ರಿಲೀಸ್​ಗೆ ಸಿದ್ಧವಿರುವ ‘ಆರ್​ಆರ್​ಆರ್​’ ಚಿತ್ರಕ್ಕೆ ಸಂಕಷ್ಟ; ಎದುರಾಗಲಿದೆ ಕಾನೂನಿನ ದೊಡ್ಡ ತೊಡಕು?

ರಿಲೀಸ್​ಗೆ ಸಿದ್ಧವಿರುವ ‘ಆರ್​ಆರ್​ಆರ್​’ ಚಿತ್ರಕ್ಕೆ ಸಂಕಷ್ಟ; ಎದುರಾಗಲಿದೆ ಕಾನೂನಿನ ದೊಡ್ಡ ತೊಡಕು?
ರಾಮ್​ ಚರಣ್​-ಜ್ಯೂ ಎನ್​ಟಿಆರ್

ದೊಡ್ಡದೊಡ್ಡ ಚಿತ್ರಗಳ ರಿಲೀಸ್​ ಡೇಟ್​ ಹತ್ತಿರವಾದಾಗ ಕೆಲವರು ಸಿನಿಮಾ ಬಗ್ಗೆ ಅಪಸ್ವರ ಎತ್ತುತ್ತಾರೆ. ಈ ಮೊದಲೂ ಈ ರೀತಿ ಆದ ಉದಾಹರಣೆ ಸಾಕಷ್ಟಿದೆ. ಕನ್ನಡದ ‘ಕೆಜಿಎಫ್​’, ಹಿಂದಿಯ ‘ಪದ್ಮಾವತ್’, ‘ಗಂಗೂಬಾಯಿ ಕಾಠಿಯಾವಾಡಿ’ ಸೇರಿ ಅನೇಕ ಚಿತ್ರಗಳು ಇದೇ ಮಾದರಿಯ ಸಮಸ್ಯೆ ಎದುರಿಸಿದ್ದವು.

TV9kannada Web Team

| Edited By: Rajesh Duggumane

Mar 06, 2022 | 1:42 PM

‘ಆರ್​​ಆರ್​ಆರ್​’ ಸಿನಿಮಾ (RRR Movie) ರಿಲೀಸ್​ಗೆ ರೆಡಿ ಇದೆ. ಮಾರ್ಚ್​ 25ರಂದು ಈ ಚಿತ್ರ ವಿಶ್ವಾದ್ಯಂತ ತೆರೆಗೆ ಬರುತ್ತಿದೆ. ಈ ಸಿನಿಮಾ ಬಗ್ಗೆ ಅಭಿಮಾನಿ ವಲಯದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈಗಾಗಲೇ ನಿರ್ದೇಶಕ ಎಸ್​.ಎಸ್​. ರಾಜಮೌಳಿ (SS Rajamouli) ತಮ್ಮ ಸಿನಿಮಾ ಮೇಕಿಂಗ್​ ಮೂಲಕ ದೊಡ್ಡ ಭರವಸೆ ಸೃಷ್ಟಿಸಿದ್ದಾರೆ. ‘ಆರ್​ಆರ್​ಆರ್​’ ಟ್ರೇಲರ್​ನಲ್ಲೂ ಅದು ಸಾಬೀತಾಗಿದೆ. ಆದರೆ, ಸಿನಿಮಾ ರಿಲೀಸ್​ಗೆ ಕೆಲವೇ ದಿನಗಳು ಬಾಕಿ ಇರುವಾಗ ಚಿತ್ರತಂಡಕ್ಕೆ ದೊಡ್ಡ ಸಂಕಷ್ಟ ಒಂದು ಎದುರಾಗಿದೆ. ಇದನ್ನು ಚಿತ್ರತಂಡ ಯಾವ ರೀತಿಯಲ್ಲಿ ಹ್ಯಾಂಡಲ್​ ಮಾಡಲಿದೆ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಎದುರಾಗಿದೆ. ಒಂದೊಮ್ಮೆ ಈ ಸಮಸ್ಯೆ ದೊಡ್ಡದಾದರೆ ಚಿತ್ರಕ್ಕೆ ತೊಂದರೆ ಉಂಟಾಗಲಿದೆ.

ದೊಡ್ಡದೊಡ್ಡ ಚಿತ್ರಗಳ ರಿಲೀಸ್​ ಡೇಟ್​ ಹತ್ತಿರವಾದಾಗ ಕೆಲವರು ಸಿನಿಮಾ ಬಗ್ಗೆ ಅಪಸ್ವರ ಎತ್ತುತ್ತಾರೆ. ಈ ಮೊದಲೂ ಈ ರೀತಿ ಆದ ಉದಾಹರಣೆ ಸಾಕಷ್ಟಿದೆ. ಕನ್ನಡದ ‘ಕೆಜಿಎಫ್​’, ಹಿಂದಿಯ ‘ಪದ್ಮಾವತ್’, ‘ಗಂಗೂಬಾಯಿ ಕಾಠಿಯಾವಾಡಿ’ ಸೇರಿ ಅನೇಕ ಚಿತ್ರಗಳು ಇದೇ ಮಾದರಿಯ ಸಮಸ್ಯೆ ಎದುರಿಸಿದ್ದವು. ಈಗ ‘ಆರ್​ಆರ್​ಆರ್​’ ಚಿತ್ರಕ್ಕೂ ತೊಂದರೆ ಎದುರಾಗುವ ಸೂಚನೆ ಸಿಕ್ಕಿದೆ.

ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲುರಿ ಸೀತಾರಾಮ ರಾಜು ಮತ್ತು ಕೋಮರಾಮ್​ ಭೀಮ್ ಅವರ ಜೀವನವನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ‘ಆರ್​ಆರ್​ಆರ್​’ ಸಿನಿಮಾ ಸಿದ್ಧಗೊಂಡಿದೆ. ಆದರೆ, ಚಿತ್ರದ ಕಥೆ ಸಂಪೂರ್ಣ ಕಾಲ್ಪನಿಕ ಎಂದು ರಾಜಮೌಳಿ ಹೇಳಿದ್ದಾರೆ. ಸ್ವಾತಂತ್ರ್ಯ ಪೂರ್ವ ಭಾರತದ ಕಥೆಯನ್ನು ರಾಜಮೌಳಿ ಹೇಳ ಹೊರಟಿದ್ದಾರೆ.  ಜ್ಯೂ.ಎನ್​ಟಿಆರ್​ ಅವರು ಕೋಮರಾಮ್​ ಭೀಮ್​ ಆಗಿ ಕಾಣಿಸಿಕೊಂಡರೆ, ಅಲ್ಲುರಿ ಸೀತಾರಾಮ ಪಾತ್ರದಲ್ಲಿ ರಾಮ್​ ಚರಣ್​ ನಟಿಸಿದ್ದಾರೆ. ಈ ಚಿತ್ರಕ್ಕೆ ಅಲ್ಲುರಿ ಸೀತಾರಾಮ ಕುಟುಂಬ ಅಪಸ್ವರ ತೆಗೆದಿದೆ.

ಅಲ್ಲುರಿ ಸೀತಾರಾಮ ರಾಜು ಅವರ ಘನತೆಗೆ ಧಕ್ಕೆ ತರುವ ಕೆಲಸ ‘ಆರ್​ಆರ್​ಆರ್​’ ಚಿತ್ರದಲ್ಲಿ ಆಗಿದೆ ಎಂಬುದು ಅವರ ಕುಟುಂಬದ ಆರೋಪ. ಈ ಬಗ್ಗೆ ಸಾರ್ವಜನಿಕವಾಗಿ ಅಲ್ಲುರಿ ಕುಟುಂಬದವರು ಹೇಳಿಕೆ ನೀಡುತ್ತಿದ್ದಾರೆ. ಒಂದೊಮ್ಮೆ ಈ ಬಗ್ಗೆ ಕೋರ್ಟ್​ನಲ್ಲಿ ಕೇಸ್​ ದಾಖಲಿಸಿದರೆ ಸಿನಿಮಾಗೆ ತೊಂದರೆ ಎದುರಾಗಬಹುದು. ಆದರೆ, ಚಿತ್ರ ಕಾಲ್ಪನಿಕ ಕಥೆ ಆಗಿರುವುದರಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಸಿನಿ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

‘ಟ್ರೇಲರ್​ನಲ್ಲಿ ಅಲ್ಲುರಿ ಅವರನ್ನು ಬ್ರಿಟಿಷರಿಗಾಗಿ ಕೆಲಸ ಮಾಡುವ ಪೋಲೀಸ್‌ ಆಗಿ ತೋರಿಸಲಾಗಿದೆ. ಕೋಮರಾಮ್ ಭೀಮ್ ಅವರನ್ನು ಅಲ್ಲುರಿ ಬಂಧಿಸುವ ದೃಶ್ಯ ಟ್ರೇಲರ್​ನಲ್ಲಿ ಇದೆ. ಆದರೆ, ವಾಸ್ತವದಲ್ಲಿ ಸಂಬಂಧವಿಲ್ಲದ ಈ ಇಬ್ಬರು ನಾಯಕರನ್ನು ಒಟ್ಟಿಗೆ ತರಲಾಗಿದೆ. ಟ್ರೇಲರ್‌ನಲ್ಲಿ ತೋರಿಸಿದ ಇಂತಹ ಘಟನೆ ನಡೆದಿದೆ ಎಂಬ ಬಗ್ಗೆ ಇತಿಹಾಸದಲ್ಲಿ ಯಾವುದೇ ಪುರಾವೆಗಳಿಲ್ಲ. ಈ ಇಬ್ಬರೂ ನಾಯಕರು ಎಂದಿಗೂ ಭೇಟಿಯಾಗಲಿಲ್ಲ’ ಎಂದು ಅಲ್ಲುರಿ ಕುಟುಂಬದವರು ವಾದ ಮುಂದಿಟ್ಟಿದ್ದಾರೆ.

ಇದನ್ನೂ ಓದಿ: ಸ್ಟಂಟ್​ ವಿಡಿಯೋ ಮೂಲಕ ಎಂಟ್ರಿ ಕೊಟ್ಟ ಕಿರೀಟಿ; ಶುಭಕೋರಿದ ಖ್ಯಾತ ನಟ ರಾಜಮೌಳಿ

‘ಆರ್​ಆರ್​ಆರ್​’ ನಿರ್ಮಾಪಕನ ಖಾತೆಯಿಂದ ಪ್ರಭಾಸ್​ಗೆ ವರ್ಗಾವಣೆ ಆಯ್ತು 50 ಕೋಟಿ ರೂಪಾಯಿ?  

Follow us on

Related Stories

Most Read Stories

Click on your DTH Provider to Add TV9 Kannada