Rashmika Mandanna: ಜೂನ್​ 10 ರಶ್ಮಿಕಾ ಮಂದಣ್ಣ ಪಾಲಿಗೆ ವಿಶೇಷ ದಿನ; ಈಡೇರುತ್ತಿದೆ ಹಲವು ವರ್ಷಗಳ ಕನಸು

‘ಕಿರಿಕ್​ ಪಾರ್ಟಿ’ ಸಿನಿಮಾದಿಂದ ರಶ್ಮಿಕಾ ಕರ್ನಾಟಕ ಕ್ರಶ್​ ಆದರು. ಆ ಬಳಿಕ ಅವರು ಹೆಜ್ಜೆ ಹಾಕಿದ್ದು ಟಾಲಿವುಡ್​ನತ್ತ. ಅಲ್ಲಿಗೆ ಅವರು ಸುಮ್ಮನಾಗಲಿಲ್ಲ. ಕಾಲಿವುಡ್​ನತ್ತ ರಶ್ಮಿಕಾ ಹೆಜ್ಜೆ ಹಾಕಿದರು. ಈಗ ಅವರು ಬಾಲಿವುಡ್​ಗೂ ಕಾಲಿಟ್ಟಿದ್ದು, ಸಿನಿಮಾ ರಿಲೀಸ್​ಗಾಗಿ ಕಾಯುತ್ತಿದ್ದಾರೆ.

Rashmika Mandanna: ಜೂನ್​ 10 ರಶ್ಮಿಕಾ ಮಂದಣ್ಣ ಪಾಲಿಗೆ ವಿಶೇಷ ದಿನ; ಈಡೇರುತ್ತಿದೆ ಹಲವು ವರ್ಷಗಳ ಕನಸು
ರಶ್ಮಿಕಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Mar 09, 2022 | 1:40 PM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಚಿತ್ರರಂಗದಲ್ಲಿ (Cinema Industry) ಸಾಕಷ್ಟು ಬೇಡಿಕೆ ಸೃಷ್ಟಿಮಾಡಿಕೊಂಡಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ‘ಪುಷ್ಪ’ ಸಿನಿಮಾ (Pushpa Movie) ಯಶಸ್ಸಿನ ನಂತರ ಅವರಿಗೆ ಡಿಮ್ಯಾಂಡ್​ ಹೆಚ್ಚಿದೆ. ಅವರ ಅಭಿಮಾನಿ ಬಳಗ ಕೂಡ ದೊಡ್ಡದಾಗಿದೆ. ಈಗ ರಶ್ಮಿಕಾ ಮಂದಣ್ಣ ಪಾಲಿಗೆ ಮುಂಬರುವ ಜೂನ್​ ತಿಂಗಳು ವಿಶೇಷವಾಗಿರಲಿದೆ. ಈ ದಿನಕ್ಕಾಗಿ ಅವರು ಹಲವು ವರ್ಷಗಳಿಂದ ಕಾಯುತ್ತಿದ್ದರು. ಅವರ ಕನಸು ಈಡೇರುವ ದಿನ ಹತ್ತಿರವಾಗಿದೆ. ಹಾಗಾದರೆ, ಜೂನ್​ ತಿಂಗಳು ರಶ್ಮಿಕಾ ಪಾಲಿಗೆ ಏಕೆ ವಿಶೇಷವಾಗಿರಲಿದೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

