AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇವನು ನನ್ನ ತಂದೆ ರೂಪ ಎಂದು ನಾನು ನಂಬಿದ್ದೇನೆ’; ಮಗ ಸುಕೃತ್​ ಬಗ್ಗೆ ಸೃಜನ್​ ಲೋಕೇಶ್​ ಮಾತು

‘ನನ್ನಮ್ಮ ಸೂಪರ್​ ಸ್ಟಾರ್​’ ವೇದಿಕೆ ಮೇಲೆ ಸುಕೃತ್​ ‘ತೇರಾ ಏರಿ ಅಂಬರದಾಗೆ..’ ಹಾಡಿಗೆ ಹೆಜ್ಜೆ ಹಾಕಿದನು. ಅವನು ಡ್ಯಾನ್ಸ್​ ಮಾಡಿದ ರೀತಿಗೆ ಸೃಜನ್​ ಲೋಕೇಶ್​ ಸಂತೋಷಪಟ್ಟಿದ್ದಾರೆ.

‘ಇವನು ನನ್ನ ತಂದೆ ರೂಪ ಎಂದು ನಾನು ನಂಬಿದ್ದೇನೆ’; ಮಗ ಸುಕೃತ್​ ಬಗ್ಗೆ ಸೃಜನ್​ ಲೋಕೇಶ್​ ಮಾತು
ಸೃಜನ್​ ಲೋಕೇಶ್, ಸುಕೃತ್​
TV9 Web
| Edited By: |

Updated on:Feb 07, 2022 | 8:16 AM

Share

ನಟ ಸೃಜನ್​ ಲೋಕೇಶ್ (Srujan Lokesh)​ ಅವರು ಕಿರುತೆರೆ ಲೋಕದಲ್ಲಿ ತುಂಬಾನೇ ಫೇಮಸ್​. ಅವರು ನಡೆಸಿಕೊಡುತ್ತಿದ್ದ ‘ಮಜಾ ಟಾಕೀಸ್​’ ಶೋ ಸಾಕಷ್ಟು ಖ್ಯಾತಿ ಗಳಿಸಿಕೊಂಡಿತ್ತು. ಈಗ ಅವರು ಕಲರ್ಸ್​​ ಕನ್ನಡದ ಶೋಗಳಿಗೆ ಜಡ್ಜ್​​ ಆಗಿ ಬರುತ್ತಿದ್ದಾರೆ. ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ನನ್ನಮ್ಮ ಸೂಪರ್​ ಸ್ಟಾರ್​’ (Nannamma Super Star) ಕಾರ್ಯಕ್ರಮಕ್ಕೆ ನಿರ್ಣಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಶೋಗೆ ಅನೇಕ ಸೆಲೆಬ್ರಿಟಿಗಳು ಹಾಗೂ ಅವರ ಮಕ್ಕಳು ಪಾಲ್ಗೊಳ್ಳುತ್ತಿದ್ದಾರೆ. ಈ ಶೋ ಕಿರುತೆರೆ ಪ್ರೇಕ್ಷಕರನ್ನು ಸೆಳೆಯೋಕೆ ಯಶಸ್ವಿಯಾಗಿದೆ. ಈಗ ಈ ವೇದಿಕೆ ಮೇಲೆ ಸೃಜನ್​ ಲೋಕೇಶ್​ ಮಗ ಸುಕೃತ್​ ಆಗಮಿಸಿದ್ದ. ಈ ವೇಳೆ ಸುಕೃತ್ (Sukruth) ಬಗ್ಗೆ​ ಸೃಜನ್​ ಅವರು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು.

‘ನನ್ನಮ್ಮ ಸೂಪರ್​ ಸ್ಟಾರ್​’ ಕಾರ್ಯಕ್ರಮ ಕಿರುತೆರೆ ವೀಕ್ಷಕರಿಗೆ ಇಷ್ಟವಾಗಿದೆ. ಪ್ರತಿ ಬಾರಿ ನೀಡುವ ನಾನಾ ಟಾಸ್ಕ್​ಗಳು ಗಮನ ಸೆಳೆಯುತ್ತಿವೆ. ಅದರಲ್ಲೂ ಸೆಲೆಬ್ರಿಟಿ ಮಕ್ಕಳು ಮಾಡುವ ಕೀಟಲೆಗಳು ಒಂದೆರಡಲ್ಲ. ಅವರಾಡುವ ಚೂಟಿ ಮಾತುಗಳು ವೀಕ್ಷಕರಿಗೆ ಇಷ್ಟವಾಗುತ್ತಿದೆ. ಆದರೆ, ಈ ವಾರ ಈ ವೇದಿಕೆ ಹಲವು ಭಾವನಾತ್ಮಕ ವಿಚಾರಗಳಿಗೆ ಸಾಕ್ಷಿ ಆಯಿತು. ಸೃಜನ್​ ಹಾಗೂ ಸುಕೃತ್​ ನಡುವೆ ನಡೆದ ಸಂಭಾಷಣೆ ಕೇಳಿ ಪ್ರೇಕ್ಷಕರು ಖುಷಿಪಟ್ಟಿದ್ದಾರೆ. ಅಪ್ಪ-ಮಗನ ಸಂಬಂಧದ ಬಗ್ಗೆ ಕೇಳಿ ಖುಷಿಪಟ್ಟಿದ್ದಾರೆ.

‘ನನ್ನಮ್ಮ ಸೂಪರ್​ ಸ್ಟಾರ್​’ ವೇದಿಕೆ ಮೇಲೆ ಸುಕೃತ್​ ‘ತೇರಾ ಏರಿ ಅಂಬರದಾಗೆ..’ ಹಾಡಿಗೆ ಹೆಜ್ಜೆ ಹಾಕಿದನು. ಅವನು ಡ್ಯಾನ್ಸ್​ ಮಾಡಿದ ರೀತಿಗೆ ಸೃಜನ್​ ಲೋಕೇಶ್​ ಸಂತೋಷಪಟ್ಟಿದ್ದಾರೆ. ಇದು ಸುಕೃತ್​ ತಾತ ಲೋಕೇಶ್​ ಡ್ಯಾನ್ಸ್​ ಮಾಡಿದ್ದ ಹಾಡಾಗಿತ್ತು ಅನ್ನೋದು ವಿಶೇಷ. ಇದು ವೀಕ್ಷಕರಿಗೆ ಖುಷಿ ನೀಡಿದೆ.

ಈ ಡ್ಯಾನ್ಸ್​ ಬಳಿಕ ಮಾತನಾಡಿದ ಸೃಜನ್​ ಅವರು, ‘ಇವನು ಡ್ಯಾನ್ಸ್​ ಮಾಡಿದ್ದು ನಿಜಕ್ಕೂ ಸರ್​ಪ್ರೈಸಿಂಗ್​ ಆಗಿತ್ತು’ ಎಂದರು.  ಎಲ್ಲರೂ ಸುಕೃತ್​ ಡ್ಯಾನ್ಸ್​ಅನ್ನು ಕೊಂಡಾಡಿದರು. ‘ಸುಕೃತ್​ ಅಪ್ಪನ ಮಗ. ಇವನು ನನ್ನ ತಂದೆ ರೂಪ ಎಂದು ನಾನು ನಂಬಿದ್ದೇನೆ. ನಾನು ಮನೆಯಲ್ಲಿದ್ದಾಗ ದಿನಕ್ಕೆ ಒಮ್ಮೆ ಆದರೂ ಊಟ ಮಾಡಿಸುತ್ತೇನೆ. ಇಲ್ಲ ಎಂದರೆ ನನಗೆ ಸಮಾಧಾನ ಆಗೋದೆ ಇಲ್ಲ’ ಎಂದರು ಸೃಜನ್​. ಆ ಬಳಿಕ ಇಬ್ಬರೂ ‘ತೇರಾ ಏರಿ ಅಂಬರದಾಗೆ’ ಹಾಡಿಗೆ ಹೆಜ್ಜೆ ಹಾಕಿದರು.

ಇದನ್ನೂ ಓದಿ: ‘ದೇವರು ಇದ್ದಾನೋ ಇಲ್ಲವೋ?’: ಸಮನ್ವಿ ನಿಧನದ ಬಳಿಕ ಸೃಜನ್​ ಲೋಕೇಶ್​ ನೋವಿನ ನುಡಿ

ಮಾಸ್ಟರ್​ ಆನಂದ್​ ಮಗಳು ವಂಶಿಕಾ ಭರ್ಜರಿ ಶಾಪಿಂಗ್​; ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕ ಸೃಜನ್​ ಲೋಕೇಶ್​

Published On - 6:10 am, Mon, 7 February 22

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್