ರವಿ ತೇಜ ಜೊತೆಗಿನ ಕಿಸ್ಸಿಂಗ್​ ದೃಶ್ಯ ವೈರಲ್​; ಮೊದಲ ಬಾರಿಗೆ ಮೌನ ಮುರಿದ ನಟಿ ಮೀನಾಕ್ಷಿ

ಕೆಲವು ನಟಿಯರು ಇಂಥ ದೃಶ್ಯದಲ್ಲಿ ನಟಿಸಲು ಹಿಂದೇಟು ಹಾಕುತ್ತಾರೆ. ಆದರೆ ಮೀನಾಕ್ಷಿ ಚೌಧರಿ ಅವರು ಲಿಪ್​ ಲಾಕ್​ ಕುರಿತು ಯಾವುದೇ ನಿರ್ಬಂಧಗಳನ್ನು ಹಾಕಿಕೊಂಡಿಲ್ಲ.

ರವಿ ತೇಜ ಜೊತೆಗಿನ ಕಿಸ್ಸಿಂಗ್​ ದೃಶ್ಯ ವೈರಲ್​; ಮೊದಲ ಬಾರಿಗೆ ಮೌನ ಮುರಿದ ನಟಿ ಮೀನಾಕ್ಷಿ
ಮೀನಾಕ್ಷಿ ಚೌಧರಿ
Follow us
TV9 Web
| Updated By: ಮದನ್​ ಕುಮಾರ್​

Updated on: Feb 09, 2022 | 1:53 PM

ಟಾಲಿವುಡ್​ ನಟ ರವಿ ತೇಜ (Ravi Teja) ಅಭಿನಯದ ‘ಕಿಲಾಡಿ’ (Khiladi Movie) ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಫೆ.11ರಂದು ಈ ಸಿನಿಮಾ ತೆರೆಕಾಣಲಿದೆ. ಇತ್ತೀಚೆಗೆ ರಿಲೀಸ್​ ಆಗಿರುವ ಟ್ರೇಲರ್​ ಸಖತ್​ ಹೈಪ್​ ಸೃಷ್ಟಿ ಮಾಡಿದೆ. ಅದಕ್ಕೂ ಮುನ್ನ ಈ ಸಿನಿಮಾದ ಒಂದು ಫೋಟೋ ಲೀಕ್​ ಆಗಿತ್ತು. ಹೀರೋಯಿನ್ ಮೀನಾಕ್ಷಿ ಚೌಧರಿ​ ಜೊತೆ ರವಿ ತೇಜ ಲಿಪ್​ ಲಾಕ್​ ಮಾಡಿರುವ ದೃಶ್ಯ ಆ ಫೋಟೋದಲ್ಲಿ ಇತ್ತು. ಟ್ರೇಲರ್​ನಲ್ಲಿ ಕೂಡ ರವಿ ತೇಜ ಮತ್ತು ಮೀನಾಕ್ಷಿ ಚೌಧರಿ (Meenakshi Chaudhary) ತುಂಬ ಇಂಟಿಮೇಟ್​ ಆಗಿ ಕಾಣಿಸಿಕೊಂಡಿದ್ದಾರೆ. ಈಗತಾನೇ ಚಿತ್ರರಂಗಕ್ಕೆ ಕಾಲಿಟ್ಟಿರುವ ಮೀನಾಕ್ಷಿ ಚೌಧರಿ ಅವರು ಮುಲಾಜಿಲ್ಲದೇ ಲಿಪ್​ ಲಾಕ್​ ಮಾಡಿದ್ದಾರೆ. ಇಷ್ಟ ದಿನಗಳ ಕಾಲ ಕಿಸ್ಸಿಂಗ್​ ದೃಶ್ಯಳಿಂದ ದೂರು ಉಳಿದುಕೊಂಡಿದ್ದ ರವಿ ತೇಜ ಅವರು ‘ಕಿಲಾಡಿ’ ಸಿನಿಮಾದಲ್ಲಿ ಮಡಿವಂತಿಕೆಯನ್ನು ಬದಿಗಿಟ್ಟು ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್​​ನಲ್ಲಿ ಸಾಹಸ, ಸಂಗೀತ, ಮಾಸ್​ ಡೈಲಾಗ್​ ಎಲ್ಲವೂ ಜೋರಾಗಿದ್ದರೂ ಕೂಡ ಕಿಸ್ಸಿಂಗ್​ ಪುರಾಣವೇ ಹೆಚ್ಚು ಸುದ್ದಿ ಆಗುತ್ತಿದೆ. ಇತ್ತೀಚೆಗೆ ಈ ವಿಚಾರದ ಬಗ್ಗೆ ಮೀನಾಕ್ಷಿ ಚೌಧರಿ ಅವರು ಮಾತನಾಡಿದ್ದಾರೆ. ಲಿಪ್​ ಲಾಕ್​ ಕುರಿತು ಅವರು ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

