AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೌನ್​ ಬನೇಗಾ ಕರೋಡ್​​ಪತಿ’ ಶೋನಲ್ಲಿ ಕನ್ನಡ ಸಿನಿಮಾ ಮಾತು; ಅಮಿತಾಭ್​ ಕಡೆಯಿಂದ ಶುಭ ಹಾರೈಕೆ

‘ಫಾರ್ REGN' ಚಿತ್ರದ ನಿರ್ದೇಶಕ‌ ನವೀನ್ ದ್ವಾರಕನಾಥ್ ಅವರು ‘ಕೌನ್​ ಬನೇಗಾ ಕರೋಡ್​ಪತಿ’ ಶೋ ವೇದಿಕೆಗೆ ಹೋಗಿ ಬಂದಿದ್ದಾರೆ. ಬಿಗ್​ ಬಿ ಅಮಿತಾಭ್​ ಬಚ್ಚನ್​ ಕಡೆಯಿಂದ ಆಶೀರ್ವಾದ ಪಡೆದುಕೊಂಡು ಬಂದಿದ್ದಾರೆ.

‘ಕೌನ್​ ಬನೇಗಾ ಕರೋಡ್​​ಪತಿ’ ಶೋನಲ್ಲಿ ಕನ್ನಡ ಸಿನಿಮಾ ಮಾತು; ಅಮಿತಾಭ್​ ಕಡೆಯಿಂದ ಶುಭ ಹಾರೈಕೆ
‘ಕೌನ್​ ಬನೇಗಾ ಕರೋಡ್​​ಪತಿ’ ಶೋನಲ್ಲಿ ಕನ್ನಡ ಸಿನಿಮಾ ಮಾತು
TV9 Web
| Edited By: |

Updated on: Dec 04, 2021 | 11:57 AM

Share

‘ದಿಯಾ’ ಸಿನಿಮಾದಿಂದ ಭಾರಿ ಜನಪ್ರಿಯತೆ ಪಡೆದ ನಟ ಪೃಥ್ವಿ ಅಂಬರ್​ (Pruthvi Ambaar) ಮತ್ತು ‘ಲವ್​ ಮಾಕ್ಟೇಲ್​’ ಚಿತ್ರದಿಂದ ಗೆಲುವು ಪಡೆದ ನಟಿ ಮಿಲನಾ ನಾಗರಾಜ್​ ಅವರು ‘ಫಾರ್​ REGN’  (For REGN Kannada Movie) ಚಿತ್ರದಲ್ಲಿ ಜೋಡಿ ಆಗಿದ್ದಾರೆ. ಈ ಸಿನಿಮಾದ ಕೆಲಸಗಳು ಭರದಿಂದ ಸಾಗಿವೆ. ಹಲವು ಕಾರಣಗಳಿಗಾಗಿ ಈ ಚಿತ್ರ ಮೇಲೆ ನಿರೀಕ್ಷೆ ಮೂಡಿದೆ. ಈ ನಡುವೆ ‘ಕೌನ್​ ಬನೇಗಾ ಕರೋಡ್​ಪತಿ’ (Kaun Banega Crorepati) ಕಾರ್ಯಕ್ರಮದ ವೇದಿಕೆಯಲ್ಲೂ ‘ಫಾರ್​ REGN’ ಚಿತ್ರದ ಬಗ್ಗೆ ಮಾತುಕತೆ ನಡೆದಿದೆ. ಕಾರ್ಯಕ್ರಮದ ನಿರೂಪಕ ಅಮಿತಾಭ್​ ಬಚ್ಚನ್​ (Amitabh Bachchan) ಅವರು ಈ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಇದು ಚಿತ್ರತಂಡದ ಸಂತಸ ಹೆಚ್ಚಿಸಿದೆ. ಅಲ್ಲದೇ, ಮಿಲನಾ ನಾಗರಾಜ್​ ( Milana Nagaraj) ಹಾಗೂ ಪೃಥ್ವಿ ಅಂಬರ್​ ಅವರ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಲು ಕಾರಣ ಆಗಿದೆ. 

