Kannada News » Photo gallery » Kushboo Sundar called to her husband Sundar Dhivyadharshini warns her
ಪದೇಪದೇ ಕರೆ ಮಾಡಿ ಪತಿ ಸುಂದರ್ಗೆ ತೊಂದರೆ ಕೊಡಬೇಡಿ; ಖುಷ್ಬೂಗೆ ಯುವನಟಿಯ ಎಚ್ಚರಿಕೆ
ಖುಷ್ಬೂ ಹಾಗೂ ಸುಂದರ್ ಒಟ್ಟಾಗಿ ‘ಅವ್ನಿ ಸಿನಿಮ್ಯಾಕ್ಸ್’ ನಿರ್ಮಾಣ ಸಂಸ್ಥೆ ಆರಂಭಿಸಿದ್ದು, ಇದರ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈಗ ಸುಂದರ್ ಅವರು ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಇದರ ಶೂಟಿಂಗ್ಗೆ ಊಟಿಗೆ ತೆರಳಿದ್ದಾರೆ.
ನೂರಾರು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ಕಲಾವಿದೆ ಖುಷ್ಬೂ ಹಾಗೂ ಅವರ ಪತಿ ಸುಂದರ್ ಸಿ. ಸಂತೋಷದಿಂದ ದಾಂಪತ್ಯ ನಡೆಸುತ್ತಿದ್ದಾರೆ. ಇವರು ವಿವಾಹವಾಗಿ 22 ವರ್ಷ ಕಳೆದಿದೆ. ಈ ದಂಪತಿಗೆ ಅವಂತಿಕಾ ಮತ್ತು ಆನಂದಿತಾ ಹೆಸರಿನ ಮಕ್ಕಳಿದ್ದಾರೆ. ಈಗ ಖುಷ್ಬೂಗೆ ನಟಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ! ಹಾಗಂತ ಇದು ಗಂಭೀರ ಎಚ್ಚರಿಕೆ ಅಲ್ಲ.
1 / 5
ಖುಷ್ಬೂ ಹಾಗೂ ಸುಂದರ್ ಒಟ್ಟಾಗಿ ‘ಅವ್ನಿ ಸಿನಿಮ್ಯಾಕ್ಸ್’ ನಿರ್ಮಾಣ ಸಂಸ್ಥೆ ಆರಂಭಿಸಿದ್ದು, ಇದರ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈಗ ಸುಂದರ್ ಅವರು ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಇದರ ಶೂಟಿಂಗ್ಗೆ ಊಟಿಗೆ ತೆರಳಿದ್ದಾರೆ. ಅಲ್ಲಿಯೇ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಆದರೆ, ಖುಷ್ಬೂ ಅಲ್ಲಿಗೆ ಹೋಗಿಲ್ಲ. ಹಾಗಂತ, ಪತಿಯ ಯೋಗಕ್ಷೇಮ ವಿಚಾರಿಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿಲ್ಲ.
2 / 5
ಈ ದಂಪತಿ ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾದಲ್ಲಿ ಜೀವಾ, ಜೈ, ಶ್ರೀಕಾಂತ್, ಐಶ್ವರ್ಯಾ ದತ್ತ, ಅಮೃತಾ ಅಯ್ಯರ್, ಸಂಯುಕ್ತ ಕಾರ್ತಿಕ್ ಹಾಗೂ ದಿವ್ಯ ದರ್ಶಿನಿ ನಟಿಸುತ್ತಿದ್ದಾರೆ. ಶೂಟಿಂಗ್ ಸಂದರ್ಭದಲ್ಲಿ ಸುಂದರ್ಗೆ ಖುಷ್ಬೂ ಪದೇಪದೇ ಕರೆ ಮಾಡುತ್ತಾರೆ. ಇದಕ್ಕೆ ದಿವ್ಯದರ್ಶಿನಿ ಹಾಸ್ಯಮಯವಾಗಿ ಎಚ್ಚರಿಕೆ ನೀಡಿದ್ದಾರೆ.
3 / 5
ಖುಷ್ಬೂ ವಿಡಿಯೋ ಕರೆ ಮಾಡಿದ್ದರು. ಈ ವೇಳೆ ಮೊಬೈಲ್ ಕಸಿದುಕೊಂಡ ದಿವ್ಯದರ್ಶಿನಿ ‘ಸುಂದರ್ಗೆ ತೊಂದರೆ ಕೊಡಬೇಡಿ. ಅವರು ಕೆಲಸದಲ್ಲಿ ಬ್ಯುಸಿ ಇರುತ್ತಾರೆ’ ಎಂದು ಹೇಳಿ ನಕ್ಕಿದ್ದಾರೆ. ಇದಕ್ಕೆ ಖುಷ್ಬೂ ಕೂಡ ಉತ್ತರಿಸಿದ್ದು, ‘ಅವರಿಗೆ ತೊಂದರೆ ಕೊಡುವ ಹಕ್ಕು ತಮಗೆ ಮಾತ್ರ ಇದೆ’ ಎಂದು ನಕ್ಕಿದ್ದಾರೆ.
4 / 5
ಇತ್ತೀಚೆಗೆ ಖುಷ್ಬೂ ಫಿಟ್ನೆಸ್ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಇದನ್ನು ಚಾಲೆಂಜ್ ಆಗಿ ತೆಗೆದುಕೊಂಡಿದ್ದಾರೆ ಅವರು. ಪರಿಣಾಮವಾಗಿ ಸಿಕ್ಕಾಪಟ್ಟೆ ಸ್ಲಿಮ್ ಆಗಿದ್ದಾರೆ. ಇತ್ತೀಚೆಗೆ ಅವರು ಸಾಕಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಫೋಟೋಗಳನ್ನು ನೋಡಿದರೆ ಒಮ್ಮೆಲೇ ಅವರ ಗುರುತು ಸಿಗುವುದು ಕೂಡ ಕಷ್ಟವಾಗುತ್ತಿದೆ.