‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರ ನೋಡಿ ಆಲಿಯಾ​ ಅಭಿಮಾನಿಗಳು ಏನಂದ್ರು? ಇಲ್ಲಿದೆ ಜನರ ವಿಮರ್ಶೆ

ಬೆಂಗಳೂರಿನಲ್ಲಿ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರ ನೋಡಿದ ಪ್ರೇಕ್ಷಕರು ಫಿದಾ ಆಗಿದ್ದಾರೆ. ‘ಆಲಿಯಾ ನಟನೆ ಸಖತ್​ ಇಷ್ಟ ಆಯ್ತು’ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರ ನೋಡಿ ಆಲಿಯಾ​ ಅಭಿಮಾನಿಗಳು ಏನಂದ್ರು? ಇಲ್ಲಿದೆ ಜನರ ವಿಮರ್ಶೆ
| Updated By: ಮದನ್​ ಕುಮಾರ್​

Updated on: Feb 26, 2022 | 9:56 AM

ಬಾಲಿವುಡ್​ ಬೆಡಗಿ ಆಲಿಯಾ ಭಟ್​ ನಟಿಸಿರುವ ‘ಗಂಗೂಬಾಯಿ ಕಾಠಿಯಾವಾಡಿ’ (Gangubai Kathiawadi) ಸಿನಿಮಾ ದೇಶಾದ್ಯಂತ ರಿಲೀಸ್​ ಆಗಿದೆ. ಫೆ.25ರಂದು ಬಿಡುಗಡೆ ಆಗಿರುವ ಈ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಚಿತ್ರಕ್ಕೆ ಸಂಜಯ್​ ಲೀಲಾ ಬನ್ಸಾಲಿ (Sanjay Leela Bhansali) ನಿರ್ದೇಶನ ಮಾಡಿದ್ದು, ಆಲಿಯಾ ಭಟ್​ (Alia Bhatt) ನಟನೆಗೆ ಎಲ್ಲರೂ ಮನಸೋತಿದ್ದಾರೆ. ಹುಮಾ ಖುರೇಶಿ, ಅಜಯ್​ ದೇವಗನ್​, ವಿಜಯ್​ ರಾಝ್​ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಟ್ರೇಲರ್​ ಮತ್ತು ಹಾಡುಗಳ ಮೂಲಕ ಸದ್ದು ಮಾಡಿದ್ದ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಬಗ್ಗೆ ಪಾಸಿಟಿವ್​ ವಿಮರ್ಶೆಗಳು ಸಿಗುತ್ತಿವೆ. ಬೆಂಗಳೂರಿನಲ್ಲೂ ಈ ಚಿತ್ರ ನೋಡಿದ ಪ್ರೇಕ್ಷಕರು ಫಿದಾ ಆಗಿದ್ದಾರೆ. ‘ಆಲಿಯಾ ನಟನೆ ಸಖತ್​ ಇಷ್ಟ ಆಯ್ತು. ಗಂಗೂಬಾಯಿ ಪಾತ್ರವನ್ನು ಅವರು ತುಂಬ ಚೆನ್ನಾಗಿ ಮಾಡಿದ್ದಾರೆ. ಇದನ್ನು ಸಿನಿಮಾ ಅನ್ನೋದಕ್ಕಿಂತ ಒಂದು ಪೇಂಟಿಂಗ್​ ಎನ್ನಬಹುದು. ಹಾಡುಗಳು ಚೆನ್ನಾಗಿವೆ. ಸಮಾಜಕ್ಕೆ ಇಂದು ಉತ್ತಮ ಸಂದೇಶ ನೀಡಲಾಗಿದೆ’ ಎಂಬಿತ್ಯಾದಿ ಅಭಿಪ್ರಾಯವನ್ನು ಬೆಂಗಳೂರಿನಲ್ಲಿ ಪ್ರೇಕ್ಷಕರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

ಬ್ರೇಕಪ್​ಗಳ ರಾಜ ರಣಬೀರ್​ ಜತೆ ಆಲಿಯಾ ಮದುವೆ ಆಗ್ತಿರೋದು ಯಾಕೆ? ಕೊನೆಗೂ ಬಯಲಾಯ್ತು ಸತ್ಯ

ಕಂಗನಾ ಮಾಡಿದ ಟೀಕೆಗೆ ಒಂದೇ ಮಾತಲ್ಲಿ ತಿರುಗೇಟು ನೀಡಿದ ಆಲಿಯಾ; ಶುಕ್ರವಾರವೇ ಭವಿಷ್ಯ ನಿರ್ಧಾರ

Follow us