AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುನೀತ್​ ಪಾತ್ರಕ್ಕೆ ಡಬ್​ ಮಾಡುವಾಗ ಭಯವಾಯ್ತು’; ‘ಜೇಮ್ಸ್​’ ಕಾರ್ಯಕ್ರಮದಲ್ಲಿ ಶಿವಣ್ಣ ಭಾವುಕ ನುಡಿ

ಪುನೀತ್​ ರಾಜ್​ಕುಮಾರ್ ನಟನೆಯ ‘ಜೇಮ್ಸ್​’ ಸಿನಿಮಾ ಮಾರ್ಚ್​ 17ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಸುದ್ದಿಗೋಷ್ಠಿ ಇಂದು (ಮಾರ್ಚ್​ 6) ಬೆಂಗಳೂರಿನಲ್ಲಿ ನಡೆದಿದೆ. ಈ ಕಾರ್ಯಕ್ರಮದ ವೇದಿಕೆ ಮೇಲೆ ಶಿವರಾಜ್​ಕುಮಾರ್ ಮಾತನಾಡಿದ್ದಾರೆ.

‘ಪುನೀತ್​ ಪಾತ್ರಕ್ಕೆ ಡಬ್​ ಮಾಡುವಾಗ ಭಯವಾಯ್ತು’; ‘ಜೇಮ್ಸ್​’ ಕಾರ್ಯಕ್ರಮದಲ್ಲಿ ಶಿವಣ್ಣ ಭಾವುಕ ನುಡಿ
ಶಿವಣ್ಣ
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Mar 06, 2022 | 9:11 PM

Share

ಪುನೀತ್​ ರಾಜ್​ಕುಮಾರ್ (Puneeth Rajkumar) ನಟನೆಯ ‘ಜೇಮ್ಸ್​’ ಸಿನಿಮಾ (James Movie) ಮಾರ್ಚ್​ 17ರಂದು ತೆರೆಗೆ ಬರುತ್ತಿದೆ. ಈ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಸುದ್ದಿಗೋಷ್ಠಿ ಇಂದು (ಮಾರ್ಚ್​ 6) ಬೆಂಗಳೂರಿನಲ್ಲಿ ನಡೆದಿದೆ. ಈ ಕಾರ್ಯಕ್ರಮದ ವೇದಿಕೆ ಮೇಲೆ ಶಿವರಾಜ್​ಕುಮಾರ್ (Shivarajkumar) ಮಾತನಾಡಿದ್ದಾರೆ. ಈ ವೇಳೆ ಸಾಕಷ್ಟು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಶಿವಣ್ಣ ಸಾಕಷ್ಟು ಭಾವುಕರಾದರು. ‘ಮಾತನಾಡೋಕೆ ಕಷ್ಟ ಆಗುತ್ತಿದೆ. ನಾಲ್ಕು ತಿಂಗಳಿಂದ ನಗ್ತೀವೀ, ಊಟ ಮಾಡ್ತೀವಿ, ಶೂಟಿಂಗ್​ನಲ್ಲಿ ಭಾಗಿ ಆಗ್ತೀವಿ. ಆದರೆ, ಮನಸ್ಸಲ್ಲಿರೋ ನೋವು ಕಡಿಮೆ ಆಗುತ್ತಿಲ್ಲ. ಬದುಕಬೇಕು ಬದುಕುತ್ತಾ ಇದ್ದೇವೆ. ಅಪ್ಪು ಚಿಕ್ಕ ವಯಸ್ಸಿಗೆ ಹೋದ. ನೆನಪಿಸಿಕೊಂಡಾಗೆಲ್ಲ ನೋವು ಜಾಸ್ತಿನೇ ಆಗುತ್ತದೆ. ಪ್ರೆಸ್​ಮೀಟ್​ನಲ್ಲಿ ನಾನು ಏನು ಮಾತನಾಡೋಕೆ ಸಾಧ್ಯ? ಇಲ್ಲಿ ಮಾತನಾಡೋದು ಕಷ್ಟ’ ಎಂದರು ಶಿವರಾಜ್​ಕುಮಾರ್.

