‘ನನ್ನಮ್ಮ ಸೂಪರ್ ಸ್ಟಾರ್’ ಸ್ಪರ್ಧಿ, 6 ವರ್ಷದ ಬಾಲಕಿ ಸಮನ್ವಿ ಅಪಘಾತದಲ್ಲಿ ನಿಧನ

Samanvi : ಸ್ಥಳದಲ್ಲೇ ಸಮನ್ವಿ ಮೃತಪಟ್ಟಿದ್ದಾಳೆ. ಅಮೃತಾ ಅವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಾರಿ ಚಾಲಕನನ್ನು ಕುಮಾರಸ್ವಾಮಿ ಲೇಔಟ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ನನ್ನಮ್ಮ ಸೂಪರ್ ಸ್ಟಾರ್’ ಸ್ಪರ್ಧಿ, 6 ವರ್ಷದ ಬಾಲಕಿ ಸಮನ್ವಿ ಅಪಘಾತದಲ್ಲಿ ನಿಧನ
ಸಮನ್ವಿ ಮತ್ತು ಅವರ ತಾಯಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jan 13, 2022 | 10:04 PM

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಇತ್ತೀಚೆಗಷ್ಟೇ ‘ನನ್ನಮ್ಮ ಸೂಪರ್ ಸ್ಟಾರ್’ (Nannamma Superstar) ರಿಯಾಲಿಟಿಶೋ ಆರಂಭಗೊಂಡಿದೆ. ಈ ಕಾರ್ಯಕ್ರಮಕ್ಕೆ 6  ವರ್ಷದ  ಸಮನ್ವಿ (Samanvi) ಸ್ಪರ್ಧಿಯಾಗಿ ತೆರಳಿದ್ದಳು. ಇಂದು (ಜನವರಿ 13) ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಮನ್ವಿ ಮೃತಪಟ್ಟಿದ್ದಾಳೆ. ಇದು ಅವಳ ಅಭಿಮಾನಿಗಳಿಗೆ ದುಃಖ ತಂದಿದೆ. ಖ್ಯಾತ ಹರಿಕಥೆ ದಾಸ ಗುರುರಾಜ ನಾಯ್ಡುರ ಮೊಮ್ಮಗಳು ಸಮನ್ವಿ. ತಾಯಿ ಅಮೃತಾ ಜತೆ ಅವರು ಈ ರಿಯಾಲಿಟಿಶೋಗೆ ಬಂದಿದ್ದರು. ಇಂದು ಬೆಂಗಳೂರಿನ (Bengaluru) ಕೋಣನಕುಂಟೆಯ ವಾಜರಹಳ್ಳಿಯಲ್ಲಿ ಸ್ಕೂಟರ್ ಮೇಲೆ ಸಮನ್ವಿ ಹಾಗೂ ಅಮೃತಾ ತೆರಳುತ್ತಿದ್ದರು. ಈ ವೇಳೆ ಸ್ಕೂಟರ್​ಗೆ ಹಿಂದಿನಿಂದ  ಲಾರಿ ಬಂದು ಹೊಡೆದಿದೆ. ಸ್ಥಳದಲ್ಲೇ ಸಮನ್ವಿ ಮೃತಪಟ್ಟಿದ್ದಾಳೆ. ಅಮೃತಾ ಅವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಾರಿ ಚಾಲಕನನ್ನು ಕುಮಾರಸ್ವಾಮಿ ಲೇಔಟ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆ.ಎಸ್.ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಅಮೃತಾ ನಾಯ್ಡು ನಾಲ್ಕು ತಿಂಗಳ ಗರ್ಭಿಣಿ. ಅವರ ಪತಿ ರೂಪೇಶ್ ನಾಯ್ಡು ಅವರು ಖಾಸಗಿ ಕಂಪೆನಿ ಉದ್ಯೋಗಿ ಆಗಿದ್ದಾರೆ. ಇಂದು ಸಂಜೆ ಶಾಪಿಂಗ್​​ಗಾಗಿ  ಅಮೃತಾ ಹಾಗೂ ಸಮನ್ವಿ ಬರುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಸಮನ್ವಿಗೆ ಶಾಲೆಗೆ ಹೋಗಲು ಅನುಕೂಲವಾಗಲೆಂದು ವಿಲ್ಸನ್ ಗಾರ್ಡನ್​ನಿಂದ ಕನಕಪುರ ರಸ್ತೆಗೆ ಇವರು ಶಿಫ್ಟ್​ ಆಗಿದ್ದರು.

ಶೋಗೆ ಬರುವುದಕ್ಕೂ ಮೊದಲು ಮಾತನಾಡಿದ್ದ ಸಮನ್ವಿ, ‘ನನಗೆ ಅಮ್ಮ ಎಂದರೆ ತುಂಬಾನೇ ಅಚ್ಚುಮೆಚ್ಚು. ನಾನು ಅವಳನ್ನು ಜಾಸ್ತಿ ಪ್ರೀತಿ ಮಾಡುತ್ತೇನೆ. ಪಾರ್ಟಿಗೆ ಹೋಗ್ತಾರೆ. ಅಪ್ಪನ ಜತೆ ಹಣ ಶೇರ್​ ಮಾಡ್ತಾರೆ. ಈ ಕಾರಣಕ್ಕೆ ನನಗೆ ಅವಳು ಹೆಚ್ಚು ಇಷ್ಟ’ ಎಂದು ಹೇಳಿಕೊಂಡಿದ್ದಳು. ಈಗ ಉಜ್ವಲ ಭವಿಷ್ಯ ಕಾಣಬೇಕಿದ್ದ ಅವಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ನಿಜಕ್ಕೂ ದುಃಖದ ಸಂಗತಿ.

‘ನನ್ನಮ್ಮ ಸೂಪರ್​ ಸ್ಟಾರ್​’ ಕಾರ್ಯಕ್ರಮಕ್ಕೆ ವೀಕ್ಷಕರು ಮನ ಸೋತಿದ್ದಾರೆ. ಕಿರುತೆರೆ ಕ್ಷೇತ್ರದಲ್ಲಿ ಜನಪ್ರಿಯತೆ ಪಡೆದ ಸೆಲೆಬ್ರಿಟಿಗಳು ಮತ್ತು ಅವರ ಮಕ್ಕಳು ಈ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಖ್ಯಾತ ನಿರೂಪಕ ಸೃಜನ್​ ಲೋಕೇಶ್​, ನಟಿಯರಾದ ಅನುಪ್ರಭಾಕರ್​ ಮತ್ತು ತಾರಾ ಅನುರಾಧಾ ಅವರು ಈ ಕಾರ್ಯಕ್ರಮದ ಜಡ್ಜ್​ ಆಗಿದ್ದಾರೆ. ಪುಟಾಣಿಗಳ ಕಲರವದಿಂದ ವೀಕ್ಷಕರಿಗೆ ಮಸ್ತ್​ ಮನರಂಜನೆ ಸಿಗುತ್ತಿದೆ. ಅನುಪಮಾ ಗೌಡ ಅವರು ನಿರೂಪಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ನಿವೇದಿತಾ ಗೌಡ ಅವರನ್ನೇ ಮಣಿಸಿದ ಮಾತಿನ ಮಲ್ಲಿ ವಂಶಿಕಾ; ಮಾಸ್ಟರ್​ ಆನಂದ್​ ಪುತ್ರಿಯ ಮಸ್ತ್​ ಮಾತುಕತೆ

Published On - 9:16 pm, Thu, 13 January 22

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