ಪ್ಯಾನ್​ ಇಂಡಿಯಾ ಸ್ಟಾರ್​ ಆದ್ರೂ ಪ್ರಭಾಸ್​ಗೆ ಇದೆ ಭಾಷೆ ಸಮಸ್ಯೆ; ಹೌದೆಂದು ಒಪ್ಪಿಕೊಂಡ ನಟ

‘ಸಾಹೋ’ ಬಿಡುಗಡೆ ಸಂದರ್ಭದಲ್ಲಿ ಪ್ರಭಾಸ್​ ಅವರ ಹಿಂದಿ ಉಚ್ಛಾರಣೆಯನ್ನು ಕೇಳಿ ಅನೇಕರು ಟ್ರೋಲ್​ ಮಾಡಿದ್ದರು. ಹಾಗಂತ ಪ್ರಭಾಸ್​ ಅವರು ತಮ್ಮ ಪ್ರಯತ್ನದಿಂದ ಹಿಂದೆ ಸರಿದಿಲ್ಲ.

ಪ್ಯಾನ್​ ಇಂಡಿಯಾ ಸ್ಟಾರ್​ ಆದ್ರೂ ಪ್ರಭಾಸ್​ಗೆ ಇದೆ ಭಾಷೆ ಸಮಸ್ಯೆ; ಹೌದೆಂದು ಒಪ್ಪಿಕೊಂಡ ನಟ
ಪ್ರಭಾಸ್
Follow us
TV9 Web
| Updated By: ಮದನ್​ ಕುಮಾರ್​

Updated on: Mar 05, 2022 | 11:56 AM

ನಟ ಪ್ರಭಾಸ್​ (Prabhas) ಅವರಿಗೆ ಇರುವ ಜನಪ್ರಿಯತೆ ಸಣ್ಣದೇನಲ್ಲ. ಅವರನ್ನು ಇಷ್ಟಪಡುವ ಅಭಿಮಾನಿಗಳು ದೇಶಾದ್ಯಂತ ಇದ್ದಾರೆ. ‘ಬಾಹುಬಲಿ’ ಸಿನಿಮಾದ ಯಶಸ್ಸಿನ ಬಳಿಕ ಪ್ರಭಾಸ್​ ಇಮೇಜ್​ ಬದಲಾಯಿತು. ಅವರ ಪ್ಯಾನ್​ ಇಂಡಿಯಾ ಹೀರೋ (Pan India Hero) ಆಗಿ ಗುರುತಿಸಿಕೊಂಡಿದ್ದಾರೆ. ಉತ್ತರ ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಪ್ರಭಾಸ್​ ಹೊಂದಿದ್ದಾರೆ. ಆದರೂ ಕೂಡ ಅವರು ಟ್ರೋಲ್​ ಆಗುವುದು ತಪ್ಪಲಿಲ್ಲ. ಅದಕ್ಕೆ ಕಾರಣ ಹಲವು. ಪ್ರಭಾಸ್​ ಅವರು ಫಿಟ್ನೆಸ್​ ಕಳೆದುಕೊಂಡಿದ್ದಾರೆ ಎಂಬ ವಿಷಯ ಇಟ್ಟುಕೊಂಡು ಕೆಲವೇ ತಿಂಗಳ ಹಿಂದೆ ಅವರನ್ನು ಟ್ರೋಲ್​ ಮಾಡಲಾಗಿತ್ತು. ಅದಕ್ಕೂ ಮುನ್ನ ‘ಸಾಹೋ’ ಸಿನಿಮಾದ ಸಂದರ್ಭದಲ್ಲಿ ಪ್ರಭಾಸ್​ ಅವರ ಹಿಂದಿ ಉಚ್ಛಾರಣೆ ಬಗ್ಗೆ ತಕರಾರು ತೆಗೆಯಲಾಗಿತ್ತು. ಪ್ರಭಾಸ್​ ಅವರು ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದರೂ ಕೂಡ ಭಾಷೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಸರಿಯಾಗಿ ಹಿಂದಿ ಉಚ್ಛಾರಣೆ ಬರುವುದಿಲ್ಲ ಎಂಬ ಕಾರಣಕ್ಕೆ ಅವರನ್ನು ಈಗಲೂ ಕೆಲವರು ಟ್ರೋಲ್​ ಮಾಡುತ್ತಿದ್ದಾರೆ. ಸದ್ಯ ಪ್ರಭಾಸ್​ ‘ರಾಧೆ ಶ್ಯಾಮ್​’ ಸಿನಿಮಾದ (Radhe Shyam Movie) ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈ ವೇಳೆ ಅವರಿಗೆ ಮತ್ತೆ ಡಬ್ಬಿಂಗ್​ ಬಗ್ಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಅವರು ನೇರವಾಗಿ ಉತ್ತರ ನೀಡಿದ್ದಾರೆ.

