AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋನಾಕ್ಷಿ ಸಿನ್ಹಾಗೆ ಬಂಧನ ಭೀತಿ; ಜಾಮೀನು ರಹಿತ ವಾರೆಂಟ್​ ಜಾರಿ ಮಾಡಿದ ಕೋರ್ಟ್​: ಏನಿದು ಕೇಸ್​?

ಹಣ ಗಳಿಸಲು ಸೆಲೆಬ್ರಿಟಿಗಳು ಅನೇಕ ಹಾದಿಗಳನ್ನು ಕಂಡುಕೊಂಡಿರುತ್ತಾರೆ. ಕಾರ್ಯಕ್ರಮದ ಆಯೋಜಕರಿಂದ ಸೋನಾಕ್ಷಿ ಸಿನ್ಹಾ ಅವರು ಬರೋಬ್ಬರಿ 37 ಲಕ್ಷ ರೂಪಾಯಿ ಪಡೆದುಕೊಂಡಿದ್ದರು ಎಂದು ತಿಳಿದುಬಂದಿದೆ.

ಸೋನಾಕ್ಷಿ ಸಿನ್ಹಾಗೆ ಬಂಧನ ಭೀತಿ; ಜಾಮೀನು ರಹಿತ ವಾರೆಂಟ್​ ಜಾರಿ ಮಾಡಿದ ಕೋರ್ಟ್​: ಏನಿದು ಕೇಸ್​?
ಸೋನಾಕ್ಷಿ ಸಿನ್ಹಾ
TV9 Web
| Updated By: ಮದನ್​ ಕುಮಾರ್​|

Updated on: Mar 07, 2022 | 8:48 AM

Share

ಹಿಂದಿ ಚಿತ್ರರಂಗದ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಅವರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿನಿಮಾ ಮತ್ತು ಇತರೆ ಗಾಸಿಪ್​ಗಳಿಂದ ಗಮನ ಸೆಳೆಯುತ್ತಿದ್ದ ಅವರು ಈಗ ಗಂಭೀರ ವಿಚಾರದಿಂದ ಸುದ್ದಿ ಆಗಿದ್ದಾರೆ. ಸೋನಾಕ್ಷಿ ಸಿನ್ಹಾ ವಿರುದ್ಧ ಜಾಮೀನು ರಹಿತ ಅರೆಸ್ಟ್​ ವಾರೆಂಟ್​ ಜಾರಿ ಮಾಡಲಾಗಿದೆ. ಅಷ್ಟಕ್ಕೂ ಅವರ ಮೇಲಿರುವ ಪ್ರಕರಣ ಏನು? ವಂಚನೆ ಕೇಸ್​ (Fraud Case)! ಹೌದು, ಸೋನಾಕ್ಷಿ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ದೆಹಲಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವೊಂದರ ಆಯೋಜಕರಿಂದ ಲಕ್ಷಾಂತರ ರೂಪಾಯಿ ಪಡೆದುಕೊಂಡಿದ್ದ ಸೋನಾಕ್ಷಿ ಸಿನ್ಹಾ ಅವರು ನಂತರ ಆ ಕಾರ್ಯಕ್ರಮಕ್ಕೆ ಹಾಜರಾಗದೇ ತಪ್ಪಿಸಿಕೊಂಡಿದ್ದರು. ಮುಂಗಡವಾಗಿ ಪಡೆದಿದ್ದ ಹಣವನ್ನು ವಾಪಸ್​ ನೀಡಲು ಕೂಡ ಅವರು ಒಪ್ಪಿಕೊಂಡಿರಲಿಲ್ಲ. ಹಾಗಾಗಿ ಅವರ ವಿರುದ್ಧ ಕೇಸ್​ ದಾಖಲಾಗಿದೆ. ನಟಿಯಿಂದ ವಂಚನೆ ಆಗಿದೆ ಎಂದು ಆರೋಪಿಸಿ ಕಾರ್ಯಕ್ರಮದ ಆಯೋಜಕ ಪ್ರಮೋದ್​ ಶರ್ಮಾ ಎಂಬುವವರು ಕಾನೂನು ಹೋರಾಟ ಮಾಡುತ್ತಿದ್ದಾರೆ. ಈ ಪ್ರಕರಣದ ಸಂಬಂಧ ಸೋನಾಕ್ಷಿ ಸಿನ್ಹಾ ವಿರುದ್ಧ ಜಾಮೀನು ರಹಿತ ಅರೆಸ್ಟ್​ ವಾರೆಂಟ್​ (Non Bailable Warrant) ಜಾರಿ ಮಾಡಲಾಗಿದೆ. ಹಾಗಾಗಿ ಅವರಿಗೆ ಬಂಧನದ ಭೀತಿ ಎದುರಾಗಿದೆ.

ಹಣ ಗಳಿಸಲು ಸೆಲೆಬ್ರಿಟಿಗಳು ಅನೇಕ ಹಾದಿಗಳನ್ನು ಕಂಡುಕೊಂಡಿರುತ್ತಾರೆ. ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಭಾಗವಹಿಸಿದರೆ ಅವರಿಗೆ ಕೈ ತುಂಬ ಹಣ ನೀಡಲಾಗುತ್ತದೆ. ಅದೇ ರೀತಿ ಸೋನಾಕ್ಷಿ ಸಿನ್ಹಾ ಅವರಿಗೂ ಆಫರ್​ ನೀಡಲಾಗಿತ್ತು. ಕಾರ್ಯಕ್ರಮದ ಆಯೋಜಕರಿಂದ ಅವರು ಬರೋಬ್ಬರಿ 37 ಲಕ್ಷ ರೂಪಾಯಿ ಪಡೆದುಕೊಂಡಿದ್ದರು ಎಂದು ತಿಳಿದುಬಂದಿದೆ. ಹಣ ಪಡೆದ ಬಳಿಕ ಕಾರ್ಯಕ್ರಮಕ್ಕೆ ಹಾಜರಾಗದೇ, ಹಣವನ್ನೂ ವಾಪಸ್​ ನೀಡದೇ ಅವರು ಸತಾಯಿಸಿದ್ದಾರೆ. ಅಷ್ಟೇ ಆಗಿದ್ದರೆ ಸೋನಾಕ್ಷಿ ವಿರುದ್ಧ ಇಂದು ಜಾಮೀನು ರಹಿತ ಅರೆಸ್ಟ್​ ವಾರೆಂಟ್​ ಜಾರಿ ಆಗುತ್ತಿರಲಿಲ್ಲವೇನೋ. ಅದರ ಜೊತೆಗೆ ಸೋನಾಕ್ಷಿ ಇನ್ನೊಂದು ಎಡವಟ್ಟು ಮಾಡಿದ್ದಾರೆ.

ಉತ್ತರ ಪ್ರದೇಶದ ಮೊರಾದಾಬಾದ್​ ಜಿಲ್ಲೆಯಲ್ಲಿ ಈ ಕೇಸ್​ ದಾಖಲಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು ಸೋನಾಕ್ಷಿ ಸಿನ್ಹಾ ಅವರು ವಿಚಾರಣೆಗೆ ಹಾಜರಾಗಿಲ್ಲ. ಪದೇಪದೇ ಅವರು ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವ ಕಾರಣದಿಂದ ಅರೆಸ್ಟ್​ ವಾರೆಂಟ್​ ಜಾರಿ ಮಾಡಲಾಗಿದೆ. ‘ಸೋನಾಕ್ಷಿ ಸಿನ್ಹಾ ಅವರನ್ನು ಬಂಧಿಸಿ, ಏ.24ರಂದು ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕು’ ಎಂದು ಪೊಲೀಸರಿಗೆ ಕೋರ್ಟ್​ ಆದೇಶ ನೀಡಿದೆ.

