ಹೃದಯಾಘಾತದಿಂದ ನಿಧನರಾದ ಶೇನ್ ವಾರ್ನ್ ಆತ್ಮಕ್ಕೆ ಶಾಂತಿ ಕೋರಿದ ಬಾಲಿವುಡ್ ಸೆಲೆಬ್ರಿಟಿಗಳು
‘ಶೇನ್ ವಾರ್ನ್ ಅವರ ಅಕಾಲಿಕ ಮರಣದ ಸುದ್ದಿ ತಿಳಿದು ಮಾತು ಬಾರದಂತೆ ಆಗಿದೆ. ಓಂ ಶಾಂತಿ’ ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಅದೇ ರೀತಿ ಅನೇಕರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ (Shane Warne) ಇನ್ನಿಲ್ಲ ಎಂಬುದನ್ನು ನಂಬಲು ಅವರ ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. 52ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಅವರು ಮೃತಪಟ್ಟರು (Shane Warne Death) ಎಂಬ ಸುದ್ದಿ ಬರಸಿಡಿಲಿನಂತೆ ಬಂದು ಎರಗಿದೆ. ಜನಸಾಮಾನ್ಯರು ಮಾತ್ರವಲ್ಲದೇ ಮನರಂಜನಾ ಲೋಕದ ಘಟಾನುಘಟಿಗಳು ಕೂಡ ಶೇನ್ ವಾರ್ನ್ ಅವರಿಗೆ ಅಭಿಮಾನಿಗಳಾಗಿದ್ದರು. ಅವರ ಸ್ಪಿನ್ ಜಾದೂ ಕಂಡು ಮನಸೋಲದವರೇ ಇಲ್ಲ. ಬಾಲಿವುಡ್ ಲೋಕದ ಅನೇಕ ತಾರೆಯರಿಗೆ ಶೇನ್ ವಾರ್ನ್ ಎಂದರೆ ಅಚ್ಚುಮೆಚ್ಚು. ಹಾಗಾಗಿ ಅವರ ನಿಧನದಿಂದ ಹಿಂದಿ ಚಿತ್ರರಂಗದ ಅನೇಕರಿಗೆ ನೋವಾಗಿದೆ. ಅಕ್ಷಯ್ ಕುಮಾರ್, ಶಿಲ್ಪಾ ಶೆಟ್ಟಿ, ವರುಣ್ ಧವನ್, ರಣವೀರ್ ಸಿಂಗ್, ಶಿಬಾನಿ ದಂಡೇಕರ್, ಹುಮಾ ಖುರೇಶಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಶ್ರೇಷ್ಠ ಸ್ಪಿನ್ನರ್ ನಿಧನಕ್ಕೆ ಕಂಬನಿ ಮಿಡಿದ್ದಾರೆ. ಶೇನ್ ವಾರ್ನ್ ಅವರ ಆಟದ ವೈಭವವನ್ನು ಬಾಲಿವುಡ್ ತಾರೆಯರು ಸ್ಮರಿಸಿದ್ದಾರೆ. ಅವರನ್ನು ಭೇಟಿಯಾದ ಕ್ಷಣವನ್ನು ಮೆಲುಕು ಹಾಕಿದ್ದಾರೆ. ‘ಶೇನ್ ವಾರ್ನ್ ಅವರ ಅಕಾಲಿಕ ಮರಣದ ಸುದ್ದಿ ತಿಳಿದು ಮಾತು ಬಾರದಂತೆ ಆಗಿದೆ. ಓಂ ಶಾಂತಿ’ ಎಂದು ಅಕ್ಷಯ್ ಕುಮಾರ್ (Akshay Kumar) ಟ್ವೀಟ್ ಮಾಡಿದ್ದಾರೆ. ‘ಲೆಜೆಂಡ್ಗಳು ಸದಾ ಜೀವಂತವಾಗಿರುತ್ತಾರೆ’ ಎಂದು ಹೇಳಿರುವ ಶಿಲ್ಪಾ ಶೆಟ್ಟಿ ಅವರು ಶೇನ್ ವಾರ್ನ್ ಜೊತೆಗಿನ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
‘ಇದು ತುಂಬ ದುಃಖ ಮತ್ತು ಆಘಾತಕಾರಿಯಾಗಿದೆ’ ಎಂದು ಮಲೈಕಾ ಅರೋರಾ ಹೇಳಿದ್ದಾರೆ. ದೇಶ, ಭಾಷೆಗಳ ಗಡಿಯನ್ನು ಮೀರಿ ಶೇನ್ ವಾರ್ನ್ ಅವರು ಅಭಿಮಾನಿಗಳನ್ನು ಸಂಪಾದಿಸಿದ್ದರು. ಹಾಗಾಗಿ ವಿಶ್ವಾದ್ಯಂತ ಇರುವ ಅವರ ಅಭಿಮಾನಿಗಳು ಇಂದು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಐಪಿಎಲ್ ಮೂಲಕ ಭಾರತದ ಕ್ರಿಕೆಟ್ ಪ್ರಿಯರಿಗೆ ಶೇನ್ ವಾರ್ನ್ ಇನ್ನಷ್ಟು ಹತ್ತಿರ ಆಗಿದ್ದರು.
