79ರ ಪ್ರಾಯದ ಅಮಿತಾಭ್​ ಆರೋಗ್ಯದ ಬಗ್ಗೆ ಮೂಡಿದೆ ಆತಂಕ; ಒಂದೇ ಟ್ವೀಟ್​ನಿಂದ ಗಾಬರಿಗೊಳಿಸಿದ ಬಿಗ್​ ಬಿ

Amitabh Bachchan Health: ಅಮಿತಾಭ್​ ಬಚ್ಚನ್​ ಮಾಡಿರುವ ಈ ಒಂದು ವಾಕ್ಯದ ಟ್ವೀಟ್​ ಕೆಲವೇ ಗಂಟೆಗಳಲ್ಲಿ ವೈರಲ್​ ಆಗಿದೆ. ಕಮೆಂಟ್​ ಮಾಡಿರುವ ಅನೇಕರು ಅಮಿತಾಭ್​ ಅವರ ಆರೋಗ್ಯದ ಬಗ್ಗೆ ಆತಂಕ ಹೊರಹಾಕಿದ್ದಾರೆ.

79ರ ಪ್ರಾಯದ ಅಮಿತಾಭ್​ ಆರೋಗ್ಯದ ಬಗ್ಗೆ ಮೂಡಿದೆ ಆತಂಕ; ಒಂದೇ ಟ್ವೀಟ್​ನಿಂದ ಗಾಬರಿಗೊಳಿಸಿದ ಬಿಗ್​ ಬಿ
ಅಮಿತಾಭ್ ಬಚ್ಚನ್
Follow us
TV9 Web
| Updated By: ಮದನ್​ ಕುಮಾರ್​

Updated on: Feb 28, 2022 | 11:45 AM

ನಟ ಅಮಿತಾಭ್​ ಬಚ್ಚನ್ (Amitabh Bachchan)​ ಅವರಿಗೆ ಚಿತ್ರರಂಗದಲ್ಲಿ ಹಲವು ದಶಕಗಳ ಅನುಭವ ಇದೆ. ಇಂದಿಗೂ ಅವರು ದಣಿವರಿಯದ ವ್ಯಕ್ತಿಯಂತೆ ಬಣ್ಣದ ಲೋಕದಲ್ಲಿ ಕೆಲಸ ಮಾಡುತ್ತಲೇ ಇದ್ದಾರೆ. ಅಮಿತಾಭ್​ ಬಚ್ಚನ್​ ಅವರಿಗೆ ಈಗ 79 ವರ್ಷ ವಯಸ್ಸು. ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಅವರು ಎದುರಿಸಿ ನಿಂತಿದ್ದಾರೆ. ಈ ವಯಸ್ಸಿನಲ್ಲೂ ಅವರು ಹಗಲಿರುಳು ಕಷ್ಟಪಡುತ್ತಿದ್ದಾರೆ. ಅನಾರೋಗ್ಯದ ಕಾರಣದಿಂದಲೂ ಅವರು ಆಗಾಗ ಸುದ್ದಿಯಾಗುತ್ತಾರೆ. ಅದರ ನಡುವೆ ಅಮಿತಾಭ್​ ಬಚ್ಚನ್​ ಅವರು ಮಾಡಿದ ಒಂದೇ ಒಂದು ಟ್ವೀಟ್​ನಿಂದ (Amitabh Bachchan Tweet) ಅಭಿಮಾನಿಗಳಲ್ಲಿ ಆತಂಕ ಮೂಡುವಂತಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್​ ಆಗಿರುವ ಅವರು ತಮ್ಮ ದಿನಚರಿ ಕುರಿತ ಮಾಹಿತಿ ನೀಡುತ್ತಾ ಇರುತ್ತಾರೆ. ಭಾನುವಾರ ರಾತ್ರಿ (ಫೆ.27) ಅವರು ಮಾಡಿದ ಒಂದು ಟ್ವೀಟ್​ನಿಂದ ಎಲ್ಲರಿಗೂ ಚಿಂತೆ ಶುರುವಾಗಿದೆ. ‘ಹೃದಯ ಬಡಿಯುತ್ತಿದೆ.. ಕಾಳಜಿ ಆಗಿದೆ. ಭರವಸೆ ಇದೆ’ ಎಂದು ಅಮಿತಾಭ್​ ಬಚ್ಚನ್​ ಟ್ವೀಟ್​ ಮಾಡಿದ್ದಾರೆ. ಇದರ ಅರ್ಥ ಏನು ಎಂಬುದನ್ನು ಅವರು ಸರಿಯಾಗಿ ತಿಳಿಸಿಲ್ಲ. ಹಾಗಾಗಿ ಅಭಿಮಾನಿಗಳಿಗೆ ಆತಂಕ ಆಗಿದೆ. ಅಮಿತಾಭ್​ ಆರೋಗ್ಯ (Amitabh Bachchan Health) ಕೈ ಕೊಟ್ಟಿರಬಹುದು ಎಂದು ಫ್ಯಾನ್ಸ್​ ಭಾವಿಸಿದ್ದಾರೆ.

ಅಮಿತಾಭ್​ ಬಚ್ಚನ್​ ಮಾಡಿರುವ ಈ ಒಂದು ವಾಕ್ಯದ ಟ್ವೀಟ್​ ಕೆಲವೇ ಗಂಟೆಗಳಲ್ಲಿ ವೈರಲ್​ ಆಗಿದೆ. ಸಾವಿರಾರು ಜನರು ಇದನ್ನು ಲೈಕ್​ ಮಾಡಿದ್ದು, ನೂರಾರು ಮಂದಿ ರೀಟ್ವೀಟ್​ ಮಾಡಿದ್ದಾರೆ. ಕಮೆಂಟ್​ ಮಾಡಿರುವ ಅನೇಕರು ಅಮಿತಾಭ್​ ಅವರ ಆರೋಗ್ಯದ ಬಗ್ಗೆ ಆತಂಕ ಹೊರಹಾಕಿದ್ದಾರೆ.

‘ನೀವು ಬೇಗ ಗುಣಮುಖರಾಗಲಿ ಅಂತ ಪ್ರಾರ್ಥಿಸುತ್ತೇವೆ ಸರ್’ ಎಂದು ಅಭಿಮಾನಿಯೊಬ್ಬರು ಕಮೆಂಟ್​ ಮಾಡಿದ್ದಾರೆ. ‘ಚಿಂತೆ ಮಾಡಬೇಡಿ ಸರ್​. ನಿಮಗೆ ಏನೂ ಆಗುವುದಿಲ್ಲ. ವಿಶ್ರಾಂತಿ ಪಡೆದು ಚೆನ್ನಾಗಿ ನಿದ್ರೆ ಮಾಡಿ’ ಎಂದು ಮತ್ತೊರ್ವ ಅಭಿಮಾನಿ ಸಲಹೆ ನೀಡಿದ್ದಾರೆ. ಜನರು ಈ ರೀತಿ ಕಮೆಂಟ್​ ಮಾಡಿದ್ದರೂ ಕೂಡ ಅಮಿತಾಭ್​ ಬಚ್ಚನ್​ ಅವರು ತಮ್ಮ ಟ್ವೀಟ್​ನ ಅರ್ಥ ಏನು ಎಂಬುದನ್ನು ವಿವರಿಸಿಲ್ಲ.

ವರ್ಷಗಳು ಉರುಳಿದಂತೆ ಅಮಿತಾಭ್​ ಬಚ್ಚನ್​ ಅವರ ಚಾರ್ಮ್​ ಹೆಚ್ಚುತ್ತಲೇ ಇದೆ. ಹೊಸ ತಲೆಮಾರಿನ ಯುವ ಹೀರೋಗಳಿಗೂ ಸಹ ಪೈಪೋಟಿ ನೀಡುವ ರೀತಿಯಲ್ಲಿ ಅಮಿತಾಭ್​ ಅವರು ಇಂದಿಗೂ ಬೇಡಿಕೆ ಉಳಿಸಿಕೊಂಡಿದ್ದಾರೆ. ಬಾಲಿವುಡ್​ ನಿರ್ದೇಶಕರು ಬಿಗ್​ ಬಿ ಸಲುವಾಗಿಯೇ ಕಥೆಗಳನ್ನು ಸಿದ್ಧಪಡಿಸುತ್ತಾರೆ. ಅಮಿತಾಭ್​ ಅವರ ಕಾಲ್​ಶೀಟ್​ ಪಡೆಯಲು ಈಗಲೂ ನಿರ್ಮಾಪಕರು ಕ್ಯೂ ನಿಲ್ಲುತ್ತಾರೆ. ಚಿತ್ರರಂಗದ ಎಷ್ಟೋ ಹೀರೋಗಳಿಗೆ ಮಾದರಿಯಾಗಿ, ಪ್ರೇರಣೆಯಾಗಿ ಅಮಿತಾಭ್​ ಬಚ್ಚನ್​ ಕಾರ್ಯಮಗ್ನರಾಗಿದ್ದಾರೆ.

ಸದ್ಯ ಅಮಿತಾಭ್​ ಬಚ್ಚನ್​ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಕಳೆದ ವರ್ಷ ಬಿಡುಗಡೆ ಆದ ‘ಚೆಹ್ರೆ’ ಚಿತ್ರದಲ್ಲಿ ಅವರು ಡಿಫರೆಂಟ್​ ಪಾತ್ರ ನಿಭಾಯಿಸಿದ್ದರು. ಮಾ.4ರಂದು ಅವರ ‘ಜುಂಡ್​’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಅವರು ಫುಟ್​ಬಾಲ್​ ಕೋಚ್​ ಪಾತ್ರ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಮತ್ತು ಅಮಿತಾಭ್​ ಬಚ್ಚನ್​ ಅವರು ‘ಗುಡ್​ ಬೈ’ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಚಿತ್ರ ಕೂಡ ಹೈಪ್​ ಸೃಷ್ಟಿ ಮಾಡಿದೆ. ಇದಲ್ಲದೇ ‘ಬ್ರಹ್ಮಾಸ್ತ್ರ’, ‘ಊಂಚಾಯಿ’, ‘ರನ್​ವೇ 34’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಮಿತಾಭ್​ ಬಚ್ಚನ್​ ನಟಿಸುತ್ತಿದ್ದಾರೆ. ಇದರ ನಡುವೆ ಅವರು ಕಿರುತೆರೆ ಕಾರ್ಯಕ್ರಮಗಳ ನಿರೂಪಣೆ ಮಾಡುವ ಮೂಲಕವೂ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ.

ಇದನ್ನೂ ಓದಿ:

ಅಮಿತಾಭ್​​ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದಾರೆ ಕೃತಿ ಸನೋನ್​; ತಿಂಗಳ ಬಾಡಿಗೆ ಅಬ್ಬಬ್ಬಾ ಇಷ್ಟೊಂದಾ?

‘ಕೌನ್​ ಬನೇಗಾ ಕರೋಡ್​​ಪತಿ’ ಶೋನಲ್ಲಿ ಕನ್ನಡ ಸಿನಿಮಾ ಮಾತು; ಅಮಿತಾಭ್​ ಕಡೆಯಿಂದ ಶುಭ ಹಾರೈಕೆ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