Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾಹುಬಲಿ’ ಚಿತ್ರದಿಂದ ಪ್ರಭಾಸ್​ಗೆ ಆದ ದೊಡ್ಡ ನಷ್ಟ ಏನು? ಅಂತೂ ಬಾಯ್ಬಿಟ್ಟ ಪ್ಯಾನ್​ ಇಂಡಿಯಾ ಸ್ಟಾರ್​

ಪ್ರಭಾಸ್​ ನಟಿಸುವ ಬೇರೆ ಎಲ್ಲ ಸಿನಿಮಾಗಳನ್ನು ‘ಬಾಹುಬಲಿ’ಗೆ ಜನರು ಹೋಲಿಸಲು ಆರಂಭಿಸಿದ್ದಾರೆ. ಆ ಒತ್ತಡದ ಕಾರಣಕ್ಕೆ ಪ್ರಭಾಸ್​ ಅವರಿಗೆ ಒಂದು ರೀತಿಯಲ್ಲಿ ಹಿನ್ನಡೆ ಆಗುತ್ತಿದೆ.

‘ಬಾಹುಬಲಿ’ ಚಿತ್ರದಿಂದ ಪ್ರಭಾಸ್​ಗೆ ಆದ ದೊಡ್ಡ ನಷ್ಟ ಏನು? ಅಂತೂ ಬಾಯ್ಬಿಟ್ಟ ಪ್ಯಾನ್​ ಇಂಡಿಯಾ ಸ್ಟಾರ್​
ಪ್ರಭಾಸ್
Follow us
TV9 Web
| Updated By: ಮದನ್​ ಕುಮಾರ್​

Updated on: Mar 09, 2022 | 12:05 PM

ಇಡೀ ವಿಶ್ವವೇ ತೆಲುಗು ಚಿತ್ರರಂಗದ ಕಡೆಗೆ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಎಂದರೆ ಅದು ‘ಬಾಹುಬಲಿ’. ಆ ಚಿತ್ರದ ಯಶಸ್ಸಿನ ಬಳಿಕ ನಟ ಪ್ರಭಾಸ್​ ಅವರು ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಬೆಳೆದರು. ನಿರ್ದೇಶಕ ರಾಜಮೌಳಿ ಅವರು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡರು. ಸಾವಿರಾರು ಕೋಟಿ ರೂಪಾಯಿ ಆದಾಯ ಗಳಿಸುವಲ್ಲಿ ಆ ಸಿನಿಮಾ ಯಶಸ್ವಿ ಆಯಿತು. ಇಷ್ಟೆಲ್ಲ ಲಾಭ ಮಾಡಿಕೊಟ್ಟ ‘ಬಾಹುಬಲಿ’ (Baahubali Movie) ಚಿತ್ರದಿಂದ ಪ್ರಭಾಸ್​ಗೆ ಒಂದು ನಷ್ಟ ಕೂಡ ಆಗಿದೆ. ಅದೇನು ಎಂಬುದನ್ನು ಈಗ ಅವರ ಬಾಯಿ ಬಿಟ್ಟಿದ್ದಾರೆ. ಸದ್ಯ ಪ್ರಭಾಸ್​ ಅಭಿನಯದ ‘ರಾಧೆ ಶ್ಯಾಮ್​’ (Radhe Shyam) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮಾರ್ಚ್​ 11ರಂದು ವಿಶ್ವಾದ್ಯಂತ ಈ ಚಿತ್ರ ಬಿಡುಗಡೆ ಆಗುತ್ತಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ಪ್ರಭಾಸ್​ (Prabhas) ಅವರು ಅನೇಕ ಕಡೆಗಳಲ್ಲಿ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ‘ಬಾಹುಬಲಿ’ ಸಿನಿಮಾದಿಂದ ಆದ ಪ್ಲಸ್​ ಮತ್ತು ಮೈನಸ್​ಗಳ ಬಗ್ಗೆ ಅವರು ಬಾಯಿ ಬಿಟ್ಟಿದ್ದಾರೆ.

‘ಬಾಹುಬಲಿ’ ಸಿನಿಮಾದಿಂದ ಪ್ರಭಾಸ್​ಗೆ ಕೀರ್ತಿ ಸಿಕ್ಕಿತು. ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳೆಲ್ಲ ಕಾಲ್​ಶೀಟ್​ ಪಡೆಯಲು ಅವರ ಮನೆ ಮುಂದೆ ಸಾಲುಗಟ್ಟಿ ನಿಲ್ಲುವಂತಾಗಿದ್ದು ಕೂಡ ನಿಜ. ಆದರೆ ಅದೇ ‘ಬಾಹುಬಲಿ’ಯಿಂದ ಪ್ರಭಾಸ್​ ಅವರ ಜೀವನದಲ್ಲಿ ಒತ್ತಡ ಹೆಚ್ಚಿತು. ಅದು ಅವರಿಗೆ ಆದ ದೊಡ್ಡ ನಷ್ಟ!