ಪ್ರೇಕ್ಷಕರಿಗೆ ಸ್ಟಾರ್​ ನಟರ ಧ್ವನಿ ಚೆನ್ನಾಗಿ ಪರಿಚಯ ಆಗಿರುತ್ತದೆ. ಅವರ ಸಿನಿಮಾಗಳು ಬೇರೆ ಭಾಷೆಗೆ ಡಬ್​ ಆದಾಗ ಬೇರೆ ಕಲಾವಿದರಿಂದ ಧ್ವನಿ ಕೊಡಿಸಿದರೆ ಸರಿಯಾಗಿ ಹೊಂದಿಕೆ ಆಗುವುದಿಲ್ಲ. ಹಾಗಾಗಿ ಆಯಾ ನಟರೇ ಡಬ್​ ಮಾಡಲು ಪ್ರಯತ್ನಿಸುತ್ತಾರೆ. ಪರಭಾಷೆಯ ಮೇಲೆ ಸ್ಟಾರ್​ ನಟರಿಗೆ ಹಿಡಿತ ಇಲ್ಲ ಎಂದಾದರೆ ಅವರು ಡಬ್​ ಮಾಡಿದ್ದು ಕೃತಕವಾಗಿ ಕೇಳಿಸುತ್ತದೆ. ಸದ್ಯ ಪ್ರಭಾಸ್​ ಅವರಿಗೂ ಈ ಸಮಸ್ಯೆ ಎದುರಾಗಿದೆ.

‘ಸಾಹೋ’ ಸಂದರ್ಭದಲ್ಲಿ ಅವರ ಹಿಂದಿ ಉಚ್ಛಾರಣೆಯನ್ನು ಕೇಳಿ ಅನೇಕರು ಟ್ರೋಲ್​ ಮಾಡಿದ್ದರು. ಹಾಗಂತ ಪ್ರಭಾಸ್​ ಅವರು ತಮ್ಮ ಪ್ರಯತ್ನದಿಂದ ಹಿಂದೆ ಸರಿದಿಲ್ಲ. ಈಗ ‘ರಾಧೆ ಶ್ಯಾಮ್​’ ಚಿತ್ರಕ್ಕೂ ಸ್ವತಃ ಅವರೇ ಹಿಂದಿಯಲ್ಲಿ ಡಬ್​ ಮಾಡಿದ್ದಾರೆ. ಆದರೆ ತಮ್ಮ ಹಿಂದಿ ಉಚ್ಛಾರಣೆಯಲ್ಲಿ ಸಮಸ್ಯೆ ಇದೆ ಎಂಬುದನ್ನು ಅವರ ಒಪ್ಪಿಕೊಂಡಿದ್ದಾರೆ. ‘ನನ್ನ ಹಿಂದಿ ಉಚ್ಛಾರಣೆಯಲ್ಲಿ ಇರುವ ಏಕೈಕ ಸಮಸ್ಯೆ ಎಂದರೆ ಹೈದರಾಬಾದ್​ ಟಚ್​ ಇರುವುದು. ರಾಧೆ ಶ್ಯಾಮ್​ ಮತ್ತು ಆದಿಪುರುಷ್​ ಸಿನಿಮಾಗಳಲ್ಲಿ ನನ್ನ ಉಚ್ಛಾರಣೆ ಸ್ವಲ್ಪ ಸುಧಾರಿಸಿದೆ ಅಂತ ಭಾವಿಸಿದ್ದೇನೆ. ಮುಂದಿನ ದಿನಗಳಲ್ಲಿ ಪರ್ಫೆಕ್ಟ್​​ ಆಗುತ್ತೇನೆ’ ಎಂದು ಪ್ರಭಾಸ್​ ಹೇಳಿದ್ದಾರೆ.

ಇದನ್ನೂ ಓದಿ:

ಕಿಸ್​ ಮತ್ತು ಶರ್ಟ್​ ಲೆಸ್​ ದೃಶ್ಯದಲ್ಲಿ ಪ್ರಭಾಸ್​ಗೆ ಕಿರಿಕಿರಿ; ಈ ವಿಚಾರದಲ್ಲಿ ಅವರದ್ದು ಒಂದೇ ಒಂದು ಕಂಡೀಷನ್​

ರಾಜಮೌಳಿ ಜತೆ ಪ್ರಭಾಸ್​ ಮತ್ತೊಂದು ಸಿನಿಮಾ; ಗುಡ್​ ನ್ಯೂಸ್​ ತಿಳಿಸಿದ ‘ರಾಧೆ ಶ್ಯಾಮ್​’ ಹೀರೋ