ಕಿಸ್​ ಮತ್ತು ಶರ್ಟ್​ ಲೆಸ್​ ದೃಶ್ಯದಲ್ಲಿ ಪ್ರಭಾಸ್​ಗೆ ಕಿರಿಕಿರಿ; ಈ ವಿಚಾರದಲ್ಲಿ ಅವರದ್ದು ಒಂದೇ ಒಂದು ಕಂಡೀಷನ್​

ಕಿಸ್​ ಮತ್ತು ಶರ್ಟ್​ ಲೆಸ್​ ದೃಶ್ಯದಲ್ಲಿ ಪ್ರಭಾಸ್​ಗೆ ಕಿರಿಕಿರಿ; ಈ ವಿಚಾರದಲ್ಲಿ ಅವರದ್ದು ಒಂದೇ ಒಂದು ಕಂಡೀಷನ್​
ಪ್ರಭಾಸ್, ಪೂಜಾ ಹೆಗ್ಡೆ

‘ಲವ್​ಸ್ಟೋರಿ ಸಿನಿಮಾಗಳಲ್ಲಿ ಕಿಸ್ಸಿಂಗ್​ ದೃಶ್ಯಗಳು ಅನಿವಾರ್ಯ. ಈಗಲೂ ಕೂಡ ನನಗೆ ಕಿಸ್ಸಿಂಗ್​ ಮತ್ತು ಶರ್ಟ್​ ಲೆಸ್​ ದೃಶ್ಯಗಳಲ್ಲಿ ನಟಿಸುವಾಗ ಕಿರಿಕಿರಿ ಆಗುತ್ತದೆ’ ಎಂದು ಪ್ರಭಾಸ್​ ಹೇಳಿದ್ದಾರೆ.

TV9kannada Web Team

| Edited By: Madan Kumar

Mar 04, 2022 | 9:05 AM

ನಟ ಪ್ರಭಾಸ್​ ಅವರು ಈಗ ‘ರಾಧೆ ಶ್ಯಾಮ್​’ (Radhe Shyam Movie) ಸಿನಿಮಾದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಮಾರ್ಚ್​ 11ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಪ್ರಭಾಸ್​ಗೆ ಜೋಡಿಯಾಗಿ ಪೂಜಾ ಹೆಗ್ಡೆ (Pooja Hegde) ನಟಿಸಿದ್ದಾರೆ. ಈ ಹಿಂದಿನ ಸಿನಿಮಾಗಳಲ್ಲಿ ಆ್ಯಕ್ಷನ್​ ಹೀರೋ ಆಗಿ ಮಿಂಚಿದ್ದ ಪ್ರಭಾಸ್​ ಅವರಿಗೆ ‘ರಾಧೆ ಶ್ಯಾಮ್​’ ಚಿತ್ರದಲ್ಲಿ ಲವರ್​ ಬಾಯ್​ ಇಮೇಜ್​ ಇದೆ. ಅದೇನೇ ಇರಲಿ, ಅವರಿಗೆ ಕಿಸ್ಸಿಂಗ್​ ದೃಶ್ಯಗಳೆಂದರೆ ಅಲರ್ಜಿ. ಶರ್ಟ್​ ಲೆಸ್​ ಆಗಿ ನಟಿಸುವ ಸಂದರ್ಭ ಬಂದರೂ ಕೂಡ ಅವರು ಕಿರಿಕಿರಿ ಪಟ್ಟುಕೊಳ್ಳುತ್ತಾರೆ. ಈ ವಿಚಾರವನ್ನು ಸ್ವತಃ ಪ್ರಭಾಸ್ (Prabhas)​ ಹೇಳಿಕೊಂಡಿದ್ದಾರೆ. ಕಿಸ್​ ಮಾಡುವ ಮತ್ತು ಶರ್ಟ್​ ಲೆಸ್​ ಆಗಿ ನಟಿಸುವ ಸಂದರ್ಭ ಬಂದರೆ ಅವರು ಒಂದು ಕಂಡೀಷನ್​ ಹಾಕುತ್ತಾರೆ. ಏನದು? ಆ ದೃಶ್ಯಗಳ ಚಿತ್ರೀಕರಣದ ವೇಳೆ ಶೂಟಿಂಗ್​ ಸೆಟ್​ನಲ್ಲಿ ಕಡಿಮೆ ಜನರು ಇರಬೇಕು! ಇದೇ ಪ್ರಭಾಸ್​ ಹಾಕುವ ಷರತ್ತು.

‘ನಿರ್ದೇಶಕರು ಆ ರೀತಿಯ ಸ್ಟೋರಿ ಬರೆದಾಗ, ಅದರಲ್ಲಿ ಕಿಸ್ಸಿಂಗ್​ ದೃಶ್ಯದ ಅಗತ್ಯ ಇದ್ದರೆ ನಾವು ಅದನ್ನು ತೆಗೆದು ಹಾಕೋಕೆ ಆಗಲ್ಲ. ಕಮರ್ಷಿಯಲ್​ ಸಿನಿಮಾಗಳಲ್ಲಿ ಅದನ್ನು ಅವಾಯ್ಡ್​ ಮಾಡಬಹುದು. ಆದರೆ ಲವ್​ಸ್ಟೋರಿ ಸಿನಿಮಾಗಳಲ್ಲಿ ಅದು ಅನಿವಾರ್ಯ. ಈಗಲೂ ಕೂಡ ನನಗೆ ಕಿಸ್ಸಿಂಗ್​ ಮತ್ತು ಶರ್ಟ್​ ಲೆಸ್​ ದೃಶ್ಯಗಳಲ್ಲಿ ನಟಿಸುವಾಗ ಕಿರಿಕಿರಿ ಆಗುತ್ತದೆ. ಆಗ ಸೆಟ್​ನಲ್ಲಿ ಕಡಿಮೆ ಜನರು ಇರುವಂತೆ ನೋಡಿಕೊಳ್ಳುತ್ತೇನೆ ಅಥವಾ ಬೇರೆ ಯಾವುದಾದರೂ ಸ್ಥಳದಲ್ಲಿ ಅದನ್ನು ಚಿತ್ರೀಕರಿಸೋಣ ಎನ್ನುತ್ತೇನೆ. ‘ಛತ್ರಪತಿ’ ಸಿನಿಮಾ ಸಂದರ್ಭದಲ್ಲಿ ರಾಜಮೌಳಿ ಅವರು ನನ್ನ ಶರ್ಟ್​ ತೆಗೆಸಿದ್ದರು. ಈಗ ನೀನು ಏನು ಬೇಕಾದರೂ ಮಾಡಬಲ್ಲೆ ಅಂತ ಅವರು ಹೇಳಿದ್ದರು’ ಎಂದಿದ್ದಾರೆ ಪ್ರಭಾಸ್​.

ಈಗಾಗಲೇ ‘ರಾಧೆ ಶ್ಯಾಮ್​’ ಸಿನಿಮಾ ಟ್ರೇಲರ್​ ಮೂಲಕ ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾ ಮಾರ್ಚ್​ 11ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ತೆರೆಗೆ ಬರೋಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ರಿಲೀಸ್ ಆದ ಟ್ರೇಲರ್​ನಲ್ಲಿ ವಿಲನ್ ಪಾತ್ರದ ಬಗ್ಗೆ ಯಾವುದೇ ಹಿಂಟ್​ ನೀಡಿಲ್ಲ. ಸಿನಿಮಾದ ಕಥೆ ನೋಡಿದರೆ, ಈ ಚಿತ್ರದಲ್ಲಿ ವಿಲನ್​ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಯಾವುದೇ ವೈರತ್ವ ಇಲ್ಲದೆ, ‘ರಾಧೆ ಶ್ಯಾಮ್​’ ಸಾಗಲಿದೆ ಎನ್ನಲಾಗುತ್ತಿದೆ.

ರಾಜಮೌಳಿ ಜೊತೆ ಪ್ರಭಾಸ್​ ಮತ್ತೆ ಸಿನಿಮಾ:

ಪ್ರಭಾಸ್​ ಮತ್ತು ಪೂಜಾ ಹೆಗ್ಡೆ ಅವರು ‘ರಾಧೆ ಶ್ಯಾಮ್​’ ಚಿತ್ರದ ಪ್ರಚಾರಕ್ಕಾಗಿ ಊರೂರು ಸುತ್ತುತ್ತಿದ್ದಾರೆ. ದೇಶದ ಪ್ರಮುಖ ನಗರಗಳಲ್ಲಿ ಸಿನಿಮಾದ ಪ್ರಚಾರಕಾರ್ಯ ಮಾಡಲಾಗುತ್ತಿದೆ. ಮುಂಬೈನ ಅಂಧೇರಿಯಲ್ಲಿ ಈ ಸಿನಿಮಾದ ಟ್ರೇಲರ್​ ಲಾಂಚ್​ ಮಾಡಲಾಯಿತು. ಈ ವೇಳೆ ಪ್ರಭಾಸ್​ ಮತ್ತು ರಾಜಮೌಳಿ ಅವರ ಕಾಂಬಿನೇಷನ್​ನ ನಾಲ್ಕನೇ ಸಿನಿಮಾದ ಸಾಧ್ಯತೆ ಬಗ್ಗೆ ಪ್ರಶ್ನೆ ಎದುರಾಯಿತು. ಅದಕ್ಕೆ ಪ್ರಭಾಸ್​ ಉತ್ತರ ನೀಡಿದ್ದಾರೆ. ‘ರಾಜಮೌಳಿ ಮತ್ತು ನಾನು ಜೊತೆಯಾಗಿ ಮತ್ತೊಂದು ಸಿನಿಮಾ ಮಾಡಬೇಕು ಎಂಬ ಬಗ್ಗೆ ಈ ಹಿಂದೆ ಪ್ಲ್ಯಾನ್​ ಮಾಡಿದ್ದು ನಿಜ. ಆದರೆ ರಾಧೆ ಶ್ಯಾಮ್​ ಸಿನಿಮಾದ ಬಿಡುಗಡೆ ವಿಳಂಬ ಆಗಿದ್ದರಿಂದ ಆ ಯೋಜನೆಯನ್ನು ಸ್ವಲ್ಪ ಬದಿಗೆ ಇರಿಸಿದ್ದೇವೆ. ಆ ಬಗ್ಗೆ ಶೀಘ್ರದಲ್ಲೇ ಮಾಹಿತಿ ಬಿಟ್ಟುಕೊಡುತ್ತೇವೆ’ ಅಂತ ಪ್ರಭಾಸ್​ ಹೇಳಿದ್ದಾರೆ.

ಇದನ್ನೂ ಓದಿ:

‘ನಟ ಸಾರ್ವಭೌಮ’ ಸಿನಿಮಾ ನಟಿಯ ಲಿಪ್​ ಕಿಸ್​ ಪುರಾಣ; ಸಖತ್ ಟ್ರೋಲ್​ ಆಗುತ್ತಿರುವ ಅನುಪಮಾ

ರವಿ ತೇಜ ಜೊತೆಗಿನ ಕಿಸ್ಸಿಂಗ್​ ದೃಶ್ಯ ವೈರಲ್​; ಮೊದಲ ಬಾರಿಗೆ ಮೌನ ಮುರಿದ ನಟಿ ಮೀನಾಕ್ಷಿ

Follow us on

Related Stories

Most Read Stories

Click on your DTH Provider to Add TV9 Kannada