ಇತ್ತೀಚೆಗಷ್ಟೆ ‘ಫಾರ್ REGN’ ಸಿನಿಮಾ ತಂಡ ಹಾಡಿನ ರೆಕಾರ್ಡಿಂಗ್ ಮುಗಿಸಿತ್ತು. ಅದರ ಬೆನ್ನಲೇ ಈ ಖುಷಿಯ ಸುದ್ದಿ ಸಿಕ್ಕಿದೆ. ಚಿತ್ರದ ನಿರ್ದೇಶಕ‌ ನವೀನ್ ದ್ವಾರಕನಾಥ್ ಅವರು ಹಿಂದಿಯ ಜನಪ್ರಿಯ ಕಿರುತೆರೆ ಕಾರ್ಯಕ್ರಮವಾದ ‘ಕೌನ್​ ಬನೇಗಾ ಕರೋಡ್​ಪತಿ’ ಶೋ ವೇದಿಕೆಗೆ ಹೋಗಿ ಬಂದಿದ್ದಾರೆ. ಈ ವೇಳೆ ‘ಫಾರ್ REGN’ ಚಿತ್ರದ ಬಗ್ಗೆ ಅವರು ಮಾತನಾಡಿದ್ದಾರೆ. ಬಿಗ್​ ಬಿ ಅಮಿತಾಭ್​ ಬಚ್ಚನ್​ ಕಡೆಯಿಂದ ಆಶೀರ್ವಾದ ಪಡೆದುಕೊಂಡು ಬಂದಿರುವುದು ತಮ್ಮ ಪಾಲಿನ ಸಂತದ ಕ್ಷಣ ಎಂದು ನವೀನ್​ ದ್ವಾರಕನಾಥ್​ ಹೇಳಿದ್ದಾರೆ.

ಈ ಚಿತ್ರಕ್ಕೆ ಮೂರು ಹಂತದ ಶೂಟಿಂಗ್​ ಮುಗಿದಿದೆ. ಮಿಲನಾ ನಾಗರಾಜ್​ ಮತ್ತು ಪೃಥ್ವಿ ಅಂಬರ್​ ಜೋಡಿ ಬಗ್ಗೆ ಅಭಿಮಾನಿಗಳಿಗೆ ದೊಡ್ಡಮಟ್ಟದ ನಿರೀಕ್ಷೆ ಇದೆ. ಇಬ್ಬರ ಕಾಂಬಿನೇಷನ್​ ಹೇಗೆ ಮೂಡಿಬಂದಿದೆ ಎಂಬುದನ್ನು ತಿಳಿಯಲು ಪ್ರೇಕ್ಷಕರು ಕಾದಿದ್ದಾರೆ. ‘ದಿಯಾ’ ಯಶಸ್ಸಿನ ಬಳಿಕ ಪೃಥ್ವಿ ಅಂಬರ್​ ಹಾಗೂ ‘ಲವ್​ ಮಾಕ್ಟೇಲ್​’ ಗೆಲುವಿನ ನಂತರ ಮಿಲನಾ ನಾಗರಾಜ್​ ಒಪ್ಪಿಕೊಂಡ ಸಿನಿಮಾ ಇದಾಗಿರುವುದರಿಂದ ಹೈಪ್​ ಸೃಷ್ಟಿ ಮಾಡಿದೆ. ಖ್ಯಾತ ಖಳನಟ ರವಿಶಂಕರ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಅದೇ ರೀತಿ ಕನ್ನಡದ ಜನಪ್ರಿಯ ಪೋಷಕ ನಟ ರಮೇಶ್ ಭಟ್ ಕೂಡ ‘ಫಾರ್ REGN’ ಚಿತ್ರದಲ್ಲಿ ನಟಿಸಿರುವುದು ವಿಶೇಷ. ಸುಧಾ ಬೆಳವಾಡಿ, ಬಾಬು ಹಿರಣ್ಣಯ್ಯ, ತುಳು ನಟ ಉಮೇಶ್ ಮಿಜಾರ್, ಮುಂಬೈ ನಟಿ ಶ್ರದ್ಧಾ ಸಾಲಿಯಾನ್, ತಬಲಾ ನಾಣಿ ಮುಂತಾದವರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ:

‘ಕೌನ್​ ಬನೇಗಾ ಕರೋಡ್​ಪತಿ’ 1000ನೇ ಎಪಿಸೋಡ್​; ಮಗಳ ಎದುರು ಕಣ್ಣೀರು ಹಾಕಿದ ಅಮಿತಾಭ್​ ಬಚ್ಚನ್​

ತಾಯಿ ಆಗುತ್ತಿದ್ದಾರೆ ನಟಿ ಅಮೂಲ್ಯ; ವಿಶೇಷ ಫೋಟೋ ಮೂಲಕವೇ ಗುಡ್​ ನ್ಯೂಸ್​ ನೀಡಿದ ದಂಪತಿ