‘ಕಿರಿಕ್​ ಪಾರ್ಟಿ’ ಸಿನಿಮಾದಿಂದ ರಶ್ಮಿಕಾ ಕರ್ನಾಟಕ ಕ್ರಶ್​ ಆದರು. ಆ ಬಳಿಕ ಅವರು ಹೆಜ್ಜೆ ಹಾಕಿದ್ದು ಟಾಲಿವುಡ್​ನತ್ತ. ಅಲ್ಲಿಗೆ ಅವರು ಸುಮ್ಮನಾಗಲಿಲ್ಲ. ಕಾಲಿವುಡ್​ನತ್ತ ರಶ್ಮಿಕಾ ಹೆಜ್ಜೆ ಹಾಕಿದರು. ಈಗ ಅವರು ಬಾಲಿವುಡ್​ಗೂ ಕಾಲಿಟ್ಟಿದ್ದು, ಸಿನಿಮಾ ರಿಲೀಸ್​ಗಾಗಿ ಕಾಯುತ್ತಿದ್ದಾರೆ. ಸಾಕಷ್ಟು ಹೀರೋ/ಹೀರೋಯಿನ್​ಗಳಿಗೆ ಬಾಲಿವುಡ್​ನಲ್ಲಿ ಮಿಂಚಬೇಕು ಎಂಬ ಕನಸು ಇರುತ್ತದೆ. ಇದು ಅನೇಕ ಪಾಲಿಗೆ ಕನಸಾಗಿಯೇ ಇರುತ್ತದೆ. ಆದರೆ, ರಶ್ಮಿಕಾ ಜೀವನದಲ್ಲಿ ಈ ಕನಸು ನನಸಾಗುತ್ತಿದೆ. ಅವರ ನಟನೆಯ ಮೊದಲ ಬಾಲಿವುಡ್​ ಚಿತ್ರ ‘ಮಿಷನ್​ ಮಜ್ನು’ ರಿಲೀಸ್​ ದಿನಾಂಕ ಘೋಷಣೆ ಆಗಿದ್ದು, ಜೂನ್​ 10ರಂದು ಸಿನಿಮಾ ತೆರೆಗೆ ಬರುತ್ತಿದೆ. ಈ ಕಾರಣಕ್ಕೆ ಅವರ ಪಾಲಿಗೆ ಈ ದಿನ ವಿಶೇಷವಾಗಲಿದೆ.

‘ಪುಷ್ಪ’ ಸಿನಿಮಾ ಹಿಂದಿಗೆ ಡಬ್​ ಆಗಿ ತೆರೆಕಂಡು 100 ಕೋಟಿ ಬಾಚಿಕೊಂಡಿದೆ. ಇದರಿಂದ ರಶ್ಮಿಕಾಗೆ ಹಿಂದಿ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿದೆ. ಅವರ ಮೊದಲ ಬಾಲಿವುಡ್​ ಸಿನಿಮಾ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾದಿದ್ದಾರೆ. ರಶ್ಮಿಕಾ ಕೂಡ ಸಖತ್​ ಎಗ್ಸೈಟ್​ ಆಗಿದ್ದಾರೆ. ಈ ಚಿತ್ರದ ಮೂಲಕ ಬಾಲಿವುಡ್​ನಲ್ಲಿ ರಶ್ಮಿಕಾ ಖಾತೆ ತೆರೆಯಲಿದ್ದಾರೆ. ಇದಲ್ಲದೆ, ಅಮಿತಾಭ್​ ಬಚ್ಚನ್​ ನಟನೆಯ ‘ಗುಡ್​ ಬೈ’ ಸಿನಿಮಾದಲ್ಲೂ ರಶ್ಮಿಕಾ ನಟಿಸುತ್ತಿದ್ದು, ಈ ಚಿತ್ರದ ರಿಲೀಸ್​ ದಿನಾಂಕ ಇನ್ನಷ್ಟೇ ಘೋಷಣೆ ಆಗಬೇಕಿದೆ.

‘ಮಿಷನ್​ ಮಜ್ನು’ ಸಿನಿಮಾದಲ್ಲಿ ಸಿದ್ದಾರ್ಥ್​ ಮಲ್ಹೋತ್ರಾಗೆ ಜತೆಯಾಗಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಮೊದಲ ಸಿನಿಮಾದಲ್ಲೇ ಸ್ಟಾರ್​ ನಟನ ಜತೆ ತೆರೆ ಹಂಚಿಕೊಳ್ಳುವ ಅವಕಾಶ ಅವರಿಗೆ ಸಿಕ್ಕಿದೆ. ಈ ಸಿನಿಮಾದಲ್ಲಿ ಅವರ ಪಾತ್ರ ಹೇಗಿದೆ ಎಂಬ ಕುತೂಹಲ ಸದ್ಯದ್ದು.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ, ಪೂಜಾ ಬಳಿಕ ಅಲ್ಲು ಅರ್ಜುನ್​ ಜತೆ ತೆರೆ ಹಂಚಿಕೊಂಡ ಮತ್ತೋರ್ವ ಕನ್ನಡದ ನಟಿ

‘ದಳಪತಿ’ ವಿಜಯ್ 66ನೇ ಚಿತ್ರಕ್ಕೆ ರಶ್ಮಿಕಾ ನಾಯಕಿ? ಬಾಲಿವುಡ್​ ನಟಿಯರನ್ನು ಹಿಂದಿಕ್ಕಿದ ಕೊಡಗಿನ ಹುಡುಗಿ