ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನನ್ನಮ್ಮ ಸೂಪರ್ ಸ್ಟಾರ್’ (Nannamma Super Star) ಕಾರ್ಯಕ್ರಮ ಕಿರುತೆರೆ ವೀಕ್ಷಕರಿಗೆ ಇಷ್ಟವಾಗಿದೆ. ಪ್ರತಿ ಬಾರಿ ನೀಡುವ ನಾನಾ ಟಾಸ್ಕ್ಗಳು ಗಮನ ಸೆಳೆಯುತ್ತಿವೆ. ಅದರಲ್ಲೂ ಸೆಲೆಬ್ರಿಟಿ ಮಕ್ಕಳು ಮಾಡುವ ಕೀಟಲೆಗಳು ಒಂದೆರಡಲ್ಲ. ಅವರಾಡುವ ಚೂಟಿ ಮಾತುಗಳು ವೀಕ್ಷಕರಿಗೆ ಇಷ್ಟವಾಗುತ್ತಿದೆ. ‘ನನ್ನಮ್ಮ ಸೂಪರ್ ಸ್ಟಾರ್ ’ ಪ್ರಸಾರ ಆರಂಭ ಆದಾಗಿನಿಂದ ನಟ-ನಿರೂಪಕ ಮಾಸ್ಟರ್ ಆನಂದ್ ಅವರ ಪುತ್ರಿ ವಂಶಿಕಾ (Vanshika) ಸಿಕ್ಕಾಪಟ್ಟೆ ಮಿಂಚುತ್ತಿದ್ದಾಳೆ. ಈಗ ಅವಳು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾಳೆ. ಈ ವೇಳೆ ಪುನೀತ್ ರಾಜ್ಕುಮಾರ್ ಅವರು ಹೇಳಿದ್ದ ‘ಪಟಾಕಿ ಯಾರದ್ದೇ ಆಗಿರಲಿ, ಅದನ್ನು ಹಚ್ಚೋದು ನಾವಾಗಿರಬೇಕು’ ಎನ್ನುವ ಡೈಲಾಗ್ಅನ್ನು ಬೇರೆ ರೀತಿಯಲ್ಲಿ ಹೇಳಿದ್ದಾಳೆ. ಅವಳ ಚೂಟಿ ಮಾತುಗಳು ಈ ವಿಡಿಯೋದಲ್ಲಿದೆ.
ಇದನ್ನೂ ಓದಿ: ಮಾಸ್ಟರ್ ಆನಂದ್ ಮಗಳು ವಂಶಿಕಾ ಭರ್ಜರಿ ಶಾಪಿಂಗ್; ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕ ಸೃಜನ್ ಲೋಕೇಶ್
‘ಮಗಳು ವಂಶಿಕಾಳಿಂದ ಜನರು ನನ್ನನ್ನು ಮತ್ತೆ ಪ್ರೀತಿಸುತ್ತಿದ್ದಾರೆ’; ಮಾಸ್ಟರ್ ಆನಂದ್ ಭಾವುಕ ನುಡಿ