‘ಅಪ್ಪು ವಾಯ್ಸ್​ಗೆ ನಾನೇ ಡಬ್ಬಿಂಗ್​ ಮಾಡಬೇಕು ಎಂದಾಗ ನಾನು ಹೇಳಿದೆ. ಅವನದ್ದೇ ವಾಯ್ಸ್​ ಬಳಕೆ ಮಾಡೋಕೆ ಆಗತ್ತ ನೋಡಿ ಎಂದು ಹೇಳಿದ್ದೆ. ಮಿಮಿಕ್ರಿ ಮಾಡುವವರ ಬಳಿ ಮಾಡಿಸೋಕೆ ಟ್ರೈ ಮಾಡಿ ಎಂದಿದ್ದೆ. ಚೇತನ್​ ಅವರು ಟ್ರೈ ಮಾಡಿದರು. ಆದರೆ, ಸರಿಯಾಗಿ ಬರಲಿಲ್ಲ. ನಾನು ತುಂಬಾನೇ ಹೆದರಿಕೊಂಡು ಮಾಡಿದೆ. ಅಪ್ಪು ಅವರದ್ದು ಅದ್ಭುತ ವಾಯ್ಸ್​ ಆಗಿತ್ತು. ಸ್ವಲ್ಪ ಟ್ರೈ ಮಾಡಿದ್ದೇನೆ. ಅಪ್ಪು ವಾಯ್ಸ್​ಗೆ ಎರಡು ದಿನ ಡಬ್ ಮಾಡಿದ್ದೇನೆ’ ಎಂದರು ಶಿವಣ್ಣ.

‘ಜೇಮ್ಸ್, ಇದು​ ಒಳ್ಳೆಯ ಮನಸ್ಸಿನ ವ್ಯಕ್ತಿಯ ಚಿತ್ರ. ಯಾವಾಗ ಕಾಲ್​ ಮಾಡಿದ್ರೂ ಶಿವಣ್ಣ ಅಂತಿದ್ದ. ಯಾವಾಗಲೂ ಹಗ್​ ಮಾಡುವಾಗ ಹೃದಯ ಭಾಗ ಟಚ್​ ಆಗುವ ರೀತಿಯಲ್ಲಿ ಹಗ್​ ಮಾಡುತ್ತಿದ್ದ. ಸಿನಿಮಾದಲ್ಲಿ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಪುನೀತ್ ಇಂಡಸ್ಟ್ರಿಯವರ ಹಾಗೂ ಅಭಿಮಾನಿಗಳ ಹಾರ್ಟ್​ನಲ್ಲಿ ಸದಾ ಇರ್ತಾನೆ. ಅಪ್ಪು ಅನೇಕರಿಗೆ ಸ್ಫೂರ್ತಿ ಆಗಿದ್ದ’ ಎಂದು ಭಾವುಕರಾದರು ಶಿವಣ್ಣ.

‘ಅಪ್ಪು ಹಾಗೂ ಚಿಕ್ಕಣ್ಣ ಇಬ್ಬರೂ ಕ್ಲೋಸ್​ ಆಗಿದ್ದರು. ನಾನು ಚೆನ್ನೈಗೆ ಹೋದಾಗ ನೀವು ಪುನೀತ್​ ಅವರ ಅಣ್ಣ ಅಲ್ಲವಾ ಎಂದು ಜನರು ಕೇಳಿದ್ದರು. ಕೃಷ್ಣಗಿರಿಯಲ್ಲಿ ಶೂಟ್​ ಮಾಡುವಾಗಲೂ ಅದೇ ರೀತಿ ಪ್ರಶ್ನೆ ಕೇಳಿದ್ದರು. ಅವನ ಅಣ್ಣನಾಗಿ ಇರೋಕೆ ನಾನು ಅದೃಷ್ಟ ಮಾಡಿದ್ದೆ. ಅಪ್ಪು ಯಾವಾಗಲೂ ಬದುಕಿರುತ್ತಾನೆ. ಜೇಮ್ಸ್​ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಮಾತು ಮುಗಿಸಿದರು ಶಿವರಾಜ್​ಕುಮಾರ್.

ಇದನ್ನೂ ಓದಿ: ರಸ್ತೆಬದಿ ನಿಂತವರ ಜತೆ ಮನೆಯವರಂತೆ ಮಾತಾಡಿದ ಶಿವರಾಜ್​ಕುಮಾರ್​; ಸರಳತೆಗೆ ಮತ್ತೊಂದು ಹೆಸರು ಶಿವಣ್ಣ

ಪಟಾಕಿ ಯಾರದ್ದೇ ಆಗಿರ್ಲಿ, ಹಚ್ಚೋದು ಮಾತ್ರ ಪುನೀತ್​ ರಾಜ್​ಕುಮಾರ್​: ವಂಶಿಕಾ ಸೂಪರ್​ ಮಾತು

Published On - 8:39 pm, Sun, 6 March 22

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು