‘ನಟ ಸಾರ್ವಭೌಮ’ ಸಿನಿಮಾ ನಟಿಯ ಲಿಪ್​ ಕಿಸ್​ ಪುರಾಣ; ಸಖತ್ ಟ್ರೋಲ್​ ಆಗುತ್ತಿರುವ ಅನುಪಮಾ

‘ನಟ ಸಾರ್ವಭೌಮ’ ಸಿನಿಮಾ ನಟಿಯ ಲಿಪ್​ ಕಿಸ್​ ಪುರಾಣ; ಸಖತ್ ಟ್ರೋಲ್​ ಆಗುತ್ತಿರುವ ಅನುಪಮಾ
ಅನುಪಮಾ ಪರಮೇಶ್ವರನ್​, ಆಶಿಶ್​ ರೆಡ್ಡಿ

Anupama Parameswaran: ವೃತ್ತಿ ಜೀವನದಲ್ಲಿ ಅನುಪಮಾ ಪರಮೇಶ್ವರನ್​ ಅವರು ಕಿಸ್ಸಿಂಗ್​ ದೃಶ್ಯದಲ್ಲಿ ನಟಿಸಿರುವುದು ಇದೇ ಮೊದಲು. ಆ ಕಾರಣದಿಂದಲೂ ‘ರೌಡಿ ಬಾಯ್ಸ್​’ ಸಿನಿಮಾ ಹೈಪ್​ ಪಡೆದುಕೊಂಡಿದೆ.

TV9kannada Web Team

| Edited By: Apurva Kumar Balegere

Jan 10, 2022 | 11:09 AM


ಖ್ಯಾತ ನಟಿ ಅನುಪಮಾ ಪರಮೇಶ್ವರನ್ (Anupama Parameswaran)​ ಅವರು ಇಡೀ ದಕ್ಷಿಣ ಭಾರತದಲ್ಲಿ ಫೇಮಸ್​ ಆಗಿದ್ದಾರೆ. ಮಲಯಾಳಂ ಚಿತ್ರರಂಗದವರಾದ ಅವರು ತೆಲುಗು ಮತ್ತು ತಮಿಳಿನಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಪುನೀತ್​ ರಾಜ್​ಕುಮಾರ್​ (Puneeth Rajkumar) ಜೊತೆ ‘ನಟ ಸಾರ್ವಭೌಮ’ (Nata Sarvabhouma) ಚಿತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡದ ಸಿನಿಪ್ರಿಯರಿಗೂ ಅವರು ಪರಿಚಿತರಾದರು. ಅವರನ್ನು ಇಷ್ಟಪಡುವ ದೊಡ್ಡ ಅಭಿಮಾನಿ ಬಳಗ ಇದೆ. ಆದರೆ ಈಗ ಅವರು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಒಂದು ಲಿಪ್​ ಕಿಸ್​! ಹೌದು, ತಾವು ನಟಿಸಿರುವ ‘ರೌಡಿ ಬಾಯ್ಸ್​’ (Rowdy Boys) ಸಿನಿಮಾದಲ್ಲಿ ಅನುಪಮಾ ಅವರು ಲಿಪ್​ ಕಿಸ್​ ಮಾಡಿ ಸುದ್ದಿ ಆಗುತ್ತಿದ್ದಾರೆ. ಆ ಚಿತ್ರದ ಟ್ರೇಲರ್​ ರಿಲೀಸ್​ ಆಗಿದ್ದು, ಸಖತ್​ ಸದ್ದು ಮಡುತ್ತಿದೆ. 

ಅನುಪಮಾ ಪರಮೇಶ್ವರನ್​ ಅವರು ‘ರೌಡಿ ಬಾಯ್ಸ್​’ ಸಿನಿಮಾದಲ್ಲಿ ಹೊಸ ನಟ ಆಶಿಶ್​ ರೆಡ್ಡಿ ಜೊತೆ ತೆರೆಹಂಚಿಕೊಂಡಿದ್ದಾರೆ. ಖ್ಯಾತ ನಿರ್ಮಾಪಕ ದಿಲ್​ ರಾಜು ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ದಿಲ್​ ರಾಜ್​ ಅವರ ಸಹೋದರನ ಮಗನೇ ಆಶಿಶ್​ ರೆಡ್ಡಿ. ಸ್ಟಾರ್​ ನಿರ್ಮಾಪಕರ ಮನೆಮಗನ ಸಿನಿಮಾ ಎಂಬ ಕಾರಣಕ್ಕೆ ನಟಿಯರು ಲಿಪ್​ ಕಿಸ್​ ಮಾಡಲು ಸಿದ್ಧರಿರುತ್ತಾರೆ ಎಂದು ಕೆಲವು ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ.

ವೃತ್ತಿ ಜೀವನದಲ್ಲಿ ಅನುಪಮಾ ಪರಮೇಶ್ವರನ್​ ಅವರು ಕಿಸ್ಸಿಂಗ್​ ದೃಶ್ಯದಲ್ಲಿ ನಟಿಸಿರುವುದು ಇದೇ ಮೊದಲು. ಆ ಕಾರಣದಿಂದಲೂ ‘ರೌಡಿ ಬಾಯ್ಸ್​’ ಸಿನಿಮಾ ಹೈಪ್​ ಪಡೆದುಕೊಂಡಿದೆ. ಇದು ಟ್ರೇಲರ್​ನಲ್ಲಿ ಇರುವ ಝಲಕ್​ ಮಾತ್ರ. ಸಿನಿಮಾದಲ್ಲಿ ಇದೇ ರೀತಿ 3-4 ಕಿಸ್ಸಿಂಗ್​ ದೃಶ್ಯಗಳಿವೆ ಎಂಬ ಮಾಹಿತಿ ಕೂಡ ಕೇಳಿಬಂದಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಜ.14ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

ಇದನ್ನೂ ಓದಿ:

ಸಹ ನಟನಿಗೆ ದೀಪಿಕಾ ಪಡುಕೋಣೆ ಕಿಸ್​; ವೈರಲ್​ ಆಗುತ್ತಿದೆ ಹೊಸ ಸಿನಿಮಾದ ಟೀಸರ್​

ಆಲಿಯಾಗೆ ಲಿಪ್​ ಲಾಕ್​ ಮಾಡಲ್ಲ ಎಂದು ದೀಪಿಕಾಗೆ ಪ್ರಾಮಿಸ್​ ಮಾಡಿದ ರಣವೀರ್​ ಸಿಂಗ್? ಏನಿದು ಕಥೆ?

Follow us on

Related Stories

Most Read Stories

Click on your DTH Provider to Add TV9 Kannada