ರಶ್ಮಿಕಾ ಮಂದಣ್ಣ, ಪೂಜಾ ಬಳಿಕ ಅಲ್ಲು ಅರ್ಜುನ್​ ಜತೆ ತೆರೆ ಹಂಚಿಕೊಂಡ ಮತ್ತೋರ್ವ ಕನ್ನಡದ ನಟಿ

ರಶ್ಮಿಕಾ ಮಂದಣ್ಣ, ಪೂಜಾ ಬಳಿಕ ಅಲ್ಲು ಅರ್ಜುನ್​ ಜತೆ ತೆರೆ ಹಂಚಿಕೊಂಡ ಮತ್ತೋರ್ವ ಕನ್ನಡದ ನಟಿ
ನೇಹಾ-ಅಲ್ಲು ಅರ್ಜುನ್

ಗಣೇಶ್​ ನಟನೆಯ ‘ಮುಂಗಾರು ಮಳೆ 2’ ಚಿತ್ರದ ಮೂಲಕ ನೇಹಾ ಶೆಟ್ಟಿ ಕನ್ನಡದಲ್ಲಿ ಹೆಸರು ಮಾಡಿದರು. ಅವರು ತೆಲುಗು ಇಂಡಸ್ಟ್ರಿಯಲ್ಲೂ ಕೆಲಸ ಮಾಡಿದ್ದಾರೆ.

TV9kannada Web Team

| Edited By: Rajesh Duggumane

Mar 06, 2022 | 6:16 PM

ನಟ ಅಲ್ಲು ಅರ್ಜುನ್​ (Allu Arjun) ಅವರ ಜತೆ ತೆರೆ ಹಂಚಿಕೊಳ್ಳುವ ಅವಕಾಶಕ್ಕಾಗಿ ಸಾಕಷ್ಟು ಜನರು ಕಾಯುತ್ತಿರುತ್ತಾರೆ. ಅವರ ಜತೆ ನಟಿಸಿದರೆ ವೃತ್ತಿ ಜೀವನಕ್ಕೆ ಸಾಕಷ್ಟು ಮೈಲೇಜ್​ ಸಿಗುತ್ತದೆ. ಮಂಗಳೂರು ಮೂಲದ ಪೂಜಾ ಹೆಗ್ಡೆ (Pooja Hegde), ಕೊಡಗಿನ ರಶ್ಮಿಕಾ ಮಂದಣ್ಣ ಈಗಾಗಲೇ ಅಲ್ಲು ಅರ್ಜುನ್​ ಜತೆ ತೆರೆಹಂಚಿಕೊಂಡಿದ್ದಾರೆ. ಇಬ್ಬರಿಗೂ ಭಾರೀ ಬೇಡಿಕೆ ಸೃಷ್ಟಿ ಆಗಿದೆ. ಈಗ ಮಂಗಳೂರಿನ ನೇಹಾ ಶೆಟ್ಟಿ (Neha Shetty)ಕೂಡ ಅಲ್ಲು ಜತೆ ತೆರೆ ಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ವಿಡಿಯೋ ಈಗ ಸಖತ್​ ವೈರಲ್​ ಆಗುತ್ತಿದೆ. ಹಾಗಾದರೆ ಯಾವುದು ಆ ಸಿನಿಮಾ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಗಣೇಶ್​ ನಟನೆಯ ‘ಮುಂಗಾರು ಮಳೆ 2’ ಚಿತ್ರದ ಮೂಲಕ ನೇಹಾ ಶೆಟ್ಟಿ ಕನ್ನಡದಲ್ಲಿ ಹೆಸರು ಮಾಡಿದರು. ಅವರು ತೆಲುಗು ಇಂಡಸ್ಟ್ರಿಯಲ್ಲೂ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಸಿನಿಮಾ ಆಯ್ಕೆಯಲ್ಲಿ ಸಖತ್​ ಚ್ಯೂಸಿ ಆಗಿದ್ದಾರೆ. ಅವರು ಈಗ ಬನ್ನಿ ಜತೆ ತೆರೆ ಹಂಚಿಕೊಂಡಿದ್ದಾರೆ. ಹಾಗಂತ ಇದು ಸಿನಿಮಾದಲ್ಲಿ ಅಲ್ಲ, ಬದಲಿಗೆ ಜೊಮ್ಯಾಟೋ ಜಾಹೀರಾತಿನಲ್ಲಿ.

ಅಲ್ಲು ಅರ್ಜುನ್​ ಅವರ ಜತೆಗೆ ಫುಡ್​ ಡೆಲಿವರಿ ಸಂಸ್ಥೆ ಜೊಮ್ಯಾಟೋ ಕೈ ಜೋಡಿಸಿದೆ. ಇದರ ಜಾಹೀರಾತಿನಲ್ಲಿ ಅಲ್ಲು ಅರ್ಜುನ್​ ಹಾಗೂ ನೇಹಾ  ಶೆಟ್ಟಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ನೇಹಾ ಶೆಟ್ಟಿ ಅವರು ಗುಲಾಬಿ ಹೂವನ್ನು ಹಿಡಿದು ನಿಂತಿರುತ್ತಾರೆ. ಈ ಸಂದರ್ಭದಲ್ಲಿ ಅವರ ಬಳಿ ನಾಲ್ಕೈದು ಮಂದಿ ಬರುತ್ತಾರೆ. ಈ ವೇಳೆ ಬೈಕ್​ನಲ್ಲಿ ಬರುವ ಅಲ್ಲು ಅರ್ಜುನ್​ ಎಲ್ಲರಿಗೂ ಹೊಡೆಯುತ್ತಾರೆ.

ವಿವಾದ ಸೃಷ್ಟಿಸಿದ್ದ ಜೊಮ್ಯಾಟೋ ಜಾಹೀರಾತು..

ಸಿನಿಮಾ ಹಿಟ್​ ಆದ ನಂತರದಲ್ಲಿ ಅದೇ ಥೀಮ್​ಅನ್ನು ಜಾಹೀರಾತಿನವರೂ ಬಳಕೆ ಮಾಡಿಕೊಳ್ಳುತ್ತಾರೆ. ‘ಪುಷ್ಪ’ ಸಿನಿಮಾ ಹಿಟ್​ ಆಗಿದೆ. ಈಗ ಅನೇಕ ಬ್ರ್ಯಾಂಡ್​ಗಳು ಅಲ್ಲು ಅರ್ಜುನ್​ ಹಿಂದೆ ಬಿದ್ದಿವೆ. ‘ಪುಷ್ಪ’ ಸಿನಿಮಾದ ಥೀಮ್​ ಇಟ್ಟುಕೊಂಡು ಜಾಹೀರಾತುಗಳನ್ನು ಮಾಡಲಾಗುತ್ತಿದೆ. ಸೂಪರ್ ಹಿಟ್​ ‘ಪುಷ್ಪ’ ಸಿನಿಮಾದಲ್ಲಿ ಫೈಟಿಂಗ್​ ವೇಳೆ ಕೆಲ ಸ್ಲೋ ಮೋಷನ್​ ದೃಶ್ಯಗಳು ಬಂದಿದ್ದವು. ಇದು ಕೇವಲ ‘ಪುಷ್ಪ’ ಸಿನಿಮಾಗೆ ಮಾತ್ರ ಸೀಮಿತವಾಗಿಲ್ಲ. ದಕ್ಷಿಣ ಭಾರತ ಹಾಗೂ ಬಾಲಿವುಡ್​ನ ಸಾಕಷ್ಟು ಸಿನಿಮಾಗಳಲ್ಲಿ ಫೈಟಿಂಗ್​ ವೇಳೆ ಇದೇ ಮಾದರಿಯ ತಂತ್ರ ಬಳಕೆ ಮಾಡಿಕೊಳ್ಳಾಗಿದೆ. ಈಗ ಬಂದಿರುವ ಜೊಮ್ಯಾಟೋ ಜಾಹೀರಾತಿನಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ವ್ಯಂಗ್ಯವಾಡಲಾಗಿತ್ತು.

ಜೊಮ್ಯಾಟೋ ಜಾಹೀರಾತಿನಲ್ಲಿ ಅಲ್ಲು ಅರ್ಜುನ್​ ಹಾಗೂ ತೆಲುಗು ನಟ ಸುಬ್ಬರಾಜು ನಡುವೆ ಫೈಟ್​ ನಡೆಯುತ್ತಿರುತ್ತದೆ. ಈ ಫೈಟ್​ನಲ್ಲಿ ಸುಬ್ಬರಾಜುಗೆ ಅಲ್ಲು ಅರ್ಜುನ್​ ಹೊಡೆಯುತ್ತಾರೆ. ಆಗ ಸುಬ್ಬರಾಜು ಅವರು ಸ್ಲೋಮೋಷನ್​ನಲ್ಲಿ ಕೆಳಗೆ ಬಿದ್ದಂತೆ ತೋರಿಸಲಾಗಿತ್ತು. ‘ಬನ್ನಿ ನನ್ನನ್ನು ಬೇಗ ಬೀಳಿಸು. ನನಗೆ ಮಟನ್​ ಕರ್ರಿ ತಿನ್ನಬೇಕು. ನಾನು ಬೀಳುವ ವೇಳೆಗೆ ರೆಸ್ಟೋರೆಂಟ್​ ಕ್ಲೋಸ್​ ಮಾಡುತ್ತಾರೆ’ ಎಂದಿದ್ದರು ಸುಬ್ಬರಾಜು. ಇದಕ್ಕೆ ಉತ್ತರಿಸಿರುವ ಅಲ್ಲು ಅರ್ಜುನ್​, ‘ಇದು ದಕ್ಷಿಣ ಭಾರತ ಸಿನಿಮಾ. ನಾವು ಮಾಡೋದೆ ಹೀಗೆ’ ಎಂದಿದ್ದರು.

ಇದನ್ನೂ ಓದಿ: ‘ಅರ್ಜುನ್ ರೆಡ್ಡಿ, ಗೀತ ಗೋವಿಂದಂ..’; ಅಲ್ಲು ಅರ್ಜುನ್ ರಿಜೆಕ್ಟ್ ಮಾಡಿದ್ದ ಈ 5 ಚಿತ್ರಗಳು ಸೂಪರ್​ಹಿಟ್! ಇಲ್ಲಿದೆ ಕುತೂಹಲಕರ ಮಾಹಿತಿ

ಅಲ್ಲು ಅರ್ಜುನ್ ರಿಜೆಕ್ಟ್ ಮಾಡಿದ್ದ ಈ ಚಿತ್ರಗಳು ಸೂಪರ್​ಹಿಟ್

Follow us on

Related Stories

Most Read Stories

Click on your DTH Provider to Add TV9 Kannada