ಪ್ರೇಮಿಗಳ ದಿನಕ್ಕೆ ಏಳು ಹೆಜ್ಜೆಗಳು! ಒಂದೊಂದು ದಿನವು ಮಹತ್ವದ ದಿನ

ಅಕ್ಷಯ್​ ಕುಮಾರ್​​

Updated on: Feb 05, 2022 | 5:39 PM

ಫೆಬ್ರವರಿ 14ನ್ನು ಪ್ರೇಮಿಗಳ ದಿನವನ್ನಾಗಿ ಮಾಡಿದ್ದಾರೆ. ಪ್ರೇಮಿಗಳ ದಿನಕ್ಕೂ ಮುನ್ನ ಕೆಲವೊಂದನ್ನು ದಿನವನ್ನು ಆಚರಣೆ ಮಾಡಲಾಗುತ್ತದೆ. ಪ್ರೇಮಿಗಳಿಗೆ ಇದೊಂದು ಮುನ್ನಡಿ ದಿನಗಳ ಎನ್ನಲಾಗುತ್ತದೆ. ಎಂಟು ದಿನ ವಿಭಿನ್ನ ಹೆಸರುಗಳಿಂದ ಈ ದಿನವನ್ನು ಆಚರಿಸಲಾಗುತ್ತದೆ. ಪ್ರೇಮಿಗಳ ದಿನಕ್ಕೆ ಇದೊಂದು ರೀತಿ 7 ಹೆಜ್ಜೆಗಳು ಎನ್ನಬಹುದು.

ಪ್ರೇಮಿಗಳ ದಿನಕ್ಕೆ ಏಳು ಹೆಜ್ಜೆಗಳು! ಒಂದೊಂದು ದಿನವು ಮಹತ್ವದ ದಿನ
ಸಾಂಧರ್ಭಿಕ ಚಿತ್ರ

ಪ್ರೀತಿ ಎನ್ನುವುದು ಒಂದು ನಿಮಿಷದಲ್ಲಿ ಹುಟ್ಟುವುದಲ್ಲ ಅದು ಒಂದು ತಪಸ್ಸು ಇದಂತೆ, ಒಬ್ಬರ  ಪ್ರೀತಿ ಪಡೆಯುವುದು ಎಂದರೆ ಅದು ಒಂದು ಸಾಧಿಸುವ ಛಲವಾಗಿರುತ್ತದೆ. ಅದನ್ನು  ಪಡೆಯಲು ಕಷ್ಟ ಆದರೆ ಅದನ್ನು ಮುರಿದುಕೊಳ್ಳ ತುಂಬಾ ಸುಲಭವಾಗಿರುತ್ತದೆ. ಪ್ರೀಮಿಗಳು ಎಂದಾಗ ಏನೋ ಒಂದು ಗೊಂದಲ ಏಕೆಂದರೆ ಆ ಪ್ರೇಮಿಗಳಲ್ಲಿ ಪ್ರೀತಿಎನ್ನುವುದು ಹೇಗೆ ಹುಟ್ಟಿಕೊಳ್ಳತ್ತದೆ ಎನ್ನುವ  ಅರ್ಥವೇ ಇಲ್ಲ. ಅದಕ್ಕಾಗಿ ನಮ್ಮ ಕ್ರೇಜಿಸ್ಟಾರ್ ಅನ್ನು ಅತಂಹ ಅನೇಕ ಪ್ರೇಮಲೋಕವನ್ನೇ ಸೃಷ್ಟಿಸಿದ ವ್ಯಕ್ತಿಗಳು ಹೇಳಿದ್ದು ಪ್ರೀತಿ ಕಣ್ಣಿಲ್ಲ. ಅಥವಾ ಹುಟ್ಟು – ಸಾವು ಎಂಬುದು ಇಲ್ಲ.  ಪ್ರೀತಿಯಲ್ಲಿರುವ ಸುಖ ಎನ್ನುವುದು ಪ್ರೀತಿಸಿದರಿಗೆ ಗೊತ್ತು, ಏಕೆಂದರೆ ಎನ್ನುವುದನ್ನು ನಿಲ್ಕಷವಾಗಿ ಅನುಭಸಿರುತ್ತಾರೆ.  ಬದುಕಿನಲ್ಲಿ ಪ್ರೀತಿ ಮಾಡದ ವ್ಯಕ್ತಿ ಇಲ್ಲವೇ ಇಲ್ಲ ಎಂದು ಹೇಳಿದರು ತಪ್ಪಲಾಗರಾದು, ಏಕೆಂದರೆ ಎಲ್ಲ ಮನಸ್ಸಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಪ್ರೀತಿ ಎನ್ನುವುದು ಹುಟ್ಟಿಕೊಂಡಿರುತ್ತದೆ. ಅದಕ್ಕಾಗಿ ಪ್ರೇಮಿಗಳಿಗೆ ಒಂದು ದಿನವನ್ನು ನಿಗದಿ ಮಾಡಿರುವುದು. ಆ ದಿನವು ಹಲವು ಮಜಲುಗಳಿಂದ ಹುಟ್ಟಿಕೊಂಡಿದೆ. ಅದಕ್ಕಾಗಿಯೇ ಫೆಬ್ರವರಿ 14ನ್ನು ಪ್ರೇಮಿಗಳ ದಿನವನ್ನಾಗಿ ಮಾಡಿದ್ದಾರೆ.