ಸೋನಾಕ್ಷಿ ಸಿನ್ಹಾ ಮದುವೆ ಗಾಸಿಪ್​:

ನಟ ಸಲ್ಮಾನ್​ ಖಾನ್ ಅವರ ಮದುವೆ ಬಗ್ಗೆ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಮೋಸ್ಟ್​ ಎಲಿಜಬಲ್​ ಬ್ಯಾಚುಲರ್​ ಎನಿಸಿಕೊಂಡಿರುವ ಅವರು ಹಲವರ ಜೊತೆ ಡೇಟಿಂಗ್​ ಮಾಡಿದ್ದರು. ಆದರೆ ಯಾರೂ ಕೂಡ ಸಲ್ಲು ಜೊತೆ ಮದುವೆ ಆಗಲು ಮುಂದೆ ಬರಲಿಲ್ಲ. ಸಲ್ಮಾನ್​ ಖಾನ್​ ಮತ್ತು ಸೋನಾಕ್ಷಿ ಸಿನ್ಹಾ ಅವರು ಮದುವೆ ಆಗಿದ್ದಾರೆ ಎಂಬ ಗಾಳಿ ಸುದ್ದಿ ಇತ್ತೀಚೆಗೆ ಹರಡಿತ್ತು. ಅದಕ್ಕೆ ಕಾರಣ ಆಗಿರುವುದು ಒಂದೇ ಒಂದು ಫೋಟೋ. ಸಲ್ಮಾನ್​ ಖಾನ್​ ಮತ್ತು ಸೋನಾಕ್ಷಿ ಸಿನ್ಹಾ ಅವರು ನವ ದಂಪತಿಯ ರೀತಿಯಲ್ಲಿ ಮದುವೆ ಡ್ರೆಸ್​ನಲ್ಲಿ ಕಾಣಿಸಿಕೊಂಡಿರುವ ಒಂದು ಫೋಟೋ ವೈರಲ್​ ಆಗಿತ್ತು. ಈ ಜೋಡಿಯ ನಡುವೆ ಉತ್ತಮ ಒಡನಾಟ ಇದೆ ಎಂಬುದು ನಿಜ. ಆದರೆ ಮದುವೆ ಆಗಿದ್ದಾರೆ ಎಂಬುದೆಲ್ಲ ಬರೀ ಕಟ್ಟುಕಥೆ. ಅದೊಂದು ಎಡಿಟೆಡ್​ ಫೋಟೋ. ಬೇರೆ ಯಾರದ್ದೋ ಮದುವೆ ಫೋಟೋಗೆ ಸೋನಾಕ್ಷಿ ಸಿನ್ಹಾ ಹಾಗೂ ಸಲ್ಮಾನ್​ ಖಾನ್​ ಅವರ ಮುಖವನ್ನು ಎಡಿಟ್​ ಮಾಡಿ ಆ ರೀತಿ ವೈರಲ್​ ಮಾಡಲಾಗಿತ್ತು. ಅದನ್ನು ನಿಜ ಎಂದು ನಂಬಿಕೊಂಡವರು ನಂತರ ಸತ್ಯ ಏನೆಂಬುದು ತಿಳಿದು ಪೆಚ್ಚಾಗಿದ್ದರು.

ಇದನ್ನೂ ಓದಿ:

ಗಂಡ-ಹೆಂಡತಿ ವೇಷದಲ್ಲಿ ಸೋನಾಕ್ಷಿ-ಸಲ್ಮಾನ್​ ಖಾನ್​; ನಕಲಿ ಫೋಟೋ ನೋಡಿ ಯಾಮಾರಿದ ನೆಟ್ಟಿಗರು​

‘ಎಲ್ಲರಿಗೂ ಕೊವಿಡ್​ ಬರ್ತಿದೆ, ನಂಗೂ ಬರಬೇಕಾ?’; ಸಣ್ಣ ವಿಚಾರಕ್ಕೆ ಇಂಥ ಮಾತಾಡಿದ ಸೋನಾಕ್ಷಿ ಸಿನ್ಹಾ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