ಮದುವೆ ಬಳಿಕ ಬೇರೆ ನಟನ ಜತೆ ಕತ್ರಿನಾ ಕಣ್ಣಾಮುಚ್ಚಾಲೆ; ವಿಕ್ಕಿ ಎಲ್ಲಿ ಎಂದು ಕೇಳುತ್ತಿರುವ ಫ್ಯಾನ್ಸ್

ಕತ್ರಿನಾ ಕೈಫ್​ ಅವರ ತುಟಿಯಲ್ಲಿ ಇರುವ ಸಿಹಿಯ ರುಚಿಯನ್ನು ಧೈರ್ಯ ಕರ್ವ ಸವಿಯುತ್ತಾರೆ. ಈ ದೃಶ್ಯ ತುಂಬ ರೊಮ್ಯಾಂಟಿಕ್​ ಆಗಿ ಮೂಡಿಬಂದಿದೆ.

ಮದುವೆ ಬಳಿಕ ಬೇರೆ ನಟನ ಜತೆ ಕತ್ರಿನಾ ಕಣ್ಣಾಮುಚ್ಚಾಲೆ; ವಿಕ್ಕಿ ಎಲ್ಲಿ ಎಂದು ಕೇಳುತ್ತಿರುವ ಫ್ಯಾನ್ಸ್
ಕತ್ರಿನಾ ಕೈಫ್, ಧೈರ್ಯ ಕರ್ವ, ವಿಕ್ಕಿ ಕೌಶಲ್
TV9kannada Web Team

| Edited By: Madan Kumar

Mar 10, 2022 | 12:27 PM

ಸಿನಿಮಾ ಅಥವಾ ಜಾಹೀರಾತಿನಲ್ಲಿ ಒಟ್ಟಾಗಿ ನಟಿಸಿದ ನಟ-ನಟಿಯ ನಡುವೆ ಪ್ರೀತಿ ಚಿಗುರಿದ ಅನೇಕ ಉದಾಹರಣೆಗಳಿವೆ. ಹಾಗಾಗಿ ಯಾರಾದರೂ ಪರದೆ ಮೇಲೆ ಅತಿ ಆಪ್ತವಾಗಿ ಕಾಣಿಸಿಕೊಂಡರೆ ಪ್ರೇಕ್ಷಕರು ಅನುಮಾನದ ದೃಷ್ಟಿಯಿಂದಲೇ ನೋಡ್ತಾರೆ. ನಟಿ ಕತ್ರಿನಾ ಕೈಫ್​ (Katrina Kaif) ಅವರ ವಿಚಾರದಲ್ಲಿ ಈಗ ಹಾಗೆಯೇ ಆಗಿದೆ. ಸಿನಿಮಾಗಳ ಜೊತೆಗೆ ಅನೇಕ ಜಾಹೀರಾತುಗಳಲ್ಲೂ ಕತ್ರಿನಾ ಅಭಿನಯಿಸುತ್ತಾರೆ. ಇತ್ತೀಚೆಗೆ ಪಾನೀಯವೊಂದರ ಜಾಹೀರಾತಿನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅವರ ಜೊತೆ ‘ಗೆಹರಾಯಿಯಾ’ ಸಿನಿಮಾ ಖ್ಯಾತಿಯ ನಟ ಧೈರ್ಯ ಕರ್ವ (Dhairya Karwa) ಕೂಡ ಅಭಿನಯಿಸಿದ್ದಾರೆ. ಇಬ್ಬರ ನಡುವಿನ ಕೆಮಿಸ್ಟ್ರೀ ಕಂಡು ಎಲ್ಲರಿಗೂ ಅಚ್ಚರಿ ಆಗಿದೆ. ಈ ಸಂದರ್ಭದಲ್ಲಿ ಅಭಿಮಾನಿಗಳು ವಿಕ್ಕಿ ಕೌಶಲ್​ ಅವರ ಗಮನ ಸೆಳೆಯುತ್ತಿದ್ದಾರೆ. ಕೆಲವೇ ತಿಂಗಳ ಹಿಂದೆ ವಿಕ್ಕಿ ಕೌಶಲ್​ (Vicky Kaushal) ಮತ್ತು ಕತ್ರಿನಾ ಕೈಫ್​ ವಿವಾಹ ನೆರವೇರಿತು. ಈಗ ಅವರು ಸುಖವಾಗಿ ಸಂಸಾರ ಮಾಡಿಕೊಂಡಿದ್ದಾರೆ. ಇಬ್ಬರ ನಡುವೆ ಉತ್ತಮ ಹೊಂದಾಣಿಕೆ ಇದೆ. ಆದರೂ ಅಭಿಮಾನಿಗಳು ತಮಾಷೆಗೆ ಕಾಲೆಳೆಯುತ್ತಿದ್ದಾರೆ. ಕತ್ರಿನಾ ಅವರ ಹೊಸ ಜಾಹೀರಾತಿನ ವಿಡಿಯೋಗೆ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಸದ್ಯ ಇದು ವೈರಲ್​ ಆಗುತ್ತಿದೆ.

