AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆಬದಿ ನಿಂತವರ ಜತೆ ಮನೆಯವರಂತೆ ಮಾತಾಡಿದ ಶಿವರಾಜ್​ಕುಮಾರ್​; ಸರಳತೆಗೆ ಮತ್ತೊಂದು ಹೆಸರು ಶಿವಣ್ಣ

ಶಿವರಾಜ್​ಕುಮಾರ್​ ಅವರು ತಮ್ಮ ಕಾರಿನಲ್ಲಿ ಹೊರಗೆ ತೆರಳಿದ್ದರು. ರಸ್ತೆ ಮಧ್ಯೆ ಕಾರು ನಿಲ್ಲಿಸಲಾಗಿತ್ತು. ಈ ವೇಳೆ ಕಾರಿನ ಗ್ಲಾಸ್​ ಇಳಿದಿತ್ತು. ಈ ವೇಳೆ ರಸ್ತೆ ಬದಿಯಲ್ಲಿ ನಿಂತ ಮಹಿಳೆಯೊಬ್ಬರು ಶಿವರಾಜ್​ಕುಮಾರ್​ ಅವರನ್ನು ಲೈವ್​ ಆಗಿ ನೋಡಿದ್ದಕ್ಕೆ ಖುಷಿಪಟ್ಟಿದ್ದಾರೆ.

ರಸ್ತೆಬದಿ ನಿಂತವರ ಜತೆ ಮನೆಯವರಂತೆ ಮಾತಾಡಿದ ಶಿವರಾಜ್​ಕುಮಾರ್​; ಸರಳತೆಗೆ ಮತ್ತೊಂದು ಹೆಸರು ಶಿವಣ್ಣ
ಶಿವಣ್ಣ
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Feb 18, 2022 | 7:53 PM

Share

ರಾಜ್​ಕುಮಾರ್​ ಕುಟುಂಬಕ್ಕೆ (Rajumar Family) ಬೇರೆಯದೇ ಆದ ಘನತೆ ಇದೆ. ಸಿನಿಮಾ ರಂಗಕ್ಕೆ ಈ ಕುಟುಂಬ ನೀಡಿದ ಕೊಡುಗೆ ಅಷ್ಟಿಷ್ಟಲ್ಲ. ರಾಜ್​ ಕುಟುಂಬದವರು ಸರಳತೆ ವಿಚಾರದಿಂದಲೂ ಎಲ್ಲರಿಗೂ ಮಾದರಿ ಆಗಿದ್ದಾರೆ. ರಾಜ್​ಕುಮಾರ್ ಅವರಿಂದ ಹಿಡಿದು ಪುನೀತ್​ ರಾಜ್​ಕುಮಾರ್​ವರೆಗೆ (Puneeth Rajkumar) ಎಲ್ಲರೂ ಸದಾ​ ಸರಳವಾಗಿ ನಡೆದುಕೊಂಡಿದ್ದಾರೆ. ಇವರು ಯಾರ ಜತೆಗೂ ಸೊಕ್ಕಿನ ಮಾತನಾಡಿದವರಲ್ಲ. ಶಿವರಾಜ್​ಕುಮಾರ್ (Shivarajkumar)​ ಕೂಡ ಇದಕ್ಕೆ ಹೊರತಾಗಿಲ್ಲ. ಅವರು ಜನ ಸಾಮಾನ್ಯರ ಜತೆ ಸಾಮಾನ್ಯರಂತೆ ಇದ್ದುಬಿಡುತ್ತಾರೆ. ಈ ಮೊದಲು ಕೂಡ ಇದು ಸಾಬೀತಾಗಿದೆ. ಈಗ ಅವರ ಹೊಸ ವಿಡಿಯೋ ಒಂದು ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಶಿವರಾಜ್​ಕುಮಾರ್​ ಸಿಂಪ್ಲಿಸಿಟಿ ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಪುನೀತ್​ ರಾಜ್​ಕುಮಾರ್ ನಿಧನ ವಿಚಾರ ಶಿವರಾಜ್​ಕುಮಾರ್​ ಅವರಿಗೆ ತೀವ್ರ ದುಃಖ ತಂದಿದೆ. ಕೆಲವು ತಿಂಗಳ ಕಾಲ ಶಿವರಾಜ್​ಕುಮಾರ್ ಅವರು ಸಿನಿಮಾ ಕೆಲಸದಿಂದ ದೂರವೇ ಉಳಿದುಕೊಂಡಿದ್ದರು. ಈಗ ಅವರು ಸಿನಿಮಾ ಕೆಲಸಕ್ಕೆ ಮರಳಿದ್ದಾರೆ. ಪುನೀತ್​ ಇಲ್ಲ ಎನ್ನುವ ನೋವನ್ನು ಒಪ್ಪಿಕೊಂಡು ಮುಂದೆ ಸಾಗುತ್ತಿದ್ದಾರೆ. ಶಿವಣ್ಣ ನೋವು ತೋಡಿಕೊಂಡ ಅನೇಕ ವಿಡಿಯೋ ಸಾಕಷ್ಟು ವೈರಲ್​ ಆಗಿದೆ. ಈಗ ಶಿವರಾಜ್​ಕುಮಾರ್​​ ಅವರ ಹೊಸ ವಿಡಿಯೋ ಗಮನ ಸೆಳೆಯುತ್ತಿದೆ.

ಶಿವರಾಜ್​ಕುಮಾರ್​ ಅವರು ತಮ್ಮ ಕಾರಿನಲ್ಲಿ ಹೊರಗೆ ತೆರಳಿದ್ದರು. ರಸ್ತೆ ಮಧ್ಯೆ ಕಾರು ನಿಲ್ಲಿಸಲಾಗಿತ್ತು. ಈ ವೇಳೆ ಕಾರಿನ ಗ್ಲಾಸ್​ ಇಳಿದಿತ್ತು. ಈ ವೇಳೆ ರಸ್ತೆ ಬದಿಯಲ್ಲಿ ನಿಂತ ಮಹಿಳೆಯೊಬ್ಬರು ಶಿವರಾಜ್​ಕುಮಾರ್​ ಅವರನ್ನು ಲೈವ್​ ಆಗಿ ನೋಡಿದ್ದಕ್ಕೆ ಖುಷಿಪಟ್ಟಿದ್ದಾರೆ. ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಈ ಸಂತೋಷವನ್ನು ಆ ಮಹಿಳೆ ಶಿವಣ್ಣನ ಎದುರು ವ್ಯಕ್ತಪಡಿಸಿದ್ದಾರೆ. ಕುಟುಂಬದ ಸದಸ್ಯರಂತೆ ಅವರ ಉಭಯಕುಶಲೋಪರಿ ವಿಚಾರಿಸಿದ್ದಾರೆ ಶಿವರಾಜ್​ಕುಮಾರ್.

ಮಹಿಳೆ: ಸರ್​ ಹೇಗಿದ್ದೀರಾ?

ಶಿವರಾಜ್​ಕುಮಾರ್: ಚೆನ್ನಾಗಿದ್ದೀನಿ.

ಮಹಿಳೆ: ಮೊದಲ ಬಾರಿಗೆ ನಿಮ್ಮನ್ನು ನೋಡ್ತಿರೋದು. ತುಂಬಾ ಖುಷಿ ಆಯ್ತು.

ಶಿವರಾಜ್​ಕುಮಾರ್: ಥ್ಯಾಂಕ್ಸ್​. ಊಟ ಆಯ್ತಾ? ಬಿರಿಯಾನಿನಾ?

ಮಹಿಳೆ: ಇಲ್ಲ ಸರ್​. ನಿನ್ನೆ ಬಿರಿಯಾನಿ ಆಗಿತ್ತು.

ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್​ ಆಗುತ್ತಿದೆ. ಶಿವರಾಜ್​ಕುಮಾರ್​ ಸರಳತೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅವರು ಮಹಿಳೆಯ ಉಭಯಕುಶಲೋಪರಿ ವಿಚಾರಿಸಿಕೊಂಡ ಪರಿಗೆ ಅವರ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಟ್ರೋಲ್​ ಪೇಜ್​ಗಳಲ್ಲಿ, ಶಿವಣ್ಣ ಅಭಿಮಾನಿ ಬಳಗದಲ್ಲಿ ಈ ವಿಡಿಯೋ ಹರಿದಾಡುತ್ತಿದೆ.

ಇದನ್ನೂ ಓದಿ: ‘ಒಬ್ಬೊಬ್ಬರೇ ಇಂಡಸ್ಟ್ರಿಯನ್ನು ಬಿಟ್ಟು ಹೋಗುತ್ತಿರುವುದನ್ನು ನೋಡಿದ್ರೆ ಬೇಸರವಾಗುತ್ತದೆ’; ಶಿವರಾಜ್​ಕುಮಾರ್​

ಚೆನ್ನೈನಲ್ಲಿ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಭೇಟಿ ಮಾಡಿದ ಶಿವರಾಜ್‌ಕುಮಾರ್-ಗೀತಾ ದಂಪತಿ

Published On - 7:53 pm, Fri, 18 February 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