‘ಕೆಲಸ ಇಲ್ಲ ಅಂತ ವಿವಾದ ಮಾಡಿಕೊಂಡೆ’; ಎಲ್ಲವನ್ನೂ ಒಪ್ಪಿಕೊಂಡ ಕಾಂಟ್ರವರ್ಸಿ ನಟಿ ಪೂನಂ ಪಾಂಡೆ

‘ನಟಿಯಾಗಿ ನಟನೆ, ಡ್ಯಾನ್ಸ್​ ಮತ್ತು ನನ್ನ ಪ್ರತಿಭೆಯನ್ನು ತೋರಿಸಲು ನಾನು ಬಯಸಿದ್ದೆ. ಆದರೆ ಕೆಲವರು ನನ್ನನ್ನು ತಪ್ಪು ದಾರಿಗೆ ಎಳೆದರು’ ಎಂದು ಪೂನಂ ಪಾಂಡೆ ಹೇಳಿದ್ದಾರೆ

‘ಕೆಲಸ ಇಲ್ಲ ಅಂತ ವಿವಾದ ಮಾಡಿಕೊಂಡೆ’; ಎಲ್ಲವನ್ನೂ ಒಪ್ಪಿಕೊಂಡ ಕಾಂಟ್ರವರ್ಸಿ ನಟಿ ಪೂನಂ ಪಾಂಡೆ
ಪೂನಂ ಪಾಂಡೆ
Follow us
| Updated By: ಮದನ್​ ಕುಮಾರ್​

Updated on: Feb 27, 2022 | 1:14 PM

ಭಾರತೀಯ ಚಿತ್ರರಂಗದಲ್ಲಿನ ಅತಿ ವಿವಾದಾತ್ಮಕ ನಟಿಯರ ಸಾಲಿನಲ್ಲಿ ಪೂನಂ ಪಾಂಡೆ (Poonam Pandey) ಹೆಸರು ಕೂಡ ಪ್ರಮುಖವಾಗಿ ಕೇಳಿಬರುತ್ತದೆ. ಅವರು ಮಾಡಿಕೊಂಡ ಕಿರಿಕ್​ಗಳು ಒಂದೆರಡಲ್ಲ. ವೃತ್ತಿಜೀವನದಲ್ಲಿ ಅವರು ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಅವರ ಖಾಸಗಿ ಜೀವನ ಕೂಡ ಹಾದಿ ತಪ್ಪಿದೆ. ಮದುವೆಯಾದ ಕೆಲವೇ ದಿನಗಳ ಬಳಿಕ ಗಂಡನಿಂದ ದೂರ ಆಗಬೇಕಾದ ದುಸ್ಥಿತಿ ಅವರಿಗೆ ಬಂತು. ಪತಿಯಿಂದ ಥಳಿತಕ್ಕೆ ಒಳಗಾಗಿ ಪೊಲೀಸ್​ ಠಾಣೆಯ ಮೆಟ್ಟಿಲು ಏರಬೇಕಾಯಿತು. ಹೀಗೆ ಪೂನಂ ಪಾಂಡೆ ಮಾಡಿಕೊಂಡ ವಿವಾದಗಳು ಹಲವು. ಇದರ ಜೊತೆ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದ ಅವರು ಅತಿ ಮಾದಕವಾದ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಒಟ್ಟಿನಲ್ಲಿ ಪೂನಂ ಪಾಂಡೆ ಅವರಿಗೂ ವಿವಾದಗಳಿಗೂ ಹತ್ತಿರದ ನಂಟು. ಈಗ ಅವರು ಕಂಗನಾ ರಣಾವತ್​ (Kangana Ranaut) ನಡೆಸಿಕೊಡುವ ‘ಲಾಕಪ್’​ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಆ ಕಾರಣದಿಂದ ಪೂನಂ ಪಾಂಡೆ ಮತ್ತೆ ಸುದ್ದಿಯಲ್ಲಿದ್ದಾರೆ. ಫೆ.27ರಿಂದ ಆಲ್ಟ್​ ಬಾಲಾಜಿ ಮತ್ತು ಎಂಎಕ್ಸ್​ ಪ್ಲೇಯರ್​ ಮೂಲಕ ಈ ಶೋ ಪ್ರಸಾರ ಆಗಲಿದೆ. ಹಲವು ವಿವಾದಾತ್ಮಕ ವ್ಯಕ್ತಿಗಳೇ ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿದ್ದಾರೆ. ಏಕ್ತಾ ಕಪೂರ್​ ನಿರ್ಮಾಣದ ‘ಲಾಕಪ್’​ (Lock Upp) ಶೋ ಬಗ್ಗೆ ಜನರಲ್ಲಿ ಭಾರಿ ನಿರೀಕ್ಷೆ ಮೂಡಿದೆ. ‘ಜನರು ನನ್ನನ್ನು ಕೇವಲ ವಿವಾದಗಳಿಂದ ಜಡ್ಜ್​ ಮಾಡುತ್ತಾರೆ. ನನ್ನ ಬದುಕಿನಲ್ಲಿ ಏನು ನಡೆದಿದೆ ಎಂಬುದು ಅವರಿಗೆ ತಿಳಿದಿಲ್ಲ’ ಎಂದು ಪೂನಂ ಪಾಂಡೆ ಹೇಳಿದ್ದಾರೆ.

ಇಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ ಪೂನಂ ಪಾಂಡೆ ಅವರು ಅನೇಕ ವಿಚಾರಗಳನ್ನು ಬಾಯಿ ಬಿಟ್ಟಿದ್ದಾರೆ. ‘ನನಗೆ ಕೆಲಸ ಇಲ್ಲದೇ ಇದ್ದಾಗ ವಿವಾದಗಳನ್ನು ಮಾಡಿಕೊಂಡೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಕೆಲಸ ಮಾಡಬೇಕು ಅಂತ ಬಯಸಿದ್ದೇನೆ. ಭವಿಷ್ಯ ಕಟ್ಟಿಕೊಳ್ಳಲು ಅದು ಮಾಡು, ಇದು ಮಾಡು ಅಂತ ಹೇಳಿದವರ ಎಲ್ಲ ಮಾತನ್ನೂ ನಾನು ಕೇಳಿದೆ. ಆದರೆ ಅದು ತಪ್ಪು ಎಂಬುದು ನನಗೆ ನಂತರ ಅರಿವಾಯಿತು. ಜೀವನದಲ್ಲಿ ಯಶಸ್ವಿ ಆಗಬೇಕು ಎಂದರೆ ನಾವು ಕಷ್ಟಪಟ್ಟು ಕೆಲಸ ಮಾಡಬೇಕು. ಅದರಿಂದ ಇನ್ನಷ್ಟು ಕೆಲಸ ಸಿಗುತ್ತದೆ. ಜೀವನದಲ್ಲಿ 15 ನಿಮಿಷದ ಜನಪ್ರಿಯತೆ ಮುಖ್ಯ ಅಲ್ಲ. ಇನ್ಮುಂದೆ ನಾನು ಕೆಲಸ ಮಾಡಿ ತೋರಿಸುತ್ತೇನೆ’ ಎಂದು ಪೂನಂ ಪಾಂಡೆ ಹೇಳಿದ್ದಾರೆ.

2013ರಲ್ಲಿ ‘ನಶಾ’ ಸಿನಿಮಾ ಮೂಲಕ ಪೂನಂ ಪಾಂಡೆ ಚಿತ್ರರಂಗಕ್ಕೆ ಕಾಲಿಟ್ಟರು. ವಿದ್ಯಾರ್ಥಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಳ್ಳುವ ಟೀಚರ್​ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಆ ಚಿತ್ರದ ಬಿಡುಗಡೆ ಬಳಿಕ ಪೂನಂ ಪಾಂಡೆ ಬದುಕಿನಲ್ಲಿ ಕಷ್ಟ ಆವರಿಸಿತು. ‘ಜನರು ನನ್ನನ್ನು ತಪ್ಪಾದ ರೀತಿಯಲ್ಲಿ ಜಡ್ಜ್​ ಮಾಡುತ್ತಿದ್ದರು. ನಟಿಯಾಗಿ ನಟನೆ, ಡ್ಯಾನ್ಸ್​ ಮತ್ತು ನನ್ನ ಪ್ರತಿಭೆಯನ್ನು ತೋರಿಸಲು ನಾನು ಬಯಸಿದ್ದೆ. ಆದರೆ ಕೆಲವರು ನನ್ನನ್ನು ತಪ್ಪು ದಾರಿಗೆ ಎಳೆದರು’ ಎಂದು ಪೂನಂ ಪಾಂಡೆ ಆ ದಿನಗಳನ್ನು ಅವಲೋಕಿಸಿದ್ದಾರೆ.

ಅಶ್ಲೀಲ ಸಿನಿಮಾ ನಿರ್ಮಾಣದ ಆರೋಪದಲ್ಲಿ ಜೈಲು ಸೇರಿ ಹೊರಬಂದಿರುವ ರಾಜ್​ ಕುಂದ್ರಾ ಜೊತೆಗೂ ಪೂನಂ ಪಾಂಡೆ ಕಿರಿಕ್​ ಮಾಡಿಕೊಂಡಿದ್ದರು. ರಾಜ್​ ಕುಂದ್ರಾ ಅವರಿಂದ ತನಗೆ ಮೋಸ ಆಗಿದೆ ಎಂದು ಅವರು ಆರೋಪಿಸಿದ್ದರು. ಈಗ ‘ಲಾಕಪ್​’ ಶೋ ಮೂಲಕ ಹೊಸ ಜರ್ನಿ ಆರಂಭಿಸಿದ್ದಾರೆ. ಅದರಿಂದ ಅವರ ವೃತ್ತಿಜೀವನಕ್ಕೆ ಯಾವ ರೀತಿಯ ತಿರುವು ಸಿಗಬಹುದು ಎಂಬ ಕೌತುಕ ಮೂಡಿದೆ.

ಇದನ್ನೂ ಓದಿ:

ಬದಲಾಯ್ತು ಕಂಗನಾ ಮನಸ್ಸು, ಹುಸಿ ಆಯ್ತು ನಿರೀಕ್ಷೆ; ಆಲಿಯಾ ಸಿನಿಮಾಗೆ ಕಿರಿಕ್​ ಕ್ವೀನ್​ ಮೆಚ್ಚುಗೆ​

ಬಲವಂತಕ್ಕೆ ನನ್ನನ್ನು ಪ್ರೆಗ್ನೆಂಟ್​ ಮಾಡಬೇಡಿ; ಮಾದಕ ನಟಿ ಪೂನಂ ಪಾಂಡೆ ಹೀಗೆ ಹೇಳಿದ್ದು ಯಾರಿಗೆ?

ದರ್ಶನ್​ಗೆ ಜಾಮೀನು ನೀಡಿರುವುದನ್ನು ಸರ್ಕಾರ ಸ್ವಾಗತಿಸುತ್ತದೆ: ಶಿವಕುಮಾರ್
ದರ್ಶನ್​ಗೆ ಜಾಮೀನು ನೀಡಿರುವುದನ್ನು ಸರ್ಕಾರ ಸ್ವಾಗತಿಸುತ್ತದೆ: ಶಿವಕುಮಾರ್
‘ದರ್ಶನ್​​ಗೆ ಬೆನ್ನು ನೋವು ಬಂದಿದ್ದು ಇಂದು ನಿನ್ನೆಯಲ್ಲ’; ವಕೀಲರ ಸ್ಪಷ್ಟನೆ
‘ದರ್ಶನ್​​ಗೆ ಬೆನ್ನು ನೋವು ಬಂದಿದ್ದು ಇಂದು ನಿನ್ನೆಯಲ್ಲ’; ವಕೀಲರ ಸ್ಪಷ್ಟನೆ
ದುಬಾರಿ ದೀಪಾವಳಿ: ಹೂವು, ಹಣ್ಣು ತರಕಾರಿ ಬೆಲೆ ಏರಿಕೆ
ದುಬಾರಿ ದೀಪಾವಳಿ: ಹೂವು, ಹಣ್ಣು ತರಕಾರಿ ಬೆಲೆ ಏರಿಕೆ
ಯಾವ ರೈತನಿಗೂ ಸಮಸ್ಯೆಯಾಗಲ್ಲ, ಬಿಜೆಪಿ ರೈತರನ್ನು ಎತ್ತಿಕಟ್ಟುತ್ತಿದೆ: ಜಮೀರ್
ಯಾವ ರೈತನಿಗೂ ಸಮಸ್ಯೆಯಾಗಲ್ಲ, ಬಿಜೆಪಿ ರೈತರನ್ನು ಎತ್ತಿಕಟ್ಟುತ್ತಿದೆ: ಜಮೀರ್
ಜಮೀರ್ ಕೋಮುದ್ವೇಷ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ: ಪ್ರಲ್ಹಾದ್ ಜೋಶಿ
ಜಮೀರ್ ಕೋಮುದ್ವೇಷ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ: ಪ್ರಲ್ಹಾದ್ ಜೋಶಿ
ದರ್ಶನ್ ಜಾಮೀನು ಅರ್ಜಿ ತೀರ್ಪು; ಲೈವ್ ನೋಡಿ
ದರ್ಶನ್ ಜಾಮೀನು ಅರ್ಜಿ ತೀರ್ಪು; ಲೈವ್ ನೋಡಿ
ಗಣ್ಯರ ಅಗಮನದಿಂದ ಮತ್ತಷ್ಟು ಹೆಚ್ಚಲಿದೆ ನೂಕುನುಗ್ಗಲು, ಪೊಲೀಸರಿಗೆ ಸವಾಲು
ಗಣ್ಯರ ಅಗಮನದಿಂದ ಮತ್ತಷ್ಟು ಹೆಚ್ಚಲಿದೆ ನೂಕುನುಗ್ಗಲು, ಪೊಲೀಸರಿಗೆ ಸವಾಲು
ಹೇಗಿತ್ತು ನೋಡಿ ‘ಟಾಕ್ಸಿಕ್’ ಸೆಟ್​ ಹಾಕಿದ ಪ್ರದೇಶ; ಇಲ್ಲಿದೆ ವಿಡಿಯೋ
ಹೇಗಿತ್ತು ನೋಡಿ ‘ಟಾಕ್ಸಿಕ್’ ಸೆಟ್​ ಹಾಕಿದ ಪ್ರದೇಶ; ಇಲ್ಲಿದೆ ವಿಡಿಯೋ
ಕೆಎಸ್​ಆರ್​ಟಿಸಿ ಐರಾವತ ಕ್ಲಬ್ ಕ್ಲಾಸ್ 2.0: ಹೊಸ ವೋಲ್ವೋ ವಿಶೇಷಗಳೇನು?
ಕೆಎಸ್​ಆರ್​ಟಿಸಿ ಐರಾವತ ಕ್ಲಬ್ ಕ್ಲಾಸ್ 2.0: ಹೊಸ ವೋಲ್ವೋ ವಿಶೇಷಗಳೇನು?
ಪಕ್ಕಾ ಪ್ಲ್ಯಾನ್ ಮಾಡಿ ಎಲ್ಲರನ್ನೂ ಹೊಡೆದ ಹನುಮಂತ; ತಂತ್ರಕ್ಕೆ ಎಲ್ಲರೂ ಶಾಕ್
ಪಕ್ಕಾ ಪ್ಲ್ಯಾನ್ ಮಾಡಿ ಎಲ್ಲರನ್ನೂ ಹೊಡೆದ ಹನುಮಂತ; ತಂತ್ರಕ್ಕೆ ಎಲ್ಲರೂ ಶಾಕ್