ಈ ಜಾಹೀರಾತಿನ ಮೂಲಕ ಇದೇ ಮೊದಲ ಬಾರಿಗೆ ಕತ್ರಿನಾ ಕೈಫ್​ ಮತ್ತು ಧೈರ್ಯ ಕರ್ವ ಅವರು ತೆರೆ ಹಂಚಿಕೊಂಡಿದ್ದಾರೆ. ಧೈರ್ಯ ಕರ್ವ ಅವರ ಕಣ್ಣಿಗೆ ಕತ್ರಿನಾ ಕೈಫ್​ ಬಟ್ಟೆ ಕಟ್ಟುತ್ತಾರೆ. ತಮ್ಮ ಇಷ್ಟದ ಪಾನೀಯ ಯಾವುದು ಎಂಬುದನ್ನು ಪರಿಮಳದ ಮೂಲಕ ಕಂಡು ಹಿಡಿಯಲು ಸೂಚಿಸುತ್ತಾರೆ. ಈ ಕಣ್ಣಾಮುಚ್ಚಾಲೆ ಆಟದಲ್ಲಿ ಕತ್ರಿನಾ ಗೆಲ್ಲುತ್ತಾರೆ. ಬಳಿಕ ಕತ್ರಿನಾ ಕೈಫ್​ ಅವರ ತುಟಿಯಲ್ಲಿ ಇರುವ ಸಿಹಿಯ ರುಚಿಯನ್ನು ಧೈರ್ಯ ಕರ್ವ ಸವಿಯುತ್ತಾರೆ. ಹೀಗೆ ತುಂಬ ರೊಮ್ಯಾಂಟಿಕ್​ ಆಗಿ ಈ ಜಾಹೀರಾತು ಮೂಡಿಬಂದಿದೆ.

ಈ ಜಾಹೀರಾತು ನೋಡಿದ ಅಭಿಮಾನಿಗಳು ಬಗೆಬಗೆಯ ಕಮೆಂಟ್​ ಮಾಡಿ ಕಾಲೆಳೆದಿದ್ದಾರೆ. ‘ವಿಕ್ಕಿ ಕೌಶಲ್​ ಅವರೇ.. ಎಲ್ಲಿ ಇದ್ದೀರಿ ನೀವು? ಇಲ್ಲಿ ಏನು ನಡೆಯುತ್ತಿದೆ ಸ್ವಲ್ಪ ನೋಡಿ. ಇದನ್ನು ನೋಡಿದ ಬಳಿಕ ನಿಮಗೆ ಏನು ಅನಿಸುತ್ತಿದೆ ಅಂತ ತಿಳಿಸಿ’ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ. ಸದ್ಯ ಈ ಕಮೆಂಟ್​ಗಳಿಗೆ ವಿಕ್ಕಿ ಕೌಶಲ್​ ಅವರಾಗಲಿ, ಕತ್ರಿನಾ ಕೈಫ್​ ಅವರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕತ್ರಿನಾ-ವಿಕ್ಕಿ ಮದುವೆಯ ವಿಡಿಯೋಗಳನ್ನು ನೋಡಲು ಅಭಿಮಾನಿಗಳಿಗೆ ಇನ್ನೂ ಸಾಧ್ಯವಾಗಿಲ್ಲ. ಒಟಿಟಿ ಮೂಲಕ ಆ ವಿಡಿಯೋಗಳನ್ನು ಪ್ರಸಾರ ಮಾಡಲಾಗುವುದು ಎಂಬ ಮಾಹಿತಿ ಕೇಳಿಬಂದಿದೆ.

View this post on Instagram

A post shared by Katrina Kaif (@katrinakaif)

ಇನ್ನು, ನಟ ಧೈರ್ಯ ಕರ್ವ ಅವರು ಬಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ವಿಕ್ಕಿ ಕೌಶಲ್​ ಅವರಿಗೆ ಬಿಗ್​ ಬ್ರೇಕ್​ ನೀಡಿದ ‘ಉರಿ: ದಿ ಸರ್ಜಿಕಲ್​ ಸ್ಟ್ರೈಕ್​’ ಸಿನಿಮಾದಲ್ಲೂ ಧೈರ್ಯ ಕರ್ವ ನಟಿಸಿದ್ದರು. ರಣವೀರ್​ ಸಿಂಗ್ ಅಭಿನಯದ ‘83’ ಸಿನಿಮಾದಲ್ಲಿ ಅವರು ರವಿ ಶಾಸ್ತ್ರಿ ಪಾತ್ರಕ್ಕೆ ಬಣ್ಣ ಹಚ್ಚಿದರು. ಇತ್ತೀಚೆಗೆ ಬಿಡುಗಡೆ ಆದ ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯ ‘ಗೆಹರಾಯಿಯಾ’ ಸಿನಿಮಾದಲ್ಲೂ ಧೈರ್ಯ ಕರ್ವ ನಟಿಸಿದ್ದಾರೆ. ಈ ಎಲ್ಲ ಸಿನಿಮಾಗಳ ಯಶಸ್ಸಿನಿಂದಾಗಿ ಅವರ ಡಿಮ್ಯಾಂಡ್​ ಹೆಚ್ಚುತ್ತಿದೆ. ಹಾಗಾಗಿ ಜಾಹೀರಾತುಗಳಲ್ಲಿ ನಟಿಸಲು ಅವರಿಗೆ ಹಲವು ಅವಕಾಶಗಳು​ ಬರುತ್ತಿವೆ. ಸದ್ಯ ಕತ್ರಿನಾ ಕೈಫ್​ ಜೊತೆ ನಟಿಸಿರುವ ಹೊಸ ಜಾಹೀರಾತು ಸಖತ್​ ವೈರಲ್​ ಆಗಿದೆ.

ಇದನ್ನೂ ಓದಿ:

ಗಂಡನ ಮನೆಯಲ್ಲಿ ಅಡುಗೆ ಕಲಿಯುತ್ತಿರುವ ಕತ್ರಿನಾ! ​ಮದುವೆ ಬಳಿಕ ವಿಕ್ಕಿ-ಕತ್ರಿನಾಗೆ ಮೊದಲ ಸಂಕ್ರಾಂತಿ

ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಮದುವೆಗೆ ಕೊನೆಗೂ ವಿಶ್ ಮಾಡಿದ ಸಲ್ಮಾನ್ ಖಾನ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada