‘ರಾಧೆ ಶ್ಯಾಮ್’ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್; ಈಗಾಗಲೇ ಹರಿದು ಬಂದಿದ್ದು ಎಷ್ಟು ಕೋಟಿ ರೂಪಾಯಿ?
Radhe Shyam Movie Ticket Booking: ‘ರಾಧೆ ಶ್ಯಾಮ್’ ಚಿತ್ರಕ್ಕೆ ಇನ್ನೂ ಹಲವು ಚಿತ್ರಮಂದಿರಗಳಲ್ಲಿ ಟಿಕೆಟ್ ಬುಕಿಂಗ್ ಓಪನ್ ಆಗುವುದು ಬಾಕಿ ಇದೆ. ಕೇವಲ ಹೈದರಾಬಾದ್ ನಗರದಲ್ಲಿ 4.7 ಕೋಟಿ ರೂಪಾಯಿಯಷ್ಟು ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ.
ಸ್ಟಾರ್ ಸಿನಿಮಾಗಳ ರಿಲೀಸ್ ದಿನಾಂಕ ಅನೌನ್ಸ್ ಆದರೆ ಸಾಕು, ಟಿಕೆಟ್ ಬುಕ್ ಮಾಡಲು ಅಭಿಮಾನಿಗಳು ಕಾಯುತ್ತಾ ಇರುತ್ತಾರೆ. ಅದರಲ್ಲೂ ಪ್ರಭಾಸ್ (Prabhas) ಅವರಂತಹ ಪ್ಯಾನ್ ಇಂಡಿಯಾ ಹೀರೋ ಅಭಿನಯದ ಸಿನಿಮಾ ಬಿಡುಗಡೆ ಆಗುವಾಗ ಕ್ರೇಜ್ ಇನ್ನೂ ಹೆಚ್ಚಾಗಿರುತ್ತದೆ. ಅದು ‘ರಾಧೆ ಶ್ಯಾಮ್’ (Radhe Shyam Movie) ವಿಚಾರದಲ್ಲಿ ಮತ್ತೆ ಸಾಬೀತಾಗುತ್ತಿದೆ. ಮಾ.11ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಪ್ರಭಾಸ್ಗೆ ನಾಯಕಿಯಾಗಿ ಪೂಜಾ ಹೆಗ್ಡೆ (Pooja Hegde) ಅಭಿನಯಿಸಿದ್ದಾರೆ. ಅವರಿಗೂ ದೊಡ್ಡ ಅಭಿಮಾನಿ ಬಳಗ ಇರುವುದರಿಂದ ಸಿನಿಮಾ ನೋಡಲು ಅವರೆಲ್ಲರೂ ಕಾಯುತ್ತಿದ್ದಾರೆ. ಈಗ ‘ರಾಧೆ ಶ್ಯಾಮ್’ ಸಿನಿಮಾದ ಮುಂಗಡ ಟಿಕೆಟ್ ಬುಕಿಂಗ್ ಆರಂಭ ಆಗಿದೆ. ಚಿತ್ರ ನೋಡಲು ತುದಿಗಾಲಿನಲ್ಲಿ ನಿಂತಿರುವ ಅಭಿಮಾನಿಗಳೆಲ್ಲ ಮುಗಿಬಿದ್ದು ಬುಕಿಂಗ್ ಮಾಡುತ್ತಿದ್ದಾರೆ. ಅದರ ಪರಿಣಾಮವಾಗಿ ರಿಲೀಸ್ಗೂ ಮುನ್ನವೇ ‘ರಾಧೆ ಶ್ಯಾಮ್’ ನಿರ್ಮಾಪಕರಿಗೆ ಬಹುಕೋಟಿ ರೂಪಾಯಿ ಆದಾಯ ಹರಿದುಬರುತ್ತಿದೆ. ಹೈದರಾಬಾದ್ನಲ್ಲಿ ‘ರಾಧೆ ಶ್ಯಾಮ್’ ಸಿನಿಮಾದ ಕ್ರೇಜ್ ಜೋರಾಗಿದೆ. ಮೂಲಗಳ ಪ್ರಕಾರ ಮುಂಗಡ ಟಿಕೆಟ್ ಬುಕಿಂಗ್ ಮೂಲಕ ಈಗಾಗಲೇ 4.7 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇದು ಪ್ರಭಾಸ್ ಅಭಿಮಾನಿಗಳಿಗೆ ಮತ್ತು ‘ರಾಧೆ ಶ್ಯಾಮ್’ ಚಿತ್ರತಂಡಕ್ಕೆ ಖುಷಿ ನೀಡಿದೆ.