ಪ್ರೇಮಿಗಳ ದಿನಕ್ಕೂ ಮುನ್ನ ಕೆಲವೊಂದನ್ನು ದಿನವನ್ನು ಆಚರಣೆ ಮಾಡಲಾಗುತ್ತದೆ. ಪ್ರೇಮಿಗಳಿಗೆ ಇದೊಂದು ಮುನ್ನಡಿ ದಿನಗಳ ಎನ್ನಲಾಗುತ್ತದೆ. ಎಂಟು ದಿನ ವಿಭಿನ್ನ ಹೆಸರುಗಳಿಂದ ಈ ದಿನವನ್ನು ಆಚರಿಸಲಾಗುತ್ತದೆ. ಪ್ರೇಮಿಗಳ ದಿನಕ್ಕೆ ಇದೊಂದು ರೀತಿ 7 ಹೆಜ್ಜೆಗಳು ಎನ್ನಬಹುದು. ಈ ಬಗ್ಗೆ ಅನೇಕ ಪ್ರೇಮಿಗಳ ಮಾತು ಕೂಡ ಹೌದು, ಈ ಕಾರಣಕ್ಕೆ  ಪ್ರೇಮಿಗಳ ದಿನವನ್ನು ತುಂಬಾ ಅದ್ಧೂರಿಯಾಗಿ ಮಾಡುತ್ತಾರೆ. ಈ ಬಾರಿ ಕೊರೊನಾ ಸಮಯದಲ್ಲೂ ಅದ್ಧೂರಿಯಾಗಿ ಪ್ರೇಮಿಗಳ ದಿನವನ್ನು ಆಚರಿಸುತ್ತಾರೆ ಎಂಬದನ್ನು ನೋಡಬೇಕಿದೆ

ಮೊದಲನೇ ದಿನ ರೋಸ್ ಡೇ 

ಪ್ರೇಮಿಗಳ ದಿನದ ಮೊದಲ ದಿನವನ್ನು ಅದ್ಭುತವಾಗಿ ಆಚರಿಸುತ್ತಾರೆ. ಹೌದು ಪ್ರೇಮಿಗಳ ಮೊದಲು ಪ್ರೇಮಕ್ಕೆ ಮುನ್ನಡಿ ಬರೆಯುವುದು ಈ ರೋಸ್ ಡೇ, ಇದನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಪ್ರೇಮಿಗಳಿಗೆ ಮೊದಲ ಈ ರೋಸ್ ಡೇ ಮುಖ್ಯವಾಗಿರುತ್ತದೆ. ಹೌದು ಫೆ.7ರಂದು ರೋಸ್ ಡೇಯನ್ನು ಆಚರಣೆ ಮಾಡುತ್ತಾರೆ. ಇದು ಪ್ರೇಮ ಹುಟ್ಟುವ ದಿನ ಎಂದು ಹೇಳಲಾಗುತ್ತದೆ. ಇದು ಭಾವನತ್ಮಾಕ ದಿನ, ಬಣ್ಣ ಬಣ್ಣ ಕನಸುಗಳನ್ನು ಕಟ್ಟುಕೊಳ್ಳುವ ದಿನ ಇದಾಗಿದೆ.

ಎರಡನೇ ದಿನ ಪ್ರಪೋಸ್ ಡೇ 

ಪ್ರೇಮಿಗಳಿಗೆ ಸಾಗುವ ಎರಡನೇ ದಿನವನ್ನು ತುಂಬಾ ಅದ್ಭುತವಾಗಿರುತ್ತದೆ. ಪ್ರೇಮವನಬ್ನು ವ್ಯಕ್ತಪಡಿಸುವ ದಿನ, ಕನಸುಗಳು ನನಸಾಗುವ ದಿನವನ್ನು ಪ್ರಪೋಸ್ ದಿನ ಎಂದು ಹೇಳಲಾಗುತ್ತದೆ. ಇಲ್ಲಿ ನಿರಾಕರಣೆಯು ಆಗಬಹುದು. ಇದು ಪ್ರೀತಿಯನ್ನು ತಿಳಿಸುವ ಕಾಲವಾಗಿರುತ್ತದೆ . ಇಲ್ಲಿ ಇಷ್ಟ-ಕಷ್ಟಗಳ ನಿರ್ಧಾರಗಳು ನಡೆಯುತ್ತದೆ. ಹಾಗಾಗಿ ಒಪ್ಪಿಕೊಳ್ಳಲು ಮತ್ತು ಅವುಗಳ ಬಗ್ಗೆ ತಿರ್ಮಾನ ಮಾಡಲು ಒಂದು ವೇದಿಕೆಯಾಗಿ ಪ್ರಪೋಸ್ ಎಂಬುದು ಇರುತ್ತದೆ. ಈ ದಿನವನ್ನು ಫೆ.8ರಂದು ಆಚರಿಸುತ್ತಾರೆ.

ಮೂರನೇ ದಿನ ಚಾಕೊಲೇಟ್ ಡೇ 

ಪ್ರಪೋಸ್ ಮಾಡಿದ ನಂತರ ಅದನ್ನು ಸಿಹಿಯ ಮುಖ ಹಂಚಿಕೊಳ್ಳವ ಒಂದು ಪದ್ದತಿಯಾಗಿದೆ. ಈ ಪದ್ದತಿಯನ್ನು ಚಾಕೊಲೇಟ್ ಡೇ ಎನ್ನುತ್ತಾರೆ. ಈ ಕಾರಣಕ್ಕೆ ಸಿಹಿಯ ಮೂಲಕ ಸಂಬಂಧಗಳು ಪ್ರಾರಂಭವಾಗುತ್ತದೆ. ಈ ದಿನವನ್ನು ಚಾಕೊಲೋಟ್ ಡೇ ಎಂದು ಕರೆಯುವ ಹಿಂದೆ ಪ್ರೀತಿಯ ಸಂಕೇತ ಇದೆ. ಇದನ್ನು ಇನ್ನಷ್ಟು ಗಟ್ಟಿಗೊಳಿಸುವ ಕಾರ್ಯವನ್ನು ಈ ಚಾಕೊಲೇಟ್ ಡೇ ಮಾಡುತ್ತದೆ. ಇದನ್ನು ಫೆ.9ರಂದು ಆಚರಿಸುತ್ತಾರೆ.

ನಾಲ್ಕನೇ ದಿನ  ಟೆಡ್ಡಿ ಡೇ  

ನಾಲ್ಕನೇ ದಿನವನ್ನು ಟೆಡ್ಡಿ ಡೇ ಎಂದು ಕರೆಯುತ್ತಾರೆ. ಇವತ್ತಿಗೂ ಪ್ರೀತಿ ಹುಟ್ಟಿದಕ್ಕೆ ಒಂದು ಮೂಲ ಸಂಕೇತ ಎಂಬುದು ಬೇಕಲ್ಲ. ಈ ಕಾರಣಕ್ಕೆ ಕೊಡುಗೆಯ ಮೂಲಕ ಹೆಚ್ಚು ಪ್ರೀತಿಯನ್ನು ಹಂಚುವ ಕೆಲಸವನ್ನು ಈ ಟೆಡ್ಡಿ ಡೇ ಮಾಡುತ್ತದೆ. ಇದನ್ನು ಫೆ.10ರಂದು ಆಚರಿಸಲಾಗುತ್ತದೆ.

