AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Akshay Kumar: ‘ನಾನು ಕೆಲಸ ಮಾಡುತ್ತಿರೋದು ಹಣಕ್ಕಾಗಿ ಅಲ್ಲ’; ಅಚ್ಚರಿಯ ವಿಚಾರ ಹೇಳಿಕೊಂಡ ಅಕ್ಷಯ್ ಕುಮಾರ್!

Bachchhan Paandey: ಬಾಲಿವುಡ್ ನಟ ಅಕ್ಷಯ್ ಕುಮಾರ್ ಸದ್ಯ ‘ಬಚ್ಚನ್ ಪಾಂಡೆ’ ಚಿತ್ರದ ರಿಲೀಸ್ ಸಿದ್ಧತೆಯಲ್ಲಿದ್ದಾರೆ. ನಟ ಇತ್ತೀಚೆಗೆ ಮಾತನಾಡುತ್ತಾ ಸಿನಿಮಾ ಮಾಡುವುದು ಏಕೆ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ.

Akshay Kumar: ‘ನಾನು ಕೆಲಸ ಮಾಡುತ್ತಿರೋದು ಹಣಕ್ಕಾಗಿ ಅಲ್ಲ’; ಅಚ್ಚರಿಯ ವಿಚಾರ ಹೇಳಿಕೊಂಡ ಅಕ್ಷಯ್ ಕುಮಾರ್!
ಅಕ್ಷಯ್​ ಕುಮಾರ್​
TV9 Web
| Updated By: shivaprasad.hs|

Updated on: Mar 10, 2022 | 9:05 AM

Share

ಬಾಲಿವುಡ್‌ನ ಬ್ಯುಸಿ ನಟರಲ್ಲಿ ಅಕ್ಷಯ್ ಕುಮಾರ್ (Akshay Kumar) ಒಬ್ಬರು. ಅವರ ನಟನೆಯ ಚಿತ್ರಗಳು ಬಿಗ್ ಬಜೆಟ್‌ನಲ್ಲಿ ತಯಾರಾದರೂ ಕೂಡ ಅಕ್ಷಯ್ ಇತರ ನಟರಂತೆ ಒಂದೇ ಚಿತ್ರಕ್ಕೆ‌ ಹಲವು ವರ್ಷಗಳನ್ನು ತೆಗೆದುಕೊಳ್ಳುವುದಿಲ್ಲ. ಏನಿಲ್ಲವೆಂದರೂ ವರ್ಷಕ್ಕೆ ಅವರ ಮೂರು ಚಿತ್ರಗಳು ರಿಲೀಸ್ ಆಗುತ್ತವೆ. ಇದೇ ಕಾರಣಕ್ಕೆ‌ ನಿರ್ಮಾಪಕರಿಗೂ ಅಕ್ಷಯ್ ಅಚ್ಚುಮೆಚ್ಚು. ಬಾಕ್ಸಾಫೀಸ್ ಕಲೆಕ್ಷನ್ ನಲ್ಲೂ ಅಕ್ಷಯ್ ಚಿತ್ರಗಳು ಹಿಂದೆ ಬೀಳುವುದಿಲ್ಲ. ಅವರ ಹಿಂದಿನ ಚಿತ್ರ ‘ಸೂರ್ಯವಂಶಿ’ ಕೊವಿಡ್ ನಡುವೆಯೂ 200 ಕೋಟಿ ರೂಗೂ ಅಧಿಕ ಹಣವನ್ನು ಗಳಿಸಿತ್ತು. ಇದೀಗ ಅಕ್ಷಯ್ ಹೊಸ ಚಿತ್ರದ ಬಿಡುಗಡೆಯ ತಯಾರಿಯಲ್ಲಿದ್ದಾರೆ. ಇದೇ ವೇಳೆ ಅವರು ತಾವೇಕೆ ಸಿನಿಮಾ ಮಾಡುತ್ತಿರುವುದು ಎಂಬುದರ‌ ಬಗ್ಗೆ ಅಚ್ಚರಿಯ ಮಾಹಿತಿ ಹಂಚಿಕೊಂಡಿದ್ದಾರೆ. 54 ವರ್ಷದ ಅಕ್ಷಯ್ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲೊಬ್ಬರು. ಅವರ ಮುಂದಿನ‌ ಚಿತ್ರ ‘ಬಚ್ಚನ್ ಪಾಂಡೆ’ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ತಮ್ಮ ಸಿನಿಮಾ ಕೆಲಸಗಳ ಬಗ್ಗೆ ಮಾತನಾಡಿದ್ದಾರೆ.