‘ಬಾಹುಬಲಿ’ ಸಿನಿಮಾದ ಯಶಸ್ಸಿನ ನಂತರ ಪ್ರಭಾಸ್ ಅವರ ಚಾರ್ಮ್ ಹೆಚ್ಚಾಯಿತು. ಅವರ ಅಭಿಮಾನಿ ಬಳಗವೂ ದೊಡ್ಡದಾಯಿತು. ಈಗ ‘ರಾಧೆ ಶ್ಯಾಮ್’ ಸಿನಿಮಾವನ್ನು ಫಸ್ಟ್ ಡೇ ಫಸ್ಟ್ ಶೋ ಕಣ್ತುಂಬಿಕೊಳ್ಳಲು ಎಲ್ಲರೂ ಕಾಯುತ್ತಿದ್ದಾರೆ. ಹೈದರಾಬಾದ್ನ ಬಹುತೇಕ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಈ ಸಿನಿಮಾಗೆ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಶುರುವಾಗಿದೆ. ಇನ್ನೂ ಹಲವು ಚಿತ್ರಮಂದಿರಗಳಲ್ಲಿ ಬುಕಿಂಗ್ ಓಪನ್ ಆಗುವುದು ಬಾಕಿ ಇದೆ. ಕೇವಲ ಹೈದರಾಬಾದ್ ನಗರದಲ್ಲಿ 4.7 ಕೋಟಿ ರೂಪಾಯಿಯಷ್ಟು ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ.
ಮೊದಲ ದಿನ, ಅಂದರೆ ಮಾ.11ರಂದು ಈ ಸಿನಿಮಾ ಎಲ್ಲ ಕಡೆಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣಲಿದೆ. ಕರ್ನಾಟಕದಲ್ಲಿಯೂ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಆರಂಭ ಆಗಿದೆ. ಬೆಂಗಳೂರಿನಲ್ಲಿ ಮಾ.11ರಂದು 450ಕ್ಕೂ ಹೆಚ್ಚು ಶೋಗಳು ‘ರಾಧೆ ಶ್ಯಾಮ್’ ಚಿತ್ರಕ್ಕಾಗಿ ಮೀಸಲಾಗಿವೆ. ರಾಧಾ ಕೃಷ್ಣ ಕುಮಾರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಆ್ಯಕ್ಷನ್ ಹೀರೋ ಇಮೇಜ್ ಬದಿಗಿಟ್ಟು ಪ್ರಭಾಸ್ ಅವರು ಪಕ್ಕಾ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್ ಮತ್ತು ಹಾಡುಗಳನ್ನು ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ. ಪೂರ್ತಿ ಸಿನಿಮಾ ನೋಡಲು ಪ್ರಭಾಸ್ ಅಭಿಮಾನಿಗಳು ಕಾಯುತ್ತಿದ್ದಾರೆ.
ಈಗಾಗಲೇ ತಿಳಿದಿರುವಂತೆ ‘ರಾಧೆ ಶ್ಯಾಮ್’ ಸಿನಿಮಾ ತೆಲುಗಿನಲ್ಲಿ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಕನ್ನಡ, ತಮಿಳು, ಮಲಯಾಳಂ, ಹಿಂದಿ ಭಾಷೆಗಳಿಗೆ ಈ ಸಿನಿಮಾ ಡಬ್ ಆಗಿ ರಿಲೀಸ್ ಆಗುತ್ತಿದೆ. ಸಿನಿಮಾದಲ್ಲಿ ಬರುವ ಒಂದು ಹಿನ್ನೆಲೆ ನಿರೂಪಣೆಗೆ ಆಯಾ ಭಾಷೆಯ ದೊಡ್ಡ ಸೆಲೆಬ್ರಿಟಿಗಳು ಧ್ವನಿ ನೀಡಿದ್ದಾರೆ. ‘ರಾಧೆ ಶ್ಯಾಮ್’ ಚಿತ್ರದ ಕನ್ನಡ ವರ್ಷನ್ ನಿರೂಪಣೆಗೆ ಶಿವರಾಜ್ಕುಮಾರ್ ಅವರು ಹಿನ್ನೆಲೆ ಧ್ವನಿ ನೀಡಿದ್ದಾರೆ. ಅದೇ ರೀತಿ, ತೆಲುಗಿನಲ್ಲಿ ರಾಜಮೌಳಿ ಹಾಗೂ ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರು ಈ ಕೆಲಸ ಮಾಡಿದ್ದಾರೆ. ಆ ಮೂಲಕ ಈ ಘಟಾನುಘಟಿಗಳು ‘ರಾಧೆ ಶ್ಯಾಮ್’ ತಂಡದ ಭಾಗವಾಗಿದ್ದಾರೆ. ಇದರಿಂದ ಸಿನಿಮಾ ಮೇಲಿನ ನಿರೀಕ್ಷೆ ಡಬಲ್ ಹೆಚ್ಚಿದೆ.
ಇದನ್ನೂ ಓದಿ:
‘ಬಾಹುಬಲಿ’ ಚಿತ್ರದಿಂದ ಪ್ರಭಾಸ್ಗೆ ಆದ ದೊಡ್ಡ ನಷ್ಟ ಏನು? ಅಂತೂ ಬಾಯ್ಬಿಟ್ಟ ಪ್ಯಾನ್ ಇಂಡಿಯಾ ಸ್ಟಾರ್
ಪ್ಯಾನ್ ಇಂಡಿಯಾ ಸ್ಟಾರ್ ಆದ್ರೂ ಪ್ರಭಾಸ್ಗೆ ಇದೆ ಭಾಷೆ ಸಮಸ್ಯೆ; ಹೌದೆಂದು ಒಪ್ಪಿಕೊಂಡ ನಟ