AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಸ್ಟರ್​ ಆನಂದ್​ ಮಗಳು ವಂಶಿಕಾ ಭರ್ಜರಿ ಶಾಪಿಂಗ್​; ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕ ಸೃಜನ್​ ಲೋಕೇಶ್​

‘ನನ್ನಮ್ಮ ಸೂಪರ್​ ಸ್ಟಾರ್’ ರಿಯಾಲಿಟಿ ಶೋ ಈ ವಾರ ತುಂಬಾನೇ ವಿಶೇಷವಾಗಿರಲಿದೆ. ಅಮ್ಮನಿಗೋಸ್ಕರ ಮಕ್ಕಳು ​ಗಿಫ್ಟ್​ ಕೊಡಬೇಕು. ಅದೂ ಅಮ್ಮನ ಸಹಾಯ ಇಲ್ಲದೆ. ವಂಶಿಕಾ ಕೂಡ ತನ್ನ ಅಮ್ಮನಿಗೆ ಗಿಫ್ಟ್​ ತರೋಕೆ ಶಾಪಿಂಗ್​ಗೆ ತೆರಳಿದ್ದಾಳೆ. ಈ ಪ್ರೋಮೋವನ್ನು ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ.

ಮಾಸ್ಟರ್​ ಆನಂದ್​ ಮಗಳು ವಂಶಿಕಾ ಭರ್ಜರಿ ಶಾಪಿಂಗ್​; ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕ ಸೃಜನ್​ ಲೋಕೇಶ್​
ಸೃಜನ್​ ಲೋಕೇಶ್​-ವಂಶಿಕಾ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Feb 05, 2022 | 2:37 PM

Share

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನನ್ನಮ್ಮ ಸೂಪರ್​ ಸ್ಟಾರ್​’ (Nannamma Super Star) ಕಾರ್ಯಕ್ರಮ ಕಿರುತೆರೆ ವೀಕ್ಷಕರಿಗೆ ಇಷ್ಟವಾಗಿದೆ. ಪ್ರತಿ ಬಾರಿ ನೀಡುವ ನಾನಾ ಟಾಸ್ಕ್​ಗಳು ಗಮನ ಸೆಳೆಯುತ್ತಿವೆ. ಅದರಲ್ಲೂ ಸೆಲೆಬ್ರಿಟಿ ಮಕ್ಕಳು ಮಾಡುವ ಕೀಟಲೆಗಳು ಒಂದೆರಡಲ್ಲ. ಅವರಾಡುವ ಚೂಟಿ ಮಾತುಗಳು ವೀಕ್ಷಕರಿಗೆ ಇಷ್ಟವಾಗುತ್ತಿದೆ. ‘ನನ್ನಮ್ಮ ಸೂಪರ್​ ಸ್ಟಾರ್ ​’ ಪ್ರಸಾರ ಆರಂಭ ಆದಾಗಿನಿಂದ ನಟ-ನಿರೂಪಕ ಮಾಸ್ಟರ್​ ಆನಂದ್​ ಅವರ ಪುತ್ರಿ ವಂಶಿಕಾ (Vanshika) ಸಿಕ್ಕಾಪಟ್ಟೆ ಮಿಂಚುತ್ತಿದ್ದಾಳೆ. ಈ ಪುಟಾಣಿಯ ಮಾತುಗಳನ್ನು ಕೇಳಿ ಬೆರಗಾಗದವರೇ ಇಲ್ಲ. ಇಷ್ಟು ದೊಡ್ಡ ವೇದಿಕೆ ಏರಿದಾಗ ಯಾರಿಗಾದರೂ ಸ್ವಲ್ಪವಾದರೂ ಭಯವಾಗುತ್ತದೆ. ಆದರೆ, ವಂಶಿಕಾ ಆ ರೀತಿ ಭಯಪಟ್ಟುಕೊಂಡಿಲ್ಲ. ಅನುಭವಿ ಮಾತುಗಾರರಂತೆ ಮಾತನಾಡುತ್ತಲೇ ಇರುತ್ತಾಳೆ. ಈ ಬಾರಿ ಅವಳು ಅಮ್ಮನಿಗಾಗಿ ಶಾಪಿಂಗ್​ಗೆ ತೆರಳಿದ್ದಾಳೆ. ಆದರೆ, ಅಲ್ಲಿ ಆಕೆ ಖರೀದಿ ಮಾಡಿದ್ದು ಅಮ್ಮನಿಗಾಗಿ ಅಲ್ಲ! ಎಲ್ಲವೂ ತನಗಾಗಿ.

‘ನನ್ನಮ್ಮ ಸೂಪರ್​ ಸ್ಟಾರ್’ ರಿಯಾಲಿಟಿ ಶೋ ಈ ವಾರ ತುಂಬಾನೇ ವಿಶೇಷವಾಗಿರಲಿದೆ. ಅಮ್ಮನಿಗೋಸ್ಕರ ಮಕ್ಕಳು ​ಗಿಫ್ಟ್​ ಕೊಡಬೇಕು. ಅದೂ ಅಮ್ಮನ ಸಹಾಯ ಇಲ್ಲದೆ. ವಂಶಿಕಾ ಕೂಡ ತನ್ನ ಅಮ್ಮನಿಗೆ ಗಿಫ್ಟ್​ ತರೋಕೆ ಶಾಪಿಂಗ್​ಗೆ ತೆರಳಿದ್ದಾಳೆ. ಈ ಪ್ರೋಮೋವನ್ನು ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ. ‘ಒಂದೇ ದಿನದಲ್ಲಿ ಶಾಪಿಂಗ್ ಲೋಕದ ರಾಣಿಯಾದ ವಂಶಿಕಾ’ ಎನ್ನುವ ಕ್ಯಾಪ್ಶನೊಂದಿಗೆ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಸದ್ಯ, ಈ ವಿಡಿಯೋವನ್ನು ವೀಕ್ಷಕರು ಸಾಕಷ್ಟು ಇಷ್ಟಪಟ್ಟಿದ್ದಾರೆ. ವಂಶಿಕಾ ನಡೆದುಕೊಂಡ ರೀತಿಗೆ ಎಲ್ಲರೂ ಬಿದ್ದುಬಿದ್ದು ನಕ್ಕಿದ್ದಾರೆ.

‘ಗಿಫ್ಟ್​ ತೆಗೆದುಕೊಂಡು ಬನ್ನಿ ಅಂತ ಕಳಿಸಿದ್ರೆ ಒಂದು ಟೂರ್​ ಮಾಡಿಕೊಂಡು ಬಂದಿದ್ದಾಳೆ ವಂಶಿಕಾ. ನಮಗೆ ಇವಳ ಗಿಫ್ಟ್​ ಮ್ಯಾಟರ್​ ಆಗಲೇ ಇಲ್ಲ. ಅವಳು ಟೂರ್​ಗೆ ಹೋಗಿರೋದು ಒಂದು ವಿಟಿ ಇದೆ’ ಎಂದರು ನಿರೂಪಕಿ ಅನುಪಮಾ ಗೌಡ. ಆ ಬಳಿಕ ಅವಳ ಶಾಪಿಂಗ್​ ವಿಡಿಯೋ ತೋರಿಸಲಾಯಿತು. ವಿಡಿಯೋ ಆರಂಭದಲ್ಲಿ ಮಾತನಾಡಿರುವ ವಂಶಿಕಾ, ‘ಹಾಯ್​, ಎವರಿಒನ್​. ನಾನು ಇವತ್ತು ಶಾಪಿಂಗ್​ ಮಾಡೋಕೆ ಬಂದಿದ್ದೇನೆ. ಅದು ನಂಗಲ್ಲ, ನಮ್ಮ ಅಮ್ಮನಿಗೆ. ಬನ್ನಿ ಏನೇನಿದೆ ನೋಡೋಣ’ ಎಂದು ಶಾಪಿಂಗ್​ ಕಾಂಪ್ಲೆಕ್ಸ್​ಗೆ ಎಂಟ್ರಿ ಪಡೆದಳು.

ಶಾಪಿಂಗ್​ ಕಾಂಪ್ಲೆಕ್ಸ್​ನಲ್ಲಿ ವಂಶಿಕಾ ಸಖತ್​ ಸುತ್ತಾಟ ನಡೆಸಿದ್ದಾಳೆ. ಆದರೆ, ಎಲ್ಲಿಯೂ ಅವಳ ಅಮ್ಮನಿಗೆ ಗಿಫ್ಟ್​ ಕೊಡುವ ಯಾವ ವಸ್ತುವೂ ಸಿಕ್ಕಿಲ್ಲ. ಈ ಕಾರಣಕ್ಕೆ ವಂಶಿಕಾ ತನಗಾಗಿ ಎಲ್ಲವನ್ನೂ ಕೊಂಡುಕೊಳ್ಳೋಕೆ ಶುರುಹಚ್ಚಿಕೊಂಡಳು. ಕೊನೆಯಲ್ಲಿ ವಂಶಿಕಾ ತನಗಾಗಿ ಖರೀದಿಸಿದ್ದೇ ಹೆಚ್ಚು.

‘ಕ್ಯಾಮೆರಾಮೆನ್​ಗೆ, ವಿಡಿಯೋ ಎಡಿಟ್​ ಮಾಡಿದವರಿಗೆ, ಇಲ್ಲಿದ್ದವರಿಗೆ ಎಲ್ಲರಿಗೂ ಡೌಟ್​ ಆಯ್ತು. ನೀನು ಅಮ್ಮನಿಗೆ ಗಿಫ್ಟ್​ ತರೋಕೆ ಹೋಗಿದ್ಯಾ ಅಥವಾ ನಿಂಗೆ ಗಿಫ್ಟ್​ ತರೋಕೆ ಹೋಗಿದ್ಯಾ?’ ಎಂದು ವೇದಿಕೆ ಮೇಲೆ ವಂಶಿಕಾಳನ್ನು ಪ್ರಶ್ನಿಸಿದರು ಅನುಪಮಾ ಗೌಡ. ‘ನನಗೆ ಗಿಫ್ಟ್​ ತರೋಕೆ ಹೋಗಿದ್ದೆ’ ಎಂದಳು ವಂಶಿಕಾ. ಇದನ್ನು ಕೇಳಿ ಸೃಜನ್​ ಕೂಡ ನಕ್ಕರು. ಅಲ್ಲದೆ, ಅವರು ಪಂಚಿಂಗ್​ ಡೈಲಾಗ್​ ಕೂಡ ಹೊಡೆದರು.

ಇದನ್ನೂ ಓದಿ: ‘ಬನ್ನಿ.. ಎಲ್ಲರೂ ನಮ್ ಅಣ್ಣನ ಸಿನಿಮಾ ನೋಡೋಣ’; ಮಾಸ್ಟರ್​ ಆನಂದ್​ ಮಗಳ ಪ್ರೀತಿಯ ಆಹ್ವಾನ

ನಿವೇದಿತಾ ಗೌಡ ಅವರನ್ನೇ ಮಣಿಸಿದ ಮಾತಿನ ಮಲ್ಲಿ ವಂಶಿಕಾ; ಮಾಸ್ಟರ್​ ಆನಂದ್​ ಪುತ್ರಿಯ ಮಸ್ತ್​ ಮಾತುಕತೆ

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