‘ಬನ್ನಿ.. ಎಲ್ಲರೂ ನಮ್ ಅಣ್ಣನ ಸಿನಿಮಾ ನೋಡೋಣ’; ಮಾಸ್ಟರ್​ ಆನಂದ್​ ಮಗಳ ಪ್ರೀತಿಯ ಆಹ್ವಾನ

ಕನ್ನಡದ ‘ಡಿಎನ್​ಎ’ ಚಿತ್ರ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಮಾಸ್ಟರ್​ ಆನಂದ್​ ಪುತ್ರ ಕೃಷ್ಣ ಚೈತನ್ಯ ನಟಿಸಿದ್ದಾನೆ. ಅಣ್ಣನ ಸಿನಿಮಾಗೆ ವಂಶಿಕಾ ಪ್ರಚಾರ ಮಾಡಿದ್ದಾಳೆ.

‘ಬನ್ನಿ.. ಎಲ್ಲರೂ ನಮ್ ಅಣ್ಣನ ಸಿನಿಮಾ ನೋಡೋಣ’; ಮಾಸ್ಟರ್​ ಆನಂದ್​ ಮಗಳ ಪ್ರೀತಿಯ ಆಹ್ವಾನ
| Updated By: ಮದನ್​ ಕುಮಾರ್​

Updated on:Jan 28, 2022 | 3:33 PM

ಮಾಸ್ಟರ್​ ಆನಂದ್​ (Master Anand) ಅವರು ಬಾಲ ನಟನಾಗಿ ಮಿಂಚಿದ್ದರು. ಅದೇ ರೀತಿ ಅವರ ಮಕ್ಕಳು ಕೂಡ ಬಣ್ಣದ ಲೋಕದಲ್ಲಿ ಹೆಸರು ಮಾಡುತ್ತಿದ್ದಾರೆ. ಆನಂದ್​ ಪುತ್ರಿ ವಂಶಿಕಾ (Vanshika) ಈಗಾಗಲೇ ‘ನನ್ನಮ್ಮ ಸೂಪರ್​ ಸ್ಟಾರ್​’ ಕಾರ್ಯಕ್ರಮದ ಮೂಲಕ ಸ್ಟಾರ್​ ಆಗಿದ್ದಾಳೆ. ಈಗ ಅವರ ಮಗ ಕೃಷ್ಣ ಚೈತನ್ಯ ಕೂಡ ಸಿನಿಮಾದಲ್ಲಿ ಮಿಂಚುತ್ತಿದ್ದಾನೆ. ಮಾಸ್ಟರ್​ ಆನಂದ್​ ಪುತ್ರ ನಟಿಸಿರುವ ‘ಡಿಎನ್​ಎ’ ಸಿನಿಮಾ (DNA Kannada Movie) ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ವಂಶಿಕಾ ಪ್ರಚಾರ ಮಾಡಿದ್ದಾಳೆ. ಅಣ್ಣನ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾಳೆ. ‘ನಮ್ಮ ಅಣ್ಣನ ‘ಡಿಎನ್​ಎ’ ಮೂವೀ ರಿಲೀಸ್​ ಆಗಿದೆ. ಜಿಟಿ ಮಾಲ್​ನಲ್ಲಿ ನಾವು ನಿಮಗಾಗಿ ಕಾಯುತ್ತಿರುತ್ತೇವೆ. ಮಿಸ್​ ಮಾಡಬೇಡಿ. ಎಲ್ರೂ ಬನ್ನಿ, ನಮ್ ಅಣ್ಣನ ಸಿನಿಮಾ ನೋಡೋಣ’ ಎಂದು ಪ್ರೇಕ್ಷಕರಿಗೆ ವಂಶಿಕಾ ಆಹ್ವಾನ ನೀಡಿದ್ದಾಳೆ. ‘ಅಣ್ಣಯ್ಯ.. ಇದು ನಿನ್​ ಮೂವೀ, ನೀನು ಮಾತಾಡ್ಬೇಕು’ ಅಂತ ಅಣ್ಣನಿಗೂ ಆಕೆ ಪ್ರೋತ್ಸಾಹ ನೀಡಿದ್ದಾಳೆ. ಈ ಕ್ಯೂಟ್​ ವಿಡಿಯೋ ನೋಡಿ ಆಕೆಯ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಪ್ರಕಾಶ್​ರಾಜ್​ ಮೇಹು ನಿರ್ದೇಶನದ ‘ಡಿಎನ್​ಎ’ ಚಿತ್ರದಲ್ಲಿ ಅಚ್ಯುತ್​ ಕುಮಾರ್​, ಎಸ್ತರ್​ ನರೋನಾ, ರೋಜರ್​ ನಾರಾಯಣ್​, ಯಮುನಾ, ಧ್ರುವ ಮೇಹು ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ:

‘ಆ ಪಾತ್ರದಲ್ಲಿ ನಟಿಸಲ್ಲ’ ಎಂದಿದ್ದೇಕೆ ರಾಧಿಕಾ ಪಂಡಿತ್​, ಶ್ರದ್ಧಾ ಶ್ರೀನಾಥ್​? ಕಾರಣ ತಿಳಿಸಿದ ‘ಡಿಎನ್​ಎ’ ನಿರ್ದೇಶಕ

ನಿವೇದಿತಾ ಗೌಡ ಅವರನ್ನೇ ಮಣಿಸಿದ ಮಾತಿನ ಮಲ್ಲಿ ವಂಶಿಕಾ; ಮಾಸ್ಟರ್​ ಆನಂದ್​ ಪುತ್ರಿಯ ಮಸ್ತ್​ ಮಾತುಕತೆ

Published On - 3:31 pm, Fri, 28 January 22

Follow us