ಕೆಲವು ನಟಿಯರು ಇಂಥ ದೃಶ್ಯದಲ್ಲಿ ನಟಿಸಲು ಹಿಂದೇಟು ಹಾಕುತ್ತಾರೆ. ಆದರೆ ಮೀನಾಕ್ಷಿ ಚೌಧರಿ ಅವರು ಲಿಪ್​ ಲಾಕ್​ ಕುರಿತು ಯಾವುದೇ ನಿರ್ಬಂಧಗಳನ್ನು ಹಾಕಿಕೊಂಡಿಲ್ಲ. ‘ಕಿಲಾಡಿ’ ಸಿನಿಮಾದಲ್ಲಿ ರವಿ ತೇಜ ಜೊತೆ ಅವರು ಮುಲಾಜಿಲ್ಲದೇ ಲಿಪ್​ ಲಾಕ್​ ಮಾಡಿದ್ದಾರೆ. ಈ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ಈ ಚಿತ್ರಕ್ಕೆ ರವಿ ತೇಜ ಹೀರೋ ಎಂಬುದು ಗೊತ್ತಾದ ತಕ್ಷಣ ನಾನು ಒಪ್ಪಿಕೊಂಡೆ. ಅವರ ಜೊತೆ ಕೆಲಸ ಮಾಡಿದ್ದು ಖುಷಿ ನೀಡಿತು. ಸಿನಿಮಾದಲ್ಲಿ ನನ್ನ ಪಾತ್ರ ಎಷ್ಟು ಹೊತ್ತು ಬರುತ್ತದೆ ಎಂಬುದು ಮುಖ್ಯವಲ್ಲ. ಆ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇದೆ ಎಂಬುದೇ ನನಗೆ ಮುಖ್ಯ. ಈ ಸಿನಿಮಾದಲ್ಲಿ ಕಿಸ್ಸಿಂಗ್​ ದೃಶ್ಯ ಇರುತ್ತದೆ ಅಂತ ನಿರ್ದೇಶಕರು ನನಗೆ ಮಾಹಿತಿ ನೀಡಿದ್ದರು. ಕಮರ್ಷಿಯಲ್​ ಸಿನಿಮಾದಲ್ಲಿ ಇಂಥದ್ದೆಲ್ಲ ಇದ್ದೇ ಇರುತ್ತದೆ. ಲಿಪ್​ ಲಾಕ್​ ದೃಶ್ಯಗಳಲ್ಲಿ ನಟಿಸಲು ನನಗೆ ಯಾವುದೇ ಅಭ್ಯಂತರ ಇಲ್ಲ’ ಎಂದು ಮೀನಾಕ್ಷಿ ಚೌಧರಿ ಹೇಳಿದ್ದಾರೆ.

ತೆಲುಗಿನಲ್ಲಿ ತಯಾರಾಗಿರುವ ‘ಕಿಲಾಡಿ’ ಸಿನಿಮಾ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿ ಬಿಡುಗಡೆ ಆಗಲಿದೆ. ಚಿತ್ರದ ವಿತರಣೆ ಹಕ್ಕುಗಳು ಭಾರಿ ಮೊತ್ತಕ್ಕೆ ಸೇಲ್​ ಆಗಿವೆ. ಒಟಿಟಿ, ಕಿರುತೆರೆ ಪ್ರಸಾರದ ಹಕ್ಕುಗಳ ವಿಚಾರದಲ್ಲಿಯೂ ದೊಡ್ಡ ಆಫರ್​ ಬಂದಿದೆ. ಈ ಎಲ್ಲ ಕಾರಣಗಳಿಂದಾಗಿ ಸಿನಿಮಾದ ರಿಲೀಸ್​ಗೂ ಮುನ್ನವೇ ನಿರ್ಮಾಪಕರು ಲಾಭದಲ್ಲಿದ್ದಾರೆ. ಇದಕ್ಕೆ ಕಾರಣವಾದ ನಿರ್ದೇಶಕರಿಗೆ ಅವರು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಉಡುಗೊರೆಯನ್ನು ನೀಡಿದ್ದಾರೆ. 1.5 ಕೋಟಿ ರೂಪಾಯಿ ಬೆಲೆಯ ರೇಂಜ್​ ರೋವರ್​ ಕಾರನ್ನು ನಿರ್ದೇಶಕ ರಮೇಶ್​ ವರ್ಮಾಗೆ ನಿರ್ಮಾಪಕರು ಕೊಟ್ಟಿದ್ದಾರೆ.

ಇದನ್ನೂ ಓದಿ:

‘ನಟ ಸಾರ್ವಭೌಮ’ ಸಿನಿಮಾ ನಟಿಯ ಲಿಪ್​ ಕಿಸ್​ ಪುರಾಣ; ಸಖತ್ ಟ್ರೋಲ್​ ಆಗುತ್ತಿರುವ ಅನುಪಮಾ

ನಾಗ ಚೈತನ್ಯ ಜತೆ ಸಾಯಿ ಪಲ್ಲವಿ ಲಿಪ್​ ಲಾಕ್​ ಮಾಡಿದ್ದು ನಿಜವೇ? ‘ಲವ್​ ಸ್ಟೋರಿ’ ಹಿಂದಿನ ಸತ್ಯ ಬಾಯ್ಬಿಟ್ಟ ನಟಿ

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು