ರಿಲೀಸ್ ಡೇಟ್​​ ಘೋಷಿಸಿಕೊಂಡ ಅಜಿತ್​ ‘ವಲಿಮೈ’ ಚಿತ್ರ; ಕನ್ನಡ ಸಿನಿಮಾಗಳು ನೀಡಲಿವೆ ಪೈಪೋಟಿ

ಅಜಿತ್​ ಅಭಿನಯದ ‘ವಲಿಮೈ’ ಸಿನಿಮಾ ಫೆ.24ಕ್ಕೆ ಬಿಡುಗಡೆ ಆಗಲಿದೆ. ಮರುದಿನವೇ, ಅಂದರೆ ಫೆ.25ಕ್ಕೆ ‘ಓಲ್ಡ್​ ಮಾಂಕ್​’ ಸೇರಿದಂತೆ ಕನ್ನಡದ ಕೆಲವು ಸಿನಿಮಾಗಳು ತೆರೆಕಾಣಲಿವೆ.

ರಿಲೀಸ್ ಡೇಟ್​​ ಘೋಷಿಸಿಕೊಂಡ ಅಜಿತ್​ ‘ವಲಿಮೈ’ ಚಿತ್ರ; ಕನ್ನಡ ಸಿನಿಮಾಗಳು ನೀಡಲಿವೆ ಪೈಪೋಟಿ
ವಲಿಮೈ, ಓಲ್ಡ್ ಮಾಂಕ್ ಸಿನಿಮಾ ಪೋಸ್ಟರ್​
Follow us
TV9 Web
| Updated By: ಮದನ್​ ಕುಮಾರ್​

Updated on: Feb 02, 2022 | 4:23 PM

ಕೊರೊನಾ ವೈರಸ್​ ಮೂರನೇ ಅಲೆಯ ಕಾರಣದಿಂದ ಚಿತ್ರರಂಗದಲ್ಲಿ ಒಂದಷ್ಟು ಗೊಂದಲ ಉಂಟಾಗಿತ್ತು. ಆ ಕಾರಣದಿಂದ ಅನೇಕ ಬಿಗ್​ ಬಜೆಟ್​ ಸಿನಿಮಾಗಳು ರಿಲೀಸ್​ ದಿನಾಂಕವನ್ನು ಮುಂದೂಡಿಕೊಂಡಿದ್ದವು. ಈಗ ಬಹುತೇಕ ಎಲ್ಲ ಸಿನಿಮಾಗಳು ಒಂದೊಂದಾಗಿಯೇ ಹೊಸ ಬಿಡುಗಡೆ ದಿನಾಂಕ ಘೋಷಿಸುತ್ತಿವೆ. ಕಾಲಿವುಡ್​ ನಟ ಅಜಿತ್​ (Ajith Kumar) ಅಭಿನಯದ ‘ವಲಿಮೈ’ ಸಿನಿಮಾ ಫೆ.24ಕ್ಕೆ ಬಿಡುಗಡೆ ಆಗಲಿದೆ. ಈ ಚಿತ್ರಕ್ಕಾಗಿ ಅಜಿತ್​ ಅಭಿಮಾನಿಗಳು ಬಹುದಿನಗಳಿಂದ ಕಾದಿದ್ದರು. ಟ್ರೇಲರ್​ ಮೂಲಕ ಈ ಸಿನಿಮಾ ನಿರೀಕ್ಷೆ ಸೃಷ್ಟಿಸಿದೆ. ಕರ್ನಾಟಕದಲ್ಲಿಯೂ ಅಜಿತ್​ ಸಿನಿಮಾಗೆ ಒಂದು ಪ್ರೇಕ್ಷಕ ವರ್ಗವಿದೆ. ಹಾಗಾಗಿ ಕರುನಾಡಿನಲ್ಲಿ ‘ವಲಿಮೈ’ (Valimai Movie) ಸಿನಿಮಾ ಒಂದಷ್ಟು ಚಿತ್ರಮಂದಿರಗಳನ್ನು ಪಡೆದುಕೊಳ್ಳಲಿದೆ. ಈ ನಡುವೆ ಟಫ್​ ಸ್ಪರ್ಧೆ ನೀಡಲು ಕನ್ನಡದ ಚಿತ್ರಗಳು ಕೂಡ ಸಿದ್ಧವಾಗಿವೆ. ಶ್ರೀನಿ, ಅದಿತಿ ಪ್ರಭುದೇವ ನಟನೆಯ ‘ಓಲ್ಡ್​ ಮಾಂಕ್​’ (Old Monk Movie) ಕೂಡ ಅದೇ ವಾರದಲ್ಲಿ ತೆರೆಕಾಣಲಿದೆ. ಫೆ.25ರಂದು ಬಿಡುಗಡೆ ಆಗುವುದಾಗಿ ಈ ಚಿತ್ರತಂಡ ಘೋಷಿಸಿಕೊಂಡಿದೆ. ಇನ್ನೂ ಕೆಲವು ಕನ್ನಡ ಸಿನಿಮಾಗಳು ರಿಲೀಸ್​ ಡೇಟ್​ ಅನೌನ್ಸ್​ ಮಾಡಲಿವೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜ.13ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ‘ವಲಿಮೈ’ ಚಿತ್ರ ತೆರೆಕಾಣಬೇಕಿತ್ತು. ಆದರೆ ಕೊರೊನಾ ವೈರಸ್​ ಹಾವಳಿಯಿಂದಾಗಿ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿತ್ತು. ಈಗ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ‘ವಲಿಮೈ’ ಚಿತ್ರ ಬಿಡುಗಡೆ ಆಗುತ್ತಿದೆ.

ಈ ಚಿತ್ರಕ್ಕೆ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಅವರು ಬಂಡವಾಳ ಹೂಡಿದ್ದಾರೆ. ​ಎಚ್​. ವಿನೋದ್​ ನಿರ್ದೇಶನ ಮಾಡಿದ್ದು, ಆ್ಯಕ್ಷನ್​ ಅವತಾರದಲ್ಲಿ ಅಜಿತ್​ ಕಾಣಿಸಿಕೊಳ್ಳಲಿದ್ದಾರೆ. ರಿಲೀಸ್​ ದಿನಾಂಕದ ಬಗ್ಗೆ ಟ್ವೀಟ್​ ಮಾಡಿರುವ ಬೋನಿ ಕಪೂರ್​ ಅವರು ನಿರೀಕ್ಷೆ ಹೆಚ್ಚಿಸಿದ್ದಾರೆ. ‘ಪದಗಳಿಗಿಂತಲೂ ಕೆಲಸ ಹೆಚ್ಚು ಮಾತನಾಡುತ್ತದೆ. ಕಾಯುವಿಕೆಗೆ ಈಗ ತೆರೆಬಿದ್ದಿದೆ. ಫೆ.24ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಫೀಲ್​ ದ ಪವರ್​’ ಎಂದು ಬೋನಿ ಕಪೂರ್​ ಟ್ವೀಟ್​ ಮಾಡಿದ್ದಾರೆ.

View this post on Instagram

A post shared by SRINI (@lordmgsrinivas)

ಕನ್ನಡದ ಅನೇಕ ಸಿನಿಮಾಗಳು ಈಗಾಗಲೇ ನಿರೀಕ್ಷೆ ಹುಟ್ಟಿಸಿವೆ. ಆ ಪೈಕಿ ‘ಓಲ್ಡ್​ ಮಾಂಕ್’ ಸಿನಿಮಾ ಕೂಡ ಪ್ರಮುಖವಾದ್ದು. ಪರಭಾಷೆಯ ಚಿತ್ರಗಳ ಎದುರು ಪೈಪೋಟಿ ನೀಡಲು ಈ ಚಿತ್ರ ಸಜ್ಜಾಗಿದೆ. ‘ಓಲ್ಡ್​ ಮಾಂಕ್​’ ಟ್ರೇಲರ್​ ನೋಡಿದ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಎಸ್​. ನಾರಾಯಣ್​, ಸುಜಯ್​ ಶಾಸ್ತ್ರಿ, ಅರುಣಾ ಬಾಲರಾಜ್​ ಮುಂತಾದ ಪ್ರತಿಭಾವಂತ ಕಲಾವಿದರು ಇದರಲ್ಲಿ ನಟಿಸಿದ್ದಾರೆ. ಹಾಗಾಗಿ ತಮ್ಮದೇ ಆದ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವಲ್ಲಿ ಈ ಸಿನಿಮಾ ಯಶಸ್ವಿ ಆಗಲಿ ಎಂಬ ಭರವಸೆ ಚಿತ್ರತಂಡಕ್ಕೆ ಇದೆ. ಈ ಎಲ್ಲ ಕಾರಣಗಳಿಂದ ಪರಭಾಷೆಯ ಸಿನಿಮಾ ಎದುರು ಫೈಟ್​ ನೀಡಲು ‘ಓಲ್ಡ್​ ಮಾಂಕ್​’ ಸಿದ್ಧವಿದೆ. ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಕ್ಯುಪೆನ್ಸಿಗೆ ಅವಕಾಶ ಸಿಕ್ಕರೆ ಕನ್ನಡದ ಇನ್ನೂ ಕೆಲವು ಸಿನಿಮಾಗಳು ಥಿಯೇಟರ್​ಗೆ ಲಗ್ಗೆ ಇಡಲಿವೆ.

ಇದನ್ನೂ ಓದಿ:

ಪುನೀತ್​​ ನೋಡಿ ಮೆಚ್ಚಿದ್ರು ಕನ್ನಡದ ‘ಓಲ್ಡ್​ ಮಾಂಕ್​’ ಟ್ರೇಲರ್​; ಇದರಲ್ಲಿದೆ ಹತ್ತಾರು ವಿಶೇಷತೆ

‘ಓಲ್ಡ್ ಮಾಂಕ್​’ ಬಿಡುಗಡೆಗೆ ದಿನಾಂಕ ಫಿಕ್ಸ್​; ಫೆ.25ಕ್ಕೆ ತೆರೆಕಾಣಲಿದೆ ಶ್ರೀನಿ, ಅದಿತಿ ಪ್ರಭುದೇವ ಸಿನಿಮಾ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