ಬೆಳಗ್ಗೆ ಮುಂಚೆಯೇ ಶೂಟಿಂಗ್ ಗೆ ತೆರಳುವುದು ತಮಗಿಷ್ಟ ಎಂದು ಹೇಳಿಕೊಂಡಿರುವ ಅಕ್ಷಯ್, ಪ್ರತಿ ಭಾನುವಾರ ಬಿಡುವು ಪಡೆಯುತ್ತಾರಂತೆ. ಪ್ರತಿದಿನವೂ ಕೆಲಸ ಮಾಡುವುದರಿಂದ ಸಹಜವಾಗಿಯೇ ಹಲವು ಚಿತ್ರಗಳು ಬೆನ್ನಿಗಿರುತ್ತವೆ ಎಂದಿದ್ದಾರೆ ಅಕ್ಷಯ್. ತಾನೇಕೆ ಸಿನಿಮಾ ಮಾಡುತ್ತೇನೆ ಎಂದು ವಿವರಿಸಿದ ಅಕ್ಷಯ್, “ಕೊವಿಡ್ ಸಂದರ್ಭದಲ್ಲಿಯೂ ಎಲ್ಲರೂ ಕೆಲಸ ಮಾಡಿದ್ದಾರೆ.‌ ಕಾರಣ, ಎಲ್ಲರಿಗೂ ಹಣದ ಅವಶ್ಯಕತೆ ಇದೆ. ನನಗೆ ಜೀವನದಲ್ಲಿ‌ ಎಲ್ಲವೂ ಇದೆ. ಒಳ್ಳೆಯ ಬದುಕನ್ನು‌ ನಡೆಸುತ್ತಿದ್ದೇನೆ. ಆರಾಮವಾಗಿ‌ ಮನೆಯಲ್ಲಿ ಕುಳಿತೂ ದಿನಗಳನ್ನು ಕಳೆಯಬಹುದು. ಆದರೆ ಹಾಗೆ ಮಾಡಿದರೆ ಕೆಲಸ ಮಾಡಬೇಕು, ಹಣ ಗಳಿಸಬೇಕು ಎಂದು ಅಂದುಕೊಂಡವರ ಕತೆ ಏನು?” ಎಂದು ಪ್ರಶ್ನಿಸಿದ್ದಾರೆ.

ಮುಂದುವರೆದು ಮಾತನಾಡಿದ ಅವರು, “ನಾನೀಗ ಹಣಕ್ಕಾಗಿ ಅಲ್ಲ, ಆಸಕ್ತಿಯ ಕಾರಣದಿಂದ ಸಿನಿಮಾ ಮಾಡುತ್ತಿದ್ದೇನೆ. ನನಗೆ ಯಾವಾಗ ಆಸಕ್ತಿ ಹೊರಟುಹೋಗುತ್ತದೋ ಆಗ ಕೆಲಸ ನಿಲ್ಲಿಸುತ್ತೇನೆ” ಎಂದು ಅಕ್ಷಯ್ ಹೇಳಿದ್ದಾರೆ‌.

ಮಾರ್ಚ್ 18ರಂದು ‘ಬಚ್ಚನ್ ಪಾಂಡೆ’ ರಿಲೀಸ್ ಆಗಲಿದೆ. ‘ಜಿಗರ್​ಥಂಡ’ ಚಿತ್ರದ ರಿಮೇಕ್ ‘ಬಚ್ಚನ್ ಪಾಂಡೆ’ ಎನ್ನಲಾಗಿದೆ. ಹಿಂದಿಗೆ ಅನುಗುಣವಾಗಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಚಿತ್ರವನ್ನು ಫರ್ಹಾದ್​ ಸಮ್ಜಿ ನಿರ್ದೇಶನ ಮಾಡಿದ್ದು, ಸಾಜಿದ್​ ನಾಡಿಯದ್ವಾಲಾ ನಿರ್ಮಾಣ ಮಾಡಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್, ಕೃತಿ ಸನೋನ್‌ ಮೊದಲಾದ ತಾರೆಯರು ‘ಬಚ್ಚನ್ ಪಾಂಡೆ’ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ.

ಅಕ್ಷಯ್ ಬತ್ತಳಿಕೆಯಲ್ಲಿ ಸಾಲು ಸಾಲು ಚಿತ್ರಗಳಿವೆ. ‘ರಕ್ಷಾ ಬಂಧನ್’, ‘ರಾಮಸೇತು’, ‘ಮಿಷನ್ ಸಿಂಡ್ರೆಲ್ಲಾ’, ‘ಗೂರ್ಖಾ’, ‘ಓ ಮೈ ಗಾಡ್ 2’ ಮೊದಲಾದ ಚಿತ್ರಗಳು ಅನೌನ್ಸ್ ಆಗಿದ್ದು, ಹಲವು ಚಿತ್ರಗಳ ಕೆಲಸಗಳು ನಡೆಯುತ್ತಿವೆ. ಅಮೆಜಾನ್ ಸೀರೀಸ್ ಆದ ‘ದಿ ಎಂಡ್’ನಲ್ಲೂ ಅಕ್ಷಯ್ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:

Bachchhan Paandey: ಜಿಗರ್​ಥಂಡ ರಿಮೇಕ್​ ‘ಬಚ್ಚನ್ ಪಾಂಡೆ’ ಚಿತ್ರದ ಟ್ರೈಲರ್ ರಿಲೀಸ್; ಗ್ಯಾಂಗ್​​ಸ್ಟರ್ ಆಗಿ ಅಬ್ಬರಿಸಿದ ಅಕ್ಷಯ್

‘ರಾಧೆ ಶ್ಯಾಮ್​’ ಚಿತ್ರದ ಮುಂಗಡ ಟಿಕೆಟ್​ ಬುಕಿಂಗ್; ಈಗಾಗಲೇ ಹರಿದು ಬಂದಿದ್ದು ಎಷ್ಟು ಕೋಟಿ ರೂಪಾಯಿ​?

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