ಪುನೀತ್ ರಾಜ್ಕುಮಾರ್ ನಿಧನರಾಗುವ ಹಿಂದಿನ ದಿನ ನಾನು ಅವರನ್ನು ಭೇಟಿ ಮಾಡಿದ್ದೆ ಎಂದ ಶ್ರೇಯಸ್
‘ರಾಣ’ ಚಿತ್ರದ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ನಟ ಶ್ರೇಯಸ್ ಅವರು ಪುನೀತ್ ಅವರನ್ನು ನೆನಪಿಸಿಕೊಂಡರು. ಪುನೀತ್ ನಿಧನ ಹೊಂದುವ ಹಿಂದಿನ ದಿನ ಅಂದರೆ ಅಕ್ಟೋಬರ್ 28ರಂದು ಪುನೀತ್ರನ್ನು ಭೇಟಿ ಆಗಿದ್ದರು ಶ್ರೇಯಸ್. ನಿರ್ಮಾಪಕ ಜಯಣ್ಣ ಅವರ ಕಚೇರಿಯಲ್ಲಿ ಪುನೀತ್ ಇದ್ದರು.
ಕೇವಲ 46ನೇ ವಯಸ್ಸಿಗೆ ಪುನೀತ್ ರಾಜ್ಕುಮಾರ್ ಅವರು (Puneeth Rajkumar) ನಿಧನ ಹೊಂದಿದ್ದು ನಿಜಕ್ಕೂ ಬೇಸರದ ಸಂಗತಿ. ಅವರು ಇಲ್ಲ ಎಂಬ ನೋವಿನಲ್ಲೇ ಜೀವನ ಮುನ್ನಡೆಸಬೇಕಾದ ಅನಿವಾರ್ಯತೆ ಇದೆ. ಈ ಮಧ್ಯೆ ಹಲವು ಕಾರ್ಯಕ್ರಮಗಳಲ್ಲಿ ಪುನೀತ್ ಅವರನ್ನು ನೆನಪಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ. ‘ರಾಣ’ ಚಿತ್ರದ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ನಟ ಶ್ರೇಯಸ್ ಅವರು ಪುನೀತ್ ಅವರನ್ನು ನೆನಪಿಸಿಕೊಂಡರು. ಪುನೀತ್ ನಿಧನ ಹೊಂದುವ ಹಿಂದಿನ ದಿನ ಅಂದರೆ ಅಕ್ಟೋಬರ್ 28ರಂದು ಪುನೀತ್ರನ್ನು ಭೇಟಿ ಆಗಿದ್ದರು ಶ್ರೇಯಸ್ (Shreyas). ನಿರ್ಮಾಪಕ ಜಯಣ್ಣ (Jayanna) ಅವರ ಕಚೇರಿಯಲ್ಲಿ ಪುನೀತ್ ಇದ್ದರು. ಈ ವೇಳೆ ಶ್ರೇಯಸ್ ಕೂಡ ಅಲ್ಲಿಗೆ ತೆರಳಿದ್ದರು. ಇದನ್ನು ಅವರು ನೆನಪಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಶ್ರೇಯಸ್ಗೆ ನಾಯಕಿಯರಾಗಿ ರೀಷ್ಮಾ ನಾಣಯ್ಯ ಹಾಗೂ ರಜನಿ ಭಾರದ್ವಾಜ್ ನಟಿಸುತ್ತಿದ್ದಾರೆ. ಕೆ. ಮಂಜು ಅರ್ಪಿಸುವ ಈ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಸಂಕಲನವಿದೆ. ವಿಶ್ವ ಕಲಾ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿರುವ ‘ರಾಣ’ ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಒಂದು ಹಾಡಿನ ಶೂಟಿಂಗ್ ಮಾತ್ರ ಬಾಕಿ ಇದ್ದು, ಟಾಕಿ ಪೋರ್ಷನ್ ಚಿತ್ರೀಕರಣ ಪೂರ್ಣಗೊಂಡಿದೆ.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ಗೆ ವಿಶೇಷ ಗೌರವ ಸಲ್ಲಿಸಿದ ‘ರಾಣ’ ಚಿತ್ರತಂಡ
ಪುನೀತ್ ರಾಜ್ಕುಮಾರ್ ನಿರ್ಮಾಣದ ‘ಫ್ಯಾಮಿಲಿ ಪ್ಯಾಕ್’ ಟ್ರೇಲರ್ನಲ್ಲಿ ನಗುವಿನ ಪ್ಯಾಕ್
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ

