‘ಮದಗಜ’ ಫಸ್ಟ್​ ಡೇ ಕಲೆಕ್ಷನ್​ ಎಷ್ಟು ಕೋಟಿ? ಶ್ರೀಮುರಳಿ ಚಿತ್ರದ ಬಾಕ್ಸ್​ ಆಫೀಸ್​ ಲೆಕ್ಕ ಇಲ್ಲಿದೆ

Madhagaja Box Office Collection: ‘ಮದಗಜ’ ಚಿತ್ರಕ್ಕೆ ಗ್ರ್ಯಾಂಡ್​ ಓಪನಿಂಗ್​ ಸಿಕ್ಕಿದ್ದು, 900ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಶ್ರೀಮುರಳಿ ನಟನೆಯ ಈ ಚಿತ್ರಕ್ಕೆ ಮೊದಲ ದಿನವೇ ಭರ್ಜರಿ ಕಲೆಕ್ಷನ್​ ಆಗಿದೆ.

‘ಮದಗಜ’ ಫಸ್ಟ್​ ಡೇ ಕಲೆಕ್ಷನ್​ ಎಷ್ಟು ಕೋಟಿ? ಶ್ರೀಮುರಳಿ ಚಿತ್ರದ ಬಾಕ್ಸ್​ ಆಫೀಸ್​ ಲೆಕ್ಕ ಇಲ್ಲಿದೆ
‘ಮದಗಜ’ ಚಿತ್ರದಲ್ಲಿ ಶ್ರೀಮುರಳಿ

ಶ್ರೀಮುರಳಿ (Sri Murali) , ಆಶಿಕಾ ರಂಗನಾಥ್​, ಗರುಡ ರಾಮ್, ಜಗಪತಿ ಬಾಬು ಮುಖ್ಯಭೂಮಿಕೆ ನಿಭಾಯಿಸಿರುವ ‘ಮದಗಜ’ ಚಿತ್ರ (Madhagaja Movie) ಭರ್ಜರಿ ಓಪನಿಂಗ್​ ಪಡೆದುಕೊಂಡಿದೆ. ಡಿ.3ರಂದು ಈ ಸಿನಿಮಾ ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಂಡಿತು. ಬಹುತೇಕ ಕಡೆಗಳಲ್ಲಿ ಹೌಸ್​ ಫುಲ್ ಪ್ರದರ್ಶನ ಕಂಡಿದೆ. ಆ ಕಾರಣದಿಂದ ಚಿತ್ರಕ್ಕೆ ಮೊದಲ ದಿನ ಒಳ್ಳೆಯ ಕಲೆಕ್ಷನ್​ ಆಗಿದೆ. ಹಾಗಾದರೆ ಫಸ್ಟ್​ ಡೇ ‘ಮದಗಜ’ ಗಳಿಸಿದ್ದು ಎಷ್ಟು? ಆ ಪ್ರಶ್ನೆಗೆ ಚಿತ್ರತಂಡದಿಂದಲೇ ಅಧಿಕೃತ ಉತ್ತರ ಸಿಕ್ಕಿದೆ. ಮೊದಲ ದಿನ ಬರೋಬ್ಬರಿ 7.86 ಕೋಟಿ ರೂಪಾಯಿ (Madhagaja first day Collection) ಕಲೆಕ್ಷನ್​ ಆಗಿದೆ. ನಿರ್ದೇಶಕ ಮಹೇಶ್​ ಕುಮಾರ್​ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಅವರ ಮೊಗದಲ್ಲಿ ಈ ಗೆಲುವಿನಿಂದಾಗಿ ನಗು ಮೂಡಿದೆ.

‘ಮದಗಜ’ ಚಿತ್ರಕ್ಕೆ ಗ್ರ್ಯಾಂಡ್​ ಓಪನಿಂಗ್​ ಸಿಕ್ಕಿದ್ದು, 900ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಶಿವರಾಜ್​ ಕೆ.ಆರ್​.ಪೇಟೆ, ಚಿಕ್ಕಣ್ಣ, ಧರ್ಮಣ್ಣ ಮುಂತಾದ ಹಾಸ್ಯ ಕಲಾವಿದರು ಕೂಡ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ. ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಗಮನ ಸೆಳೆಯುತ್ತಿವೆ. ಈ ಎಲ್ಲ ಕಾರಣಗಳಿಗಾಗಿ ಚಿತ್ರವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಉಮಾಪತಿ ಶ್ರೀನಿವಾಸ್​ ಗೌಡ ಅವರು ಗಾಂಧಿನಗರದಲ್ಲಿ ಅದ್ದೂರಿ ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ‘ರಾಬರ್ಟ್​’ ಸಿನಿಮಾ ನಿರ್ಮಿಸಿ ಭರ್ಜರಿ ಯಶಸ್ಸು ಕಂಡ ಅವರು ಈಗ ‘ಮದಗಜ’ ಚಿತ್ರವನ್ನೂ ಶ್ರೀಮಂತವಾಗಿ ನಿರ್ಮಿಸಿದ್ದಾರೆ. ಬೃಹತ್​ ಸೆಟ್​ಗಳಲ್ಲಿ ಈ ಸಿನಿಮಾ ಚಿತ್ರೀಕರಣಗೊಂಡಿದೆ. ತಾಂತ್ರಿಕ ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಿದ್ದಾರೆ.

ಈ ಹಿಂದೆ ನಿರ್ದೇಶಕ ಮಹೇಶ್​ ಕುಮಾರ್ ಅವರು ‘ಅಯೋಗ್ಯ’ ಸಿನಿಮಾ ಮಾಡಿದ್ದರು. ಕಾಮಿಡಿ ಪ್ರಕಾರದಲ್ಲಿ ಆ ಚಿತ್ರವನ್ನು ತೆರೆಗೆ ತಂದಿದ್ದ ಅವರು ಇಂದು ‘ಮದಗಜ’ ಸಿನಿಮಾವನ್ನು ಪಕ್ಕಾ ಆ್ಯಕ್ಷನ್​ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಮೂಲಕ ತಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ:

ಮಾಸ್​ ಮದಗಜ: ವಿಶೇಷ ಸಂದರ್ಶನದಲ್ಲಿ ಶ್ರೀಮುರಳಿ, ಆಶಿಕಾ, ಗರುಡ ರಾಮ್​ ಮಸ್ತ್ ಮಾತುಕತೆ

Madhagaja Movie Review: ವಾರಾಣಸಿಯಿಂದ ಕರುನಾಡಿನವರೆಗೆ ನಿರೀಕ್ಷಿತ ಹಾದಿಯಲ್ಲಿ ‘ಮದಗಜ’ ಮಾಸ್ ಪಯಣ

Published On - 9:41 am, Sat, 4 December 21

Click on your DTH Provider to Add TV9 Kannada