Speechless to know about #ShaneWarne’s untimely passing. You could not have loved the game of cricket without being in complete awe of the man. This is so heartbreaking. Om Shanti ??
— Akshay Kumar (@akshaykumar) March 4, 2022
View this post on Instagram
ಭಾರತದಲ್ಲೇ ಸಿದ್ಧವಾಗಬೇಕಿತ್ತು ಶೇನ್ ವಾರ್ನ್ ಬಯೋಪಿಕ್:
ಅದು 2015ರ ಸಮಯ. ಶೇನ್ ವಾರ್ನ್ ಅವರು ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಗುಸುಗುಸು ಹರಿದಾಡಿತ್ತು. ನಂತರ ಆ ಸುದ್ದಿಯನ್ನು ಅವರು ಖಚಿತಪಡಿಸಿದ್ದರು. ‘ಒಂದು ಆಫರ್ ಬಂದಿದೆ. ಯಾರೋ ನನಗಾಗಿ ಏನೋ ಪ್ಲ್ಯಾನ್ ಮಾಡಿಕೊಂಡಿದ್ದಾರೆ’ ಎಂದು ಶೇನ್ ವಾರ್ನ್ ಹೇಳಿದ್ದರು. ಆದರೆ ಆ ಸಿನಿಮಾದ ಪ್ಲ್ಯಾನ್ ಮುಂದೇನಾಯಿತು ಎಂದು ತಿಳಿಯಲಿಲ್ಲ. ಅವರು ಸಿನಿಮಾದಲ್ಲಿ ನಟಿಸಿದ ಬಗ್ಗೆ ಯಾವುದೇ ಮಾಹಿತಿ ಕೂಡ ಹೊರಬೀಳಲಿಲ್ಲ.
ಕೆಲವು ಸಮಯದ ಬಳಿಕ ಶೇನ್ ವಾರ್ನ್ ಅವರ ಬಯೋಪಿಕ್ ಬಗ್ಗೆ ಪ್ರಸ್ತಾಪ ಆಯಿತು. ಅವರು ಆಸ್ಟ್ರೇಲಿಯಾದ ಕ್ರಿಕೆಟರ್ ಆಗಿದ್ದರೂ ಕೂಡ ಭಾರತದಲ್ಲಿ ಅವರ ಬಯೋಪಿಕ್ ಮಾಡಲು ತಯಾರಿ ನಡೆದಿತ್ತು! ಆದರೆ ಕೊವಿಡ್ ಕಾರಣದಿಂದ ಆ ಸಿನಿಮಾದ ಕೆಲಸಗಳಿಗೆ ಬ್ರೇಕ್ ಬಿತ್ತು. ನಂತರ ಮಾತನಾಡಿದ್ದ ಶೇನ್ ವಾರ್ನ್ ಅವರು, ‘ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷ ಆರಂಭದಲ್ಲಿ ನಾವು ಆ ಪ್ರಾಜೆಕ್ಟ್ ಮತ್ತೆ ಕೈಗೆತ್ತಿಕೊಳ್ಳುತ್ತೇವೆ. ಏನಾಗುತ್ತಿದೆ ಅಂತ ನೋಡೋಣ’ ಎಂದು ಹೇಳಿದ್ದರು. ತಮ್ಮ ಪಾತ್ರದಲ್ಲಿ ಹಾಲಿವುಡ್ ಹೀರೋಗಳಾದ ಬ್ರಾಡ್ ಪಿಟ್ ಅಥವಾ ಲಿಯೊನಾರ್ಡೊ ಡಿಕಾಪ್ರಿಯೊ ನಟಿಸಬೇಕು ಎಂದು ಅವರು ಹಂಬಲ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:
Shane Warne Passes Away: ಹೃದಯಾಘಾತದಿಂದ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟರ್ ಶೇನ್ ವಾರ್ನ್ ನಿಧನ
Shane Warne Demise: ಶೇನ್ ವಾರ್ನ್ ನಿಧನಕ್ಕೆ ಭಾವನಾತ್ಮಕ ಟ್ವೀಟ್ ಮೂಲಕ ಸಂತಾಪ ಸೂಚಿಸಿದ ಸಚಿನ್ ತೆಂಡೂಲ್ಕರ್