- Kannada News Photo gallery Kalatapasvi Kannada Actor Rajesh passes away at 82 here is Rajesh rare photos
Actor Rajesh: 150ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ರಾಜೇಶ್; ಅಪರೂಪದ ಫೋಟೋಗಳು ಇಲ್ಲಿವೆ
Kalatapasvi Rajesh: ಚಂದನವನದ ಹಿರಿಯ ನಟ ರಾಜೇಶ್ ಇಂದು (ಫೆ.19) ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. 150 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ರಾಜೇಶ್ ಅವರ ಇತ್ತೀಚಿನ ಫೋಟೋ ಆಲ್ಬಂ ಇಲ್ಲಿದೆ.
Updated on:Feb 19, 2022 | 11:02 AM

ಕನ್ನಡ ಚಿತ್ರರಂಗದ ಹಿರಿಯ ನಟ, ಕಲಾತಪಸ್ವಿ ಎಂದೇ ಗುರುತಿಸಿಕೊಂಡಿದ್ದ ರಾಜೇಶ್ ನಿಧನ ಹೊಂದಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.

ರಾಜೇಶ್ ಅವರ ಮೂಲ ಹೆಸರು ಮುನಿ ಚೌಡಪ್ಪ. ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾಗ ವಿದ್ಯಾ ಸಾಗರ್ ಎಂಬ ಹೆಸರಿನಿಂದ ಗುರುತಿಸಿಕೊಂಡರು. ಚಿತ್ರರಂಗದಲ್ಲಿ ರಾಜೇಶ್ ಎಂಬ ಹೆಸರಿನಿಂದ ಖ್ಯಾತಿ ಗಳಿಸಿದರು.

1960ರಲ್ಲಿ ‘ವೀರ ಸಂಕಲ್ಪ’ ಚಿತ್ರದ ಮೂಲಕ ರಾಜೇಶ್ ಚಂದನವನಕ್ಕೆ ಕಾಲಿಟ್ಟಿದ್ದರು. ವೃತ್ತಿ ಜೀವನದಲ್ಲಿ ಸುಮಾರು 150ಕ್ಕೂ ಅಧಿಕ ಚಿತ್ರಗಳಲ್ಲಿ ರಾಜೇಶ್ ನಟಿಸಿದ್ದಾರೆ.

ರಾಜೇಶ್ ಇತ್ತೀಚೆಗೆ ನಟಿಸಿದ್ದು ಶ್ರೀನಿ ಅಭಿನಯಿಸಿ, ನಿರ್ದೇಶಿಸಿರುವ ‘ಓಲ್ಡ್ ಮಾಂಕ್’ ಚಿತ್ರದಲ್ಲಿ. ಈ ಚಿತ್ರ ಫೆಬ್ರವರಿ 25ರಂದು ತೆರೆಗೆ ಬರಲಿದೆ.

ಚಿತ್ರರಂಗಕ್ಕೆ ರಾಜೇಶ್ ಕೊಡುಗೆಯನ್ನು ಗಮನಿಸಿ ಧಾರವಾಡ ವಿಶ್ವವಿದ್ಯಾನಿಲಯ 2012ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.

ರಾಜೇಶ್ ನಿಧನಕ್ಕೆ ಚಿತ್ರರಂಗ, ಅಭಿಮಾನಿಗಳು, ಗಣ್ಯರು ಕಂಬನಿ ಮಿಡಿದಿದ್ದಾರೆ.
Published On - 8:30 am, Sat, 19 February 22




