AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಕಿಗೆ ಕಪಿಲ್​ ಶರ್ಮಾ ನಂಬಿಕೆ ದ್ರೋಹ​; ‘ದಿ ಕಪಿಲ್​ ಶರ್ಮಾ ಶೋ’ ಬೈಕಾಟ್​ ಮಾಡಿದ ಅಕ್ಷಯ್​ ಕುಮಾರ್

‘ಬಚ್ಚನ್​ ಪಾಂಡೆ’ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ಅವರಿಗೆ ಡಿಫರೆಂಟ್​ ಗೆಟಪ್​ ಇದೆ. ಮಾ.18ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಅಕ್ಷಯ್​ ಬ್ಯುಸಿ ಇದ್ದಾರೆ. ಆದರೆ, ಅವರು ‘ಕಪಿಲ್​ ಶರ್ಮಾ ಶೋ’ಗೆ ಬರುತ್ತಿಲ್ಲ ಎಂದು ಹಿಂದುಸ್ತಾನ್​ ಟೈಮ್ಸ್​ ವರದಿ ಮಾಡಿದೆ.

ಅಕ್ಕಿಗೆ ಕಪಿಲ್​ ಶರ್ಮಾ ನಂಬಿಕೆ ದ್ರೋಹ​; ‘ದಿ ಕಪಿಲ್​ ಶರ್ಮಾ ಶೋ’ ಬೈಕಾಟ್​ ಮಾಡಿದ ಅಕ್ಷಯ್​ ಕುಮಾರ್
ಅಕ್ಷಯ್​-ಕಪಿಲ್​ ಶರ್ಮಾ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Feb 07, 2022 | 9:32 PM

Share

ಅಕ್ಷಯ್​ ಕುಮಾರ್ (Akshay Kumar)​ ಅವರು ವೇಗವಾಗಿ ಸಿನಿಮಾ ಮಾಡುವುದರಲ್ಲಿ ಎತ್ತಿದ ಕೈ. ವರ್ಷಕ್ಕೆ ಅವರ ನಟನೆಯ ಮೂರರಿಂದ ನಾಲ್ಕು ಸಿನಿಮಾಗಳು ತೆರೆಗೆ ಬರುತ್ತವೆ. ಪ್ರತಿ ಚಿತ್ರಕ್ಕೂ ಅವರು ದೊಡ್ಡ ಮಟ್ಟದಲ್ಲಿ ಪ್ರಚಾರ ಕೊಡುತ್ತಾರೆ. ಪ್ರತಿ ಚಿತ್ರದ ಪ್ರಚಾರಕ್ಕೆ ಅಕ್ಷಯ್​ ಅವರು ‘ದಿ ಕಪಿಲ್​ ಶರ್ಮಾ ಶೋ’ಗೆ (The Kapil Sharma Show) ಆಗಮಿಸುತ್ತಾರೆ. ಕಪಿಲ್ ಶರ್ಮಾ ಹಾಗೂ ಅಕ್ಷಯ್​ ನಡುವೆ ಒಳ್ಳೆಯ ಗೆಳೆತನವಿದೆ. ಇದು ಅನೇಕ ಬಾರಿ ಸಾಬೀತಾಗಿದೆ. ಆದರೆ, ಅವರ ಮುಂದಿನ ಚಿತ್ರ ‘ಬಚ್ಚನ್​ ಪಾಂಡೆ’ (Bachchan Pandey) ಸಿನಿಮಾದ ಪ್ರಚಾರಕ್ಕಾಗಿ ಅಕ್ಷಯ್​ ಅವರು ‘ದಿ ಕಪಿಲ್​ ಶರ್ಮಾ ಶೋ’ಗೆ ಬರದಿರಲು ನಿರ್ಧರಿಸಿದ್ದಾರೆ. ಇದಕ್ಕೆ ಅವರು ಕಾರಣವನ್ನೂ ನೀಡಿದ್ದಾರೆ ಎನ್ನಲಾಗಿದೆ.

‘ಬಚ್ಚನ್​ ಪಾಂಡೆ’ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ಅವರಿಗೆ ಡಿಫರೆಂಟ್​ ಗೆಟಪ್​ ಇದೆ. ಅವರ ಜೊತೆ ಕೃತಿ ಸನೋನ್​, ಜಾಕ್ವೆಲಿನ್​ ಫರ್ನಾಂಡಿಸ್​ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಫರ್ಹಾದ್​ ಸಮ್ಜಿ ನಿರ್ದೇಶನ ಮಾಡಿದ್ದು, ಸಾಜಿದ್​ ನಾಡಿಯದ್ವಾಲಾ ನಿರ್ಮಾಣ ಮಾಡಿದ್ದಾರೆ. ಮಾ.18ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಅಕ್ಷಯ್​ ಬ್ಯುಸಿ ಇದ್ದಾರೆ. ಆದರೆ, ಅವರು ‘ಕಪಿಲ್​ ಶರ್ಮಾ ಶೋ’ಗೆ ಬರುತ್ತಿಲ್ಲ ಎಂದು ಹಿಂದುಸ್ತಾನ್​ ಟೈಮ್ಸ್​ ವರದಿ ಮಾಡಿದೆ.

ಕೊರೊನಾ ಕಾರಣಗಳಿಂದ ಅಕ್ಷಯ್​ ಕುಮಾರ್​ ವೇಗಕ್ಕೆ ಕೊಂಚ ಪೆಟ್ಟು ಬಿದ್ದಿದೆ. ಆದರೂ ಸಹ, ಅಕ್ಷಯ್​ ಕುಮಾರ್​ ಅವರ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ರಿಲೀಸ್​ ಆಗುತ್ತಿವೆ. ಕಳೆದ ವರ್ಷಾಂತ್ಯದಲ್ಲಿ ಅವರ ‘ಅತರಂಗಿ ರೇ’ ಸಿನಿಮಾ ಒಟಿಟಿ ಮೂಲಕ ಬಿಡುಗಡೆ ಆಯಿತು. ಈ ಚಿತ್ರದ ಪ್ರಚಾರಕ್ಕೆ ಅಕ್ಷಯ್​ ಕುಮಾರ್​ ಅವರು ‘ದಿ ಕಪಿಲ್​ ಶರ್ಮಾ ಶೋ’ಗೆ ಬಂದಿದ್ದರು. ಈ ವೇಳೆ ಒಂದು ವಿಚಾರ ಪ್ರಸ್ತಾಪ ಆಗಿತ್ತು.

ಈ ಹಿಂದೆ ಅಕ್ಷಯ್​ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಂದರ್ಶನ ಮಾಡಿದ್ದರು. ಆಗ ಮೋದಿಗೆ ಮಾವಿನ ಹಣ್ಣಿನ ಬಗ್ಗೆ  ಅಕ್ಷಯ್​ ಕುಮಾರ್ ಪ್ರಶ್ನೆ ಮಾಡಿದ್ದರು. ಕಪಿಲ್ ಶರ್ಮಾ ತಮ್ಮ ಶೋನಲ್ಲಿ ಈ ವಿಚಾರದ ಬಗ್ಗೆ ಕುಹಕವಾಡಿದ್ದರು. ‘ನೀವು ಓರ್ವ ದೊಡ್ಡ ರಾಜಕಾರಣಿಯನ್ನು ಸಂದರ್ಶನ ಮಾಡಿದ್ದಿರಿ. ಈ ಸಂದರ್ಶನದಲ್ಲಿ ಮಾವಿನ ಹಣ್ಣಿನ ಬಗ್ಗೆ ಪ್ರಶ್ನೆಯನ್ನೂ ಕೇಳಿದ್ದಿರಿ’ ಎಂದು ನಗುತ್ತಲೇ ಮಾತನಾಡಿದ್ದರು ಕಪಿಲ್​. ಅಕ್ಷಯ್​ ಕುಮಾರ್ ‘ಧೈರ್ಯ ಇದ್ದರೆ ಅವರ ಹೆಸರನ್ನು ಹೇಳಿ’ ಎಂದು ಸವಾಲು ಹಾಕಿದ್ದರು. ಅವರ ಮಾತುಕತೆ ಹಾಸ್ಯ ರೀತಿಯಲ್ಲಿ ನಡೆದೇ ಇತ್ತು.

ಇದನ್ನು ಪ್ರಸಾರ ಮಾಡದಂತೆ ಅಕ್ಷಯ್​ ಕುಮಾರ್​ ಅವರು ಸವಿನಯದಿಂದ ಕಪಿಲ್​ ಶರ್ಮಾಗೆ ಮನವಿ ಮಾಡಿಕೊಂಡಿದ್ದರು. ಈ ಮನವಿಯನ್ನು ಕಪಿಲ್​ ಶರ್ಮಾ ವಾಹಿನಿಯವರಿಗೂ ತಲುಪಿಸಿದ್ದರು. ಆದರೆ, ಈ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಲೀಕ್​ ಆಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡುವವರೆಗೆ ಕಪಿಲ್​ ಶರ್ಮಾ ಶೋಗೆ ಬರದಿರಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದನ್ನು ಅಕ್ಷಯ್​ ಕುಮಾರ್ ನಂಬಿಕೆ ದ್ರೋಹ ಎಂದು ಕರೆದಿದ್ದಾರೆ ಎಂದು ವರದಿ ಆಗಿದೆ.

ಇದನ್ನೂ ಓದಿ: ನೀರಜ್​ ಚೋಪ್ರಾಗೆ ಸಿನಿಮಾ ಆಫರ್​; ಅಕ್ಷಯ್​ ಕುಮಾರ್ ಬಯೋಪಿಕ್​ ಬಗ್ಗೆ ಏನಿದು ಅಪ್​ಡೇಟ್​?

ಅಕ್ಷಯ್​ ಕುಮಾರ್ ಸಿನಿಮಾ ಬ್ಯಾನ್​ ಮಾಡಿದ ಮೂರು ಪ್ರಮುಖ ರಾಷ್ಟ್ರಗಳು; ಬಾಕ್ಸ್​ ಆಫೀಸ್​ ಕಲೆಕ್ಷನ್​ಗೆ ಹೊಡೆತ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