ಹೌದು, ‘ಬಾಹುಬಲಿ’ ಬಳಿಕ ಪ್ರಭಾಸ್​ ಅವರು ಪ್ಯಾನ್​ ಇಂಡಿಯಾ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯ ಆಯಿತು. ಎಲ್ಲ ಸಿನಿಮಾಗಳು ಕೂಡ ‘ಬಾಹುಬಲಿ’ ರೀತಿಯೇ ಅದ್ಭುತವಾಗಿ ಕಲೆಕ್ಷನ್​ ಮಾಡಬೇಕು ಎಂದು ಜನರು ನಿರೀಕ್ಷಿಸಲು ಆರಂಭಿಸಿದರು. ಆ ಒತ್ತಡವನ್ನು ಎದುರಿಸುವುದು ಸುಲಭವಲ್ಲ ಎಂಬ ಅಭಿಪ್ರಾಯನ್ನು ಪ್ರಭಾಸ್​ ವ್ಯಕ್ತಪಡಿಸಿದ್ದಾರೆ. ಬೇರೆ ಎಲ್ಲ ಸಿನಿಮಾಗಳನ್ನು ‘ಬಾಹುಬಲಿ’ಗೆ ಜನರು ಹೋಲಿಸಲು ಆರಂಭಿಸಿದ್ದಾರೆ. ಆ ಒತ್ತಡದ ಕಾರಣಕ್ಕೆ ಪ್ರಭಾಸ್​ ಅವರಿಗೆ ಬೇರೆ ಸಿನಿಮಾದಲ್ಲಿ ಹಿನ್ನಡೆ ಆಗುತ್ತಿದೆ.

‘ಬಾಹುಬಲಿ’ ಚಿತ್ರದಿಂದ ಪ್ರಭಾಸ್​ಗೆ ಹೊಸ ಐಡೆಂಟಿಟಿ ಸಿಕ್ಕಿತು. ಎಲ್ಲೇ ಹೋದರೂ ಅವರನ್ನು ಬಾಹುಬಲಿ ಎಂದೇ ಜನರು ಗುರುತಿಸುತ್ತಾರೆ. ಆ ಬಗ್ಗೆ ಅವರಿಗೆ ಖುಷಿ ಇದೆ. ಆದರೆ ಮತ್ತೆ ಮತ್ತೆ ಪ್ರಭಾಸ್​ ಅವರು ಆ ರೀತಿಯ ಆ್ಯಕ್ಷನ್​ ಸಿನಿಮಾಗಳನ್ನೇ ಮಾಡಬೇಕು ಅಂತ ಜನರು ಬಯಸುತ್ತಾರೆ. ‘ಅಂಥ ಕಮರ್ಷಿಯಲ್​ ಸಿನಿಮಾಗಳನ್ನು ಮಾಡುವುದು ಸುಲಭ. ಆದರೆ ನಾನು ಪ್ರಯೋಗ ಮಾಡಲು ಬಯಸುತ್ತೇನೆ’ ಎಂದು ಪ್ರಭಾಸ್​ ಹೇಳಿದ್ದಾರೆ.

‘ಸಾಹೋ’ ಮತ್ತು ‘ಬಾಹುಬಲಿ’ ಸಿನಿಮಾದಲ್ಲಿ ಪ್ರಭಾಸ್​ ಅವರು ಆ್ಯಕ್ಷನ್​ ಹೀರೋ ಆಗಿ ಕಾಣಿಸಿಕೊಂಡಿದ್ದರು. ಈಗ ‘ರಾಧೆ ಶ್ಯಾಮ್​’ ಚಿತ್ರದಲ್ಲಿ ಅವರು ಸಖತ್​ ಡಿಫರೆಂಟ್​ ಆಗಿ ಜನರ ಮುಂದೆ ಬರುತ್ತಿದ್ದಾರೆ. ಪೂಜಾ ಹೆಗ್ಡೆ ಜೊತೆ ನಟಿಸಿರುವ ಅವರು ಲವರ್​ ಬಾಯ್​ ಗೆಟಪ್​ ಧರಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್​ ನೋಡಿದರೆ ಇದು ಯಾವ ರೀತಿಯ ಸಿನಿಮಾ ಎಂಬುದರ ಸುಳಿವು ಸಿಗುತ್ತದೆ.

ಸಿನಿಮಾ ಕ್ಷೇತ್ರದಲ್ಲಿ ತಮ್ಮ ಮುಂದಿನ ಯೋಜನೆಗಳ ಬಗ್ಗೆಯೂ ಪ್ರಭಾಸ್​ ಬಾಯಿ ಬಿಟ್ಟಿದ್ದಾರೆ. ‘ಇಂಡಿಯನ್​ ಎಕ್ಸ್​ಪ್ರೆಸ್​’ಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ. ‘ಎಲ್ಲ ಸಿನಿಮಾಗಳನ್ನೂ ದೊಡ್ಡ ಬಜೆಟ್​ನಲ್ಲೇ ಮಾಡಬೇಕು ಅಂತೇನಿಲ್ಲ. ಮುಂದೆ ನಾನೊಂದು ಕಾಮಿಡಿ ಸಿನಿಮಾ ಮಾಡಬೇಕು ಎಂದುಕೊಂಡಿದ್ದೇನೆ. ಎರಡು-ಮೂರು ದೊಡ್ಡ ಚಿತ್ರಗಳ ಬಳಿಕ ಏನಾದರೂ ಭಿನ್ನವಾಗಿ ಮಾಡಬೇಕು. ಈಗ ಅಲ್ಲದೇ ಇದ್ದರೂ ಮುಂದೊಂದು ದಿನ ನಾನು ಆರ್ಟ್​ ಸಿನಿಮಾ ಮಾಡಬಹುದು. ತುಂಬ ಚಿಕ್ಕದಾದ ಒಂದು ರಿಯಲಿಸ್ಟಿಕ್​ ಸಿನಿಮಾ ಮಾಡಬೇಕು’ ಎಂದು ಪ್ರಭಾಸ್​ ಹೇಳಿದ್ದಾರೆ.

ಇದನ್ನೂ ಓದಿ:

ಪ್ಯಾನ್​ ಇಂಡಿಯಾ ಸ್ಟಾರ್​ ಆದ್ರೂ ಪ್ರಭಾಸ್​ಗೆ ಇದೆ ಭಾಷೆ ಸಮಸ್ಯೆ; ಹೌದೆಂದು ಒಪ್ಪಿಕೊಂಡ ನಟ

ಕಿಸ್​ ಮತ್ತು ಶರ್ಟ್​ ಲೆಸ್​ ದೃಶ್ಯದಲ್ಲಿ ಪ್ರಭಾಸ್​ಗೆ ಕಿರಿಕಿರಿ; ಈ ವಿಚಾರದಲ್ಲಿ ಅವರದ್ದು ಒಂದೇ ಒಂದು ಕಂಡೀಷನ್​

ಸಣ್ಣ ವಯಸ್ಸಲ್ಲಿ ಮಾಡಿದ್ದ ಆಣೆ: ಕೊಟ್ಟ ಮಾತು ನಡೆಸಿಕೊಟ್ಟ ಧ್ರುವ ಸರ್ಜಾ
ಸಣ್ಣ ವಯಸ್ಸಲ್ಲಿ ಮಾಡಿದ್ದ ಆಣೆ: ಕೊಟ್ಟ ಮಾತು ನಡೆಸಿಕೊಟ್ಟ ಧ್ರುವ ಸರ್ಜಾ
ಹೋಳಿ ಹಬ್ಬದಂದೇ ಹರಿಯಾಣದ ಬಿಜೆಪಿ ನಾಯಕನ ಹತ್ಯೆ; ಸಿಸಿಟಿವಿ ವಿಡಿಯೋ ವೈರಲ್
ಹೋಳಿ ಹಬ್ಬದಂದೇ ಹರಿಯಾಣದ ಬಿಜೆಪಿ ನಾಯಕನ ಹತ್ಯೆ; ಸಿಸಿಟಿವಿ ವಿಡಿಯೋ ವೈರಲ್
ಅಮೃತಸರ ದೇವಾಲಯದ ಮೇಲಿನ ಗ್ರೆನೇಡ್ ದಾಳಿ ಸಿಸಿಟಿವಿಯಲ್ಲಿ ಸೆರೆ
ಅಮೃತಸರ ದೇವಾಲಯದ ಮೇಲಿನ ಗ್ರೆನೇಡ್ ದಾಳಿ ಸಿಸಿಟಿವಿಯಲ್ಲಿ ಸೆರೆ
ರಸ್ತೆಯಲ್ಲಿ ಮಹಿಳೆ, ಮಗುವಿನ ಮೇಲೆ ಬೀದಿ ಹಸು ಅಟ್ಯಾಕ್; ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಮಹಿಳೆ, ಮಗುವಿನ ಮೇಲೆ ಬೀದಿ ಹಸು ಅಟ್ಯಾಕ್; ವಿಡಿಯೋ ಇಲ್ಲಿದೆ
ಯುವತಿಯರೊಂದಿಗೆ ಮಕ್ಕಳನ್ನು ಹೆಗಲ ಮೇಲೆ ಹೊತ್ತು ಕುಣಿದ ಗೃಹಿಣಿಯರು
ಯುವತಿಯರೊಂದಿಗೆ ಮಕ್ಕಳನ್ನು ಹೆಗಲ ಮೇಲೆ ಹೊತ್ತು ಕುಣಿದ ಗೃಹಿಣಿಯರು
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