ಭಯಾನಕ ಸ್ಪರ್ಧಿ ಕಂಡು ಬೆಚ್ಚಿಬಿದ್ದ ಜಡ್ಜ್​ಗಳು; ‘ಸಾಕು ನಿಲ್ಲಿಸಿ’ ಎಂದು ಕೂಗಿಕೊಂಡ ಶಿಲ್ಪಾ ಶೆಟ್ಟಿ, ಕಿರಣ್​ ಖೇರ್​

ಭಯಾನಕ ಸ್ಪರ್ಧಿ ಕಂಡು ಬೆಚ್ಚಿಬಿದ್ದ ಜಡ್ಜ್​ಗಳು; ‘ಸಾಕು ನಿಲ್ಲಿಸಿ’ ಎಂದು ಕೂಗಿಕೊಂಡ ಶಿಲ್ಪಾ ಶೆಟ್ಟಿ, ಕಿರಣ್​ ಖೇರ್​
ಶಿಲ್ಪಾ ಶೆಟ್ಟಿ, ಆದಿತ್ಯ ಮಾಳವೀಯ

India’s Got Talent: ಆದಿತ್ಯ ಮಾಳವೀಯ ಅವರು ತಮ್ಮ ದೇಹವನ್ನು ಮುರಿದು ಬಗ್ಗಿಸಿದ ರೀತಿಯನ್ನು ಕಂಡು ಶಿಲ್ಪಾ ಶೆಟ್ಟಿ ಅಕ್ಷರಶಃ ಕೂಗಿಕೊಂಡರು. ಸದ್ಯ ಈ ಕಾರ್ಯಕ್ರಮದ ಪ್ರೋಮೋ ವೈರಲ್​ ಆಗಿದೆ.

TV9kannada Web Team

| Edited By: Madan Kumar

Feb 07, 2022 | 2:31 PM

ಪ್ರೇಕ್ಷಕರನ್ನು ಸೆಳೆಯಲು ಮನರಂಜನಾ ಕಿರುತೆರೆ ವಾಹಿನಿಗಳು ಎಲ್ಲಿಲ್ಲದ ಕಸರತ್ತು ಮಾಡುತ್ತವೆ. ಬಗೆಬಗೆಯ ಧಾರಾವಾಹಿಗಳ ಜೊತೆಗೆ ರಿಯಾಲಿಟಿ ಶೋಗಳನ್ನೂ ಆಯೋಜನೆ ಮಾಡುತ್ತವೆ. ಆ ಶೋಗಳಲ್ಲಿ ವಿಭಿನ್ನ ಟ್ಯಾಲೆಂಟ್​ಗಳನ್ನು ಪರಿಚಯಿಸಲಾಗುತ್ತದೆ. ಅಪರೂಪದ ಪ್ರತಿಭಾವಂತರನ್ನು ನೋಡಿದಾಗ ಎಲ್ಲರಿಗೂ ಖುಷಿ ಆಗುತ್ತದೆ. ಕಾರ್ಯಕ್ರಮದ ಜಡ್ಜ್​ಗಳು ಮೆಚ್ಚುಗೆ ಸೂಚಿಸುತ್ತಾರೆ. ಆದರೆ ನಟಿ ಶಿಲ್ಪಾ ಶೆಟ್ಟಿ ಜಡ್ಜ್​ ಆಗಿ ಭಾಗವಹಿಸಿರುವ ‘ಇಂಡಿಯಾಸ್​ ಗಾಟ್​ ಟ್ಯಾಲೆಂಟ್​’ (India’s Got Talent, Shilpa Shetty, Reality Show) ಕಾರ್ಯಕ್ರಮದಲ್ಲಿ ಬೇರೆ ರೀತಿಯ ಘಟನೆ ನಡೆದಿದೆ. ಈ ವೇದಿಕೆಯಲ್ಲಿ ಕಲೆ ತೋರಿಸಲು ಬಂದ ವ್ಯಕ್ತಿಯನ್ನು ಕಂಡು ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಇನ್ನುಳಿದ ನಿರ್ಣಾಯಕರಾದ ಕಿರಣ್​ ಖೇರ್​ ಮತ್ತು ಬಾದ್​ಶಾ ಕೂಡ ಹೌಹಾರಿದ್ದಾರೆ. ಸದ್ಯ ಈ ಕಾರ್ಯಕ್ರಮದ ಪ್ರೋಮೋ ಬಿಡುಗಡೆ ಆಗಿದೆ. ಅದರಲ್ಲಿ ಭಯಾನಕ ಸ್ಪರ್ಧಿಯ ಟ್ಯಾಲೆಂಟ್​ ಏನೆಂಬುದರ ಝಲಕ್​ ತೋರಿಸಲಾಗಿದೆ. ಪೂರ್ತಿ ಎಪಿಸೋಡ್​ ಕೂಡ ಅಷ್ಟೇ ರೋಚಕವಾಗಿದೆ. ‘ಸೋನಿ ಟಿವಿ’ ವಾಹಿನಿಯಲ್ಲಿ ಈ ಶೋ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರ ಆಗುತ್ತಿದೆ.

ಈ ರೀತಿ ಭಯಾನಕವಾದ ಟ್ಯಾಲೆಂಟ್​ ತೋರಿಸಿರುವ ಸ್ಪರ್ಧಿ ಹೆಸರು ಆದಿತ್ಯ ಮಾಳವೀಯ. ಮೈ ಮೂಳೆಯನ್ನು ಹೇಗೆ ಬೇಕಾದರೂ ಬಳುಕಿಸಬಲ್ಲ ಸಾಮರ್ಥ್ಯ ಆದಿತ್ಯಗೆ ಇದೆ. ಆ ಪ್ರತಿಭೆಯನ್ನು ಅವರು ‘ಇಂಡಿಯಾಸ್​ ಗಾಟ್​ ಟ್ಯಾಲೆಂಟ್​’ ವೇದಿಕೆಯಲ್ಲಿ ತೋರಿಸಿದ್ದಾರೆ. ‘ನಮ್ಮ ಜಡ್ಜ್​ಗಳ ರೀತಿಯೇ ನೀವು ಕೂಡ ಆದಿತ್ಯ ಮಾಳವೀಯ ಅವರ ಟ್ಯಾಲೆಂಟ್​ ನೋಡಿ ಶಾಕ್​ ಆಗುತ್ತೀರಿ’ ಎಂಬ ಕ್ಯಾಪ್ಷನ್​ನೊಂದಿಗೆ ಈ ಪ್ರೋಮೋ ಹಂಚಿಕೊಳ್ಳಲಾಗಿದೆ.

‘ಇದು ಹೆದರಿಸುವಂತಹ ಶೋ’ ಎಂದು ಕಿರಣ್​ ಖೇರ್​ ಮೊದಲೇ ಊಹಿಸಿದರು. ಆದಿತ್ಯ ಮಾಳವೀಯ ಅವರು ತಮ್ಮ ದೇಹವನ್ನು ಮುರಿದು ಬಗ್ಗಿಸಿದ ರೀತಿಯನ್ನು ಕಂಡು ಶಿಲ್ಪಾ ಶೆಟ್ಟಿ ಅಕ್ಷರಶಃ ಕೂಗಿಕೊಂಡರು. ‘ದಯವಿಟ್ಟು ಇದನ್ನು ಮಾಡಬೇಡಿ’ ಎಂದು ಕಿರಣ್​ ಖೇರ್​ ಮನವಿ ಮಾಡಿಕೊಂಡರು. ಕೆಲವೊಂದು ಸಂದರ್ಭದಲ್ಲಿ ನಿರ್ಣಾಯಕ ಬಾದ್​ಶಾ ಕೂಡ ಬೆಚ್ಚಿ ಬಿದ್ದರು.

ಆದಿತ್ಯ ಮಾಳವೀಯ ಅವರು ವೇದಿಕೆಯಿಂದ ಕೆಳಗೆ ಇಳಿದು ಬಂದು, ಜಡ್ಜ್​ಗಳ ಎದುರಿನಲ್ಲೇ ಟ್ಯಾಲೆಂಟ್​ ತೋರಿಸಲು ಆರಂಭಿಸಿದರು. ಆಗಂತೂ ಶಿಲ್ಪಾ ಶೆಟ್ಟಿ ಅವರು ಭಯದಿಂದ ಗಡಗಡ ನಡುಗಿದರು. ಅಲ್ಲದೇ ಜೋರಾಗಿ ಕೂಗಿಕೊಂಡರು. ‘ಸಾಕು ನಿಲ್ಲಿಸಿ.. ಇನ್ನೆಷ್ಟು ಹೆದರಿಸುತ್ತೀರಿ’ ಎಂದು ಶಿಲ್ಪಾ ಶೆಟ್ಟಿ ಬೇಡಿಕೊಂಡರು.

ಸದ್ಯ ಈ ಪ್ರೋಮೋ ಸಖತ್​ ವೈರಲ್​ ಆಗಿದೆ. ಆದಿತ್ಯ ಮಾಳವೀಯ ಅವರ ಟ್ಯಾಲೆಂಟ್​​ಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಕಮೆಂಟ್​ಗಳ ಮೂಲಕ ಮೆಚ್ಚುಗೆ ಸೂಚಿಸಲಾಗುತ್ತಿದೆ.

ಇದನ್ನೂ ಓದಿ:

ಶಿಲ್ಪಾ ಶೆಟ್ಟಿಗೆ ಕೋಟ್ಯಂತರ ರೂಪಾಯಿ ಆಸ್ತಿ, ಮನೆ ಬರೆದುಕೊಟ್ಟ ರಾಜ್​ ಕುಂದ್ರಾ; ಅಚ್ಚರಿ ಮೂಡಿಸಿದ ನಡೆ

8 ಬಾದಾಮಿಗಾಗಿ ಶಿಲ್ಪಾ ಶೆಟ್ಟಿ ಜಗಳ; ‘ನೀನು ಕಂಜೂಸ್’​ ಎಂದು ಮುಖಕ್ಕೆ ಹೊಡೆದಂತೆ ಹೇಳಿದ ಹಿರಿಯ ನಟಿ

Follow us on

Related Stories

Most Read Stories

Click on your DTH Provider to Add TV9 Kannada