ಐದನೇ ದಿನ ಪ್ರಾಮಿಸ್ ಡೇ 

ಪ್ರೇಮಿಗಳಿಗೆ ಇದು ಪ್ರಮುಖವಾದ ದಿನ ಎಲ್ಲದಕ್ಕೂ ಸಾಕ್ಷಿಯಾಗುವುದು ಈ ದಿನವಾಗಿದೆ. ಆ ಕಾರಣಕ್ಕೆ ಪ್ರೇಮಿಗಳ ದಿನದ ಐದನೇ ದಿನವನ್ನು ಪ್ರಾಮಿಸ್ ಡೇ ಎಂದು ಕರೆಯುತ್ತಾರೆ. ಇದರ ಜೊತೆಗೆ ಸಂಬಂಧವನ್ನು ಈ ದಿನ ಗಟ್ಟಿ ಮಾಡುತ್ತದೆ ಎಂಬ ನಂಬಿಕೆ ಈ ಕಾರಣಕ್ಕೆ ಪ್ರಾಮಿಸ್ ಡೇ ಎಂದು ಕರೆಯುತ್ತಾರೆ. ಸಂಬಂಧದಲ್ಲಿ ಯಾವುದೇ ನೋವು ಅನುಭವಿಸದ ರೀತಿ ಗಟ್ಟಿಯಾಗಿ ಒಬ್ಬರಿಗೊಬ್ಬರು ಜೀವನ ಮಾಡುವಂತೆ ಪ್ರಾಮಿಸ್ ಮಾಡುವ ದಿನ. ಇದನ್ನು ಫೆ. 11ರಂದು ಆಚರಿಸುತ್ತಾರೆ.

ಆರನೇ ದಿನ ಹಗ್ ಡೇ 

ಆತ್ಮೀಯ ಅಲಿಂಗವನ್ನು ಮಾಡುವ ದಿನವನ್ನು ಹಗ್ ಡೇ ಎನ್ನುತ್ತಾರೆ. ಈ ಸಮಯದಲ್ಲಿ ಹೃದಯಗಳ ಸ್ವರಕ್ಕೆ ಪ್ರತಿಧ್ವನಿಯಾಗುವ ಕಾಲವನ್ನು ಹಗ್ ಡೇ ಎನ್ನುತ್ತಾರೆ. ಹಗ್ ಡೇ ಸಂಬಂಧಗಳ ಸೇತುವೇ ಎಂದರು ತಪ್ಪಗಲಾರದು. ಈ ಹಗ್ ಡೇ ಅನೇಕ ಸಂಬಂಧಗಳಿಗೆ ವಿಶ್ವಾಸವನ್ನು ನೀಡುವ ಕಾಲವಾಗಿರುತ್ತದೆ. ಈ ದಿನವನ್ನು ಫೆ,12ರಂದು ಆಚರಣೆ ಮಾಡಲಾಗುತ್ತದೆ.

ಏಳನೇ ದಿನ ಕಿಸ್ ಡೇ 

ಪ್ರೇಮಿಗಳು ಈ ದಿನವನ್ನು ಮುಕ್ತವಾಗಿ ಆಚರಿಸಿದರೆ. ಚುಂಬನ ನೀಡುವ ಮೂಲಕ ಈ ದಿನವನ್ನು ಆಚರಿಸುತ್ತಾರೆ. ಸಾಮಾನ್ಯ ಎಲ್ಲರೂ ಈ ರೀತಿ ಮಾಡುವುದಿಲ್ಲ, ಆದರೆ ಇದು ಒಂದು ಪ್ರೀತಿಗೆ ಪ್ರಮುಖ ಸಂಕೇತವಾಗಿದೆ. ಈ ದಿನವನ್ನು ಫೆ.13ರಂದು ಆಚರಿಸುತ್ತಾರೆ.

ಎಂಟನೇ ದಿನ ಪ್ರೇಮಿಗಳ ದಿನ

ಇದು ಪ್ರೇಮಿಗಳಿಗೆ ಕೊನೆಯ ದಿನವಾಗಿರುತ್ತದೆ. ಅಂದರೆ ಈ ಏಳು ಘಟ್ಟಗಳಿಗೆ ಕೊನೆಯ ದಿನವಾಗಿರುವುದು ಮತ್ತು ಮುಂದಿನ ಜೀವನಕ್ಕೆ ಸಾಕ್ಷಿಯಾಗಿರುವುದು ಪ್ರೇಮಿಗಳ ದಿನ. ಈ ದಿನ ಮಹತ್ವದಾಗಿರುತ್ತದೆ ಪ್ರೇಮಿಗಳಿಗೆ. ಈ ದಿನದಂದ ಜಗತ್ತಿನ ಎಲ್ಲ ರಾಷ್ಟ್ರಗಳು ಆಚರಣೆ ಮಾಡುತ್ತದೆ. ಇದು ಫೆ.14ರಂದು ನಡೆಸಲಾಗುತ್ತದೆ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada