒಂದೇ ಸಿನಿಮಾದಲ್ಲಿ ನೋಡಬೇಕು ಎನ್ನುವ ಅಭಿಮಾನಿಗಳ ಕನಸನ್ನು ‘ಜೇಮ್ಸ್​’ ಚಿತ್ರತಂಡ ನನಸು ಮಾಡುತ್ತಿದೆ. ಕೆಲವೇ ದಿನಗಳ ಹಿಂದೆ ಶಿವರಾಜ್​ಕುಮಾರ್​ ಹಾಗೂ ರಾಘವೇಂದ್ರ ರಾಜ್​ಕುಮಾರ್ ಅವರು ಈ ಚಿತ್ರದಲ್ಲಿ ನಟಿಸಿದ್ದು, ತಮ್ಮ ಪಾಲಿನ ಡಬ್ಬಿಂಗ್​ ಕೂಡ ಮುಗಿಸಿದ್ದಾರೆ.

ಮಾರ್ಚ್ 17ರಂದು 5 ಭಾಷೆಯಲ್ಲಿ ತೆರೆಗೆ ಬರಲಿದೆ ಜೇಮ್ಸ್:

ಇದನ್ನೂ ಓದಿ:

ಪುನೀತ್​ ರಾಜ್​ಕುಮಾರ್ ನಿರ್ಮಾಣದ ‘ಫ್ಯಾಮಿಲಿ ಪ್ಯಾಕ್’ ಟ್ರೇಲರ್​ನಲ್ಲಿ ನಗುವಿನ ಪ್ಯಾಕ್​

‘ಲವ್​ ಮಾಕ್ಟೇಲ್​ 2’, ‘ಫೋರ್​ವಾಲ್ಸ್​’ ಸೇರಿ ಆರು ಚಿತ್ರಗಳು ರಿಲೀಸ್​; ಇಲ್ಲಿದೆ ವಿವರ

Published On - 11:19 am, Fri, 11 February 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್